ನಿಮಗೂ ಫ್ರೈಡ್ ರೈಸ್ ಅಂದ್ರೆ ಇಷ್ಟಾನಾ, ಈ ವಿಷಯ ತಿಳಿದ್ರೆ ನೀವು ಅದನ್ನು ಮುಟ್ಟಿಯೂ ನೋಡಲ್ಲ!

ಅನೇಕರು ರಸ್ತೆ ಬದಿ ಸಿಗುವ ಆಹಾರ ಸೇವನೆ ಮಾಡಲು ಇಷ್ಟಪಡುತ್ತಾರೆ. ಅದರಲ್ಲಿಯೂ ಕೆಲವರು ಎಗ್ ಫ್ರೈಡ್ ರೈಸ್, ಚಿಕನ್ ಫ್ರೈಡ್ ರೈಸ್ ಹೆಚ್ಚೆಚ್ಚು ಸೇವಿಸುತ್ತಾರೆ. ಸ್ವಲ್ಪ ಬಿಡುವು ಸಿಕ್ಕರೆ ಸಾಕು ಸ್ನೇಹಿತರು ಅಥವಾ ಕುಟುಂಬದವರ ಜೊತೆ ಹೊರಗೆ ಹೋಗಿ ಫಾಸ್ಟ್ ಫುಡ್ ಸೇವನೆ ಮಾಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂಬುದು ತಿಳಿದಿದೆಯೇ? ಹಾಗಾದರೆ, ಫ್ರೈಡ್ ರೈಸ್ ಸೇವನೆಯಿಂದಾಗುವ ಆರೋಗ್ಯ ಸಮಸ್ಯೆಗಳು, ಯಾಕೆ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿಮಗೂ ಫ್ರೈಡ್ ರೈಸ್ ಅಂದ್ರೆ ಇಷ್ಟಾನಾ, ಈ ವಿಷಯ ತಿಳಿದ್ರೆ ನೀವು ಅದನ್ನು ಮುಟ್ಟಿಯೂ ನೋಡಲ್ಲ!
ಫ್ರೈಡ್ ರೈಸ್ ಸೇವನೆಯಿಂದಾಗುವ ಆರೋಗ್ಯ ಸಮಸ್ಯೆಗಳು

Updated on: Nov 24, 2025 | 8:01 PM

ಇತ್ತೀಚೆಗೆ, ಹೊರಗಿನ ಆಹಾರ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸ್ವಲ್ಪ ಬಿಡುವು ಸಿಕ್ಕರೆ ಸಾಕು ಸ್ನೇಹಿತರು ಅಥವಾ ಕುಟುಂಬದವರ ಜೊತೆ ಹೊರಗೆ ಹೋಗಿ ಫಾಸ್ಟ್ ಫುಡ್ ಸೇವನೆ ಮಾಡುತ್ತಾರೆ. ಆದರೆ ವಾರಕ್ಕೆ ಎರಡು ಅಥವಾ ಮೂರು ಬಾರಿ ಫಾಸ್ಟ್ ಫುಡ್ (Fast food), ಅದರಲ್ಲಿಯೂ ಫ್ರೈಡ್ ರೈಸ್ (Fried Rice) ತಿನ್ನುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳಾಗುತ್ತೆ, ಯಾಕೆ ಒಳ್ಳೆಯದಲ್ಲ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಫ್ರೈಡ್ ರೈಸ್ ಆರೋಗ್ಯಕ್ಕೆ ಒಳ್ಳೆಯದಲ್ಲ ಏಕೆಂದರೆ ಒಮ್ಮೆ ಬೇಯಿಸಿದ ಅನ್ನವನ್ನು ಮತ್ತೆ ಬಿಸಿ ಮಾಡಿ ಹುರಿಯುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳು ಉಂಟಾಗಬಹುದು. ಇದು ಹೊಟ್ಟೆ ಉರಿ, ಅಜೀರ್ಣ, ಗ್ಯಾಸ್ ಮತ್ತು ಉಬ್ಬರದಂತಹ ಸಮಸ್ಯೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅದೇ ರೀತಿ, ಫ್ರೈಡ್ ರೈಸ್‌ಗೆ ಬಳಸುವ ಎಣ್ಣೆಯನ್ನು ಹಲವು ಬಾರಿ ಮರುಬಳಕೆ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಮಸಾಲೆಗಳು ಮತ್ತು ಹೆಚ್ಚುವರಿ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡಿದಾಗ, ಅದರಲ್ಲಿರುವ ಟ್ರಾನ್ಸ್ ಕೊಬ್ಬುಗಳು ಹೃದಯಕ್ಕೆ ಹಾನಿ ಮಾಡುತ್ತದೆ. ಹೆಚ್ಚು ಫ್ರೈಡ್ ರೈಸ್ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ. ಹಾಗಾಗಿಯೇ ಹೃದಯ ಸಂಬಂಧಿ ಸಮಸ್ಯೆಗಳಿರುವವರು ಹೊರಗೆ ಸಿಗುವ ಆಹಾರಗಳಿಂದ ದೂರವಿರುವುದು ಉತ್ತಮ.

ಇದನ್ನೂ ಓದಿ: ಚಳಿಗಾಲದಲ್ಲಿ ಆರೋಗ್ಯವಾಗಿರಲು ನಿಮ್ಮ ಆಹಾರಕ್ರಮದಲ್ಲಿ ಈ ಬದಲಾವಣೆಗಳನ್ನು ಮಾಡಿ ನೋಡಿ!

ಯಾಕೆ ಫ್ರೈಡ್ ರೈಸ್ ಒಳ್ಳೆಯದಲ್ಲ?

ಫ್ರೈಡ್ ರೈಸ್‌ನಲ್ಲಿ ಬಳಕೆ ಮಾಡುವ ಸೋಯಾ ಸಾಸ್, ಚಿಲ್ಲಿ ಸಾಸ್, ಉಪ್ಪು ಮತ್ತು ವಿನೆಗರ್‌ನಂತಹ ಬಹಳಷ್ಟು ಪದಾರ್ಥಗಳು ರಕ್ತದೊತ್ತಡ ಅಪಾಯವನ್ನು ಹೆಚ್ಚಿಸಬಹುದು. ಅದರಲ್ಲಿಯೂ ಚೈನೀಸ್ ಮತ್ತು ಫ್ರೈಡ್ ರೈಸ್ ಗಳಲ್ಲಿ ಕ್ಯಾಲೋರಿ ಹೆಚ್ಚಾಗಿದ್ದು ಇವುಗಳ ಸೇವನೆಯಿಂದ ತೂಕ ಹೆಚ್ಚಾಗುವುದಲ್ಲದೆ, ಬೊಜ್ಜು ಬರುವ ಸಾಧ್ಯತೆಯೂ ಇರುತ್ತದೆ. ಇದಲ್ಲದೆ, ಈ ರೀತಿಯ ಆಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ತಲೆನೋವು, ಎದೆ ಉರಿ ಮತ್ತು ವೇಗದ ಹೃದಯ ಬಡಿತದಂತಹ ಲಕ್ಷಣಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ