Home remedies: ರಾಗಿಯಲ್ಲಿದೆ ಹಲವಾರು ಆರೋಗ್ಯ ಲಾಭಗಳು, ಇಲ್ಲಿದೆ ನೋಡಿ ಸಿಂಪಲ್ ಮನೆ ಮದ್ದು

| Updated By: ಅಕ್ಷತಾ ವರ್ಕಾಡಿ

Updated on: Feb 11, 2024 | 11:50 AM

ಸಿರಿಧಾನ್ಯಗಳಲ್ಲಿ ಒಂದಾದ ಈ ರಾಗಿಯ ಪ್ರಯೋಜನಗಳು ಅಷ್ಟಿಷ್ಟಲ್ಲ. ಕರ್ನಾಟಕದ ಕೆಲವು ಕಡೆಗಳಲ್ಲಿ ರಾಗಿಯಿಂದ ತಯಾರಿಸಿದ ರಾಗಿ ಮುದ್ದೆ ಸಿಕ್ಕಾಪಟ್ಟೆ ಫೇಮಸ್. ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಈ ರಾಗಿಯಿಂದ ರಾಗಿ ಮುದ್ದೆ, ರಾಗಿ ದೋಸೆ, ರಾಗಿ ರೊಟ್ಟಿ, ರಾಗಿ ಅಂಬಲಿ ಹೀಗೆ ನಾನಾ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಲಾಗುತ್ತದೆ. ಆದರೆ ರಾಗಿಯನ್ನು ಸೇವನೆ ಮಾಡುವುದರಿಂದ ಆರೋಗ್ಯ ಲಾಭಗಳು ಅಧಿಕವಾಗಿದೆ.

Home remedies: ರಾಗಿಯಲ್ಲಿದೆ ಹಲವಾರು ಆರೋಗ್ಯ ಲಾಭಗಳು, ಇಲ್ಲಿದೆ ನೋಡಿ ಸಿಂಪಲ್ ಮನೆ ಮದ್ದು
Ragi
Image Credit source: Pinterest
Follow us on

ಕರ್ನಾಟಕದಲ್ಲಿ ಬಹುತೇಕರ ಆಹಾರವಾಗಿರುವ ಈ ರಾಗಿಯನ್ನು ನಮ್ಮ ಹಿರಿಯರು ವಿವಿಧ ರೀತಿಯ ಖಾದ್ಯಗಳನ್ನು ಮಾಡಿ ಸೇವಿಸುತ್ತಿದ್ದರು. ಅದರಲ್ಲಿಯು ದಿನನಿತ್ಯ ಈ ರಾಗಿ ಗಂಜಿ ಮಾಡಿ ಆರೋಗ್ಯವನ್ನು ಗಟ್ಟಿಯಾಗಿಸುತ್ತಿದ್ದರು. ರಾಗಿಯಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್ ಅಧಿಕವಾಗಿದೆ. ಇದನ್ನು ಸೇವನೆ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವುದರಲ್ಲಿ ಸಹಕಾರಿಯಾಗಿದೆ.

  1. ದಿನನಿತ್ಯವು ರಾಗಿ ಅಂಬಲಿಯನ್ನು ಕುಡಿಯುವುದರಿಂದ ದೇಹಕ್ಕೆ ಪೌಷ್ಟಿಕಾಂಶ ದೊರೆಯುವುದರೊಂದಿಗೆ ದೇಹವು ತಂಪಾಗುತ್ತದೆ.
  2. ಎದೆ ಹಾಲು ಕಡಿಮೆಯಿದ್ದವರು ರಾಗಿಯ ಜೊತೆ ಕೊಬ್ಬರಿ, ಬೆಲ್ಲ ಸೇರಿಸಿಕೊಂಡು ತಿನ್ನುವುದರಿಂದ ಒಳ್ಳೆಯದು.
  3. ರಾಗಿ ಹಿಟ್ಟಿಗೆ ಉಪ್ಪಿನ ಪುಡಿಯನ್ನು ಬೆರೆಸಿ ಹಲ್ಲನ್ನು ಉಜ್ಜುತ್ತಿದ್ದರೆ ವಸಡುಗಳ ಆರೋಗ್ಯವು ಸುಧಾರಿಸಿ, ಹಲ್ಲುಗಳು ಗಟ್ಟಿಯಾಗುತ್ತವೆ.
  4. ಹುಣಸೆ ಹಣ್ಣು ಕಿವುಚಿದ ನೀರಿಗೆ ಬೆಲ್ಲದ ಪುಡಿ, ಹುರಿದ ರಾಗಿ ಹಿಟ್ಟಿನು ಹಾಕಿ ಕಲಸಿ ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ ತಿಂದರೆ ಪಿತ್ತಕಡಿಮೆಯಾಗುತ್ತದೆ.
  5. ಸ್ಥೂಲಕಾಯದವರು ಮತ್ತು ಮಧುಮೇಹಿ ರೋಗಿಗಳಿಗೆ ರಾಗಿ ಸೇವನೆ ಮಾಡುವುದು ಆರೋಗ್ಯವನ್ನು ಸುಧಾರಿಸುತ್ತದೆ.
  6. ರಾಗಿ ಹಿಟ್ಟು, ಅರಶಿನ ಪುಡಿ, ನೀಲಗಿರಿ ಸೊಪ್ಪನ್ನು ಕೆಂಡದ ಮೇಲೆ ಹಾಕಿ ಅದರಿಂದ ಬರುವ ಹೊಗೆ ಸೇವನೆ ಮಾಡುವುದರಿಂದ ನೆಗಡಿಯು ಕಡಿಮೆಯಾಗುತ್ತದೆ.
  7. ರಾಗಿಯನ್ನು ಬಾಣಲೆಯಲ್ಲಿ ಹಾಕಿ ಹುರಿದು ಪುಡಿ ಮಾಡಿ, ತೆಂಗಿನ ಕಾಯಿಯ ತುರಿ, ಬೆಲ್ಲ ಹಾಕಿ ತಿನ್ನುತ್ತಿದ್ದರಿಂದ ಪಿತ್ತವು ನಿವಾರಣೆಯಾಗುತ್ತದೆ.
  8. ರಾಗಿ ಹಿಟ್ಟನ್ನು ಉದ್ದಿನಬೇಳೆಯೊಂದಿಗೆ ರುಬ್ಬಿ ದೋಸೆ ಅಥವಾ ಇಡ್ಲಿ ಮಾಡಿ ತಿನ್ನುವುದರಿಂದ ದೇಹವು ತಂಪಾಗುತ್ತದೆ.
  9. ರಾಗಿ ಹಿಟ್ಟಿನ ಮುದ್ದೆಯನ್ನು ಸೊಪ್ಪಿನ ಸಾರಿನೊಂದಿಗೆ ಸೇವಿಸುತ್ತಿದ್ದರೆ ಮಲಬದ್ಧತೆ ಸಮಸ್ಯೆಯು ನಿವಾರಣೆಯಾಗುತ್ತದೆ.
  10. ರಾಗಿಯನ್ನು ನೆನೆಸಿ ಚೆನ್ನಾಗಿ ರುಬ್ಬಿ ಹಾಲು ತೆಗೆದು ತುಪ್ಪ, ಲವಂಗ, ದಾಲ್ಟಿನ್ನಿ, ಏಲ ಪುಡಿ ಹಾಗೂ ಸಕ್ಕರೆ ಹಾಕಿ ಬೆರೆಸಿ ತಿಂದರೆ ದೇಹಕ್ಕೆ ಹೆಚ್ಚು ಕಬ್ಬಿಣದ ಅಂಶವು ದೊರೆಯುತ್ತದೆ.
  11. ರಾಗಿ ತೆನೆಗಳನ್ನು ತಂದು ಕೆಂಡದಲ್ಲಿ ಸುಟ್ಟು ತಿನ್ನುವುದರಿಂದ ಮಧುಮೇಹ, ಉಬ್ಬಸ ಹಾಗೂ ಹೃದಯ ಸಂಬಂಧಿ ರೋಗಗಳು ಕಡಿಮೆಯಾಗುತ್ತದೆ.
  12. ದಿನನಿತ್ಯ ರಾಗಿ ಸೇವಿಸುವುದರಿಂದ ಒತ್ತಡವನ್ನು ನಿವಾರಿಸುತ್ತದೆ.
  13. ರಾಗಿ ಸೇವನೆಯಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
  14. ರಾಗಿ ಸೇವನೆಯಿಂದ ಕರುಳು ಮತ್ತು ಸ್ತನ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ