ಹಿಮಾಲಯನ್ ಸಾಲ್ಟ್​ ಸ್ಟೋನ್ ಮಸಾಜ್​ನಿಂದ ಏನು ಪ್ರಯೋಜನ?

ಹಿಮಾಲಯನ್ ಉಪ್ಪು ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ನೈಸರ್ಗಿಕವಾಗಿ ಕಂಡುಬರುವ 84 ಖನಿಜಗಳು ಮತ್ತು ಅಂಶಗಳಿಂದ ಇದು ತುಂಬಿರುತ್ತದೆ. ಈ ಖನಿಜಗಳಲ್ಲಿ ಹೆಚ್ಚಿನವು ದೇಹಕ್ಕೆ ಆರೋಗ್ಯ ಒದಗಿಸುತ್ತವೆ. ಹಿಮಾಲಯ ಪರ್ವತಗಳ ತಪ್ಪಲಿನಿಂದ ಗಣಿಗಾರಿಕೆ ಮೂಲಕ ತೆಗೆಯಲಾದ ಈ ಶಕ್ತಿಶಾಲಿ ಉಪ್ಪನ್ನು ಭೂಮಿಯ ಮೇಲಿನ ಶುದ್ಧ ಉಪ್ಪು ಎಂದು ಹೇಳಲಾಗುತ್ತದೆ.

ಹಿಮಾಲಯನ್ ಸಾಲ್ಟ್​ ಸ್ಟೋನ್ ಮಸಾಜ್​ನಿಂದ ಏನು ಪ್ರಯೋಜನ?
ಹಿಮಾಲಯನ್ ಉಪ್ಪು ಕಲ್ಲಿನ ಮಸಾಜ್ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 10, 2023 | 3:26 PM

ಸ್ಪಾ, ಸಲೂನ್​ಗಳಲ್ಲಿ ಹಲವು ರೀತಿಯ ಮಸಾಜ್ ಥೆರಪಿಯಿದೆ. ಇದೀಗ ಹೆಚ್ಚು ಜನಪ್ರಿಯವಾಗುತ್ತಿರುವ ಮಸಾಜ್ ಸಾಲ್ಟ್​ ಸ್ಟೋನ್ ಮಸಾಜ್. ಒತ್ತಡವನ್ನು ನಿವಾರಿಸಲು ಈ ಹಿಮಾಲಯನ್ ಸ್ಟೋನ್ ಮಸಾಜ್ ಮಾಡಲಾಗುತ್ತದೆ. ಹಿಮಾಲಯನ್ ಉಪ್ಪಿನ ಕಲ್ಲುಗಳನ್ನು ಬಿಸಿ ಮಾಡಿ, ಅದರಿಂದ ದೇಹದ ಮೇಲೆ ಮಸಾಜ್ ಮಾಡಲಾಗುತ್ತದೆ. ಈ ಸಾಲ್ಟ್ ಸ್ಟೋನ್ಸ್ ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ನಂತಹ 84 ನೈಸರ್ಗಿಕ ಖನಿಜಗಳನ್ನು ಹೊಂದಿರುತ್ತದೆ. ಈ ಖನಿಜಗಳು ದೇಹದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕಲ್ಲಿನಿಂದ ಉಷ್ಣತೆಯು ದೇಹದ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಹಿಮಾಲಯನ್ ಉಪ್ಪನ್ನು ದೇಹದ ಆರೋಗ್ಯಕ್ಕೆ ದೀರ್ಘಕಾಲದಿಂದ ಬಳಸಲಾಗುತ್ತಿದೆ. ಪಾಕಿಸ್ತಾನದ ಹಿಮಾಲಯ ಪರ್ವತಗಳ ತಪ್ಪಲಿನಿಂದ ಗಣಿಗಾರಿಕೆ ಮೂಲಕ ತೆಗೆಯಲಾದ ಈ ಶಕ್ತಿಶಾಲಿ ಉಪ್ಪನ್ನು ಭೂಮಿಯ ಮೇಲಿನ ಶುದ್ಧ ಉಪ್ಪು ಎಂದು ಹೇಳಲಾಗುತ್ತದೆ.

ಹಿಮಾಲಯನ್ ಉಪ್ಪು ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ನೈಸರ್ಗಿಕವಾಗಿ ಕಂಡುಬರುವ 84 ಖನಿಜಗಳು ಮತ್ತು ಅಂಶಗಳಿಂದ ಇದು ತುಂಬಿರುತ್ತದೆ. ಈ ಖನಿಜಗಳಲ್ಲಿ ಹೆಚ್ಚಿನವು ದೇಹಕ್ಕೆ ಆರೋಗ್ಯ ಒದಗಿಸುತ್ತವೆ.

ಇದನ್ನೂ ಓದಿ: ಉಗುರುಗಳನ್ನು ಉಜ್ಜಿದರೆ ಕೂದಲು ಉದ್ದವಾಗುತ್ತಾ?

ಉಪ್ಪು ಕಲ್ಲಿನ ಮಸಾಜ್​ನಿಂದಾಗುವ ಉಪಯೋಗಗಳೇನು?:

ನಿದ್ರೆಗೆ ಸಹಕಾರಿ:

ಉಪ್ಪು ಮಸಾಜ್ ನಿದ್ರೆಯನ್ನು ಉತ್ತೇಜಿಸುತ್ತದೆ, ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ. ಈ ವಿಶೇಷ ಮಸಾಜ್ ಕೇಂದ್ರ ನರಮಂಡಲವನ್ನು ಸಮತೋಲನಗೊಳಿಸುತ್ತದೆ.

ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ:

ಹಿಮಾಲಯನ್ ಉಪ್ಪು ಉತ್ತಮವಾದ ಎಕ್ಸ್‌ಫೋಲಿಯೇಟರ್ ಮತ್ತು ಮಾಯಿಶ್ಚರೈಸರ್ ಆಗಿದ್ದು ಅದು ಚರ್ಮವನ್ನು ಕಾಂತಿಯುಕ್ತಗೊಳಿಸುತ್ತದೆ.

ಇದನ್ನೂ ಓದಿ: Skin Care Tips: ಸೆನ್ಸಿಟಿವ್ ಚರ್ಮವನ್ನು ಗುರುತಿಸುವುದು ಹೇಗೆ?

ಯೋಗಕ್ಷೇಮವನ್ನು ಹೆಚ್ಚಿಸುತ್ತದೆ:

ಹಿಮಾಲಯನ್ ಉಪ್ಪು ಕಲ್ಲಿನ ಮಸಾಜ್ ಆರೋಗ್ಯಕರ ಉಸಿರಾಟ ಮತ್ತು ಮೂಳೆಯ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಹಿಮಾಲಯನ್ ಉಪ್ಪು ಕಲ್ಲುಗಳು ರಕ್ತದೊತ್ತಡವನ್ನು ಸುಧಾರಿಸಲು, ಸರಿಯಾದ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಚರ್ಮದ ಕಾಂತಿ ಹೆಚ್ಚಿಸುತ್ತದೆ:

ಹಿಮಾಲಯನ್ ಉಪ್ಪು ಚರ್ಮವನ್ನು ಮೃದುವಾಗಿಸುತ್ತದೆ. ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಸ್ನಾಯು ದೌರ್ಬಲ್ಯ, ತಲೆನೋವು, ಕೀಲು ನೋವು, ಆಯಾಸದಂತಹ ನೋವನ್ನು ನಿವಾರಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ