Dhanvantari Jayanti 2024: ಆರೋಗ್ಯದಲ್ಲಿ ಸುಧಾರಣೆ ಕಾಣಬೇಕೆಂದರೆ ಈ ರೀತಿ ಮಾಡಿ
ಧನತ್ರಯೋದಶಿ ಎಂದೂ ಕರೆಯಲ್ಪಡುವ ಧನ್ತೇರಸ್, ದೀಪಾವಳಿ ಆಚರಣೆಯ ಮೊದಲ ದಿನವಾಗಿದೆ. ಈ ಹಬ್ಬವನ್ನು ಐದು ದಿನಗಳ ಕಾಲ ಆಡಂಭರದಿಂದ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ನಿಮಗೆ ತಿಳಿದಿರಬಹುದು ಭಗವಂತನಿಗೆ ಹತ್ತು ಅವತಾರಗಳು ಎಂದು ಹೇಳುವುದಿದೆ. ಹಿಂದಿನ ಮನ್ವಂತರದ್ದೂ ಸೇರಿದಂತೆ ವೇದವ್ಯಾಸ, ಕಪಿಲ, ಮಹೀದಾಸ, ದತ್ತಾತ್ರೇಯ ಒಟ್ಟು 23 ಅವತಾರಗಳನ್ನು ಹೆಸರಿಸಲಾಗುತ್ತದೆ. ಇದರಲ್ಲಿ ಆಯುರ್ವೇದ ಪ್ರವರ್ತಕನೆನಿಸಿದ ಧನ್ವಂತರಿ ಅವತಾರವೂ ಒಂದು. ವೇದ ಹಾಗೂ ಪುರಾಣಗಳಲ್ಲಿ ದೇವತೆಗಳ ವೈದ್ಯನೆಂದು ಧನ್ವಂತರಿಯ ಉಲ್ಲೇಖವಿದೆ. ಹಾಗಾಗಿ ಧನತೇರಸ್ ಹಬ್ಬವನ್ನು ಈ ಧನ್ವಂತರಿ ಜಯಂತಿಯ ದಿನ ಆಚರಣೆ ಮಾಡಲಾಗುತ್ತದೆ.
ದೀಪಾವಳಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು ಧನತ್ರಯೋದಶಿ ಎಂದೂ ಕರೆಯಲ್ಪಡುವ ಧನ್ತೇರಸ್, ದೀಪಾವಳಿ ಆಚರಣೆಯ ಮೊದಲ ದಿನವಾಗಿದೆ. ಈ ಹಬ್ಬವನ್ನು ಐದು ದಿನಗಳ ಕಾಲ ಆಡಂಭರದಿಂದ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ನಿಮಗೆ ತಿಳಿದಿರಬಹುದು ಭಗವಂತನಿಗೆ ಹತ್ತು ಅವತಾರಗಳು ಎಂದು ಹೇಳುವುದಿದೆ. ಹಿಂದಿನ ಮನ್ವಂತರದ್ದೂ ಸೇರಿದಂತೆ ವೇದವ್ಯಾಸ, ಕಪಿಲ, ಮಹೀದಾಸ, ದತ್ತಾತ್ರೇಯ ಒಟ್ಟು 23 ಅವತಾರಗಳನ್ನು ಹೆಸರಿಸಲಾಗುತ್ತದೆ. ಇದರಲ್ಲಿ ಆಯುರ್ವೇದ ಪ್ರವರ್ತಕನೆನಿಸಿದ ಧನ್ವಂತರಿ ಅವತಾರವೂ ಒಂದು. ವೇದ ಹಾಗೂ ಪುರಾಣಗಳಲ್ಲಿ ದೇವತೆಗಳ ವೈದ್ಯನೆಂದು ಧನ್ವಂತರಿಯ ಉಲ್ಲೇಖವಿದೆ. ಹಾಗಾಗಿ ಧನತೇರಸ್ ಹಬ್ಬವನ್ನು ಈ ಧನ್ವಂತರಿ ಜಯಂತಿಯ ದಿನ ಆಚರಣೆ ಮಾಡಲಾಗುತ್ತದೆ.
ನೈವೇದ್ಯ ಹೇಗೆ ಮಾಡಬೇಕು?
ದಿವೋದಾಸ ಧನ್ವಂತರಿ ಕಾರ್ತಿಕ ಮಾಸದ ಕೃಷ್ಣಪಕ್ಷದ ತ್ರಯೋದಶಿ ದಿನ ಜನಿಸಿದ. ಹಾಗಾಗಿ ಉತ್ತರ ಭಾರತದಲ್ಲಿ ಧನ್ವಂತರಿ ಜಯಂತಿಯನ್ನು ಧನತ್ರಯೋದಶಿ ಅಂದರೆ ಧನ್ ತೆರಾಸ್ ಎಂದು ಕರೆಯುತ್ತಾರೆ. ಕೇಂದ್ರ ಆಯುಷ್ ಇಲಾಖೆ ಈ ದಿನವನ್ನು ರಾಷ್ಟ್ರೀಯ ಆಯುರ್ವೇದ ದಿನವಾಗಿ 2016ರಿಂದ ಆಚರಿಸುತ್ತಿದೆ. ಗರುಡ ಪುರಾಣದಲ್ಲಿ ಧನ್ವಂತರಿ ವ್ರತಕಥೆ ಇದೆ. ಸಾಮಾನ್ಯವಾಗಿ ಈ ದಿನ ದೇವರಿಗೆ ಪ್ರಸಾದವನ್ನು ನೈವೇದ್ಯ ಮಾಡಬೇಕಾದರೆ ಒಂದು ಪಾಲು ಗೋಧಿ ಹಿಟ್ಟು, ಎರಡು ಪಾಲು ಹಾಲು, ನಾಲ್ಕು ಪಾಲು ತುಪ್ಪ, ಆರು ಪಾಲು ಸಕ್ಕರೆಯೊಂದಿಗೆ ಕುಂಕುಮಕೇಸರ, ಏಲಕ್ಕಿ, ಲವಂಗ, ದ್ರಾಕ್ಷಿ, ಬಾದಾಮಿ ಇತ್ಯಾದಿಗಳನ್ನು ಹಾಕಿ ಪಾಕ ಮಾಡಿ ಧನ್ವಂತರಿಗೆ ನಿವೇದಿಸಬೇಕೆಂಬ ಉಲ್ಲೇಖವಿದೆ.
ಆರೋಗ್ಯದಲ್ಲಿ ಸುಧಾರಣೆ
ಸಮುದ್ರ ಮಥನ ಕಾಲದಲ್ಲಿ ದಿವ್ಯ ಗಂಧಾನುಲೇಪಿತನಾಗಿ ಅಮೃತ ಕಲಶ ಕೈಯಲ್ಲಿ ಹಿಡಿದು ಮಹಾವಿಷ್ಣು ಧನ್ವಂತರಿಯ ಅವತಾರ ತಾಳಿದನು ಎಂದು ಪುರಾಣಗಳಲ್ಲಿ ವರ್ಣಿತವಾಗಿದೆ. ಜೊತೆಗೆ ದೇವತೆಗಳು ರಾಕ್ಷಸರೊಂದಿಗೆ ಹೋರಾಡುವ ಸಂದರ್ಭಗಳಲ್ಲಿ ಗುಣಪಡಿಸಲಾರದ ನೋವು, ವ್ಯಾಧಿಗಳಿಗೆ ತುತ್ತಾಗುವುದನ್ನು ಕಂಡು ವೈದ್ಯನಾಗಿ ಚಿಕಿತ್ಸೆ ನೀಡಲು ಧನ್ವಂತರಿ ರೂಪಧಾರಿಯಾಗಿ ವಿಷ್ಣು ಅವತರಿಸಿದನೆಂದು ಹೇಳಲಾಗುತ್ತದೆ. ಈ ದೇವರನ್ನು ಸದಾ ಭಜಿಸಿದರೆ ಯಾವುದೇ ರೋಗ ರುಜಿನಗಳೂ ಕಾಡುವುದಿಲ್ಲ. ಅದಲ್ಲದೆ ಪ್ರತಿನಿತ್ಯ ಆರೋಗ್ಯಕ್ಕೆ ಶಕ್ತಿಯುತವಾದ ಧನ್ವಂತರಿ ಸ್ತೋತ್ರ ಪಾರಾಯಣ ಮಾಡುವುದರಿಂದ ನಿಮ್ಮ ಆರೋಗ್ಯದಲ್ಲಿ ಎಷ್ಟೋ ಸುಧಾರಣೆಯಾಗುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಈ ಧನ್ವಂತರಿ ಯಾರು? ಈ ದಿನ ಧನ್ವಂತರಿಯನ್ನು ಏಕೆ ಪೂಜಿಸಲಾಗುತ್ತದೆ? ಇಲ್ಲಿದೆ ಮಾಹಿತಿ
ಮಂತ್ರವೇನು?
“ಧನ್ವಂತರಿರ್ದಿವೋದಾಸಃ ಕಾಶೀರಾ ಜೋ ಶ್ವಿನೀ ಸುತೌ|
ನಕುಲಃ ಸಹದೇ ವೋ ರ್ಕಿಃ ಚ್ಯವನೋಜನಕೋ ಬುಧಃ|
ಜಾಬಾಲೋ ಜಾಜಲಿಃ ಪೈಲಃ ಕರಥಃ ಅಗಸ್ತ್ಯ ಏವ ಚ|
ಏತೇ ವೇದಾಂಗ ವೇದಜ್ಞಃ ಷೋಡಶ ವ್ಯಾಧಿನಾಶಕಾಃ||
ಈ 16 ಜನರನ್ನು ನಿತ್ಯ ಸ್ಮರಿಸಿದರೆ ರೋಗ ನಿವಾರಣೆಯಾಗುತ್ತದೆ ಎಂಬ ಮಾತು ಪುರಾಣಗಳಲ್ಲಿದೆ. ಇದರಲ್ಲಿ ಮೊದಲು ಇರುವುದೇ ಧನ್ವಂತರಿ ಮತ್ತು ದಿವೋದಾಸರ ಹೆಸರಾಗಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ