ನೆತ್ತಿಯಲ್ಲಿ ಕಂಡು ಬರುವ ಸೋರಿಯಾಸಿಸ್ ಕಾಯಿಲೆ ಬಗ್ಗೆ ಈಗಾಗಲೇ ಕೇಳಿರಬಹುದು. ಇದು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ದೀರ್ಘಕಾಲದ ಚರ್ಮದ ಕಾಯಿಲೆಯಾಗಿದ್ದು, ನೆತ್ತಿಯ ಮೇಲೆ ಕೆಂಪು ದದ್ದು ಮತ್ತು ಗಾಯಗಳು ಕಾಣಿಸುತ್ತವೆ. ಇವು ತುಂಬಾ ನೋವುದಾಯಕವಾಗಿದ್ದು ಚರ್ಮದ ಆರೋಗ್ಯಕ್ಕೆ ಸಾಕಷ್ಟು ತೊಂದರೆ ನೀಡುವ ಮೂಲಕ ದೇಹದ ಇತರ ಭಾಗಗಳಿಗೆ ಹಬ್ಬುವ ಸಾಧ್ಯತೆ ಇರುತ್ತದೆ. ನೆತ್ತಿಯ ಮೇಲೆ ಕಂಡು ಬರುವ ಈ ಸೋರಿಯಾಸಿಸ್ ಸಮಸ್ಯೆಯು ತುರಿಕೆ, ಅಸ್ವಸ್ಥತೆ ಮತ್ತು ಒತ್ತಡಕ್ಕೆ ಕಾರಣವಾಗಬಹುದು. ನ್ಯಾಷನಲ್ ಸೆಂಟರ್ ಆಫ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ಪ್ರಕಾರ, ನೆತ್ತಿಯ ಸೋರಿಯಾಸಿಸ್ ಭಾರತದಲ್ಲಿ ಹೆಚ್ಚುತ್ತಿರುವ ಮತ್ತು ಆಗಾಗ ಕಂಡು ಬರುವ ಸೋರಿಯಾಸಿಸ್ಗಳಲ್ಲಿ ಒಂದಾಗಿದೆ, ಇದು ಸರಿಸುಮಾರು 9% ಪ್ರಕರಣಗಳಿಗೆ ಕಾರಣವಾಗಿದೆ. ಹಾಗಾಗಿ ನೈಸರ್ಗಿಕ ವಿಧಾನದ ಮೂಲಕ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಮುಕ್ತಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ.
ಇದು ಯಾವುದೇ ವಯಸ್ಸಿನಲ್ಲಿ ಕಂಡು ಬರಬಹುದಾದರೂ, ಹೆಚ್ಚಿನ ಪ್ರಕರಣಗಳು 20 ರಿಂದ 40 ರ ವಯಸ್ಸಿನ ವ್ಯಕ್ತಿಗಳಲ್ಲಿ ಕಂಡು ಬರುತ್ತವೆ. ಭಾರತದಲ್ಲಿ, ನೆತ್ತಿಯ ಸೋರಿಯಾಸಿಸ್ ಚಿಕಿತ್ಸೆಗೆ ಪ್ರತಿ ಸೆಷನ್ಗೆ 8,300 ರಿಂದ 16,600 ರೂ.ಗಳವರೆಗೆ ವೆಚ್ಚವಾಗಬಹುದು, ಈ ಬಗ್ಗೆ ಡಾ. ಮುಖೇಶ್ ಬಾತ್ರಾ ಅವರು ನೆತ್ತಿಯ ಸೋರಿಯಾಸಿಸ್ ಗೆ ಕಾರಣವೇನು? ನೆತ್ತಿಯಲ್ಲಿ ಸೋರಿಯಾಸಿಸ್ ಹೇಗೆ ಉಂಟಾಗುತ್ತದೆ ಎಂಬುದರ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು ಇದು ಚರ್ಮದ ಕೋಶಗಳು ಅಸಹಜವಾಗಿ ಬೆಳೆಯಲು ಕಾರಣವಾಗುತ್ತದೆ. ಕೂದಲು ಉದುರುವ ಬದಲು, ಹೆಚ್ಚುವರಿ ಕೋಶಗಳು ಮೇಲ್ಮೈಯಲ್ಲಿ ಸಂಗ್ರಹವಾಗುತ್ತವೆ ಎಂದಿದ್ದಾರೆ. ಅವರು ನೆತ್ತಿಯ ಸೋರಿಯಾಸಿಸ್ ಗೆ ಕಾರಣವಾಗುವ ಅಥವಾ ಉಲ್ಬಣಗೊಳಿಸುವ ಅಂಶಗಳನ್ನು ತಿಳಿಸಿದ್ದು, ಆನುವಂಶಿಕತೆ, ಒತ್ತಡ, ಧೂಮಪಾನ ಮತ್ತು ಮದ್ಯಪಾನ ಸೇರಿದಂತೆ ಶೀತ ಹವಾಮಾನ, ಜೀವನಶೈಲಿ ಅಭ್ಯಾಸಗಳು, ಪರಿಸರ ಅಂಶಗಳು ಸೇರಿದಂತೆ ಇನ್ನು ಅನೇಕ ಕಾರಣಗಳಿಂದ ಈ ಸಮಸ್ಯೆ ಬರಬಹುದು ಎಂದಿದ್ದಾರೆ.
ನೆತ್ತಿಯ ಸೋರಿಯಾಸಿಸ್ ಕಂಡು ಬಂದರೆ ತೆಲೆಯಲ್ಲಿ ಹೆಚ್ಚು ತುರಿಕೆ, ಸುಡುವ ಸಂವೇದನೆ, ಕೆಂಪಾಗುವಿಕೆಯನ್ನು ಅನುಭವಿಸುತ್ತಾರೆ. ಫ್ಲೇಕ್ಸ್ ಅನ್ನು ಹೆಚ್ಚಾಗಿ ತಲೆಹೊಟ್ಟು ಎಂದು ತಪ್ಪಾಗಿ ಭಾವಿಸಬಹುದು, ಆದರೆ ನೆತ್ತಿಯ ಸೋರಿಯಾಸಿಸ್ ನಿರಂತರವಾಗಿರುತ್ತದೆ. ಚಿಕಿತ್ಸೆ ನೀಡದಿದ್ದರೆ, ಇದು ಹಣೆ, ಕುತ್ತಿಗೆ ಮತ್ತು ಕಿವಿಗಳಂತಹ ಇತರ ಪ್ರದೇಶಗಳಿಗೆ ವಿಸ್ತರಿಸಬಹುದು.
ನೆತ್ತಿಯ ಸೋರಿಯಾಸಿಸ್ ಅನ್ನು ಕಡಿಮೆ ಮಾಡಲು ಮತ್ತು ರೋಗಲಕ್ಷಣಗಳನ್ನು ಪರಿಹರಿಸಲು ಮದ್ದುಗಳನ್ನು ನೀಡುವ ಮೂಲಕ ಜೊತೆಗೆ ಅದು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲಾಗುತ್ತದೆ. ಇದನ್ನು ತಡೆಗಟ್ಟಲು ನೈಸರ್ಗಿಕ ವಿಧಾನ ಅನುಸರಿಸುವುದು ಒಳ್ಳೆಯದು. ಹಾಗಾದರೆ ಹೋಮಿಯೋಪತಿಯನ್ನು ಬಳಸುವುದರ ಪ್ರಮುಖ ಪ್ರಯೋಜನಗಳೇನು?
ವೈಯಕ್ತೀಕರಿಸಿದ ಚಿಕಿತ್ಸೆ: ಹೋಮಿಯೋಪತಿ ವೈಯಕ್ತಿಕ ರೋಗಲಕ್ಷಣಗಳಿಗೆ ಪರಿಹಾರ ನೀಡುತ್ತದೆ, ಸ್ಥಿತಿಯನ್ನು ಉಲ್ಬಣಗೊಳಿಸುವ ಅಂಶಗಳನ್ನು ಪರಿಹರಿಸುತ್ತದೆ.
ಇದನ್ನೂ ಓದಿ: ಪದೇ ಪದೇ ಏನಾದರೂ ತಿನ್ನಬೇಕು ಅನಿಸುತ್ತಿದ್ದರೆ ಮಾಧುರಿ ದೀಕ್ಷಿತ್ ಪತಿ ಹೇಳಿರುವ ಸರಳ ಪರಿಹಾರ ಇಲ್ಲಿದೆ
ದೀರ್ಘಕಾಲೀನ ಪರಿಹಾರ: ನಿಯಮಿತ ಹೋಮಿಯೋಪತಿ ಚಿಕಿತ್ಸೆಗಳು ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಪುನರಾವರ್ತನೆ ಕಡಿಮೆಯಾಗುತ್ತದೆ.
ಸುರಕ್ಷಿತ ಚಿಕಿತ್ಸೆ: ಹೋಮಿಯೋಪತಿ ಮದ್ದುಗಳು ಯಾವುದೇ ರೀತಿಯ ಪ್ರತಿಕೂಲ ಪರಿಣಾಮಗಳನ್ನು ಬೀರುವುದಿಲ್ಲ, ಇದು ದೀರ್ಘಕಾಲೀನ ಬಳಕೆಗೆ ಸೂಕ್ತವಾಗಿದೆ.
ನೆತ್ತಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ಸಲ್ಫೇಟ್ ಮುಕ್ತ ಶಾಂಪೂಗಳನ್ನು ಬಳಸುವುದು, ನೆತ್ತಿಯನ್ನು ತೇವಾಂಶದಿಂದ ಇರಿಸಿಕೊಳ್ಳುವುದರಿಂದ ಇದನ್ನು ತಡೆಯಬಹುದು. ಅದಲ್ಲದೆ ಒತ್ತಡ ನಿರ್ವಹಣೆ ಮಾಡಿಕೊಳ್ಳಲು ಯೋಗ, ಧ್ಯಾನ ಮತ್ತು ನಿಯಮಿತ ದೈಹಿಕ ಚಟುವಟಿಕೆಯನ್ನು ಅಳವಡಿಸಿಕೊಳ್ಳಬಹುದು. ಅದಲ್ಲದೆ ಆಲ್ಕೋಹಾಲ್ ಮತ್ತು ಧೂಮಪಾನದ ಸೇವನೆಯನ್ನು ಕಡಿಮೆ ಮಾಡಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಮತೋಲಿತ ಆಹಾರವನ್ನು ಸೇವನೆ ಮಾಡಿ. ಶೀತ ಹವಾಮಾನ, ಗಾಯಗಳು ಮತ್ತು ಕಠಿಣ ರಾಸಾಯನಿಕ ಉತ್ಪನ್ನಗಳಿಂದ ನೆತ್ತಿಯನ್ನು ರಕ್ಷಿಸಿ. ಸಾಮಾನ್ಯವಾಗಿ ಸೋರಿಯಾಸಿಸ್ ದೀರ್ಘ ಕಾಲದ ಸ್ಥಿತಿಯಾಗಿದ್ದರೂ, ಸರಿಯಾದ ಮದ್ದು ಮಾಡಿದರೆ ಅದನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು. ವೈಯಕ್ತೀಕರಿಸಿದ ಆರೈಕೆಯ ಮೂಲಕ, ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದರಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕೂಡ ಇರುವುದಿಲ್ಲ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ