ಆಯುರ್ವೇದ(Ayurveda) ದ ಪ್ರಕಾರ, ಮೆಂತೆ ನೀರು ಮತ್ತು ವೇಗದ ನಡಿಗೆಯು ಚಳಿಗಾಲ(Winter) ದಲ್ಲಿ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡಲು ಇರುವ ಸರಳ ಮಾರ್ಗಗಳಾಗಿವೆ. ಪ್ರತಿದಿನ 30 ನಿಮಿಷಗಳ ಕಾಲ ವೇಗದ ನಡಿಗೆಯು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹದಲ್ಲಿನ ಹೊಟ್ಟೆಯ ಭಾಗದಲ್ಲಿ ಹೆಚ್ಚಾಗಿ ಕೊಬ್ಬು ಸಂಗ್ರಹವಾಗುತ್ತದೆ. ಒಳಾಂಗಗಳ ಕೊಬ್ಬು ಎಂದು ಕರೆಲ್ಪಡುವ, ಹೊಟ್ಟೆಯ ಸುತ್ತ ಇರುವ ಈ ರೀತಿಯ ಕೊಬ್ಬು ಮಧುಮೇಹ, ಹೃಧಯ ಸಂಬಂಧಿ ಹಾಗೂ ಇತರ ಧೀರ್ಘಕಾಲದ ಕಾಯಿಲೆಗಳು ಸೇರಿದಂತೆ ಹಲವಾರು ಕಾಯಿಲೆಗಳ ಪ್ರಮುಖ ಅಪಾಯವಾಗಿದೆ.
ಚಳಿಗಾಲದಲ್ಲಿ ಧೀರ್ಘಾವಧಿಯ ನಿಷ್ಕಿಯತೆಯ ಕಾರಣದಿಂದಾಗಿ, ವ್ಯಾಯಮ ಮಾಡಲು ಸ್ವಲ್ಪ ಕಠಿಣವಾಗಬಹುದು ಮತ್ತು ಅನೇಕ ಆಹಾರಗಳು ಸಹ ತೂಕ ಹೆಚ್ಚಾಗಲು ಕಾರಣವಾಗಬಹುದು. ಚಳಿಗಾಲದ ತಿಂಗಳುಗಳಲ್ಲಿ ಅತಿಯಾದ ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳುವುದು ಕಷ್ಟವಾಗಿದ್ದರೂ, ಆಯುರ್ವೇದದ ಪ್ರಕಾರ ನೀವು ಅದನ್ನು ಕಡಿಮೆ ಮಾಡಲು ಕೆಲವು ಮಾರ್ಗಗಳಿವೆ.
ಬೆಚ್ಚಗಿನ ನೀರು:
ಬೆಚ್ಚಗಿನ ನೀರು ಕುಡಿಯುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ. ಅದು ಚಯಾಪಚಯವನ್ನು ಹೆಚ್ಚಿಸುತ್ತದೆ. ನಿಮಗೆ ಅಗತ್ಯವಿರುವಾಗ ನೀವು ದಿನವಿಡೀ ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ. ಯಾಕೆಂದರೆ ಇದು ಹೊಟ್ಟೆಯಿಂದ ಮಾತ್ರವಲ್ಲದೆ ದೇಹದ ಇತರ ಭಾಗಗಳಿಂದಲೂ ಕೊಬ್ಬನ್ನು ಕಡಿಮೆ ಮಾಡಲು ಸಾಕಷ್ಟು ಸಹಕಾರಿಯಾಗಿದೆ.
ಯೋಗ:
ಕೊಬ್ಬನ್ನು ಕಡಿಮೆ ಮಾಡಲು ಯೋಗವು ಸುಲಭ ಮಾರ್ಗವಾಗಿದೆ. ನೀವು ಯೋಗ, 12 ಸೂರ್ಯ ನಮಸ್ಕಾರಗಳು ಮತ್ತು ಕಪಾಲಭಾತಿ ಪ್ರಾಣಯಾಮವನ್ನು ಮಾಡಿ, ಇದು ರಕ್ತ ಪರಿಚಲನೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಮೆಂತ್ಯೆ ನೀರು:
ಕಳೆದ ವರ್ಷ ಆಯುರ್ವೇದ ಚಿಕಿತ್ಸಕ ಡಾ. ಶ್ಯಾಮ್ ವಿ.ಎಲ್ ವಿಶೇಷ ಮೆಂತ್ಯ ನೀರಿನ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಮೆಂತ್ಯವನ್ನು ಹುರಿದು ಪುಡಿ ಮಾಡಿ ಹಾಗೇ ಸೇವಿಸಬಹುದು ಮತ್ತು ಅದನ್ನು ನೀರಿನಲ್ಲಿ ಬೆರೆಸಿ ಸೇವಿಸಬಹುದು. ಈ ಪಾನೀಯವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಅಥವಾ ಮೆಂತ್ಯೆ ಬೀಜಗಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಸೇವಿಸಬಹುದು.
ಇದನ್ನೂ ಓದಿ: ರೆಡ್ ವೈನ್ ಕುಡಿಯುವುದು ಆರೋಗ್ಯಕ್ಕೆ ನಿಜವಾಗಿಯೂ ಪ್ರಯೋಜನಕಾರಿಯೇ? ಇಲ್ಲಿದೆ ಮಾಹಿತಿ
ಒಣ ಶುಂಠಿ:
ನೀವು ಒಣ ಶುಂಠಿಯನ್ನು ಸೇವಿಸುವುದರಿಂದ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಬಿಸಿ ನೀರಿನೊಂದಿಗೆ ಒಣ ಶುಂಠಿ ಪುಡಿಯನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ಇದು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.
ವೇಗದ ನಡಿಗೆ:
ಬಿಗಿಯಾದ ಸೊಂಟದ ಬೆಲ್ಟ್ನ್ನು ಧರಿಸಿ ಮತ್ತು 30 ನಿಮಿಷಗಳ ಕಾಲ ವೇಗದ ನಡಿಗೆ ಮಾಡಿ. ಹೊಟ್ಟೆಯ ಕೊಬ್ಬನ್ನು ಸುಡಲು ಇದು ಪರಿಣಾಮಕಾರಿ ಮಾರ್ಗವಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: