Rhinophyma :ರೈನೋಫಿಮಾ ಎಂದರೇನು ಮತ್ತು ಯಾವ ರೀತಿ ಗುಣಪಡಿಸಬಹುದು?
52 ವರ್ಷದ ಕಾನ್ರಾಡೊ ಎಸ್ಟ್ರಾಡಾ ಎಂಬಾತ 6 ವರ್ಷಗಳಿಂದ ರೈನೋಫಿಮಾದಿಂದ ಬಳಲುತ್ತಿದ್ದರು. ಇದರಿಂದಾಗಿ ಉಸಿರಾಡಲು ಮತ್ತು ತಿನ್ನಲು ಕಷ್ಟಪಡುತ್ತಿದ್ದರು. ಈ ಸಮಸ್ಯೆಯನ್ನು ಚರ್ಮರೋಗ ತಜ್ಞರಾದ ಡಾ. ಥಾಮಸ್ ರೋಮೋ ಶಸ್ತ್ರ ಚಿಕಿತ್ಸೆಯ ಮೂಲಕ ಸರಿ ಪಡಿಸಿದ್ದಾರೆ.
ರೈನೋಫಿಮಾ(Rhinophyma) ಎನ್ನುವುದು ಸಾಮಾನ್ಯವಾಗಿ ಮೂಗಿನ ಹೊರಭಾಗದ ಮೇಲೆ ಪರಿಣಾಮ ಬೀರುವ ಒಂದು ರೀತಿಯ ಸಮಸ್ಯೆಯಾಗಿದೆ. ಹಲವು ವರ್ಷಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದು, ಇದೀಗಾ ಈ ಸಮಸ್ಯೆಗೆ ಪರಿಹಾರ ನೀಡುವ ಮೂಲಕ ರೋಗಿಗೆ ಹೊಸ ಜೀವನ ನೀಡಿದ್ದಾರೆ. 52 ವರ್ಷದ ಕಾನ್ರಾಡೊ ಎಸ್ಟ್ರಾಡಾ ಎಂಬಾತ 6 ವರ್ಷಗಳಿಂದ ರೈನೋಫಿಮಾದಿಂದ ಬಳಲುತ್ತಿದ್ದರು. ಇದರಿಂದಾಗಿ ಉಸಿರಾಡಲು ಮತ್ತು ತಿನ್ನಲು ಕಷ್ಟಪಡುತ್ತಿದ್ದರು. ಅವರ ಮೂಗಿನ ಆಕಾರವೂ ಬಾಯಿಯ ವರೆಗೆ ಚಾಚಿದ್ದರಿಂದ ಉಸಿರಾಟದ ಸಮಸ್ಯೆ ಹಾಗೂ ತಿನ್ನಲು ತುಂಬಾ ಕಷ್ಟವಾಗುತ್ತಿತ್ತು ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಆದರೆ ಇದೀಗಾ ಅವರ ಈ ಸಮಸ್ಯೆಯನ್ನು ಚರ್ಮರೋಗ ತಜ್ಞರಾದ ಡಾ. ಥಾಮಸ್ ರೋಮೋ ಶಸ್ತ್ರ ಚಿಕಿತ್ಸೆಯ ಮೂಲಕ ಸರಿ ಪಡಿಸಿದ್ದಾರೆ. ಸ್ವತ: ವೈದ್ಯರು ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ.
View this post on Instagram
ರೈನೋಫಿಮಾ ಎಂದರೇನು?
ರೈನೋಫಿಮಾ ಎಂಬುದು ಹಣೆಯ, ಕೆನ್ನೆ ಮತ್ತು ಮೂಗಿನ ಮೇಲೆ ದದ್ದು ರೀತಿಯಲ್ಲಿ ಕಂಡುಬರುತ್ತದೆ. 50-70 ವರ್ಷ ವಯಸ್ಸಿನ ತೆಳ್ಳಗಿನ ಚರ್ಮದ ಪುರುಷರಲ್ಲಿ ಈ ಸ್ಥಿತಿಯು ಸಾಮಾನ್ಯವಾಗಿದೆ.
ಇದನ್ನೂ ಓದಿ: ವಿಟಮಿನ್ ಬಿ 12 ಕೊರತೆಯು ದೇಹದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತವೆ
ರೈನೋಫಿಮಾವನ್ನು ಗುಣಪಡಿಸಬಹುದೇ?
ಬ್ರಿಟಿಷ್ ಅಸೋಸಿಯೇಷನ್ ಫಾರ್ ಡರ್ಮಟಾಲಜಿಸ್ಟ್ಸ್ ಪ್ರಕಾರ, ರೈನೋಫಿಮಾವನ್ನು ಒಳಗೊಂಡಿರುವ ಸೈಟ್ ಮತ್ತು ಮುಖದ ನೋಟವನ್ನು ಆಧರಿಸಿ ರೋಗನಿರ್ಣಯ ಮಾಡಲಾಗುತ್ತದೆ. ಖಚಿತವಿಲ್ಲದಿದ್ದರೆ, ಚರ್ಮಶಾಸ್ತ್ರಜ್ಞರು ಸೂಕ್ಷ್ಮದರ್ಶಕದ ಅಡಿಯಲ್ಲಿ ಪರೀಕ್ಷಿಸಲು ಚರ್ಮದ ಬಯಾಪ್ಸಿ ತೆಗೆದುಕೊಳ್ಳುತ್ತಾರೆ. ಚಿಕಿತ್ಸೆಗಳ ಸಹಾಯದಿಂದ ಇದನ್ನು ನಿಯಂತ್ರಿಸಬಹುದು. ಅದರ ತೀವ್ರತೆಯನ್ನು ಅವಲಂಬಿಸಿ, ವೈದ್ಯರು ಸಲಹೆ ನೀಡಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:42 am, Wed, 8 February 23