Health Tips: ಲೈಂಗಿಕ ಆಸಕ್ತಿಗಾಗಿ ಈ ಆಹಾರ ಪದಾರ್ಥ ಸೇವನೆ ಮಾಡಿ

ದಿನನಿತ್ಯದ ಆಹಾರ ಪದ್ಧತಿಯಲ್ಲಿ ಆದಂತಹ ಬದಲಾವಣೆಗಳು, ವ್ಯಾಯಾಮದ ಕೊರತೆಯಿಂದ ಲೈಂಗಿಕ ಆಸಕ್ತಿ ಕುಂಠಿತವಾಗುತ್ತಿದೆ. ಈ ಕಾರಣದಿಂದ ಹೆಚ್ಚಿನವರು ವಯಾಗ್ರಾದಂತಹ ಮಾತ್ರೆಗಳ ಮೊರೆ ಹೋಗುತ್ತಿದ್ದು, ಇದರಿಂದ ಅನೇಕ ರೀತಿಯ ಅಡ್ಡಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಕೆಲವು ಆಹಾರಗಳನ್ನು ಸೇವನೆ ಮಾಡುವುದರಿಂದ ಪುರುಷರ ಶ್ರೀಘ್ರ ಸ್ಖಲನದ ಸಮಸ್ಯೆಯ ಜೊತೆಗೆ ವೀರ್ಯದ ಗುಣಮಟ್ಟವನ್ನು ವೃದ್ಧಿಸಿಕೊಳ್ಳಬಹುದು. ಹಾಗಾದರೆ ನೈಸರ್ಗಿಕವಾಗಿ ಲೈಂಗಿಕ ಆರೋಗ್ಯ ಹೆಚ್ಚಿಸಿಕೊಳ್ಳುವುದು ಹೇಗೆ? ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬೇಕು ಇಲ್ಲಿದೆ ಮಾಹಿತಿ.

Health Tips: ಲೈಂಗಿಕ ಆಸಕ್ತಿಗಾಗಿ ಈ ಆಹಾರ ಪದಾರ್ಥ ಸೇವನೆ ಮಾಡಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 22, 2024 | 3:02 PM

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ಅದರಲ್ಲಿಯೂ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಆದಂತಹ ಬದಲಾವಣೆಗಳು, ವ್ಯಾಯಾಮದ ಕೊರತೆಯಿಂದ ಲೈಂಗಿಕ ಆಸಕ್ತಿ ಕುಂಠಿತವಾಗುತ್ತಿದೆ. ಈ ಕಾರಣದಿಂದ ಹೆಚ್ಚಿನವರು ವಯಾಗ್ರಾದಂತಹ ಮಾತ್ರೆಗಳ ಮೊರೆ ಹೋಗುತ್ತಿದ್ದು, ಇದರಿಂದ ಅನೇಕ ರೀತಿಯ ಅಡ್ಡಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಕೆಲವು ಆಹಾರಗಳನ್ನು ಸೇವನೆ ಮಾಡುವುದರಿಂದ ಪುರುಷರ ಶ್ರೀಘ್ರ ಸ್ಖಲನದ ಸಮಸ್ಯೆಯ ಜೊತೆಗೆ ವೀರ್ಯದ ಗುಣಮಟ್ಟವನ್ನು ವೃದ್ಧಿಸಿಕೊಳ್ಳಬಹುದು. ಹಾಗಾದರೆ ನೈಸರ್ಗಿಕವಾಗಿ ಲೈಂಗಿಕ ಆರೋಗ್ಯ ಹೆಚ್ಚಿಸಿಕೊಳ್ಳುವುದು ಹೇಗೆ? ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬೇಕು ಇಲ್ಲಿದೆ ಮಾಹಿತಿ.

ಸಾಮಾನ್ಯವಾಗಿ ಆರೋಗ್ಯವಂತರಲ್ಲಿ ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯ 55 ರಿಂದ 60 ವರ್ಷದವರೆಗೂ ಚೆನ್ನಾಗಿರುತ್ತದೆ. ಆದರೆ ಕೆಲವರಲ್ಲಿ ಸಣ್ಣ ವಯಸ್ಸಿಗೆ ಲೈಂಗಿಕ ಆಸಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಅವರು ಆರೋಗ್ಯ ಸಲಹೆಗಳನ್ನು ಪಾಲನೆ ಮಾಡುವುದರ ಜೊತೆಗೆ ಕೆಲವು ಮನೆಯಲ್ಲಿರುವ ಪದಾರ್ಥಗಳನ್ನು ನೀವು ಕಡೆಗಣಿಸದೆಯೇ ನಿತ್ಯವೂ ಬಳಕೆ ಮಾಡಿದರೆ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ.

ಬಾಳೆಹಣ್ಣು: ಪ್ರತಿ ದಿನ ಎರಡು ಬಾಳೆಹಣ್ಣನ್ನು ತಿನ್ನುವುದರಿಂದ ಶಿಶ್ನದ ಆರೋಗ್ಯ ಸುಧಾರಿಸುವುದಲ್ಲದೆ, ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ.

ಶುಂಠಿ: ಇದರಲ್ಲಿ ಲೈಂಗಿಕ ಸಾಮರ್ಥ್ಯವನ್ನು ಉತ್ತೇಜಿಸುವ ಗುಣಗಳಿವೆ. ಪ್ರತಿ ನಿತ್ಯ ಒಂದು ಚಮಚ ಶುಂಠಿ ರಸವನ್ನು ಕುಡಿಯುವುದರಿಂದ ಲೈಂಗಿಕ ಜೀವನವನ್ನು ಸುಧಾರಿಸಿಕೊಳ್ಳಬಹುದು. ಇದರಿಂದ ನಿಮಿರುವಿಕೆ ಸಮಸ್ಯೆ ದೂರವಾಗಿಸಿ ವೀರ್ಯದ ಗುಣಮಟ್ಟ ಹೆಚ್ಚುತ್ತದೆ.

ಪಾಲಕ್ ಸೊಪ್ಪು: ಈ ಸೊಪ್ಪನ್ನು ನೈಸರ್ಗಿಕ ವಯಾಗ್ರಾ ಎಂದು ಕರೆಯಲಾಗುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವ ಮೂಲಕ ನೈಸರ್ಗಿಕವಾಗಿ ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಈ ಸೊಪ್ಪಿನಲ್ಲಿರುವ ಉದ್ದೀಪನ ಅಂಶಗಳು ಲೈಂಗಿಕ ಆಸಕ್ತಿಯನ್ನು ಕೆರಳಿಸುವುದಲ್ಲದೆ, ಲೈಂಗಿಕ ಸುಖವನ್ನು ಹೆಚ್ಚಿಸುತ್ತದೆ.

ಕಾಫಿ: ಕಾಫಿಯಲ್ಲಿರುವ ಉದ್ದೀಪನಕಾರಕ ಅಂಶಗಳು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಇದರಿಂದ ನಿಮಿರುವಿಕೆ ತೊಂದರೆ ದೂರವಾಗಿ, ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ. ಹಾಗಾಗಿ ದಿನಕ್ಕೆ ಎರಡು ಅಥವಾ ಮೂರು ಕಪ್ ಕಾಫಿ ಸೇವಿಸುವುದು ಒಳ್ಳೆಯದು.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಎಂದಿಗೂ ಸೇವಿಸಬೇಡಿ

ಸತತವಾಗಿ ನಿಮ್ಮ ಲೈಂಗಿಕ ಬಯಕೆ ಕಡಿಮೆಯಾಗುತ್ತಿದ್ದರೆ, ಯಾವುದೇ ಔಷಧಿ ಇಲ್ಲದೆ ನೀವು ಅದನ್ನು ಸರಿಪಡಿಸಿಕೊಳ್ಳಲು ನಿಮ್ಮ ಆಹಾರದಲ್ಲಿ ಚಾಕೊಲೇಟ್, ಕುಂಬಳಕಾಯಿ ಬೀಜಗಳು, ಆವಕಾಡೊ, ಗ್ರೀನ್ ಟೀ, ದಾಳಿಂಬೆ ಮತ್ತು ಕಲ್ಲಂಗಡಿಗಳಂತಹ ಆಹಾರಗಳನ್ನು ಸೇರಿಸಿ ಇದು ನಿಮ್ಮ ಲೈಂಗಿಕ ಆಸಕ್ತಿಯನ್ನು ಹೆಚ್ಚು ಮಾಡುತ್ತದೆ. ಅದಲ್ಲದೆ ನಿಯಮಿತವಾಗಿ ಬೆಳ್ಳುಳ್ಳಿ, ಈರುಳ್ಳಿ, ಕ್ಯಾರೆಟ್, ಬೆಂಡೆಕಾಯಿ, ನುಗ್ಗೆಕಾಯಿ, ಒಣ ಖರ್ಜೂರ, ಒಣ ದ್ರಾಕ್ಷಿ, ಶತಾವರಿ ಬೇರು, ಧಾನ್ಯಗಳನ್ನು ಸೇವನೆ ಮಾಡಿ ಇದು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವುದಲ್ಲದೆ ಲೈಂಗಿಕ ಸುಖವನ್ನು ನೀಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ