ಉಪ್ಪಿನ ಥೆರಪಿ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಇದು ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಒಳಗೊಂಡಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಸ್ತಮಾ, ಬ್ರಾಂಕೈಟಿಸ್, ಸಿಸ್ಟಿಕ್ ಫೈಬ್ರೋಸಿಸ್ ಮತ್ತು ಅಲರ್ಜಿಗಳಂತಹ ದೀರ್ಘಕಾಲದ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಜನರಿಗೆ ಉಪ್ಪಿನ ಚಿಕಿತ್ಸೆಯು ಅತ್ಯುತ್ತಮ ಮತ್ತು ನೈಸರ್ಗಿಕ ಚಿಕಿತ್ಸಾ ಆಯ್ಕೆಗಳಲ್ಲಿ ಒಂದಾಗಿದೆ.
ಮನುಷ್ಯ ಗುಹೆಗಳಲ್ಲಿ ವಾಸಿಸುತ್ತಿದ್ದ ಕಾಲದಿಂದಲೂ ಈ ಉಪ್ಪಿನ ಚಿಕಿತ್ಸೆಯು ಆಚರಣೆಯಲ್ಲಿದೆ. ನೀವು ಇದಕ್ಕಾಗಿ ಸ್ಪಾಗೆ ಹೋಗಬೇಕೆಂದೇನೂ ಇಲ್ಲ. ಮನೆಯಲ್ಲೇ ಉಪ್ಪಿನ ಥೆರಪಿ ಮಾಡಿಕೊಳ್ಳಬಹುದು.
ಇದನ್ನೂ ಓದಿ: ನೀವು ಹೆಚ್ಚು ಉಪ್ಪು ಸೇವಿಸುತ್ತೀರಾ?; ಈ ಅಪಾಯಗಳ ಬಗ್ಗೆಯೂ ತಿಳಿದಿರಲಿ
ಅದಕ್ಕಾಗಿ ಮೊದಲು ಅಲ್ಟ್ರಾಸಾನಿಕ್ ಲವಣಯುಕ್ತ ಯಂತ್ರವನ್ನು ಮತ್ತು ಅದರೊಂದಿಗೆ ಬಳಸಬೇಕಾದ ಸರಿಯಾದ ಉಪ್ಪನ್ನು ಖರೀದಿಸಬೇಕು. ಉಪ್ಪಿನ ಯಂತ್ರವು ಎಲ್ಲವನ್ನೂ ಮಾಡುವ ಮಾಂತ್ರಿಕ ಸಾಧನವಾಗಿದೆ. ಉಪ್ಪು ಯಂತ್ರವು ಉಪ್ಪನ್ನು ಸಣ್ಣ ಕಣಗಳಾಗಿ ಮಾರ್ಪಡಿಸುತ್ತದೆ. ಉತ್ತಮ ಫಲಿತಾಂಶಗಳನ್ನು ಪಡೆಯಲು ಉಪ್ಪಿನ ಚಿಕಿತ್ಸೆಯಲ್ಲಿ ಬಳಸುವ ಉಪ್ಪು ನೈಸರ್ಗಿಕ ಕಲ್ಲುಪ್ಪು ಆಗಿದ್ದರೆ ಒಳ್ಳೆಯದು. ಹೆಚ್ಚು ಉಪ್ಪಿನ ಸೇವನೆಯು ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ. ಉಪ್ಪು ಚಿಕಿತ್ಸೆಯಲ್ಲಿ ಉಪ್ಪಿನ ಕಣಗಳು ಉಸಿರಾಟದ ವ್ಯವಸ್ಥೆಯನ್ನು ಮಾತ್ರ ಪ್ರವೇಶಿಸುತ್ತವೆಯೇ ಹೊರತು ಜೀರ್ಣಾಂಗವ್ಯೂಹಕ್ಕೆ ಅಲ್ಲ. ಈ ಉಪ್ಪು ಲೋಳೆಯ ಮೂಲಕ ಹೊರಹಾಕಲ್ಪಡುತ್ತದೆ. ಉಸಿರಾಡುವ ಉಪ್ಪಿನ ಕಣಗಳು ತುಂಬಾ ಚಿಕ್ಕದಾಗಿರುವುದರಿಂದ ಆರೋಗ್ಯಕ್ಕೆ ಯಾವುದೇ ಅಪಾಯವಿಲ್ಲ.
ಒಮ್ಮೆ 10ರಿಂದ 20 ನಿಮಿಷಗಳ ಕಾಲ ಇನ್ಹೇಲರ್ ಆಗಿರುವ ಏರೋಬಿಕಾವನ್ನು ಬಳಸಿ. ಈ ಸಾಧನದ ಬಳಕೆಯು ಮೂಗಿನಿಂದ ದಪ್ಪ ಮತ್ತು ಹೆಚ್ಚುವರಿ ಲೋಳೆಯ ತೆಗೆದುಹಾಕುವಿಕೆಯನ್ನು ಸುಗಮಗೊಳಿಸುತ್ತದೆ. ಇದು ಅನೇಕ ಉಸಿರಾಟದ ಸಮಸ್ಯೆಗಳನ್ನು ನಿವಾರಿಸುತ್ತದೆ.
ಇದನ್ನೂ ಓದಿ: ಗಾಯ ಗುಣವಾದರೂ ಫಿಸಿಯೋಥೆರಪಿ ಯಾಕೆ ಅಗತ್ಯ?
ಇನ್ನೊಂದು ವಿಧಾನವೆಂದರೆ, ನಿಮ್ಮ ಮನೆಯ ಯಾವುದಾದರೂ ಕೋಣೆಯಲ್ಲಿ ಸಲೈನೈಸರ್ ಸಾಧನವನ್ನು ಇರಿಸಬಹುದು. ನಿಮ್ಮ ಮನೆಯ ಎಲ್ಲಾ ಕೊಠಡಿಗಳಲ್ಲಿ ಈ ಯಂತ್ರವನ್ನು ಇರಿಸಿದರೆ 24 ಗಂಟೆಗಳ ಕಾಲ ಇದನ್ನು ಬಳಸಬಹುದು. ಈ ಯಂತ್ರವು ಸೂಕ್ಷ್ಮ ಉಪ್ಪಿನ ಕಣಗಳನ್ನು ಗಾಳಿಯಲ್ಲಿ ಬಿಡುಗಡೆ ಮಾಡುತ್ತದೆ. ಈ ಗಾಳಿಯು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಆಂಟಿಫಂಗಲ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮೂಗಿನಿಂದ ಲೋಳೆಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ನಿಮ್ಮ ಒಟ್ಟಾರೆ ಉಸಿರಾಟದ ಕಾರ್ಯವನ್ನು ಸುಧಾರಿಸುತ್ತದೆ.
ತೀವ್ರವಾದ ಸೈನಸ್, ಶೀತ ಅಥವಾ ಇತರ ಯಾವುದೇ ಉಸಿರಾಟದ ಸೋಂಕಿನಂತಹ ಸಮಸ್ಯೆಗಳನ್ನು ಉಪ್ಪಿನ ಚಿಕಿತ್ಸೆಯಿಂದ ಬೇಗ ನಿವಾರಿಸಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ