ನೀವು ಹೆಚ್ಚು ಉಪ್ಪು ಸೇವಿಸುತ್ತೀರಾ?; ಈ ಅಪಾಯಗಳ ಬಗ್ಗೆಯೂ ತಿಳಿದಿರಲಿ
ಬಹಳ ಪ್ರಾಚೀನ ಕಾಲದಿಂದಲೂ ಉಪ್ಪನ್ನು ಆಹಾರವನ್ನು ಸಂರಕ್ಷಿಸಲು ಬಳಸಲಾಗುತ್ತದೆ. ಹೆಚ್ಚಿನ ಉಪ್ಪಿನ ಸಾಂದ್ರತೆಯು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಆ ಬ್ಯಾಕ್ಟೀರಿಯಾಗಳು ಆಹಾರವನ್ನು ಕೆಡಿಸಲು ಕಾರಣವಾಗಬಹುದು.
ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಉಪ್ಪು ಸೇವಿಸುವುದು ಅಗತ್ಯ. ಇದನ್ನು ಹೆಚ್ಚು ಅಥವಾ ಕಡಿಮೆ ಸೇವಿಸುವುದರಿಂದ ವೈದ್ಯಕೀಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ, ಉಪ್ಪನ್ನು ಹೆಚ್ಚೂ ಇಲ್ಲದಂತೆ, ಕಡಿಮೆಯೂ ಇಲ್ಲದಂತೆ ಸಮತೋಲಿತವಾಗಿ ಸೇವಿಸುವುದು ಅಗತ್ಯ. ಹೆಚ್ಚು ಉಪ್ಪು ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಹೃದಯ ಕಾಯಿಲೆಗೆ ಕಾರಣವಾಗುತ್ತದೆ. ಹಾಗೆಯೇ, ಕೆಲವು ಪುರಾವೆಗಳು ತುಂಬಾ ಕಡಿಮೆ ಉಪ್ಪು ತಿನ್ನುವುದು ಹಾನಿಕಾರಕ ಎಂದು ತಿಳಿಸಿವೆ.
ನಿಮ್ಮ ಆಹಾರದಲ್ಲಿ ಉಪ್ಪು ಸೋಡಿಯಂನ ಪ್ರಮುಖ ಮೂಲವಾಗಿದೆ. ಸೋಡಿಯಂ ಕ್ಲೋರೈಡ್ (NaCl) ಎಂದೂ ಕರೆಯಲ್ಪಡುವ ಇದು 40% ಸೋಡಿಯಂ ಮತ್ತು 60% ಕ್ಲೋರೈಡ್ ಅನ್ನು ಒಳಗೊಂಡಿದೆ. ಕೆಲವು ವಿಧದ ಉಪ್ಪು ಅಯೋಡಿನ್, ಕಬ್ಬಿಣ, ಫೋಲಿಕ್ ಆಮ್ಲ, ಅಥವಾ ಇವುಗಳ ಸಂಯೋಜನೆಯಿಂದ ಕೂಡಿರುತ್ತದೆ. ಉದಾಹರಣೆಗೆ, ಟೇಬಲ್ ಉಪ್ಪು ಹೆಚ್ಚಾಗಿ ಅಯೋಡಿನ್ ಅನ್ನು ಹೊಂದಿರುತ್ತದೆ. ನರಗಳ ಆರೋಗ್ಯ, ಪೋಷಕಾಂಶಗಳ ಹೀರಿಕೊಳ್ಳುವಿಕೆ ಮತ್ತು ಸ್ನಾಯುವಿನ ಕಾರ್ಯ ಸೇರಿದಂತೆ ದೇಹದ ಅನೇಕ ಅಗತ್ಯ ಕಾರ್ಯಗಳಿಗೆ ಸೋಡಿಯಂ ಅತ್ಯಗತ್ಯ.
ಬಹಳ ಪ್ರಾಚೀನ ಕಾಲದಿಂದಲೂ ಉಪ್ಪನ್ನು ಆಹಾರವನ್ನು ಸಂರಕ್ಷಿಸಲು ಬಳಸಲಾಗುತ್ತದೆ. ಹೆಚ್ಚಿನ ಉಪ್ಪಿನ ಸಾಂದ್ರತೆಯು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಆ ಬ್ಯಾಕ್ಟೀರಿಯಾಗಳು ಆಹಾರವನ್ನು ಕೆಡಿಸಲು ಕಾರಣವಾಗಬಹುದು. ಉಪ್ಪುಗಳಲ್ಲಿ ಹಲವು ರೀತಿಗಳಿವೆ. ಅವುಗಳ ವಿನ್ಯಾಸ, ರುಚಿ, ಒಳಗೊಂಡಿರುವ ಅಂಶಗಳು ಭಿನ್ನವಾಗಿರುತ್ತವೆ.
ಇದನ್ನೂ ಓದಿ: Weight Loss Tips: ನುಗ್ಗೆ ಸೊಪ್ಪಿನಿಂದ ಹೇಗೆ ತೂಕ ಇಳಿಸಿಕೊಳ್ಳಲು ಸಾಧ್ಯ?
ಅತಿಯಾದ ಉಪ್ಪಿನ ಸೇವನೆಯಿಂದ ಹೃದಯದ ಆರೋಗ್ಯಕ್ಕೆ ಹಾನಿಯಾಗಬಹುದು. ಅತಿಯಾದ ಸೋಡಿಯಂ ಸೇವನೆಯು ಒಳ್ಳೆಯದಲ್ಲ. ಇದು ಅಧಿಕ ರಕ್ತದೊತ್ತಡಕ್ಕೆ ಅಪಾಯಕಾರಿ ಅಂಶವಾಗಿದೆ. ಅಧಿಕ ರಕ್ತದೊತ್ತಡವು ನಿಮ್ಮ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ನಿಮ್ಮ ದೇಹದ ಹಾರ್ಮೋನ್, ಉರಿಯೂತ, ರೋಗನಿರೋಧಕ ಮತ್ತು ಜೀರ್ಣಕಾರಿ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುವ ಹಲವಾರು ಸಂಕೀರ್ಣ ಮಾರ್ಗಗಳ ಮೂಲಕ ಉಪ್ಪು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಅತಿಯಾಗಿ ತಿನ್ನುವ ಉಪ್ಪು ರೆನಿನ್-ಆಂಜಿಯೋಟೆನ್ಸಿನ್ ವ್ಯವಸ್ಥೆಯನ್ನು ಸಹ ನಿಗ್ರಹಿಸಬಹುದು. ಇದು ರಕ್ತದೊತ್ತಡ ಮತ್ತು ಸೋಡಿಯಂ ಮಟ್ಟವನ್ನು ನಿಯಂತ್ರಿಸುತ್ತದೆ.
ನೀವು ಹೆಚ್ಚು ಉಪ್ಪು ಇರುವ ಊಟವನ್ನು ಸೇವಿಸಿದಾಗ ನಿಮ್ಮ ದೇಹವು ಈ ಹೆಚ್ಚುವರಿ ಸೋಡಿಯಂ ಅನ್ನು ಉಳಿಸಿಕೊಳ್ಳುತ್ತದೆ. ಹೆಚ್ಚು ನೀರು ಕುಡಿಯುವ ಮೂಲಕ ಆ ಸೋಡಿಯಂ ಪ್ರಮಾಣವನ್ನು ನೀವು ಹೊರಹಾಕಬೇಕು. ಹೆಚ್ಚುವರಿ ನೀರು ಮತ್ತು ಸೋಡಿಯಂ ಅಹಿತಕರವಾಗಿರುತ್ತದೆ. ಇದು ಹೊಟ್ಟೆ ಉಬ್ಬುವಿಕೆಗೆ ಕಾರಣವಾಗಬಹುದು.
ಇದನ್ನೂ ಓದಿ: ಕೊಬ್ಬರಿ ಎಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ಏನು ಪ್ರಯೋಜನ?
ಚಿಪ್ಸ್ ಅಥವಾ ನಟ್ಸ್ಗಳಂತಹ ಉಪ್ಪಿನಂಶವಿರುವ ಆಹಾರವನ್ನು ಸೇವಿಸುವುದರಿಂದ ನಿಮಗೆ ಹೆಚ್ಚು ಬಾಯಾರಿಕೆಯಾಗಬಹುದು. ನಿಮ್ಮ ದೇಹವು ನೀರು ಮತ್ತು ಸೋಡಿಯಂನ ಅಸಮತೋಲನವನ್ನು ಹೊಂದಬಹುದು. ನೀವು ಅದನ್ನು ಸಮತೋಲನಗೊಳಿಸಲು ಹೆಚ್ಚು ನೀರನ್ನು ಕುಡಿಯಬಹುದು. ಆದರೆ ನೀವು ಅಧಿಕ ರಕ್ತದೊತ್ತಡ ಅಥವಾ ಎಡಿಮಾವನ್ನು ಹೊಂದಿದ್ದರೆ ಅದರಿಂದ ನಿಮ್ಮ ಆರೋಗ್ಯ ಇನ್ನಷ್ಟು ಹದಗೆಡಬಹುದು. ಬಹಳಷ್ಟು ಉಪ್ಪು ತಿಂದ ನಂತರ ನೀರು ಕುಡಿಯುವುದು ಮುಖ್ಯ. ಇಲ್ಲದಿದ್ದರೆ ನಿಮ್ಮ ದೇಹ ನಿರ್ಜಲೀಕರಣಗೊಳ್ಳಬಹುದು.
ನೀವು ಸಾಕಷ್ಟು ನೀರು ಕುಡಿಯದಿದ್ದರೆ ಹಾಗೂ ನಿಮ್ಮ ಆಹಾರದಲ್ಲಿ ಉಪ್ಪು ಹೆಚ್ಚಿದ್ದರೆ ನಿಮಗೆ ಕಿಡ್ನಿ ಸ್ಟೋನ್ ಆಗುವ ಅಪಾಯವಿದೆ. ಕಿಡ್ನಿ ಸ್ಟೋನ್ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಅಥವಾ ಯೂರಿಕ್ ಆಮ್ಲದಿಂದ ಮಾಡಲ್ಪಟ್ಟಿದೆ. ಅವು ಸಾಕಷ್ಟು ದೊಡ್ಡದಾಗಿದ್ದರೆ ಅವು ನೋವನ್ನು ಉಂಟುಮಾಡಬಹುದು.
ಒಂದು ದಿನದಲ್ಲಿ ನೀವು ಎಷ್ಟು ಉಪ್ಪು ತಿನ್ನಬೇಕು?:
ಎಲ್ಲಾ ವಯಸ್ಸಿನವರಿಗೆ ದಿನಕ್ಕೆ 2,300 ಮಿಲಿಗ್ರಾಂಗಿಂತ ಕಡಿಮೆ ಉಪ್ಪನ್ನು ಸೇವಿಸಲು ಅಮೆರಿಕಾದಲ್ಲಿ ಶಿಫಾರಸು ಮಾಡಲಾಗಿದೆ. ಮೂತ್ರಪಿಂಡದ ಕಾಯಿಲೆ ಅಥವಾ ಹೃದಯ ಸಮಸ್ಯೆಗಳೊಂದಿಗೆ ವಾಸಿಸುವ ಜನರಿಗೆ ಇದು ಉತ್ತಮ ಮಾರ್ಗಸೂಚಿಯಾಗಿದ್ದರೂ, ಉಳಿದ ಜನಸಂಖ್ಯೆಗೆ ಈ ಉಪ್ಪಿನ ಪ್ರಮಾಣದ ಮಿತಿಯನ್ನು ಹೆಚ್ಚಿಸಬೇಕು ಎಂದು ಅನೇಕ ಅಧ್ಯಯನಗಳು ತಿಳಿಸಿವೆ.
ಅಧಿಕ ಪ್ರಮಾಣದ ಉಪ್ಪನ್ನು ಸೇವಿಸುವ ಜನರು ಹೃದ್ರೋಗ ಮತ್ತು ಮರಣದ ಅಪಾಯವನ್ನು ಹೊಂದಿರುತ್ತಾರೆ. ಕಡಿಮೆ ಉಪ್ಪನ್ನು ಸೇವಿಸುವ ಜನರು ಹೃದ್ರೋಗ ಮತ್ತು ಸಾವಿಗೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ದಿನಕ್ಕೆ 2,600-5,000 ಮಿಲಿಗ್ರಾಂ ಉಪ್ಪನ್ನು ಸೇವಿಸುವ ಜನರು ಕಡಿಮೆ ಆರೋಗ್ಯ ಸಮಸ್ಯೆಯ ಅಪಾಯವನ್ನು ಹೊಂದಿರುತ್ತಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ