AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian cardamom: ಮಸಾಲೆ ಪದಾರ್ಥಗಳ ರಾಣಿ -ಏಲಕ್ಕಿಯ ಮಹಿಮೆ ಬಲ್ಲಿರಾ? ಏಲಕ್ಕಿಯ ಪ್ರಯೋಜನಗಳು ಹೀಗಿವೆ

ಅಡುಗೆ ಮನೆಯಲ್ಲಿ ಮಸಾಲೆ ಪದಾರ್ಥಗಳ ರಾಣಿಯಾಗಿ ಚಹಾದಿಂದ ಹಿಡಿದು ಅನೇಕ ಅಡುಗೆಗಳಲ್ಲಿ ಬಳಕೆಯಾಗುವ ಏಲಕ್ಕಿಯ ಪರಿಮಳಕ್ಕೆ ಮಾರು ಹೋಗದವರಾರು? ಏಲಕ್ಕಿಯ ಸುಗಂಧ ಪರಿಮಳದಂತೆ ಇದರ ಔಷಧೀಯ ಗುಣಗಳು ಅನೇಕ

Indian cardamom: ಮಸಾಲೆ ಪದಾರ್ಥಗಳ ರಾಣಿ -ಏಲಕ್ಕಿಯ ಮಹಿಮೆ ಬಲ್ಲಿರಾ? ಏಲಕ್ಕಿಯ ಪ್ರಯೋಜನಗಳು ಹೀಗಿವೆ
ಮಸಾಲೆ ಪದಾರ್ಥಗಳ ರಾಣಿ ಏಲಕ್ಕಿಯ ಮಹಿಮೆ ಬಲ್ಲಿರಾ!? ಏಲಕ್ಕಿಯ ಪ್ರಯೋಜನಗಳು ಹೀಗಿವೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 16, 2022 | 6:06 AM

Indian cardamom: ಏಲಕ್ಕಿ , ಯಾಲಕ್ಕಿ , ಇಲಾಚಿ ಎಂದು ಕರೆಯಲ್ಪಡುವ ಏಲಕ್ಕಿ ಮಸಾಲೆ ಪದಾರ್ಥಗಳಲ್ಲಿಯೇ ಅತ್ಯಂತ ಮಧುರ ಹಾಗೂ ವಿಶಿಷ್ಟ ಪರಿಮಳದಿಂದ ಕೂಡಿದ್ದು ಏಲಕ್ಕಿ ಗೆ “ಮಸಾಲೆ ಪದಾರ್ಥಗಳ ರಾಣಿ” ಎಂದು ಕರೆಯುತ್ತಾರೆ. ಏಲಕ್ಕಿಯಲ್ಲಿ ಸಣ್ಣ ಏಲಕ್ಕಿ (ಹಸಿರು ಏಲಕ್ಕಿ) ಹಾಗೂ ದೊಡ್ಡ ಏಲಕ್ಕಿ (ಕಪ್ಪು ಏಲಕ್ಕಿ -black cardamom, hill cardamom) ಎಂಬ ಎರಡು ಪ್ರಭೇದಗಳಿವೆ. ಹಸಿರು ಏಲಕ್ಕಿ ಹೆಚ್ಚು ರುಚಿ ಹಾಗೂ ಮಧುರತೆ ಹೊಂದಿದ್ದು, ಹೆಚ್ಚು ಬಳಕೆಯಲ್ಲಿದೆ. ದೊಡ್ಡ ಏಲಕ್ಕಿಯನ್ನು ಕೂಡ ಬಿರಿಯಾನಿ, ಪಲಾವ್, ಸಿಹಿ ತಿಂಡಿಗಳಲ್ಲಿ ಹಾಗೂ ಪಾರಂಪರಿಕ ಚಿಕಿತ್ಸೆಗಳಲ್ಲಿ ಉಪಯೋಗಿಸುತ್ತಾರೆ.

ದೊಡ್ಡ (ಕಪ್ಪು) ಏಲಕ್ಕಿ ಯ ವೈಜ್ಞಾನಿಕ ವಿವರಣೆ (Botanical name -Amomum subulatum) ಹಿಂದಿ ಭಾಷೆಯಲ್ಲಿ ಬಡಿ ಇಲಾಯಿಚಿ ಎನ್ನುತ್ತಾರೆ. ದೊಡ್ಡ (ಕಪ್ಪು) ಏಲಕ್ಕಿ ನೇಪಾಳ, ಡಾರ್ಜಿಲಿಂಗ್, ಸಿಕ್ಕಿಂ, ಭೂತಾನ್, ಹಾಗೂ ಪಶ್ಚಿಮ ಬಂಗಾಳ ಪ್ರದೇಶಗಳಲ್ಲಿ ಬೆಳೆಯುತ್ತಾರೆ.

Malbar cardamom – ಹಸಿರು (ಸಣ್ಣ) ಏಲಕ್ಕಿಯ ವೈಜ್ಞಾನಿಕ ವಿವರಣೆ (Botanical name -Elettaria cardamomum-Ginger family). ಹಿಂದಿ ಭಾಷೆಯಲ್ಲಿ… ಛೋಟಿ ಇಲಾಯಿಚಿ ಎನ್ನುತ್ತಾರೆ.

ಏಲಕ್ಕಿಯ ಪ್ರಯೋಜನಗಳು:

* ಮೂಲವ್ಯಾಧಿಗೆ… ಬೆಳಿಗ್ಗೆ ಎರಡು ಬಾಳೆಹಣ್ಣು ಮಧ್ಯಕ್ಕೆ ಸೀಳಿ ಹಸಿರು ಏಲಕ್ಕಿಯ ಪುಡಿಯನ್ನು ತುಂಬಿ ಇಡಬೇಕು. ರಾತ್ರಿ ಮಲಗುವ ಮುನ್ನ ಒಂದು ಬಾಳೆ ಹಣ್ಣು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಬಾಳೆ ಹಣ್ಣು ಸೇವಿಸುವುದು.

* ಬಾಯಿ ಹುಣ್ಣಿಗೆ… ದೊಡ್ಡ ಏಲಕ್ಕಿ ಪುಡಿ ಜೇನುತುಪ್ಪ ಸೇರಿಸಿ ಹಚ್ಚಬೇಕು.

* ದೊಡ್ಡ ಏಲಕ್ಕಿಯ ಕಷಾಯ ಮಾಡಿ ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು ವಸಡು ನೋವು ನಿವಾರಣೆಯಾಗುವುದು.

* ಅತಿಯಾದ ಬಿಕ್ಕಳಿಕೆ ಗೆ… ಎರಡು ದೊಡ್ಡ ಏಲಕ್ಕಿ ಎರಡು ಕಪ್ಪು ನೀರಿನಲ್ಲಿ ಕುದಿಸಿ ನೀರು ಕುದ್ದು ಅರ್ಧ ಆದಾಗ ಆರಿಸಿ ಕುಡಿಯಬೇಕು.

* ದೊಡ್ಡ ಏಲಕ್ಕಿ ಪುಡಿ, ಕಪ್ಪು ಉಪ್ಪು ಸೇರಿಸಿ ಸೇವಿಸಲು ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.

* ದೊಡ್ಡ ಏಲಕ್ಕಿ ಕಾಳುಗಳು, ಕಲ್ಲಂಗಡಿ ಬೀಜಗಳು, ಕಲ್ಲು ಸಕ್ಕರೆ ಸೇರಿಸಿ ಪುಡಿ ಮಾಡಿ ಮೂರು ಗ್ರಾಂ ನಷ್ಟು ಚೂರ್ಣವನ್ನು ಸೇವಿಸಿದರೆ ಕಿಡ್ನಿ ಸ್ಟೋನ್ ಕರಗಿಸಲು ಸಹಕಾರಿಯಾಗಿದೆ.

* ಊಟದ ನಂತರ ಹಸಿರು ಏಲಕ್ಕಿ ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ, ಬಾಯಿಯ ದುರ್ಗಂಧ ದೂರವಾಗುತ್ತದೆ.

* ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಏಲಕ್ಕಿ ಸೇವನೆ ಕ್ಯಾನ್ಸರ್ ಬರದಂತೆ ತಡೆಯುತ್ತದೆ.

* ಏಲಕ್ಕಿಯಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಗುಣ ಇದೆ.

* ಬೆಲ್ಲ, ಹಸಿರು ಏಲಕ್ಕಿ ಪುಡಿ, ಸೋಂಪು ಕಾಳಿನ ಪುಡಿ, ಗಸಗಸೆ ಸೇರಿಸಿ ಮಣ್ಣಿನ ಗಡಿಗೆಯಲ್ಲಿ ತಯಾರಿಸಿದ ಪಾನಕ ಬಹಳ ತಂಪು. ಈ ಪಾನಕ ಕುಡಿದರೆ ಉರಿ ಮೂತ್ರ ನಿವಾರಣೆಯಾಗುತ್ತದೆ. ಆಯಾಸವೂ ದೂರವಾಗುತ್ತದೆ.

* ಅಡುಗೆ ಮನೆಯಲ್ಲಿ ಮಸಾಲೆ ಪದಾರ್ಥಗಳ ರಾಣಿಯಾಗಿ ಚಹಾದಿಂದ ಹಿಡಿದು ಅನೇಕ ಅಡುಗೆಗಳಲ್ಲಿ ಬಳಕೆಯಾಗುವ ಏಲಕ್ಕಿಯ ಪರಿಮಳಕ್ಕೆ ಮಾರು ಹೋಗದವರಾರು? ಏಲಕ್ಕಿಯ ಸುಗಂಧ ಪರಿಮಳದಂತೆ ಇದರ ಔಷಧೀಯ ಗುಣಗಳು ಅನೇಕ. (ಮಾಹಿತಿ ಸಂಗ್ರಹ -ಎಸ್​ ಹೆಚ್​ ನದಾಫ್​)

ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ