Side Effects of Cucumber: ಸೌತೆಕಾಯಿ ತಿನ್ನುವುದರಿಂದ ಉಂಟಾಗುವ ಸೈಡ್​ ಎಫೆಕ್ಟ್ ಗಳ ಬಗ್ಗೆ ನಿಮಗೆ ಗೊತ್ತಾ!?

| Updated By: ಸಾಧು ಶ್ರೀನಾಥ್​

Updated on: Jun 05, 2022 | 6:06 AM

Side Effects of Cucumber: ಬೇಸಿಗೆ ಕಾಲದಲ್ಲಿ (Summer) ಬಾಯಾರಿ, ಬಳಲಿ ಬೆಂಡಾದಾಗ ರುಚಿಕಟ್ಟಾದ ಎಳೆ ಸೌತೆಕಾಯಿಯನ್ನು ಕಚಕ್ ಅಂತಾ ಹಲ್ಲುಗಳ ಮಧ್ಯೆ ಕತ್ತರಿಸಿ ತಿನ್ತಾ ಇದ್ದರೆ ಅಬ್ಬಾ ಸಧ್ಯ ರಿಲೀಫ್ ಸಿಕ್ತು ಅಂತಾ ಉದ್ಘರಿಸುವುದು ಗ್ಯಾರಂಟಿ. ಸೌತೆಕಾಯಿಯ ಮಹಿಮೆಯೇ ಹಾಗೆ. ಬೇಸಿಗೆಯಲ್ಲಿ ದೇಹದ ಉಷ್ಣತೆ ಕಡಿಮೆ ಮಾಡಿಕೊಳ್ಳುವುದಕ್ಕೆ ಜನ ಬೆವರು ಹರಿಸ್ತಾರೆ. ಎನೇನೋ ಐಡಿಯಾ ಮಾಡ್ತಾರೆ. ಅದರಲ್ಲೊಂದು ಸಲೀಸಾಗಿ ದೊರಕುವ ಸೌತೆಕಾಯಿ ತಿನ್ನುವುದು. ಇದರಿಂದ ದೇಹದ ಉಷ್ಣತೆ ತಂತಾನೇ ತಗ್ಗುತ್ತದೆ.

Side Effects of Cucumber: ಸೌತೆಕಾಯಿ ತಿನ್ನುವುದರಿಂದ ಉಂಟಾಗುವ ಸೈಡ್​ ಎಫೆಕ್ಟ್ ಗಳ ಬಗ್ಗೆ ನಿಮಗೆ ಗೊತ್ತಾ!?
ಸೌತೆಕಾಯಿ ತಿನ್ನುವುದರ ಸೈಡ್​ ಎಫೆಕ್ಟ್ ಗಳ ಬಗ್ಗೆ ನಿಮಗೆ ಗೊತ್ತಾ!?
Follow us on

ಬೇಸಿಗೆ ಕಾಲದಲ್ಲಿ (Summer) ಬಾಯಾರಿ, ಬಳಲಿ ಬೆಂಡಾದಾಗ ರುಚಿಕಟ್ಟಾದ ಎಳೆ ಸೌತೆಕಾಯಿಯನ್ನು ಕಚಕ್ ಅಂತಾ ಹಲ್ಲುಗಳ ಮಧ್ಯೆ ಕತ್ತರಿಸಿ ತಿನ್ತಾ ಇದ್ದರೆ ಅಬ್ಬಾ ಸಧ್ಯ ರಿಲೀಫ್ ಸಿಕ್ತು ಅಂತಾ ಉದ್ಘರಿಸುವುದು ಗ್ಯಾರಂಟಿ. ಸೌತೆಕಾಯಿಯ ಮಹಿಮೆಯೇ ಹಾಗೆ. ಬೇಸಿಗೆಯಲ್ಲಿ ದೇಹದ ಉಷ್ಣತೆ ಕಡಿಮೆ ಮಾಡಿಕೊಳ್ಳುವುದಕ್ಕೆ ಜನ ಬೆವರು ಹರಿಸ್ತಾರೆ. ಎನೇನೋ ಐಡಿಯಾ ಮಾಡ್ತಾರೆ. ಅದರಲ್ಲೊಂದು ಸಲೀಸಾಗಿ ದೊರಕುವ ಸೌತೆಕಾಯಿ ತಿನ್ನುವುದು. ಇದರಿಂದ ದೇಹದ ಉಷ್ಣತೆ ತಂತಾನೇ ತಗ್ಗುತ್ತದೆ (Side Effects of Cucumber).

ಕಿರು ಸೌತೆಕಾಯಿಯಲ್ಲಿ ಮುಖ್ಯವಾಗಿ ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಕೆ, ಪೊಟಾಷಿಯಂ ಮತ್ತು ಕಾಪರ್ ಹೇರಳವಾಗಿ ದೊರಕುತ್ತದೆ. ಈ ಪೋಷಕಾಂಶಗಳಿಂದಾಗಿ ದೇಹದಲ್ಲಿ ನೀರಿನ ಪ್ರಮಾಣ ಪಾಲಿಸುವುದಕ್ಕೆ ನೆರವಾಗುತ್ತದೆ. ಶರೀರದಲ್ಲಿ ಹೈಡ್ರೇಶನ್ ಸಮಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉದ್ಭವವಾಗುವುದನ್ನು ತಡೆಯುತ್ತದೆ. ಆದರೆ ಸೌತೆಕಾಯಿಯಲ್ಲಿ ಇಷ್ಟು ಆರೋಗ್ಯಕಾರಿ ಪ್ರಯೋಜನಗಳು ಇದ್ದಾಗ್ಯೂ ಇದರಲ್ಲಿ ಕೆಲವು ದುಷ್ಪರಿಣಾಮಗಳೂ ಇವೆ. ಅವು ಏನು ಎಂಬುದನ್ನು ತಿಳಿದುಕೊಳ್ಳೋಣಾ.

ರಾತ್ರಿ ವೇಳೆ ಸೌತೆಕಾಯಿ ತಿನ್ನಬಾರದು.. ಬೇಸಿಗೆ ಕಾಲದಲ್ಲಿ ಬಿಸಿ/ದಗೆಯಿಂದ ಉಪಶಮನಗೊಳ್ಳಲು ಸೌತೆಕಾಯಿ ತಿಂದರೆ ಒಳ್ಳೆಯದೇ, ಆದರೆ ಅತಿಯಾಗಿ ತಿನ್ನುವುದರಿಂದ, ಸಮಯ ದಾಟಿದ ಮೇಲೆ ತಿನ್ನುವುದರಿಂದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆರೋಗ್ಯ ಪರಿಣತರು ಹೇಳುವಂತೆ ರಾತ್ರಿ ಸಮಯದಲ್ಲಿ ಸೌತೆಕಾಯಿ ತಿನ್ನಬಾರದು. ಮಲಗುವ ಮುನ್ನ ಸೌತೆ ತಿಂದರೆ ನಿದ್ದೆಗೆ ತೊಂದ್ರೆ ಉಂಟಾಗುತ್ತದೆ.

ಸೌತೆಕಾಯಿ ಹೆಚ್ಚು ಹೆಚ್ಚು ತಿನ್ನುವುದರಿಂದ ಉದ್ಭವವಾಗುವ ಇತರೆ ದುಷ್ಪರಿಣಾಮಗಳು:
1. ಸೌತೆಕಾಯಿ ಹೆಚ್ಚಾಗಿ ತಿನ್ನುವುದರಿಂದ ಜೀರ್ಣಕ್ರಿಯೆಯನ್ನು ಕಡಿಮೆ ಮಾಡುತ್ತದೆ. ಮಲಬದ್ಧತೆಗೆ ಕಾರಣವಾಗುತ್ತದೆ. ಅದರಿಂದ ಗ್ಯಾಸ್ ಸಮಸ್ಯೆಯೂ ಬರುತ್ತದೆ. Eat This Not That ವರದಿ ಪ್ರಕಾರ ಸೌತೆಕಾಯಿಯಲ್ಲಿ ಕುಕುರ್ಬಿಟಾಸಿನ್ (Cucurbitacin) ಎಂಬ ರಸಾಯನಿಕ ಇರುತ್ತದೆ. ಇದು ಕುಂಬಳಕಾಯಿ, ಕಲ್ಲಂಗಡಿ ಅಂತಹುವುಗಳಲ್ಲಿ ಇರುತ್ತದೆ. ಅಸಲಿಗೆ ಸೌತೆಕಾಯಿಯಲ್ಲಿ ಕಹಿ ಅಂಶವನ್ನು ಉಂಟುಮಾಡುವುದೇ ಈ ಕುಕುರ್ಬಿಟಾಸಿನ್! ಇದೇ ಗ್ಯಾಸ್, ಅಜೀರ್ಣಕ್ಕೆ ಕಾರಣಕರ್ತ. ಒಂದು ವೇಳೆ ಹೆಚ್ಚು ಹೆಚ್ಚು ಸೌತೆಕಾಯಿ ತಿನ್ನುವುದು ಮತ್ತು ಅದರಲ್ಲೂ ಅದರಲ್ಲಿ ಕಹಿ ಅಂಶದ ಕುಕುರ್ಬಿಟಾಸಿನ್ ಉಳಿದಿದ್ದರೆ ಅದನ್ನು ತಿನ್ನುವುದರಿಂದ ಈ ದುಷ್ಪರಿಣಾಮಗಳು ಉಂಟಾಗುತ್ತವೆ.

2. ಸೌತೆಕಾಯಿಯಲ್ಲಿ ಪೊಟಾಷಿಯಂ, ಆಂಟಿಆಕ್ಸಿಡೆಂಟ್ ಗಳು ಇರುತ್ತವೆ. ಇದನ್ನು ಅತಿಯಾಗಿ ತಿನ್ನುವುದರಿಂದ ನಿಮ್ಮ ದೇಹದಲ್ಲಿನ ಎಲೆಕ್ಟ್ರೋಲೈಟ್ ಅಂಶ ಏರುಪೇರಾಗುತ್ತದೆ.

3. ಸೌತೆಕಾಯಿ ಹೆಚ್ಚು ಸೇವಿಸುವುದರಿಂದ ಸೈನಸ್ ಸೋಂಕು ಬಾಧೆಗೆ ಕಾರಣವಾಗುತ್ತದೆ.

4. ಅಮೆರಿಕನ್ ಅಕಾಡೆಮಿ ಆಫ್ ಅಲರ್ಜಿ ಪ್ರಕಾರ ಹೆಚ್ಚು ಸೌತೆಕಾಯಿ ತಿನ್ನುವುದರಿಂದ ಚರ್ಮ ಸಂಬಂಧಿ ಅಲರ್ಜಿ ಬರುವ ಅವಕಾಶವಿದೆ.

To read this in Telugu click here