ಮಲಬದ್ಧತೆಯಿಂದ ಕಂಗೆಟ್ಟಿದ್ದೀರಾ?; ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಈ ಜ್ಯೂಸ್ ಸೇವಿಸಿ

Constipation: ಮಲಬದ್ಧತೆಯೆಂಬುದು ಪ್ರತಿಯೊಬ್ಬರನ್ನೂ ಆಗಾಗ ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಮಲಬದ್ಧತೆ ಎಂದರೆ ನಮ್ಮ ದೇಹದಿಂದ ಮಲವನ್ನು ಹೊರಹಾಕಲು ಸಾಧ್ಯವಾಗದ ಪರಿಸ್ಥಿತಿ. ಮಲಬದ್ಧತೆ ನಿವಾರಣೆಗೆ ಅನೇಕ ಔಷಧಿಗಳಿವೆ, ನೈಸರ್ಗಿಕ ಮನೆಮದ್ದುಗಳೂ ಇವೆ. ಈ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುವ ಕೆಲವು ಜ್ಯೂಸ್​ಗಳ ಮಾಹಿತಿ ಇಲ್ಲಿದೆ.

ಮಲಬದ್ಧತೆಯಿಂದ ಕಂಗೆಟ್ಟಿದ್ದೀರಾ?; ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಈ ಜ್ಯೂಸ್ ಸೇವಿಸಿ
ಜ್ಯೂಸ್Image Credit source: iStock
Follow us
|

Updated on: Feb 10, 2024 | 5:06 PM

ಮಲಬದ್ಧತೆ (Constipation) ಎಂದರೆ ಗಟ್ಟಿ ಮಲದಿಂದ ಆಗುವ ತೊಂದರೆ ಅಥವಾ ಮಲವನ್ನು ವಿಸರ್ಜಿಸಲು ಸಾಧ್ಯವಾಗದ ಪರಿಸ್ಥಿತಿ. ದೊಡ್ಡ ಕರುಳು ನಾವು ಸೇವಿಸುವ ಆಹಾರದಿಂದ ಹೆಚ್ಚು ನೀರನ್ನು ಹೀರಿಕೊಳ್ಳುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಹೀಗಾಗಿ, ಮಲಬದ್ಧತೆಯ ನಿವಾರಣೆಗೆ ಹೆಚ್ಚು ದ್ರವ ಸೇವನೆ ಅಥವಾ ನೀರಿನ ಸೇವನೆ ಅತ್ಯಗತ್ಯ. ನಮ್ಮ ಕಳಪೆ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿ ಕೂಡ ಮಲಬದ್ಧತೆ ಸಮಸ್ಯೆಗೆ ಕಾರಣವಾಗುತ್ತದೆ. ಈ ಮಲಬದ್ಧತೆಯಿಂದ ಬೇರೆ ಆರೋಗ್ಯ ಸಮಸ್ಯೆಗಳು ಕೂಡ ಉಂಟಾಗುತ್ತವೆ.

ಹಸಿವಾಗದಿರುವುದು, ಅಜೀರ್ಣ, ಹೊಟ್ಟೆ ನೋವು, ಬಾಯಿಯ ದುರ್ವಾಸನೆ, ತಲೆನೋವು, ಮಾನಸಿಕ ಚಡಪಡಿಕೆ, ವಿಪರೀತ ಬಾಯಾರಿಕೆ ಇವು ಮಲಬದ್ಧತೆಯ ಸಾಮಾನ್ಯ ಲಕ್ಷಣಗಳಾಗಿವೆ. ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುವ ಕೆಲವು ಜ್ಯೂಸ್​ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮಲಬದ್ಧತೆಯನ್ನು ಹೆಚ್ಚಿಸುವ 5 ಅಪಾಯಕಾರಿ ಅಂಶಗಳಿವು

  1. ಸೌತೆಕಾಯಿ ಜ್ಯೂಸ್: ಸೌತೆಕಾಯಿ ಜ್ಯೂಸ್ ದೇಹವನ್ನು ಹೈಡ್ರೇಟ್ ಮಾಡಲು ಮತ್ತು ಆರೋಗ್ಯಕರ ಜೀರ್ಣಕ್ರಿಯೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.
  2. ಅಲೋವೆರಾ ಜ್ಯೂಸ್: ಅಲೋವೆರಾ ಜ್ಯೂಸ್ ನಮ್ಮ ದೇಹಕ್ಕೆ ಸೇರುವ ಕಲ್ಮಶಗಳನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ ಮತ್ತು ಮಲವಿಸರ್ಜನೆ ಸುಲಭವಾಗುತ್ತದೆ.
  3. ಕಿತ್ತಳೆ ಜ್ಯೂಸ್: ತಾಜಾ ಸಿಪ್ಪೆ ಸುಲಿದ ಕಿತ್ತಳೆ ಜ್ಯೂಸ್ ಕುಡಿಯುವುದರಿಂದ ಮಲಬದ್ಧತೆಯನ್ನು ನಿವಾರಿಸಬಹುದು. ಮಲಬದ್ಧತೆ ನಿವಾರಣೆಗೆ ಇದು ಪೌಷ್ಟಿಕ ಆಯ್ಕೆಯಾಗಿದೆ.
  4. ಪೈನಾಪಲ್ ಜ್ಯೂಸ್: ಅನಾನಸ್ ಜ್ಯೂಸ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಕರುಳಿನ ಕಾರ್ಯವನ್ನು ನಿಯಂತ್ರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.
  5. ನಿಂಬೆ ಜ್ಯೂಸ್: ನಿಂಬೆ ಜ್ಯೂಸ್ ಆಮ್ಲೀಯವಾದ ಪಾನೀಯವಾಗಿದೆ. ಇದು ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸಲು ಮತ್ತು ಕರುಳಿನ ಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
  6. ದ್ರಾಕ್ಷಿ ಜ್ಯೂಸ್: ಒಣದ್ರಾಕ್ಷಿ ಜ್ಯೂಸ್ ಕುಡಿಯುವುದರಿಂದ ಕರುಳಿನ ಚಲನೆಯನ್ನು ಉತ್ತೇಜಿಸಲು, ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
  7. ಸೇಬಿನ ಜ್ಯೂಸ್: ಸೇಬಿನ ಜ್ಯೂಸ್ ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ