Watermelon Benefits: ಬೇಸಿಗೆಯ ನಿಮ್ಮ ಡಯೆಟ್ನಲ್ಲಿ ಕಲ್ಲಂಗಡಿ ಇರಲಿ, ಏನೆಲ್ಲಾ ಪ್ರಯೋಜನವಿದೆ ತಿಳಿಯಿರಿ?
Watermelon Benefits:ಬೇಸಿಗೆ(Summer ಸಮಯದಲ್ಲಿ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳುವುದು ಬಹಳ ಮುಖ್ಯ. ದೇಹವನ್ನು ತಂಪಾಗಿರಿಸಿಕೊಳ್ಳಲು ಕಲ್ಲಂಗಡಿ ಹಣ್ಣುಗಳು ಹಾಗೂ ಆಹಾರ ಪದಾರ್ಥಗಳನ್ನು ನಾವು ಬಳಸಬಹುದಾಗಿದೆ. ನಮ್ಮ ಡಯೆಟ್ಗೆ ಕೂಡ ಸಹಕಾರಿಯಾಗಿದೆ. ಕಲ್ಲಂಗಡಿ ಒಂದು ಅದ್ಭುತ ಬೇಸಿಗೆಯ ಆಹಾರ ಹಣ್ಣಾಗಿದೆ.
ಬೇಸಿಗೆ(Summer ಸಮಯದಲ್ಲಿ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳುವುದು ಬಹಳ ಮುಖ್ಯ. ದೇಹವನ್ನು ತಂಪಾಗಿರಿಸಿಕೊಳ್ಳಲು ಕಲ್ಲಂಗಡಿ ಹಣ್ಣುಗಳು ಹಾಗೂ ಆಹಾರ ಪದಾರ್ಥಗಳನ್ನು ನಾವು ಬಳಸಬಹುದಾಗಿದೆ. ನಮ್ಮ ಡಯೆಟ್ಗೆ ಕೂಡ ಸಹಕಾರಿಯಾಗಿದೆ. ಕಲ್ಲಂಗಡಿ ಒಂದು ಅದ್ಭುತ ಬೇಸಿಗೆಯ ಆಹಾರ ಹಣ್ಣಾಗಿದೆ.
ಏಕೆಂದರೆ ಈ ಹಣ್ಣು ಶೇ. 91.45 ರಷ್ಟು ಪ್ರಮಾಣ ನೀರನ್ನು ಹೊಂದಿರುತ್ತದೆ. ಇದು ನಮ್ಮ ದೇಹದ ನೀರಿನ ಅಗತ್ಯವನ್ನು ಪೂರೈಸಲು ಸಹಾಯ ಮಾಡುತ್ತದೆ. ಅಲ್ಲದೆ, ಆ್ಯಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳಿಂದ ತುಂಬಿರುವ ಕಲ್ಲಂಗಡಿ ನಮ್ಮ ದೇಹಕ್ಕೆ ಅದ್ಭುತವಾದ ಕೂಲಿಂಗ್ ಪರಿಣಾಮವನ್ನು ನೀಡುತ್ತದೆ.
ಕಲ್ಲಂಗಡಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ ಹಾಗೂ ಕೆಲವು ಆರೋಗ್ಯ ಗುಣಗಳನ್ನು ಒಳಗೊಂಡಿದೆ. ಕಲ್ಲಂಗಡಿಯು ದೇಹದಲ್ಲಿ ನೀರಿನಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಕಲ್ಲಂಗಡಿಯನ್ನು ಯೋಗರ್ಟ್ ಅಥವಾ ಜೇನುತುಪ್ಪದ ಜತೆ ಬೆರೆಸಿ ಕುಡಿಯಿರಿ.
ಕಲ್ಲಂಗಡಿ ಪ್ರಯೋಜನಗಳು
ದೇಹವನ್ನು ಹೈಡ್ರೇಟ್ ಮಾಡುತ್ತದೆ ಬೇಸಿಗೆಯಲ್ಲಿ ವ್ಯಕ್ತಿಯು ಎದುರಿಸಬೇಕಾದ ದೊಡ್ಡ ಸಮಸ್ಯೆ ಎಂದರೆ ಡಿಹೈಡ್ರೆಷನ್. ಈ ಸಮಸ್ಯೆಯನ್ನು ನಿಭಾಯಿಸಲು ಕಲ್ಲಂಗಡಿ ಹಣ್ಣು ಸಾಕಷ್ಟು ಸಹಾಯ ಮಾಡುತ್ತದೆ. ಈ ಹಣ್ಣು 92 ಪ್ರತಿಶತ ದ್ರವವನ್ನು ಹೊಂದಿರುತ್ತದೆ. ಇದರಿಂದಾಗಿ ನಿಮ್ಮ ದೇಹವು ಅದರ ಅಗತ್ಯಕ್ಕೆ ಅನುಗುಣವಾಗಿ ನೀರಿನಾಂಶವನ್ನು ಪಡೆಯುತ್ತದೆ.
ಕಲ್ಲಂಗಡಿ ತೂಕವನ್ನು ಕಡಿಮೆ ಮಾಡುತ್ತದೆ
ಕಲ್ಲಂಗಡಿ ಬಹಳ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಆದರೆ ಇದು ನಿಮಗೆ ಬಹಳ ಸಮಯದವರೆಗೆ ಹಸಿವಾಗದಂತೆ ಮಾಡುತ್ತದೆ. 100 ಗ್ರಾಂ ಕಲ್ಲಂಗಡಿಯಲ್ಲಿ ಕೇವಲ 30 ಗ್ರಾಂ ಕ್ಯಾಲೊರಿಗಳಿವೆ. ಇದರಲ್ಲಿ ಸುಮಾರು 1 ಮಿಗ್ರಾಂ ಸೋಡಿಯಂ, 8 ಗ್ರಾಂ ಕಾರ್ಬೋಹೈಡ್ರೇಟ್, 0.4 ಗ್ರಾಂ ಫೈಬರ್, ಸಕ್ಕರೆ 6 ಗ್ರಾಂ, ವಿಟಮಿನ್ ಎ 11%, ವಿಟಮಿನ್ ಸಿ 13%, ಪ್ರೋಟೀನ್ 0.6 ಗ್ರಾಂ ಇರುತ್ತದೆ. ಈ ಎಲ್ಲಾ ಪೋಷಕಾಂಶಗಳು ನಿಮ್ಮನ್ನು ಹೈಡ್ರೀಕರಿಸುವಂತೆ ಮಾಡುತ್ತದೆ.
ಮೂತ್ರಪಿಂಡದ ಕಲ್ಲುಗಳಿಗೆ ಪ್ರಯೋಜನಕಾರಿ
ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಇರುವವರು, ಸಾಕಷ್ಟು ಕಲ್ಲಂಗಡಿ ಹಣ್ಣು ತಿನ್ನಬೇಕು. ಕಲ್ಲಂಗಡಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊಂದಿದೆ ಮತ್ತು ಇದು ನಿಮ್ಮ ಮೂತ್ರಪಿಂಡಗಳನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.
ಕಣ್ಣುಗಳಿಗೆ ಕಲ್ಲಂಗಡಿ ಒಳ್ಳೆಯದು
ವಿಟಮಿನ್ ಸಿ ಮತ್ತು ವಿಟಮಿನ್ ಎ ಸಮೃದ್ಧವಾಗಿರುವ ಕಲ್ಲಂಗಡಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲ, ಇದು ನಿಮ್ಮ ಕಣ್ಣುಗಳಿಗೂ ತುಂಬಾ ಒಳ್ಳೆಯದು.
ಮನಸ್ಸನ್ನು ತಂಪಾಗಿರಿಸುತ್ತದೆ
ಕಲ್ಲಂಗಡಿ ತಣ್ಣಗಿರುವುದರಿಂದ, ಇದನ್ನು ತಿನ್ನುವುದರಿಂದ, ನಿಮ್ಮ ಹೊಟ್ಟೆ ತಣ್ಣಗಿರುತ್ತದೆ. ಇದರಿಂದಾಗಿ ನಿಮ್ಮ ಮನಸ್ಸು ಸಹ ಶಾಂತವಾಗಿರುತ್ತದೆ. ನೀವು ಅದರ ಬೀಜಗಳನ್ನು ಪುಡಿಮಾಡಿ ಹಣೆಯ ಮೇಲೆ ಹಚ್ಚಿದರೆ ತಲೆನೋವು ಕೂಡ ಗುಣವಾಗುತ್ತದೆ.
ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಹೆಚ್ಚಿನ ಬಿಪಿ ಸಮಸ್ಯೆ ಇರುವವರು ಖಂಡಿತವಾಗಿಯೂ ಕಲ್ಲಂಗಡಿ ಸೇವಿಸಬೇಕು. ಕಲ್ಲಂಗಡಿ ಬಹಳ ಕಡಿಮೆ ಪ್ರಮಾಣದಲ್ಲಿ ಸೋಡಿಯಂ ಅನ್ನು ಹೊಂದಿರುತ್ತದೆ ಮತ್ತು ಇದು ತುಂಬಾ ತಂಪಾಗಿರುತ್ತದೆ.
ದೇಹವನ್ನು ತಂಪಾಗಿಸುವ ಇತರೆ ಆಹಾರಗಳು
ಕರಬೂಜ ಬೇಸಿಗೆಯ ಸಮಯದಲ್ಲಿ ದೇಹವನ್ನು ತಂಪಾಗಿಸುವ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಹಣ್ಣು ಕರಬೂಜ. ಇತರ ಹಣ್ಣುಗಳಿಗೆ ಹೋಲಿಸಿದರೆ ಕರಬೂಜ ಹಣ್ಣು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಹೀಗಾಗಿ ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳ ಬಯಸುವವರು ಕರಬೂಜ ಹಣ್ಣು ಅಥವಾ ಹಣ್ಣಿನ ಜ್ಯೂಸ್ ಅನ್ನು ಹೆಚ್ಚು ಸೇವಿಸಬಹುದು.
ಬೆಲ್ (ಬೆಂಗಾಲ್ ಕ್ವಿನ್ಸ್) ಬೆಂಗಾಲ್ ಕ್ವಿನ್ಸ್ ಎಂದೂ ಕರೆಯಲ್ಪಡುವ ಬೆಲ್, ತಂಪಾಗಿಸುವ ಗುಣಲಕ್ಷಣಗಳನ್ನು ಹೊಂದಿರುವ ಪ್ರಸಿದ್ಧ ಬೇಸಿಗೆಯ ಹಣ್ಣು. ಈ ಹಣ್ಣಿನಿಂದ ರಸವನ್ನು ಹೊರತೆಗೆದು ಶರ್ಬತ್ ಅಥವಾ ಜ್ಯೂಸ್ ಆಗಿ ಸೇವಿಸಲಾಗುತ್ತದೆ. ಇದಲ್ಲದೆ, ಈ ಬೇಸಿಗೆಯ ಹಣ್ಣುಗಳು ಬಿಸಿ ವಾತಾವರಣದ ಪರಿಣಾಮವಾಗಿ ಉಂಟಾಗುವ ಭೇದಿ, ಮಲಬದ್ಧತೆಯನ್ನು ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಅತ್ಯುತ್ತಮ ಔಷಧಿಯಾಗಿದೆ. ಈ ಹಣ್ಣುಗಳು ಫೈಬರ್ ಹಾಗೂ ವಿಟಮಿನ್ ಸಿ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಉತ್ಕರ್ಷಣ ನಿರೋಧಕ ಹಾಗೂ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಎಳನೀರು ಪ್ರಪಂಚದಾದ್ಯಂತ ಎಳನೀರು ಅಥವಾ ತೆಂಗಿನ ನೀರನ್ನು ಅತ್ಯುತ್ತಮ ಬೇಸಿಗೆ ಪಾನೀಯವೆಂದು ಪರಿಗಣಿಸಲಾಗಿದೆ. ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳೊಂದಿಗೆ ಲೋಡ್ ಆಗಿರುವ ಇದು ಬಿಸಿ ವಾತಾವರಣದ ವಿರುದ್ಧ ಹೋರಾಡಲು ಮತ್ತು ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ.
ಸೌತೆಕಾಯಿ ನೀರಿನ ಹಾಗೂ ನಾರಿನಂಶವನ್ನು ಹೊಂದಿರುವ ಸೌತೆಕಾಯಿಯನ್ನು ಬೇಸಿಗೆಯಲ್ಲಿ ತಿನ್ನುವುದರಿಂದ ಮಲಬದ್ಧತೆಯನ್ನು ದೂರವಿಡಬಹುದು.
ಪುದೀನ ಎಲೆಗಳು ಪುದೀನವು ಎಲ್ಲಾ ತರಕಾರಿ ಮಾರಾಟಗಾರರ ಬಳಿ ಸುಲಭವಾಗಿ ಲಭ್ಯವಿರುವ ಒಂದು ಜನಪ್ರಿಯ ಗಿಡಮೂಲಿಕೆಯಾಗಿದೆ. ನಿಮ್ಮ ಕುಡಿಯುವ ನೀರಿನಲ್ಲಿ ಪುದೀನಾವನ್ನು ಸೇರಿಸುವುದರಿಂದ ನಿಮಗೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸಬಹುದು. ಪುದೀನಾ ನಿಮ್ಮ ದೇಹದ ಉಷ್ಣತೆಯನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ ಮತ್ತು ರಿಫ್ರೆಶ್ ಭಾವವನ್ನು ಸಹ ನೀಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ