Prostate Cancer: ಪ್ರಾಸ್ಟೇಟ್ ಕ್ಯಾನ್ಸರ್ ಎಂದರೇನು?; ಪುರುಷರನ್ನು ಕಾಡುವ ಈ ರೋಗದ ಲಕ್ಷಣಗಳೇನು?

ಪ್ರಾಸ್ಟೇಟ್ ಕ್ಯಾನ್ಸರ್ ಎಂಬುದು ಪುರುಷರಲ್ಲಿ ಎರಡನೇ ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಕ್ಯಾನ್ಸರ್ ಆಗಿದೆ. ಈ ರೋಗದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ಉತ್ತರ ಯುರೋಪ್​ನಲ್ಲಿ ಈ ರೀತಿಯ ಪ್ರಕರಣಗಳು ಅತಿ ಹೆಚ್ಚು ಪತ್ತೆಯಾಗುತ್ತಿವೆ. ಭಾರತದಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ಈ ಕ್ಯಾನ್ಸರ್ ಹೆಚ್ಚುತ್ತಿದೆ. ಪ್ರಾಸ್ಟೇಟ್ ಕ್ಯಾನ್ಸರ್​ಗೆ ಕಾರಣಗಳೇನು? ಇದರ ಲಕ್ಷಣಗಳೇನು? ಇಲ್ಲಿದೆ ಮಾಹಿತಿ.

Prostate Cancer: ಪ್ರಾಸ್ಟೇಟ್ ಕ್ಯಾನ್ಸರ್ ಎಂದರೇನು?; ಪುರುಷರನ್ನು ಕಾಡುವ ಈ ರೋಗದ ಲಕ್ಷಣಗಳೇನು?
ಪ್ರಾಸ್ಟೇಟ್ ಕ್ಯಾನ್ಸರ್ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Jan 23, 2024 | 3:52 PM

ಜಗತ್ತಿನಾದ್ಯಂತ ಪುರುಷರನ್ನು ಹೆಚ್ಚು ಕಾಡುತ್ತಿರುವ ಕ್ಯಾನ್ಸರ್​ನಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಕೂಡ ಒಂದು. ಪ್ರಾಸ್ಟೇಟ್ ಮೂತ್ರಕೋಶದ ಕೆಳಗೆ (ಮೂತ್ರವನ್ನು ಸಂಗ್ರಹಿಸುವ ಟೊಳ್ಳಾದ ಅಂಗ) ಮತ್ತು ಗುದನಾಳದ ಮುಂಭಾಗದಲ್ಲಿ ಕಾಣಿಸಿಕೊಳ್ಳುವ ಒಂದು ಅಂಗ. ಪ್ರಾಸ್ಟೇಟ್ ಹಿಂಭಾಗದಲ್ಲಿ ಸೆಮಿನಲ್ ವೆಸಿಕಲ್ಸ್ ಎಂದು ಕರೆಯಲ್ಪಡುವ ಗ್ರಂಥಿಗಳಿವೆ. ಇದು ಮೂತ್ರ ಮತ್ತು ವೀರ್ಯವನ್ನು ದೇಹದಿಂದ ಶಿಶ್ನದ ಮೂಲಕ ಹೊರಹಾಕುತ್ತದೆ. ಇದು ಪ್ರಾಸ್ಟೇಟ್ ಕೇಂದ್ರದ ಮೂಲಕ ಸಾಗುತ್ತದೆ.

ಪ್ರಾಸ್ಟೇಟ್ ಮನುಷ್ಯನಿಗೆ ವಯಸ್ಸಾದಂತೆ ಬೆಳೆಯುತ್ತಾ ಹೋಗುತ್ತದೆ. ಕಿರಿಯ ವಯಸ್ಸಿನ ಪುರುಷರಲ್ಲಿ ಇದು ಆಕ್ರೋಡು ಗಾತ್ರದಲ್ಲಿರುತ್ತದೆ. ವಯಸ್ಸಾದ ಪುರುಷರಲ್ಲಿ ಇದು ಹೆಚ್ಚು ದೊಡ್ಡದಾಗಿರುತ್ತದೆ. ಈ ಪ್ರಾಸ್ಟೇಟ್ ಕ್ಯಾನ್ಸರ್​ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಕೆಲವು ಪ್ರಾಸ್ಟೇಟ್ ಕ್ಯಾನ್ಸರ್​ಗಳು ವೇಗವಾಗಿ ಬೆಳೆಯಬಹುದು ಮತ್ತು ಹರಡಬಹುದು. ಆದರೆ ಹೆಚ್ಚಿನ ವಿಧಗಳು ನಿಧಾನವಾಗಿ ಬೆಳೆಯುತ್ತವೆ.

ಇದನ್ನೂ ಓದಿ: ರಕ್ತ ಪರೀಕ್ಷೆಯಿಂದ ಹೃದಯದ ಸಮಸ್ಯೆ ಪತ್ತೆಹಚ್ಚಬಹುದೇ?

ಪ್ರಾಸ್ಟೇಟ್ ಕ್ಯಾನ್ಸರ್ ಗಂಭೀರ ಕಾಯಿಲೆಯಾಗಿದೆ. ಅದೃಷ್ಟವಶಾತ್, ಪ್ರಾಸ್ಟೇಟ್ ಕ್ಯಾನ್ಸರ್ ಹೊಂದಿರುವ ಹೆಚ್ಚಿನ ಜನರಿಗೆ ತಮ್ಮ ಪ್ರಾಸ್ಟೇಟ್ ಗ್ರಂಥಿಯನ್ನು ಮೀರಿ ಈ ರೋಗ ಹರಡುವ ಮೊದಲು ಇದು ಪತ್ತೆಯಾಗುತ್ತಿದೆ. ಈ ಹಂತದಲ್ಲಿ ಚಿಕಿತ್ಸೆ ನೀಡಿದರೆ ಕ್ಯಾನ್ಸರ್ ನಿವಾರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಪುರುಷರಲ್ಲಿ ಚರ್ಮದ ಕ್ಯಾನ್ಸರ್ ನಂತರ 2ನೇ ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಕ್ಯಾನ್ಸರ್ ಈ ಪ್ರಾಸ್ಟೇಟ್ ಕ್ಯಾನ್ಸರ್. U.S. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (CDC) ಪ್ರಕಾರ, ಪ್ರಾಸ್ಟೇಟ್ ಹೊಂದಿರುವ ಪ್ರತಿ 100 ಜನರಿಗೆ, 13 ಜನರು ತಮ್ಮ ಜೀವನದಲ್ಲಿ ಕೆಲವು ಹಂತದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ರೋಗವಿದ್ದರೂ ಆರಾಮಾಗಿ ಜೀವನ ನಡೆಸುತ್ತಾರೆ. ಹೆಚ್ಚಿನವರು ಸಾಮಾನ್ಯ ಜೀವನವನ್ನು ನಡೆಸುತ್ತಾರೆ. ಬಹುತೇಕ ಜನರು ಪ್ರಾಸ್ಟೇಟ್ ಕ್ಯಾನ್ಸರ್​ಗೆ ಸಂಬಂಧಿಸದ ಕಾರಣಗಳಿಂದ ಸಾವನ್ನಪ್ಪುತ್ತಾರೆ. ಕೆಲವರಿಗೆ ಈ ಕ್ಯಾನ್ಸರ್​ಗೆ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ಅಮೆರಿಕಾದಲ್ಲಿ ಸುಮಾರು 34,000 ಜನರು ಪ್ರತಿ ವರ್ಷ ಪ್ರಾಸ್ಟೇಟ್ ಕ್ಯಾನ್ಸರ್​ನಿಂದ ಸಾಯುತ್ತಿದ್ದಾರೆ.

ಇದನ್ನೂ ಓದಿ: ಸಕ್ಕರೆ ಬಳಸುವುದನ್ನು ಕಡಿಮೆ ಮಾಡಿದರೆ ನಮ್ಮ ದೇಹದಲ್ಲಾಗುವ ಬದಲಾವಣೆಯೇನು?

ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳೇನು?:

– ಪ್ರಾಸ್ಟೇಟ್ ಗ್ರಂಥಿಯೊಳಗೆ ರಚನೆಯಾಗುವ ಗೆಡ್ಡೆ.

– ಪದೇಪದೆ ಅದರಲ್ಲೂ ವಿಶೇಷವಾಗಿ ರಾತ್ರಿಯಲ್ಲಿ ಮೂತ್ರ ವಿಸರ್ಜನೆ ಮಾಡಬೇಕಾಗುವುದು.

– ಮೂತ್ರವನ್ನು ಕಂಟ್ರೋಲ್ ಮಾಡಲು ಆಗದೇ ಇರುವುದು.

– ಮೂತ್ರ ವಿಸರ್ಜಿಸುವಾಗ ನೋವು ಅಥವಾ ಸುಡುವಿಕೆ.

– ಸರಿಯಾಗಿ ಮಲವಿಸರ್ಜನೆ ಆಗದಿರುವುದು, ಮಲ ವಿಸರ್ಜಿಸುವಾಗ ಕಿರಿಕಿರಿ ಉಂಟಾಗುವುದು.

– ಲೈಂಗಿಕ ಕ್ರಿಯೆ ನಡೆಸುವಾಗ ನೋವಿನ ಸ್ಖಲನ ಮತ್ತು ನಿಮಿರುವಿಕೆಯ ತೊಂದರೆ.

– ವೀರ್ಯದಲ್ಲಿ ರಕ್ತ ಅಥವಾ ಮೂತ್ರ ವಿಸರ್ಜನೆ.

– ನಿಮ್ಮ ಬೆನ್ನು, ಸೊಂಟ ಅಥವಾ ಎದೆಯಲ್ಲಿ ನೋವು.

– ಮೂಳೆ ನೋವು

– ವಿಪರೀತ ತೂಕ ಇಳಿಕೆ.

– ಆಯಾಸ

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್