ನರಹುಲಿ(Wart) ಹೆಚ್ಚಾಗಿ ಕೈ ಮತ್ತು ಕಾಲುಗಳ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ನಿಮ್ಮನ್ನು ಸಾಕಷ್ಟು ಮುಜುಗರಕ್ಕೀಡು ಮಾಡುತ್ತಿದ್ದರೆ ಮಾಡುತ್ತಿದ್ದರೆ ಇಲ್ಲಿದೆ ಸುಲಭ ಉಪಾಯ. ಮನೆಯಲ್ಲಿಯೇ ಸುಲಭವಾಗಿ ಯಾವುದೇ ನೋವಿಲ್ಲದೇ ನರಹುಲಿಯನ್ನು ತೆಗೆಯಬಹುದು. ಹ್ಯೂಮನ್ ಪಾಪಿಲೋಮೋ ವೈರಸ್ನಿಂದ ನರಹುಲಿ ಸಮಸ್ಯೆ ಕಾಡುತ್ತದೆ. ಇದು ಚರ್ಮದ ಮೇಲಿನ ಬಿರುಕಿನ ಮೂಲಕ ದೇಹದೊಳಗೆ ಪ್ರವೇಶಿಸುತ್ತದೆ. ಚರ್ಮದ ಮೇಲೆ ಸಣ್ಣ ಬೀಜಗಳಂತೆ ಕಾಣುತ್ತದೆ.
ನಿಮ್ಮ ನರಹುಲಿ ಸಮಸ್ಯೆ ಚಿಕ್ಕದಾಗಿದ್ದು ಪ್ರಾರಂಭದ ಹಂತದಲ್ಲಿದ್ದರೇ ಮಾತ್ರ ಈ ಟ್ರಿಕ್ಸ್ ಪ್ರಯತ್ನಿಸಿ. ಈ ಸಮಸ್ಯೆ ಅಧಿಕವಾಗಿದ್ದರೇ ನಿಮ್ಮ ಹತ್ತಿರದ ಚರ್ಮರೋಗ ತಜ್ಞರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.
ಆದ್ದರಿಂದ ಸುಲಭವಾಗಿ ನರಹುಲಿಯನ್ನು ತೆಗೆಯಲು ಇಲ್ಲಿದೆ ಸಣ್ಣ ಟ್ರಿಕ್. ಇದು ಪ್ರಾರಂಭದ ಹಂತದಲ್ಲಿರುವವರು ಮಾತ್ರ ಪ್ರಯತ್ನಿಸಹುದು. ಅಂದರೆ ಕೈ, ಕಾಲುಗಳಲ್ಲಿ ಒಂದೊಂದು ನರಹುಲಿಗಳನ್ನು ಹೊಂದಿದ್ದವರು ಇದನ್ನು ಪ್ರಯತ್ನಿಸಬಹುದು.
ಇದಕ್ಕಾಗಿ ನಿಮಗೆ ಬೇಕಾಗಿರುವುದು ಡಕ್ಟ್ ಟೇಪ್(Duct tape) ಸಣ್ಣ ತುಂಡು, ಸ್ವಲ್ಪ ನೀರು ಮತ್ತು ಪ್ಯೂಮಿಸ್ ಸ್ಟೋನ್(Pumice stone). ಮೊದಲಿಗೆ ಸಣ್ಣ ತುಂಡು ಟೇಪ್ ತೆಗೆದುಕೊಂಡು ನರಹುಲಿಗಳ ಮೇಲೆ ಅಂಟಿಸಿ. ನಂತರ ಡಕ್ಟ್ ಟೇಪ್ ಮುಟ್ಟದೆ ಆರು ದಿನಗಳವರೆಗೆ ಹಾಗೆಯೇ ಬಿಡಬೇಕು. ಆರು ದಿನಗಳ ನಂತರ, ನೀವು ಟೇಪ್ ನಿಧಾನವಾಗಿ ತೆಗೆಯಬೇಕು.
ಇದನ್ನು ಓದಿ: ಕೈ-ಕಾಲು ಚರ್ಮದ ಸಿಪ್ಪೆ ಸುಲಿಯುತ್ತಿದೆಯೇ? ಕಾರಣಗಳೇನು, ಕಡಿಮೆ ಮಾಡುವುದು ಹೇಗೆ?
ನಂತರ ಬೆಚ್ಚಗಿನ ನೀರು ತೆಗೆದುಕೊಂಡು ನರಹುಲಿಯ ಜಾಗವನ್ನು ಸ್ವಲ್ಪ ಹೊತ್ತು ಹಾಗೆಯೇ ನೆನೆಸಿಡಿ. ಉದಾಹರಣೆಗೆ ಕೈಯಲ್ಲಿ ಆಗಿದ್ದರೆ, ಸ್ವಲ್ಪ ಹೊತ್ತು ಕೈಯನ್ನು ನೀರಿನಲ್ಲಿಡಿ. ನಂತರ ಪ್ಯೂಮಿಸ್ ಅಥವಾ ಮೃದುವಾದ ಸ್ಕ್ರಬರ್ ಬಳಸಿ, ಸ್ವಲ್ಪ ಹೊತ್ತು ನರಹುಲಿಯ ಮೇಲೆ ನಿಧಾನವಾಗಿ ಉಜ್ಜಿ. ಈಗಾಗಲೇ ಸ್ವಲ್ಪ ಬಿಸಿ ನೀರಿನಲ್ಲಿ ಚರ್ಮವನ್ನು ನೆನೆಸಿರುವುದರಿಂದ, ನರಹುಲಿಯನ್ನು ನೋಯಿಸದೆ ನೀವು ಸುಲಭವಾಗಿ ತೆಗೆಯಬಹುದು.
(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: