ಕುಳ್ಳಗಿರುವವರಿಗಿಂತ ಎತ್ತರವಿರುವವರಿಗೆ ರೋಗ ಹೆಚ್ಚು ಎನ್ನುತ್ತೆ ಅಧ್ಯಯನ

TV9 Digital Desk

| Edited By: ನಯನಾ ರಾಜೀವ್

Updated on: Jun 04, 2022 | 2:26 PM

ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಯಾವುದೇ ಅಂತರವಿಲ್ಲದೆ ಸಮಸ್ಯೆಗಳು ಕಾಡುತ್ತಿದೆ. ಆದರೆ ಕುಳ್ಳಗಿರುವವರಿಗಿಂತ, ಎತ್ತರವಿರುವವರಿಗೆ ಕಾಯಿಲೆಗಳು ಹೆಚ್ಚು ಎಂದು ಹೊಸ ಸಂಶೋಧನೆಯೊಂದು ಸ್ಪಷ್ಟಪಡಿಸಿದೆ.

ಕುಳ್ಳಗಿರುವವರಿಗಿಂತ ಎತ್ತರವಿರುವವರಿಗೆ ರೋಗ ಹೆಚ್ಚು ಎನ್ನುತ್ತೆ ಅಧ್ಯಯನ
Tall
Image Credit source: Timesnow

ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಯಾವುದೇ ಅಂತರವಿಲ್ಲದೆ ಸಮಸ್ಯೆಗಳು ಕಾಡುತ್ತಿದೆ. ಆದರೆ ಕುಳ್ಳಗಿರುವವರಿಗಿಂತ, ಎತ್ತರವಿರುವವರಿಗೆ ಕಾಯಿಲೆಗಳು ಹೆಚ್ಚು ಎಂದು ಹೊಸ ಸಂಶೋಧನೆಯೊಂದು ಸ್ಪಷ್ಟಪಡಿಸಿದೆ.

ಯುಎಸ್ ಡಿಪಾರ್ಟ್ಮೆಂಟ್ ಆಫ್ ವೆಟರನ್ ಅಫೇರ್ಸ್‌ನ ಮಿಲಿಯನ್ ವೆಟರನ್ ಪ್ರೋಗ್ರಾಂ (ಎಂವಿಪಿ) ನಡೆಸಿದ ಅಧ್ಯಯನದಲ್ಲಿ ವ್ಯಕ್ತಿಯ ಎತ್ತರವು ಪ್ರೌಢಾವಸ್ಥೆಯಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಒಡ್ಡಬಹುದು ಎಂದು ಹೇಳಿದೆ. ಹಾಗಾಗಿ ಹೆಚ್ಚು ಎತ್ತರವಿದ್ದಾರೆ ಎಂದು ಖುಷಿಪಡುವುದಕ್ಕಿಂತ ಬೇಜಾರು ಪಡಬೇಕಾದೀತು.

ಅತಿ ಹೆಚ್ಚು ಎತ್ತರವಿರುವ ವ್ಯಕ್ತಿಗಳಲ್ಲಿ ಪರಿಧಮನಿ ಹೃದಯ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ರಕ್ತದೊತ್ತಡದ ಸಮಸ್ಯೆಯೂ ಇರಲಿದೆ. ಮಹತ್ವದ ಸಂಶೋಧನೆಗಳು ಹೆಚ್ಚು ಎತ್ತರ ಇರೋರಿಗೆ ಚರ್ಮದ ಸೋಂಕುಗಳು, ನರಗಳ ಅಸ್ವಸ್ಥತೆಗಳ ಅಪಾಯ ಇದೆ ಎಂದು ಹೇಳಿದೆ.

ಹೃದಯಕ್ಕೆ ಆಮ್ಲಜನಕಭರಿತ ರಕ್ತದ ಪರಿಚಲನೆಗೆ ಅಡ್ಡಿಯುಂಟಾದಾಗ ಹೃದಯಾಘಾತ ಸಂಭವಿಸುತ್ತದೆ. ಪರಿಧಮನಿಯ ಕಾಯಿಲೆ ಶುರುವಾಗುತ್ತದೆ. ಪರಿಧಮನಿ ಫಿಟ್ನೆಸ್ ಮತ್ತು ಆಹಾರದಲ್ಲಿ ಜಾಗರೂಕರಾಗಿದ್ದರೂ ಬೇರೆ ಸಮಸ್ಯೆಯಿಂದ ಹೃದಯ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಅತಿಯಾದ ಒತ್ತಡ ಕೂಡ ಇದ್ದಕ್ಕೆ ಕಾರಣ.ಇದಲ್ಲದೆ ಕುಟುಂಬದ ಹಿನ್ನಲೆ ಕೂಡ ಮಹತ್ವ ಪಡೆಯುತ್ತದೆ. ಕುಟುಂಬಸ್ಥರದಲ್ಲಿ ಈ ಖಾಯಿಲೆಯಿದ್ದರೆ ವಂಶಪಾರಂಪರ್ಯವಾಗಿ ಇದು ಬರುತ್ತದೆ.

ಇದಲ್ಲದೆ ಬಾಲ್ಯದಲ್ಲಿ ಅಪಧಮನಿಗಳಲ್ಲಿ ಕಾಣಿಸಿಕೊಂಡಿದ ಸಮಸ್ಯೆ ಪ್ರೌಢಾವಸ್ಥೆಯಲ್ಲಿ ಹೆಚ್ಚಾಗಬಹುದು. ಹೃದಯದ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗಬೇಕೆಂದರೆ ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಧೂಮಪಾನ, ಮದ್ಯಪಾನ, ಅಧಿಕರಕ್ತದೊತ್ತಡ, ಬೊಜ್ಜು, ಜಡ ಜೀವನಶೈಲಿ ಈ ರೀತಿಯ ಹಲವು ಅಂಶಗಳಿಂದ ಕೊಬ್ಬಿನ ಶೇಖರಣೆಯಾಗಬಹುದು. ಮತ್ತು ಹೆಂಗಸರಲ್ಲಿರುವ ಈಸ್ಟ್ರೋಜೆನ್ ಹಾರ್ಮೋನುಗಳಿಂದಾಗಿ ಪರಿಧಮನಿ ಕಾಯಿಲೆಯಾಗುವ ಸಾಧ್ಯತೆಗಳು ತೀರಾ ಕಡಿಮೆಯಿರುತ್ತದೆ.

ತಂಡವು ಎತ್ತರದ ಮೇಲೆ ಪ್ರಭಾವ ಬೀರುವ 3290 ಜೀನ್ ರೂಪಾಂತರಗಳನ್ನು ಮತ್ತು 1000ಕ್ಕೂ ಹೆಚ್ಚು ಕ್ಲಿನಿಕಲ್ ಗುಣಲಕ್ಷಣಗಳನ್ನು ಕಂಡು ಹಿಡಿದಿದೆ. ಎತ್ತರವು ನಿಮ್ಮ ಹೃತ್ಕರ್ಣದ ಕಂಪನ – ಹೃದಯ ಬಡಿತ – ಮತ್ತು ರಕ್ತಪರಿಚಲನೆಯ ತೊಂದರೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಇದು ದೃಢಪಡಿಸಿದೆ.

ಒಂದೊಮ್ಮೆ ಮಹಿಳೆಯರು ಹೆಚ್ಚು ಎತ್ತರವಿದ್ದರೆ ಅವರಿಗೆ ಅಸ್ತಮಾ, ನರಗಳ ದೌರ್ಬಲ್ಯ ಕಾಡಲಿದೆ. ಅಧ್ಯಯನದ ನೇತೃತ್ವವಹಿಸಿದ್ದ ಈಸ್ಟರ್ನ್ ಕೊಲೊರಾಡೋ ಹೆಲ್ತ್ ಕೇರ್ ಸಿಸ್ಟಮ್‌ನ ಡಾ. ಶ್ರೀಧರನ್ ರಾಘವನ್, ಎಪಿಡೆಮಿಯೋಲಾಜಿಕ್ ದೃಷ್ಟಿಕೋನದಿಂದ ಕ್ಲಿನಿಕಲ್ ಪರಿಸ್ಥಿತಿಗಳಿಗೆ ಎತ್ತರವು ಹೇಗೆ ಸಂಬಂಧಿಸಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಾಗುತ್ತಿದೆ. ಈಗ ಲಭ್ಯವಾಗಿರುವ ಫಲಿತಾಂಶವು ಎತ್ತರ ಹಾಗೂ ರೋಗಗಳ ನಡುವೆ ಸಂಬಂಧವಿದೆ ಎಂಬುದನ್ನು ಸಾಬೀತುಪಡಿಸಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada