ಚಳಿಗಾಲದಲ್ಲಿ ಬೆಚ್ಚಗೆ ಮಲಗಲು ಹೀಟರ್ ಹಾಕುವ ಅಭ್ಯಾಸವಿದ್ದಲ್ಲಿ ಈ ಸ್ಟೋರಿ ಮಿಸ್ ಮಾಡ್ದೆ ಓದಿ

ಚಳಿಗಾಲದಲ್ಲಿ, ಅನೇಕರು ಬೆಚ್ಚಗೆ ಮಲಗಲು ಕೋಣೆಯಲ್ಲಿ ಯಾವಾಗಲೂ ಹೀಟರ್ ಹಾಕಿರುತ್ತಾರೆ. ಆದರೆ ಇದರ ಬಳಕೆಯಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆಗಳಾಗುತ್ತದೆ ಎಂಬುದು ತಿಳಿದಿದೆಯೇ? ಹೌದು. ಅತಿಯಾಗಿ ಹೀಟರ್ ಬಳಕೆ ಮಾಡುವುದರಿಂದ ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ರಾತ್ರಿಯಿಡೀ ಹೀಟರ್ ಆನ್ ಮಾಡಿ ಮಲಗುವುದರಿಂದ ಶ್ವಾಸಕೋಶದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಳಿಗಾಲದಲ್ಲಿ ಬೆಚ್ಚಗೆ ಮಲಗಲು ಹೀಟರ್ ಹಾಕುವ ಅಭ್ಯಾಸವಿದ್ದಲ್ಲಿ ಈ ಸ್ಟೋರಿ ಮಿಸ್ ಮಾಡ್ದೆ ಓದಿ
ಹೀಟರ್ ಬಳಕೆಯಿಂದ ಉಂಟಾಗುವ ಪರಿಣಾಮ

Updated on: Dec 08, 2025 | 4:25 PM

ಚಳಿಗಾಲದಲ್ಲಿ (winter) ಅನೇಕರು ಕೋಣೆಯನ್ನು ಬೆಚ್ಚಗಿಡಲು ಹೀಟರ್ ಹಾಕಿಕೊಂಡು ಮಲಗುತ್ತಾರೆ. ಈ ವಿಧಾನ ಶಾಖ ನೀಡುತ್ತದೆಯಾದರು ಕೂಡ, ಕೋಣೆಯಲ್ಲಿನ ಆರ್ದ್ರತೆ ಕಡಿಮೆಯಾಗಿ, ಶುಷ್ಕ ಗಾಳಿ ದೇಹದಲ್ಲಿ ಹಲವಾರು ರೀತಿಯ ಪರಿಣಾಮಗಳನ್ನು ಬೀರುತ್ತದೆ. ಅಷ್ಟೇ ಅಲ್ಲ, ಗಂಟಲು ನೋವು, ಒಣ ಚರ್ಮ ಮತ್ತು ಕಣ್ಣುಗಳಲ್ಲಿ ಕಿರಿಕಿರಿ ಕೂಡ ಉಂಟಾಗುತ್ತದೆ. ದೀರ್ಘಕಾಲದ ವರೆಗೆ ಅಥವಾ ಅತಿಯಾಗಿ ಹೀಟರ್ ಮುಂದೆ ಇರುವುದು ಉಸಿರಾಟ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು, ಅದರಲ್ಲಿಯೂ ಮಕ್ಕಳು, ವೃದ್ಧರು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಾಗಾದರೆ ರಾತ್ರಿಯಿಡೀ ಹೀಟರ್ ಆನ್ ಮಾಡಿ ಮಲಗುವುದರಿಂದ ಶ್ವಾಸಕೋಶದ ಮೇಲೆ ಯಾವ ಪರಿಣಾಮ ಬೀರುತ್ತದೆ, ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಹೀಟರ್ ನಿಂದ ಬರುವ ನಿರಂತರ ಬಿಸಿ ಮತ್ತು ಒಣ ಗಾಳಿಯು ಶ್ವಾಸಕೋಶದ ಮೇಲೆ ಪರಿಣಾಮ ಬೀರಬಹುದು. ಈ ರೀತಿಯಾದರೆ ವ್ಯಕ್ತಿಯಲ್ಲಿ ಆರಂಭಿಕ ಹಂತದಲ್ಲಿ ಶೀತ ಕಂಡುಬರಬಹುದು. ಅದರಲ್ಲಿಯೂ ಬೆಳಿಗ್ಗೆ ಎದ್ದಾಗ ಗಂಟಲು ಒಣಗುವುದು, ಕೆಮ್ಮು, ಉಸಿರಾಟದ ಸಂಬಂಧಿ ತೊಂದರೆ ಅಥವಾ ಎದೆಯಲ್ಲಿ ಭಾರ ಇತ್ಯಾದಿ ಲಕ್ಷಣಗಳು ಅನುಭವಕ್ಕೆ ಬರಬಹುದು. ಇನ್ನು ಕೆಲವರಲ್ಲಿ ರಾತ್ರಿ ಸಮಯದಲ್ಲಿ ಪದೇ ಪದೇ ಕೆಮ್ಮು ಬರಬಹುದು. ಇನ್ನು ಯಾರಿಗಾದರೂ ಈಗಾಗಲೇ ಅಸ್ತಮಾ, ಬ್ರಾಂಕೈಟಿಸ್ ಅಥವಾ ಅಲರ್ಜಿ ಇದ್ದರೆ, ಹೀಟರ್ ಅನ್ನು ಹಾಕಿಕೊಂಡು ಮಲಗುವುದರಿಂದ ಈ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಾಗಬಹುದು. ಹಾಗಾಗಿ ಈ ರೀತಿಯಾದಾಗ ನಿರ್ಲಕ್ಷಿಸಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಚಳಿಗಾಲದಲ್ಲಿ ನಿರಂತರ ಆಯಾಸ, ಆಲಸ್ಯವಾಗುವುದಕ್ಕೆ ಈ ವಿಟಮಿನ್ ಕೊರತೆಯೇ ಕಾರಣ!

ಹೀಟರ್ ಬಳಸುವಾಗ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳು:

  • ಕೋಣೆಯಲ್ಲಿ ಲೈಟ್ ಆಗಿ ವೆಂಟಿಲೇಷನ್ ಇರುವಂತೆ ನೋಡಿಕೊಳ್ಳಿ.
  • ಹೀಟರ್ ಹತ್ತಿರದಲ್ಲಿ ಒಂದು ಬಕೆಟ್ ನೀರನ್ನು ಇರಿಸಿ.
  • ರಾತ್ರಿಯಿಡೀ ಹೀಟರ್ ಬಳಸಬೇಡಿ.
  • ಮಕ್ಕಳು ಮತ್ತು ವೃದ್ಧರು ಹೀಟರ್‌ಗೆ ತುಂಬಾ ಹತ್ತಿರ ಕುಳಿತುಕೊಳ್ಳಲು ಬಿಡಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ