AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monkeypox: ಯುರೋಪ್, ಅಮೆರಿಕದಲ್ಲೂ ಕಾಣಿಸಿಕೊಂಡ ಮಂಕಿಪಾಕ್ಸ್​, ಭಾರತಕ್ಕೂ ಆತಂಕ?

Monkeypox:ಕೊರೊನಾ( Corona) ಹಾವಳಿ ಕೊಂಚ ಕಡಿಮೆಯಾಗುತ್ತಿದ್ದಂತೆ ಯುರೋಪ್ ಹಾಗೂ ಅಮೆರಿಕದಲ್ಲಿ ಮಂಕಿಪಾಕ್ಸ್((Monkeypox)​ ಕಾಯಿಲೆ ಶುರುವಾಗಿದೆ. ಮಂಕಿಪಾಕ್ಸ್‌ ಎಂಬುದು ಅಪರೂಪದ ವೈರಲ್‌ ಸೋಂಕಾಗಿದ್ದು, ರೋಗಗ್ರಸ್ಥ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ.

Monkeypox: ಯುರೋಪ್, ಅಮೆರಿಕದಲ್ಲೂ ಕಾಣಿಸಿಕೊಂಡ ಮಂಕಿಪಾಕ್ಸ್​, ಭಾರತಕ್ಕೂ ಆತಂಕ?
Monkey Pox
TV9 Web
| Updated By: ನಯನಾ ರಾಜೀವ್|

Updated on:May 19, 2022 | 11:49 AM

Share

ಕೊರೊನಾ( Corona) ಹಾವಳಿ ಕೊಂಚ ಕಡಿಮೆಯಾಗುತ್ತಿದ್ದಂತೆ ಯುರೋಪ್ ಹಾಗೂ ಅಮೆರಿಕದಲ್ಲಿ ಮಂಕಿಪಾಕ್ಸ್(Monkeypox)​ ಕಾಯಿಲೆ ಶುರುವಾಗಿದೆ. ಮಂಕಿಪಾಕ್ಸ್‌ ಎಂಬುದು ಅಪರೂಪದ ವೈರಲ್‌ ಸೋಂಕಾಗಿದ್ದು, ರೋಗಗ್ರಸ್ಥ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಸೌಮ್ಯ ಲಕ್ಷಣಗಳಿದ್ದ ರೋಗಿಗಳು ಕೆಲವೇ ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ.

ಆದರೆ ಕೆಲವೊಮ್ಮೆ ಮಾತ್ರ ಇದು ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಆದರೆ ಇದು ಮನುಷ್ಯರಿಂದ ಮನುಷ್ಯರಿಗೆ ಸುಲಭವಾಗಿ ಹರಡುವುದಿಲ್ಲ. ಹೀಗಾಗಿ ಸೋಂಕು ಸಾರ್ವಜನಿಕರಿಗೆ ಹರಡುವ ಸಾಧ್ಯತೆ ಸಾಧ್ಯತೆ ಅತ್ಯಂತ ಕಡಿಮೆಯಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಜ್ವರ, ತಲೆನೋವು, ಸ್ನಾಯು ಸೆಳೆತ, ಬೆನ್ನುನೋವು, ನಡುಕ, ಬಳಲಿಕೆ ಮೊದಲಾದವು ಈ ಕಾಯಿಲೆಯ ಸಾಮಾನ್ಯ ಲಕ್ಷಣಗಳಾಗಿವೆ. ಕಣ್ಣು, ಮೂಗು, ಬಾಯಿಯ ಮೂಲಕ ವೈರಾಣು ರೋಗಿಯ ನಿಕಟ ಸಂಪರ್ಕದಲ್ಲಿರುವವರಿಗೆ ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರೋಗಿಯೊಂದಿಗೆ ಸಂಪರ್ಕದಲ್ಲಿರುವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಮಂಕಿ ಪಾಕ್ಸ್​ ಎಂದರೇನು? ಮಂಕಿಪಾಕ್ಸ್ ವೈರಸ್​ನಿಂದ ಹರಡುವ ಕಾಯಿಲೆಯಾಗಿದೆ. ಇದು ಆರ್ಥೋಪಾಕ್ಸ್ ವೈರಸ್ ಕುಲಕ್ಕೆ ಸೇರಿದ್ದು, ಇದರಲ್ಲಿ ವೆರಿಯೊಲಾ ವೈರಸ್, ವ್ಯಾಕ್ಸಿನಿಯಾ ವೈರಸ್ ಮತ್ತು ಕೌಪಾಕ್ಸ್ ಸೇರಿವೆ. ಮಂಕಿಪಾಕ್ಸ್ ಒಂದು ಝೂನೋಸಿಸ್ ಆಗಿದೆ, ಇದು ಸೋಂಕಿತ ಪ್ರಾಣಿಯಿಂದ ಮನುಷ್ಯರಿಗೆ ಹರಡುವ ರೋಗ ಎಂದು ಹೇಳಬಹುದು. ಸಿಡಿಸಿ ಪ್ರಕಾರ, ಮಂಕಿಪಾಕ್ಸ್ ಅನ್ನು ಮೊದಲು 1958 ರಲ್ಲಿ ಕಂಡುಹಿಡಿಯಲಾಯಿತು.

ಮಂಕಿಪಾಕ್ಸ್ ವೈರಸ್ ಹರಡುವುದು ಹೇಗೆ? ಮಂಕಿ ಪಾಕ್ಸ್​ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವಂಥದ್ದಾಗಿ, ಈ ಮೊದಲು ಈ ಸೋಂಕಿಗೆ ಒಳಗಾಗಿದ್ದ ವ್ಯಕ್ತಿಯ ಸಂಪರ್ಕಕ್ಕೆ ಬಂದಾಗ ಸೋಂಕು ತಗುಲುತ್ತದೆ. ಈ ಸೋಂಕು ಕಣ್ಣು, ಮೂಗು, ಬಾಯಿ, ಬಿರುಕುಬಿಟ್ಟ ಚರ್ಮದ ಮೂಲಕವೂ ದೇಹವನ್ನು ಪ್ರವೇಶಿಸಬಹುದಾಗಿದೆ.

ಮಂಕಿಪಾಕ್ಸ್‌ನ ಲಕ್ಷಣಗಳು ಮಂಕಿಪಾಕ್ಸ್​ ಶುರುವಾದ ಆರಂಭದಲ್ಲಿ ಸೀತ, ಜ್ವರ, ಆಯಾಸ, ಸ್ನಾಯು ಸೆಳೆತ, ಬೆನ್ನುಹುರಿ ನೋವು, ಆಯಾಸ ಉಂಟಾಗಬಹುದು. ಇದು ಸಿಡುಬಿನಂತೆಯೇ ಕಂಡರೂ ಅಷ್ಟು ಗಂಭೀರ ಕಾಯಿಲೆಯಾಗಿರುವುದಿಲ್ಲ.

ಮಂಕಿ ಪಾಕ್ಸ್​ ಹರಡುವುದು ಹೇಗೆ? ಮಂಕಿಪಾಕ್ಸ್ ಝೂನೋಟಿಕ್ ಕಾಯಿಲೆಯಾಗಿದ್ದು, ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡಲಿದೆ. ಕಚ್ಚುವಿಕೆ, ಗೀರು ಅಥವಾ ಗಾಯದ ಮೂಲಕ ನೇರ ಮತ್ತು ಪರೋಕ್ಷ ಸಂಪರ್ಕದ ಮೂಲಕ ಪ್ರಾಣಿಯಿಂದ ಮನುಷ್ಯನಿಗೆ ರೋಗ ಹರಡುವ ಸಂಭವವಿದೆ. ಆದರೆ ಉಸಿರಾಟದ ಹನಿಗಳ ಮೂಲಕವೂ ವೈರಸ್ ಹರಡಬಹುದು.

ಮಂಕಿ ಪಾಕ್ಸ್​ ಎಷ್ಟು ದಿನಗಳವರೆಗೆ ಇರಬಲ್ಲದು ರೋಗಿಗೆ ಸುಮಾರು 3 ರಿಂದ 4 ದಿನಗಳವರೆಗೆ ಜ್ವರ ಇರಲಿದ್ದು, ದೇಹದಲ್ಲಿ ರಾಶಸ್ ಕಾಣಿಸಿಕೊಳ್ಳಬಹುದು. ರೋಗವು ಸಾಮಾನ್ಯವಾಗಿ 2 ರಿಂದ 4 ವಾರಗಳವರೆಗೆ ಇರುತ್ತದೆ. ಚರ್ಮದ ಮೇಲಿರುವ ದದ್ದುಗಳು 2 ರಿಂದ 4 ವಾರಗಳವರೆಗೆ ಇರುತ್ತದೆ. ​

ಮುಂಜಾಗ್ರತಾ ಕ್ರಮಗಳು ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಗಳಿಂದ ದೂರವಿರಿ ವೈರಸ್ ಹರಡುವ ಪ್ರಾಣಿಗಳೊಂದಿಗೆ ಸಂಪರ್ಕ ಬೇಡ ಆಗಾಗ ಕೈಗಳನ್ನು ತೊಳೆದು ಸ್ವಚ್ಛವಾಗಿಟ್ಟುಕೊಳ್ಳಿ. ಸೋಂಕಿತ ರೋಗಿಗಳಿಂದ ದೂರವಿರಿ. ಮಂಕಿಪಾಕ್ಸ್​ಗೆ ಲಸಿಕೆ ಇದೆಯೇ? ಇದುವರೆಗೂ ಮಂಕಿಪಾಕ್ಸ್​ ರೋಗಕ್ಕೆ ಚಿಕಿತ್ಸೆ ಲಭ್ಯವಿಲ್ಲ. ಆದರೆ ಈ ರೋಗವನ್ನು ತಡೆಗಟ್ಟಲು ಸ್ಮಾಲ್ ಪಾಕ್ಸ್ ಲಸಿಕೆ, ಆಂಟಿವೈರಲ್ ಮತ್ತು ವಿಐಜಿಗಳನ್ನು ಬಳಸಬಹುದು. ಮಂಕಿಪಾಕ್ಸ್ ಅನ್ನು ತಡೆಗಟ್ಟುವಲ್ಲಿ ಸಿಡುಬು ಲಸಿಕೆ ಶೇ.85ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿದೆ.

ಭಾರತ ಭಯಪಡುವ ಅಗತ್ಯವಿಲ್ಲ ಭಾರತದಲ್ಲಿ ಇದುವರೆಗೂ ಒಂದೇ ಒಂದು ಪ್ರಕರಣಗಳು ಪತ್ತೆಯಾಗಿಲ್ಲ, ಹೀಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:47 am, Thu, 19 May 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ