Blood Cancer: ದೀರ್ಘಕಾಲದ ಗಂಟಲು ಕೆರೆತ ಕ್ಯಾನ್ಸರ್‌ನ ಲಕ್ಷಣವೇ?
ದೀರ್ಘಕಾಲದ ಗಂಟಲು ಕೆರೆತ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು ಎಂದು ಸಂಶೋಧನೆಯೊಂದು ಹೇಳಿದೆ. ಗಂಟಲು ಕೆರೆತ ಹಾಗೂ ಟಾನ್ಸಿಲ್ಗಳು ರಕ್ತದ ಕ್ಯಾನ್ಸರ್‌ನ ಲಕ್ಷಣ ಎಂಬುದು ತಿಳಿದುಬಂದಿದೆ.
ದೀರ್ಘಕಾಲದ ಗಂಟಲು ಕೆರೆತ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು ಎಂದು ಸಂಶೋಧನೆಯೊಂದು ಹೇಳಿದೆ. ಗಂಟಲು ಕೆರೆತ ಹಾಗೂ ಟಾನ್ಸಿಲ್ಗಳು ರಕ್ತದ ಕ್ಯಾನ್ಸರ್‌ನ ಲಕ್ಷಣ ಎಂಬುದು ತಿಳಿದುಬಂದಿದೆ. 24 ವರ್ಷದ ಮಹಿಳೆಯೊಬ್ಬರು ದೀರ್ಘಕಾಲದಿಂದ ಗಂಟಲು ಕೆರೆತದಿಂದ ಬಳಲುತ್ತಿದ್ದರು. ಬಾಯಿಯನ್ನು ತೆರೆಯಲು ಕೂಡ ಅವರಿಗೆ ಸಾಧ್ಯವಾಗದಷ್ಟರ ಮಟ್ಟಿಗೆ ನೋವು ಕೂಡ ಇತ್ತು. ಹೀಗಾಗಿ ವೈದ್ಯರ ಬಳಿ ತೆರಳಿದಾಗ ಅದು ಕೇವಲ ಗಂಟಲ ಕೆರೆತವಲ್ಲ ಅಕ್ಯೂಟ್ ಮಿಯೆಲಾಯ್ಡ್ ಲ್ಯುಕೇಮಿಯಾ ಎಂಬುದು ತಿಳಿದುಬಂದಿತ್ತು. ಮೊದಲು ಆಂಟಿ ಬಯಾಟಿಕ್ಗಳನ್ನು ತೆಗೆದುಕೊಂಡರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಾಯಿ ತೆರೆಯಲು ಸಾಧ್ಯವಾಗುತ್ತಿರಲಿಲ್ಲ.
ಕ್ಯಾನ್ಸರ್ ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆಯಾಗಿದ್ದುಮ ಹಲವಾರು ರೀತಿಯ ಕ್ಯಾನ್ಸರ್‌ಗಳಿವೆ. ಅವುಗಳಲ್ಲಿ ಒಂದು ರಕ್ತದ ಕ್ಯಾನ್ಸರ್, ಇದನ್ನು ವೈದ್ಯಕೀಯ ಭಾಷೆಯಲ್ಲಿ ಲ್ಯುಕೇಮಿಯಾ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ ಇದು ರಕ್ತ ಅಥವಾ ಮೂಳೆ ಮಜ್ಜೆಯ ಕ್ಯಾನ್ಸರ್ ಆಗಿದೆ.
ನಿಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳು ಹೆಚ್ಚಾದಾಗ ಲ್ಯುಕೇಮಿಯಾ ಸಂಭವಿಸುತ್ತದೆ. ಬಿಳಿ ರಕ್ತ ಕಣಗಳು ನಿಮ್ಮ ದೇಹವು ಆರೋಗ್ಯಕರವಾಗಿರಲು ಅಗತ್ಯವಿರುವ ಕೆಂಪು ರಕ್ತ ಕಣಗಳು ಮತ್ತು ಪ್ಲೇಟ್ಲೆಟ್ಗಳನ್ನು ಸಾಗಿಸುತ್ತವೆ.
ಲ್ಯುಕೇಮಿಯಾ ಲಕ್ಷಣಗಳೇನು? -ತೂಕ ಇಳಿಕೆ -ರಾತ್ರಿ ಬೆವರುವುದು -ಜ್ವರ -ಮೂಗಿನಲ್ಲಿ ರಕ್ತಸ್ರಾವ -ಬಾಯಿಯಲ್ಲಿ ರಕ್ತ ಬರುವುದು -ಸುಸ್ತು -ಮುಟ್ಟಿನ ಸಮಯದಲ್ಲಿ ಹೆಚ್ಚು ರಕ್ತಸ್ರಾವ -ಕೈಯಲ್ಲಿ ತುರಿಕೆ -ಸಂಧಿವಾತ -ಕೊಬ್ಬೊಟ್ಟೆ ನೋವು
ಲ್ಯುಕೇಮಿಯಾ ಎಂದರೇನು? ಲ್ಯುಕೇಮಿಯಾ ಎಂಬುದು ನಿಮ್ಮ ದೇಹದಲ್ಲಿನ ಬಿಳಿ ರಕ್ತ ಕಣಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದ ಉಂಟಾಗುವ ರಕ್ತದ ಕ್ಯಾನ್ಸರ್ ಆಗಿದೆ. ಆ ಬಿಳಿ ರಕ್ತ ಕಣಗಳು ನಿಮ್ಮ ದೇಹವು ಆರೋಗ್ಯಕರವಾಗಿರಬೇಕಾದ ಕೆಂಪು ರಕ್ತ ಕಣಗಳು ಮತ್ತು ಪ್ಲೇಟ್‌ಲೆಟ್‌ಗಳನ್ನು ಹೊರಹಾಕುತ್ತದೆ. ಜೊತೆಗೆ ಹೆಚ್ಚುವರಿ ಬಿಳಿ ರಕ್ತ ಕಣಗಳು ಸರಿಯಾಗಿ ಕೆಲಸ ಮಾಡುವುದಿಲ್ಲ.
ಲ್ಯುಕೇಮಿಯಾಕ್ಕೆ ಕಾರಣಗಳು ಮತ್ತು ಅಪಾಯಕಾರಿ ಅಂಶಗಳು: ಲ್ಯುಕೇಮಿಯಾಕ್ಕೆ ಕಾರಣವೇನು ಎಂದು ಯಾರಿಗೂ ನಿಖರವಾಗಿ ತಿಳಿದಿಲ್ಲ. ಇದನ್ನು ಹೊಂದಿರುವ ಜನರು ಕೆಲವು ಅಸಾಮಾನ್ಯ ವರ್ಣತಂತುಗಳನ್ನು ಹೊಂದಿದ್ದಾರೆ, ಆದರೆ ಕ್ರೋಮೋಸೋಮ್ಗಳು ಲ್ಯುಕೇಮಿಯಾವನ್ನು ಉಂಟುಮಾಡುವುದಿಲ್ಲ. ಆದ್ದರಿಂದ ಲ್ಯುಕೇಮಿಯಾವನ್ನು ತಡೆಯಲು ಸಾಧ್ಯವಿಲ್ಲ, ಆದರೆ ಕೆಲವು ವಿಷಯಗಳು ಅದನ್ನು ಇನ್ನಷ್ಟು ಪ್ರಚೋದಿಸಬಹುದು. ಈ ಅಂಶಗಳಿರುವವರಿಗೆ ಈ ರಕ್ತ ಕ್ಯಾನ್ಸರ್‌ನ ಅಪಾಯ ಹೆಚ್ಚು. ಅವುಗಳೆಂದರೆ,
-ಹೊಗೆ, ಧೂಮಾಪಾನ ಮಾಡುವವರು.
-ಬಹಳಷ್ಟು ವಿಕಿರಣ ಅಥವಾ ಕೆಲವು ರಾಸಾಯನಿಕಗಳಿಗೆ ತೆರೆದುಕೊಳ್ಳುವುದು.
-ಕ್ಯಾನ್ಸರ್ ಚಿಕಿತ್ಸೆಗಾಗಿ ವಿಕಿರಣ ಚಿಕಿತ್ಸೆ ಅಥವಾ ಕೀಮೋಥೆರಪಿಯನ್ನು ಹೊಂದಿರುವುದು.
-ಲ್ಯುಕೇಮಿಯಾದ ಕೌಟುಂಬದ ಇತಿಹಾಸವನ್ನು ಹೊಂದಿರುವುದು.
-ಡೌನ್ ಸಿಂಡ್ರೋಮ್‌ನಂತಹ ಆನುವಂಶಿಕ ಅಸ್ವಸ್ಥತೆಯನ್ನು ಹೊಂದಿರುವುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ