ಖಾಲಿ ಹೊಟ್ಟೆಯಲ್ಲಿ ತುಂಬಾ ಹೊತ್ತು ಕಳೆಯುವುದು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಹಾಗಾಗಿಯೇ ವೈದ್ಯರು ಹಸಿವಿನಿಂದ ಹೆಚ್ಚು ಹೊತ್ತು ಇರಬೇಡಿ ಎಂದು ಸಲಹೆ ನೀಡುತ್ತಾರೆ. ಹಸಿವು ಕೆಲವೊಮ್ಮೆ ತಲೆ ತಿರಿಗುವುದು, ಗ್ಯಾಸ್ಟ್ರಿಕ್, ತಲೆನೋವಿನಂತಹ ಸಮಸ್ಯೆಯನ್ನು ತಂದೊಡ್ಡುತ್ತದೆ. ಇನ್ನು ಕೆಲವರಿಗೆ ಮಾನಸಿಕ ಒತ್ತಡ, ಟೆನ್ಷನ್ಗೂ ಒಳಗಾಗಬಹುದು. ಹಸಿವಿನಿಂದ ಅಥವಾ ಖಾಲಿ ಹೊಟ್ಟೆಯಲ್ಲಿ ನಾವು ಮಾಡಲೇ ಬಾರದ ಕೆಲವು ಕೆಲಸಗಳಿವೆ. ಅವು ಯಾವುವು ಎಂಬುದು ಈ ಕೆಳಗಿನಂತಿದೆ.
ಕೆಫೀನ್
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವ ಅಭ್ಯಾಸ ಇರುಬಹುದು. ಇದು ನಿಮ್ಮ ದೇಹದಲ್ಲಿ ಆಮ್ಲೀಯತೆಯನ್ನು ಪ್ರಚೋದಿಸುತ್ತದೆ. ಇದು ಹೈಡ್ರೀಕ್ಲೋರಿಕ್ ಆಸಿಡ್ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. ಹಾಗಾಗಿ ಆದಷ್ಟು ಖಾಲಿ ಹೊಟ್ಟೆಯಲ್ಲಿ ಕೆಫೀನ್ ಕುಡಿಯುವ ಅಭ್ಯಾಸವಿದ್ದರೆ ಬಿಟ್ಟುಬಿಡಿ.
ಮದ್ಯ ಸೇವನೆ
ಹೊಟ್ಟೆಯಲ್ಲಿ ಆಹಾರವಿಲ್ಲದೇ ಎಂದಿಗೂ ಮದ್ಯ ಸೇವನೆ ಮಾಡಬಾರದು. ಇದು ರಕ್ತದ ಒತ್ತಡವನ್ನು ಉಂಟು ಮಾಡುತ್ತದೆ. ಇದು ಹೊಟ್ಟೆ, ಮೂತ್ರಪಿಂಡ, ಶ್ವಾಸಕೋಶ, ಪಿತ್ತಜನಕಾಂಗದ ಮೂಲಕ ನಂತರ ಮೆದುಳಿಗೆ ಚಲಿಸುತ್ತದೆ. ಇದರಿಂದ ರಕ್ತನಾಳಗಳು ಅಗಲವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಹೊಟ್ಟೆಯಲ್ಲಿ ಆಹಾರ ಇರುವುದರಿಂದ ಆಲ್ಕೋಹಾಲ್ ರಕ್ತನಾಳದಲ್ಲಿ ಚಲಿಸುವ ಹಾನಿಯನ್ನು ಕಡಿಮೆ ಮಾಡುತ್ತದೆ.
ಚೂಯಿಂಗ್ ಗಮ್
ಖಾಲಿ ಹೊಟ್ಟೆಯಲ್ಲಿ ಚೂಯಿಂಗ್ ಗಮ್ ಎಂದಿಗೂ ಒಳ್ಳೆಯದಲ್ಲ. ನೀವು ಹೆಚ್ಚು ಅಗೆಯುತ್ತಿದ್ದಂತೆ ಜೀರ್ಣಾಂಗ ವ್ಯವಸ್ಥೆ ಹೆಚ್ಚು ಜೀರ್ಣಕಾರಿ ಆಮ್ಲವನ್ನು ಉತ್ಪಾದಿಸುತ್ತದೆ. ಆಮ್ಲವು ನಿಮ್ಮ ಹೊಟ್ಟೆಯ ಒಳಪದರವನ್ನು ನಾಶಪಡಿಸುತ್ತದೆ. ಜತೆಗೆ ಹೊಟ್ಟೆಯಲ್ಲಿ ಯಾವುದೇ ಆಹಾರ ಇಲ್ಲದಿರುವ ಕಾರಣ ಹುಣ್ಣು ಉಂಟಾಗಬಹುದು.
ವಾದ ಮಾಡಬೇಡಿ
ಖಾಲಿ ಹೊಟ್ಟೆಯಲ್ಲಿರುವಾಗ ಎಂದಿಗೂ ವಾದಕ್ಕಿಳಿಯುವುದು, ಮಾತಿಗೆ ಮಾತು ಬೆಳೆಸುವುದು ಅಥವಾ ಚರ್ಚೆಯಲ್ಲಿ ಪಾಲ್ಗೊಳ್ಳುವ ಅಭ್ಯಾಸವನ್ನು ಕಡಿಮೆ ಮಾಡಿ. ಕೋಪಗೊಂಡಾಗ ಕಡಿಮೆ ರಕ್ತದೊತ್ತಡ ಸಮಸ್ಯೆ ಎದುರಾಗಬಹುದು ಮತ್ತು ಮಾನಸಿಕ ಆರೋಗ್ಯದ ಸಮಸ್ಯೆ ಉಂಟಾಗುವ ಸಾಧ್ಯತೆಗಳಿರುತ್ತದೆ.
ಇದನ್ನೂ ಓದಿ:
Health Tips: ಏಲಕ್ಕಿಯಲ್ಲಿದೆ ಮ್ಯಾಜಿಕ್; ಲೈಂಗಿಕ ಸಾಮರ್ಥ್ಯ ಹೆಚ್ಚಾಗಲು ಪುರುಷರು ಹೀಗೆ ಮಾಡಿ
Health Tips: ಯಕೃತ್ತಿನ ಆರೋಗ್ಯ ಕಾಪಾಡಲು ಈ ಕೆಲವು ಆಹಾರ ಪದಾರ್ಥಗಳ ಸೇವನೆ ಮುಖ್ಯ