AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Heart Attack: ಹೃದಯಾಘಾತಕ್ಕೂ ಮುನ್ನ ದೇಹವು ನೀಡುವ ಈ ಸಂಕೇತಗಳ ಬಗ್ಗೆ ಎಚ್ಚರವಿರಲಿ

ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಬದಲಾವಣೆಯಿಂದಾಗಿ ಹೃದಯದ ಸಂಬಂಧಿ ಕಾಯಿಲೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ.

Heart Attack: ಹೃದಯಾಘಾತಕ್ಕೂ ಮುನ್ನ ದೇಹವು ನೀಡುವ ಈ ಸಂಕೇತಗಳ ಬಗ್ಗೆ ಎಚ್ಚರವಿರಲಿ
Heart Attack
TV9 Web
| Updated By: ನಯನಾ ರಾಜೀವ್|

Updated on: Aug 15, 2022 | 12:27 PM

Share

ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಬದಲಾವಣೆಯಿಂದಾಗಿ ಹೃದಯದ ಸಂಬಂಧಿ ಕಾಯಿಲೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಹೆಚ್ಚಿನ ಸಂದರ್ಭಗಳಲ್ಲಿ ಹೃದಯಾಘಾತ ಮುಚ್ಚಿ ಹೋಗಿರುವ ಅಪಧಮನಿಗಳ ಕಾರಣದಿಂದ ಉಂಟಾಗುತ್ತದೆ. ಅಪಧಮನಿಗಳಲ್ಲಿನ ಅಡಚಣೆ ಸಾಮಾನ್ಯವಾಗಿ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಇತರ ಪದಾರ್ಥಗಳ ಶೇಖರಣೆಯಿಂದ ಉಂಟಾಗುತ್ತದೆ.

ಇದು ಅಪಧಮನಿಗಳಿಗೆ ನಿರ್ಬಂಧ ಒಡ್ಡುತ್ತದೆ. ಇದು ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ. ಹಾಗಾಗಿ ಹೃದಯ ಕಾಯಿಲೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೃದಯ ಸ್ನಾಯುವಿನ ಒಂದು ಭಾಗವು ಸಾಕಷ್ಟು ರಕ್ತ ಪಡೆಯಲು ಸಾಧ್ಯವಾಗದೇ ಇದ್ದಾಗ ಹೃದಯಾಘಾತ ಸಂಭವಿಸುತ್ತದೆ.

ವಿಶೇಷವಾಗಿ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಇರುವವರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಿರುತ್ತದೆ. ಬೋಳು ತಲೆ ಹೃದ್ರೋಗದ ಅಪಾಯಕಾರಿ ಸೂಚನೆ ಆಗಿದೆ.

ವಿಶೇಷವಾಗಿ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಇರುವವರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಿರುತ್ತದೆ. ಬೋಳು ತಲೆ ಹೃದ್ರೋಗದ ಅಪಾಯಕಾರಿ ಸೂಚನೆ ಆಗಿದೆ.

ಹೃದಯಾಘಾತವು ಬರುವ ಮೊದಲೇ ದೇಹವು ಕೆಲವು ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತದೆ. ಅದನ್ನು ತಿಳಿದುಕೊಂಡರೆ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸಬಹುದು. ಅದರಲ್ಲೂ ಮುಖ, ತಲೆ, ಕಿವಿಯಲ್ಲಿ ಉಂಟಾಗುವ ಬದಲಾವಣೆಗಳನ್ನು ನೋಡಿಕೊಂಡು ಹೃದಯಾಘಾತದ ಲಕ್ಷಣಗಳನ್ನು ಗುರುತಿಸಿಕೊಳ್ಳಬಹುದು. ಆ ಬಗ್ಗೆ ತಿಳಿದುಕೊಳ್ಳೋಣ.

ಪ್ರಜ್ಞೆಯ ನಷ್ಟ: ಹೃದಯದಲ್ಲಿ ರಕ್ತವು ಪಂಪಬ್ ಮಾಡುವ ಕ್ರಿಯೆಗೆ ಅಡ್ಡಿಯುಂಟಾದಾಗ ರಕ್ತ ಮತ್ತು ಆಮ್ಲಜನಕದ ಕೊರತೆಯಿಂದಾಗಿ ಹೃದಯ ಸ್ನಾಯುವಿನ ಹಾನಿಗೆ ಕಾರಣವಾಗಬಹುದು. ಹೃದಯದ ಬಡಿತವು ನಿಧಾನವಾಗಬಹುದು, ಅಥವಾ ಜೋರಾಗಬಹುದು.

ಎದೆ ನೋವು: ಹೃದಯಾಘಾತವು ಅಸ್ವಸ್ಥತೆ ಮತ್ತು ನೋವನ್ನು ಉಂಟುಮಾಡುತ್ತದೆ. ಎದೆಯ ಅಸ್ವಸ್ಥತೆ ಮತ್ತು ಎದೆ ನೋವು ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​ಪ್ರಕಾರ, ಯಾರಾದರೂ ಒತ್ತಡ ಅಥವಾ ಎದೆಯಲ್ಲಿ ತೀವ್ರವಾದ ನೋವನ್ನು ಅನುಭವಿಸಿದಾಗ ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಹೃದಯಾಘಾತ ಅಥವಾ ಹೃದಯ ಸ್ತಂಭನವು ಪ್ರಾರಂಭವಾದಾಗ, ಎದೆಯ ಅಸ್ವಸ್ಥತೆ, ಬೆವರು, ವಾಕರಿಕೆ, ಉಸಿರಾಟದ ತೊಂದರೆ ಉಂಟಾಗುತ್ತದೆ. ಆದ್ದರಿಂದ, ಎದೆ ನೋವಿನ ಬಗ್ಗೆ ಎಚ್ಚರವಹಿಸಲು ಮತ್ತು ಅದು ಸಂಭವಿಸಿದ ತಕ್ಷಣ ವರದಿ ಮಾಡಲು ಸಲಹೆ ನೀಡಲಾಗುತ್ತದೆ.

ಕುತ್ತಿಗೆ ನೋವು: ಹೃದಯಾಘಾತವು ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾಗುತ್ತದೆ, ಇದು ಹೃದಯ ಸ್ನಾಯುಗಳಿಗೆ ರಕ್ತ ಪರಿಚಲನೆಯನ್ನು ನಿರ್ಬಂಧಿಸುತ್ತದೆ. ಎದೆಯಿಂದ ಪ್ರಾರಂಭವಾಗುವ ನೋವು ಕುತ್ತಿಗೆಗೆ ಹರಡುತ್ತಿದ್ದರೆ ಅಥವಾ ಕತ್ತಿನ ಸ್ನಾಯುಗಳಲ್ಲಿ ಬಿಗಿತ ಕಂಡುಬಂದರೆ, ನೀವು ಎಚ್ಚರವಾಗಿರಬೇಕು. ಹೊಟ್ಟೆಯಲ್ಲಿ ಅಸ್ವಸ್ಥತೆ: ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಅಥವಾ ಅಸ್ವಸ್ಥತೆ ಕೂಡ ಹೃದಯಾಘಾತದ ಎಚ್ಚರಿಕೆಯ ಸಂಕೇತವಾಗಿದೆ. ಇದು ದೀರ್ಘಕಾಲದ ನೋವನ್ನು ಒಳಗೊಂಡಿರಬಹುದು.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ