ನಮ್ಮ ದೇಶದಲ್ಲಿ ಲಕ್ಷಾಂತರ ಜನ ಅದರಲ್ಲೂ ವಿಶೇಷವಾಗಿ ಮಹಿಳೆಯರು (women) ರಕ್ತಹೀನತೆಯಿಂದ ಬಳುತ್ತಾರೆ. ಅಂದಹಾಗೆ, ರಕ್ತಹೀನತೆ ಅಥವಾ ಅನೀಮಿಯಾ (Anaemea) ಒಂದು ರೋಗವಲ್ಲ, ಅದು ದೇಹದ ಒಂದು ಸ್ಥಿತಿ. ನಮ್ಮ ದೇಹದಲ್ಲಿ ಕೆಂಪು ರಕ್ತಕಣಗಳು ಮತ್ತು ಕಬ್ಬಿಣಾಂಶದ (ಹೆಮೊಗ್ಲೋಬಿನ್) (hemoglobin) ಕೊರತೆಯ ಸ್ಥಿತಿಯನ್ನೇ ಅನೀಮಿಯಾ ಅಂತ ಕರೆಯುತ್ತಾರೆ. ಹೆಮೋಗ್ಲೋಬಿನ್ ಅಸಲಿಗೆ ಒಂದು ಪ್ರೊಟೀನ್ ಅಗಿದ್ದು ಕೆಂಪು ರಕ್ತಕಣಗಳಲ್ಲಿ ಇರುತ್ತದೆ ಮತ್ತು ಶ್ವಾಸಕೋಶಗಳಿಂದ ದೇಹದ ಬೇರೆ ಬೇರೆ ಭಾಗಗಳಿಗೆ ಆಮ್ಲಜನಕ ತಲುಪಿಸುವ ಕೆಲಸವನ್ನು ಅದು ಮಾಡುತ್ತದೆ.
ನೀವು ರಕ್ತಹೀನತೆಯಿಂದ ಬಳಲುತ್ತಿದ್ದರೆ ದೇಹದಲ್ಲಿ ಆಮ್ಲಜನಕದ ಕೊರತೆ ಎದುರಾಗಿ ದಣಿವು ಮತ್ತು ಆಯಾಸಗಳನ್ನು ಉಂಟು ಮಾಡುವುದರ ಜೊತೆಗೆ ಆರೋಗ್ಯದ ಬೇರೆ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹಲವಾರು ಕಾರಣಗಳಿಂದ ದೇಹದಲ್ಲಿ ರಕ್ತಹೀನತೆ ಉಂಟಾಗುತ್ತದೆ ಮತ್ತು ಅವುಗಳಲ್ಲಿ ಸಾಮಾನ್ಯವು ಎಂದರೆ, ದೇಹದಲ್ಲಿ ಕಡಿಮೆ ಪ್ರಮಾಣದ ರಕ್ತ, ರಕ್ತಹಾನಿ, ಕೆಂಪು ರಕ್ತಕಣಗಳ ಉತ್ಪತ್ತಿಯಲ್ಲಿ ಕುಂಠಿತ ಮತ್ತು ಕೆಂಪು ರಕ್ತಕಣಗಳ ಉತ್ಪಾದನೆಗಿಂತ ಅವು ನಾಶವಾಗುವ ಪ್ರಮಾಣ ಆಧಿಕವಾಗಿರುವುದು.
ಅನೀಮಿಯಾದಲ್ಲಿ ಬೇರೆ ಬೇರೆ ವಿಧಗಳಿವೆ. ಕಬ್ಬಿಣಾಂಶ ಕೊರತೆಯ ಅನೀಮಿಯಾ, ರಕ್ತಕಣಗಳಿಂದ ನಾಶದಿಂದಾಗುವ ಅನೀಮಿಯಾ ಸೇರಿದಂತೆ ಇನ್ನೂ ಕೆಲ ಬಗೆಯ ಅನೀಮಿಯಾಗಳಿವೆ. ಆದರೆ ಅವೆಲ್ಲವುಗಳಲ್ಲಿ ಅತ್ಯಂತ ಸಾಮಾನ್ಯವಾದ್ದು ಎಂದರೆ ಕಬ್ಬಿಣಾಂಶ ಕೊರತೆಯ ಅನೀಮಿಯಾ. ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ಹೆಮೊಗ್ಲೋಬಿನ್ ಉತ್ಪಾದಿಸಲು ತಕ್ಕ ಪ್ರಮಾಣದಲ್ಲಿ ಕಬ್ಬಿಣಾಂಶ ಇಲ್ಲದೆ ಹೋದರೆ ಈ ಬಗೆಯ ಅನೀಮಿಯಾ ನಮ್ಮನ್ನು ಕಾಡುತ್ತದೆ.
ಸ್ತ್ರೀಯರು ಮುಟ್ಟಿನ ಅವಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಕ್ತ ಕಳೆದುಕೊಳ್ಳುವುದರಿಂದ ಅದು ಅನೀಮಿಯಾ ಸ್ಥಿತಿಗೆ ಕಾರಣವಾಗುವ ಸಾಧ್ಯತೆಗಳು ಹೆಚ್ಚು. ಗರ್ಭಿಣಿ ಮಹಿಯರು ವಿಟಮಿನ್ ಬಿ12 ಕಮ್ಮಿಯಿರುವ ಆಹಾರ ಸೇವಿದರೆ ಅವರಲ್ಲೂ ಅನೀಮಿಯ ಸಮಸ್ಯೆ ತಲೆದೋರುತ್ತದೆ. ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಮತ್ತು ಅನುವಂಶೀಯತೆಯಿಂದಲೂ ಅನೀಮಿಯ ಉಂಟಾಗುತ್ತದೆ
ಸ್ತೀಯರ ಮುಟ್ಟು ಮತ್ತು ಅನೀಮಿಯ ನಡುವೆ ಸಂಬಂಧವಿದೆ
ಸ್ತ್ರೀಯರ ಮುಟ್ಟಿನ ಅವಧಿಯಲ್ಲಿ, ದೇಹವು ಬಹಳಷ್ಟು ರಕ್ತವನ್ನು ಕಳೆದುಕೊಳ್ಳುವುದರಿಂದ ಅದು ಅಂತಿಮವಾಗಿ ಕೆಂಪು ರಕ್ತ ಕಣಗಳ ನಷ್ಟಕ್ಕೆ ಕಾರಣವಾಗುತ್ತದೆ. ಒಂದು ಪಕ್ಷ ಮುಟ್ಟಿನ ಅವಧಿಗಳನ್ನು ದೀರ್ಘವಾಗಿದ್ದರೆ, ಹೆಚ್ಚಿನ ಪ್ರಮಾಣದಲ್ಲಿ ರಕ್ತದ ನಷ್ಟವಾಗುತ್ತದೆ ಮತ್ತು ದೇಹದಲ್ಲಿ ಕೆಂಪು ರಕ್ತ ಕಣಗಳ ಪ್ರಮಾಣ ಗಣನೀಯವಾಗಿ ಕಮ್ಮಿಯಾಗುತ್ತದೆ.
ಹಾಗಾಗಿ ದೇಹದಲ್ಲಿ ಕಡಿಮೆ ಪ್ರಮಾಣದಲ್ಲಿ ಕಬ್ಬಿಣಾಂಶ ಉತ್ಪತ್ತಿಯಾಗುತ್ತದೆ ಮತ್ತು ಅಂತಿಮವಾಗಿ ಅದು ಹಿಮೋಗ್ಲೋಬಿನ್ ಕೊರತೆಗೆ ಕಾರಣವಾಗುತ್ತದೆ. ಅಲ್ಲದೆ, ಸ್ತ್ರೀಯರ ದೇಹ ಕೆಂಪು ರಕ್ತ ಕಣಗಳನ್ನು ತ್ವರಿತವಾಗಿ ಕಳೆದುಕೊಂಡಾಗ, ಈ ಜೀವಕೋಶಗಳನ್ನು ವೇಗವಾಗಿ ಉತ್ಪಾದಿಸಲು ಕಷ್ಟವಾಗುತ್ತದೆ. ಇದು ರಕ್ತಹೀನತೆಗೆ ಮತ್ತೊಂದು ಕಾರಣವಾಗಬಹುದು.
ಹಾಗಾಗಿ ಮಹಿಳೆಯರ ಮುಟ್ಟಿನ ಅವಧಿ ದೀರ್ಘವಾಗಿದ್ದರೆ ಅಂಥವರು ರಕ್ತಹೀನತೆಯಿಂದ ಬಳಲುವ ಸಾಧ್ಯತೆಗಳು ಜಾಸ್ತಿಯಾಗಿರುತ್ತವೆ.