AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿವರ್ ಆರೋಗ್ಯವನ್ನು ಕಾಪಾಡುವ ಗಿಡಮೂಲಿಕೆಗಳು, ಸಾಂಬಾರ ಪದಾರ್ಥಗಳು

ಲಿವರ್(Liver) ಅಥವಾ ಯಕೃತ್ ನಮ್ಮ ದೇಹದ ಅತಿ ದೊಡ್ಡ ಅಂಗವಾಗಿದ್ದು, ವಿವಿಧ ಕಾರ್ಯಗಳನ್ನು ಏಕಕಾಲಕ್ಕೆ ಮಾಡುವ ಅತಿ ಮುಖ್ಯ ಅಂಗವಾಗಿದೆ.

ಲಿವರ್ ಆರೋಗ್ಯವನ್ನು ಕಾಪಾಡುವ ಗಿಡಮೂಲಿಕೆಗಳು, ಸಾಂಬಾರ ಪದಾರ್ಥಗಳು
Liver Health
TV9 Web
| Edited By: |

Updated on: Jun 04, 2022 | 3:12 PM

Share

ಲಿವರ್(Liver) ಅಥವಾ ಯಕೃತ್ ನಮ್ಮ ದೇಹದ ಅತಿ ದೊಡ್ಡ ಅಂಗವಾಗಿದ್ದು, ವಿವಿಧ ಕಾರ್ಯಗಳನ್ನು ಏಕಕಾಲಕ್ಕೆ ಮಾಡುವ ಅತಿ ಮುಖ್ಯ ಅಂಗವಾಗಿದೆ. ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ ನಾವು ಸೇವಿಸುವ ಆಹಾರದ ಬಣ್ಣ ಯಾವುದೇ ಆಗಿದ್ದರೂ ಬಹಿರ್ದೆಸೆ ಯಲ್ಲಿ ಕಾಣಬರುವ ಬಣ್ಣ ಬಹುತೇಕ ಒಂದೇ ಆಗಿರಲು ಯಕೃತ್, ಪಿತ್ತಕೋಶ ಮತ್ತು ಮೇದೋಜೀರಕ ಗ್ರಂಥಿಗಳ ಸ್ರಾವ ಕಾರಣವಾಗಿದ್ದು ಇದರಲ್ಲಿ ಸಿಂಹಪಾಲು ಯಕೃತ್ ಸ್ರವಿಸುವ ಪಿತ್ತರಸವೇ ಕಾರಣವಾಗಿದೆ. ಈ ಗುಣವನ್ನೇ ವೈದ್ಯರು ಯಕೃತ್‍ನ ಕಾರ್ಯಕ್ಷಮತೆಯ ಅಳತೆಗೋಲಾಗಿ ಉಪಯೋಗಿಸುತ್ತಾರೆ.

ಯಕೃತ್‍ನ ಕಾರ್ಯಗಳು ಜೀರ್ಣಕ್ರಿಯೆ, ಸ್ವಚ್ಛತೆ, ಸೋಸುವಿಕೆ, ಪಿತ್ತರಸ ಸ್ರವಿಸುವಿಕೆ ಮೊದಲಾದವು ಗಳಲ್ಲೆಲ್ಲಾ ಪ್ರಮುಖ ಪಾತ್ರ ವಹಿಸುತ್ತವೆ.

ಆಂತರಿಕವಾಗಿ ಅವರಿಗೆ ಮೂತ್ರಪಿಂಡಗಳ ಸಮಸ್ಯೆ ಅಥವಾ ಮೂತ್ರ ವ್ಯವಸ್ಥೆಯಲ್ಲಿ ತೊಂದರೆ ಕಂಡುಬಂದರೆ ಈ ರೀತಿ ಆಗಬಹುದು. ಆದರೆ ಇದಕ್ಕೆಲ್ಲ ಔಷಧಿಗಳ ಜೊತೆಗೆ ಗಿಡಮೂಲಿಕೆಗಳು ಮತ್ತು ಆಯುರ್ವೇದ ಪದ್ಧತಿಯಲ್ಲಿ ಹಲವಾರು ಪರಿಹಾರಗಳು ದೊರಕುತ್ತವೆ.

ಅರಿಶಿನ ಮೂತ್ರ ವ್ಯವಸ್ಥೆಯನ್ನು ಬಲ ಪಡಿಸುವ ಮೂಲಕ ಮೂತ್ರ ಪಿಂಡಗಳ ಕಾರ್ಯಕ್ಷಮತೆಯನ್ನು ಹೆಚ್ಚು ಮಾಡಿ ಯಾವುದೇ ಸೋಂಕು ಮತ್ತು ಉರಿಯೂತ ಎದುರಾಗದಂತೆ ನೋಡಿಕೊಳ್ಳುತ್ತದೆ. ನಾವು ಪ್ರತಿ ದಿನ ಅಡುಗೆಗೆ ಬಳಕೆ ಮಾಡುವ ಅರಿಶಿನ ಒಂದು ಶಕ್ತಿಯುತವಾದ ಗಿಡಮೂಲಿಕೆ ಎಂಬ ಹೆಸರು ಪಡೆದಿದ್ದು, ಮನುಷ್ಯನ ಮೂತ್ರ ಪಿಂಡಗಳಿಗೆ ಸಂಬಂಧ ಪಟ್ಟ ಹಲವರ ಸಮಸ್ಯೆಗಳಾದ ಮೂತ್ರ ಪಿಂಡದ ಸೋಂಕುಗಳು, ಮೂತ್ರ ಪಿಂಡಗಳ ಹಾನಿ, ಕಿಡ್ನಿಗಳ ಉರಿಯುತ, ಕಿಡ್ನಿಗಳಲ್ಲಿ ಕಲ್ಲು ಕಂಡು ಬರುವುದು, ಮೂತ್ರ ಪಿಂಡಗಳು ಇರುವ ಭಾಗದಲ್ಲಿ ಗಂಟುಗಳು ಕಾಣಿಸುವುದು ಇತ್ಯಾದಿ ಸಮಸ್ಯೆಗಳನ್ನು ಪ್ರತಿ ದಿನ ಅರಿಶಿನದ ಬಳಕೆಯಿಂದ ಬಹಳ ವೇಗವಾಗಿ ನಿವಾರಣೆ ಮಾಡಿಕೊಳ್ಳಬಹುದು.

ಶುಂಠಿ ಮೂತ್ರ ಪಿಂಡಗಳ ಸೋಂಕು ಹೊಂದಿದವರಿಗೆ ಶುಂಠಿಯ ನಿಯಮಿತ ಬಳಕೆಯಿಂದ ಸಾಕಷ್ಟು ಅನುಕೂಲವಿದೆ ಎಂದು ಹೇಳುತ್ತಾರೆ. ಶುಂಠಿಗೆ ಕೇವಲ ನಮ್ಮ ದೇಶದ ಆಯುರ್ವೇದ ಪದ್ಧತಿಯಲ್ಲಿ ಮಾತ್ರವಲ್ಲದೆ ಹಲವು ದೇಶಗಳಲ್ಲಿ ಬಹಳ ಹಿಂದಿನಿಂದ ಅಂದರೆ ನೂರಾರು ವರ್ಷಗಳ ಇತಿಹಾಸದಿಂದ ನಮ್ಮ ದೇಹದ ಒಳಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಬಳಕೆ ಮಾಡುತ್ತಾ ಬಂದಿದ್ದಾರೆ.

ಕೊತ್ತಂಬರಿ ನಮ್ಮ ದೇಹದಲ್ಲಿ ಥೈರಾಯ್ಡ್ ಗ್ರಂಥಿಯ ಸ್ರವಿಸುವಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಮೂಲಕ ನಮ್ಮ ದೇಹದ ರಕ್ತದ ಒತ್ತಡ ಮತ್ತು ಹೃದಯದ ವ್ಯವಸ್ಥೆಯನ್ನು ಕಾಪಾಡುತ್ತದೆ. ನಮ್ಮ ಆಹಾರ ತಯಾರಿಕೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಕೇವಲ ಅಲಂಕಾರಕ್ಕಾಗಿ ಕೊನೆ ಕ್ಷಣಗಳಲ್ಲಿ ಆಹಾರದ ಮೇಲೆ ಬಳಕೆ ಮಾಡುತ್ತೇವೆ. ಆದರೆ ಇದರಿಂದ ನಮ್ಮ ದೇಹಕ್ಕೆ ಆಗುವ ಉಪಯೋಗಗಳು ನಮ್ಮ ಅರಿವಿಗೆ ಬಾರದಂತೆ ಸಾಕಷ್ಟಿರುತ್ತವೆ. ಕೊತ್ತಂಬರಿ ಅಥವಾ ಧನಿಯ ಬೀಜಗಳು ಅಥವಾ ಕೊತ್ತಂಬರಿ ಸೊಪ್ಪು ನಮ್ಮ ದೇಹದ ಎಲ್ಲಾ ಭಾಗಗಳಿಂದ ಅನಗತ್ಯವಾದ ವಿಷಕಾರಿ ತ್ಯಾಜ್ಯಗಳನ್ನು ಹೊರ ದಬ್ಬಿ ನಮ್ಮ ಲಿವರ್ ಭಾಗ ಮತ್ತು ಮೂತ್ರ ಪಿಂಡಗಳ ಕಾರ್ಯಗಳನ್ನು ಹೆಚ್ಚು ಮಾಡುತ್ತದೆ.

ತ್ರಿಫಲ ಇದರಲ್ಲಿ ಮೂರು ಬಗೆಯ ತುಂಬಾ ಶಕ್ತಿದಾಯಕವಾದ ಗಿಡಮೂಲಿಕೆಗಳು ಒಟ್ಟುಗೂಡಿ ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ. ನೈಸರ್ಗಿಕವಾಗಿ ನಮ್ಮ ಕಿಡ್ನಿ ಮತ್ತು ಲಿವರ್ ಕಾರ್ಯಕ್ಷಮತೆಯನ್ನು ಅಭಿವೃದ್ಧಿ ಪಡಿಸಿ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಸಕಾರಾತ್ಮಕವಾಗಿ ಹೊರಹಾಕುವಲ್ಲಿ ಇದು ಸಹಕಾರಿಯಾಗಿ ಕೆಲಸ ಮಾಡುತ್ತದೆ.

ಆಮ್ಲ ವಿಟಮಿನ್ ಸಿ ಅಂಶ ಹೆಚ್ಚಾಗಿರುವ ನೆಲ್ಲಿಕಾಯಿ ಹಸಿಯಾಗಿ ಅಥವಾ ಪುಡಿಯ ರೂಪದಲ್ಲಿ ಸೇವನೆ ಮಾಡಬಹುದು. ಇದು ನಮ್ಮ ಕಿಡ್ನಿ ಮತ್ತು ಲಿವರ್ ಭಾಗದ ಕಾರ್ಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಜೊತೆಗೆ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಪರಿಪೂರ್ಣವಾಗಿ ನಿವಾರಣೆ ಮಾಡಿ ನಮ್ಮ ದೈಹಿಕ ಸ್ವಚ್ಛತೆಯ ಕಡೆಗೆ ಹೆಚ್ಚು ಪ್ರೇರೇಪಣೆ ನೀಡುತ್ತದೆ.

ಮುತ್ತುಗ ಮುತ್ತುಗದ ಮರ ತನ್ನ ಎಲೆ, ಮರದ ತೊಗಟೆ, ಬೇರು ಮತ್ತು ಹೂವುಗಳನ್ನು ಆಯುರ್ವೇದ ಔಷಧಿಗಾಗಿ ಕೊಡುಗೆ ನೀಡಿದೆ ಎಂದೇ ಹೇಳಬಹುದು. ಮುತ್ತುಗದ ಹೂಗಳನ್ನು ಒಣಗಿಸಿ ಗಿಡಮೂಲಿಕೆಯ ಚಹಾ ತಯಾರು ಮಾಡಲು ಬಳಕೆ ಮಾಡಬಹುದು. ಮುತ್ತುಗದ ಮರದಲ್ಲಿ ಬಿಡುವ ಕಿತ್ತಳೆ ಬಣ್ಣದ ಹೂವುಗಳು ಗಿಡಮೂಲಿಕೆಯ ಚಹ ತಯಾರು ಮಾಡುವಲ್ಲಿ ಉಪಯೋಗಿಸಿಕೊಂಡು ನಿಮ್ಮ ಕಿಡ್ನಿಗಳ ಕಾರ್ಯಕ್ಷಮತೆಯನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.

ಗರಿಕೆ ಹುಲ್ಲು

ಗರಿಕೆ ಹುಲ್ಲಿನಲ್ಲಿ ಆಲ್ಕಲಾಯ್ಡ್ ಅಂಶ ಇರುವ ಕಾರಣ ನಮ್ಮ ಮೂತ್ರ ಪಿಂಡಗಳ ಆರೋಗ್ಯ ವೃದ್ಧಿಯಲ್ಲಿ ಮತ್ತು ಮೂತ್ರ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಇದು ಕೆಲಸ ನಿರ್ವಹಿಸುತ್ತದೆ. ಗರಿಕೆ ಹುಲ್ಲಿಗೆ ಆಯುರ್ವೇದ ಪದ್ಧತಿಯಲ್ಲಿ ವಿಶೇಷವಾದ ಸ್ಥಾನ ನೀಡಿದ್ದಾರೆ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಹಲವಾರು ಪೂಜೆ ಮತ್ತು ನೈವೇದ್ಯಗಳಲ್ಲಿ ಗರಿಕೆ ಹುಲ್ಲು ಬಳಕೆ ಮಾಡುವುದು ವಾಡಿಕೆ. ನಮ್ಮ ಆರೋಗ್ಯದ ವಿಚಾರದಲ್ಲಿ ಗರಿಕೆ ಹುಲ್ಲಿನ ರಸ ನಮ್ಮ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ತನ್ನ ಪ್ರಭಾವ ಮೆರೆಯುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ