ಇದನ್ನು ಒಂದೇ ಒಂದು ತುತ್ತು ತಿಂದರೂ ಕ್ಯಾನ್ಸರ್ ಬರುವುದು ಗ್ಯಾರಂಟಿ!

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 30, 2024 | 11:35 AM

ಕೊಯಿ ಪ್ಲಾ ವಿವಿಧ ಮಸಾಲೆಗಳು ಮತ್ತು ನಿಂಬೆ ರಸದೊಂದಿಗೆ ಮಸಾಲೆ ಹಾಕಿದ, ಕೊಚ್ಚಿದ ಹಸಿ ಮೀನುಗಳಿಂದ ಮಾಡಲಾಗುವ ಭಕ್ಷ್ಯವಾಗಿದೆ. ಈ ಖಾದ್ಯದ ಒಂದೇ ಒಂದು ಪೀಸ್ ತಿಂದರೂ ಲಿವರ್ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯಿದೆ. ಥೈಲ್ಯಾಂಡ್​ನ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ಮೀನುಗಳನ್ನು ಸೇವಿಸುತ್ತಾರೆ. ಅದೇರೀತಿ ಅಲ್ಲಿನ ಹಲವು ಕುಟುಂಬದವರು ನಿಯಮಿತವಾಗಿ ಕೋಯಿ ಪ್ಲಾವನ್ನು ತಿನ್ನುತ್ತಿದ್ದರು.

ಇದನ್ನು ಒಂದೇ ಒಂದು ತುತ್ತು ತಿಂದರೂ ಕ್ಯಾನ್ಸರ್ ಬರುವುದು ಗ್ಯಾರಂಟಿ!
ಕೊಯಿ ಪ್ಲಾ
Image Credit source: money control
Follow us on

ನವದೆಹಲಿ: ಥೈಲ್ಯಾಂಡ್ ಆಹಾರ ವಿಶ್ವಾದ್ಯಂತ ಪ್ರಸಿದ್ಧವಾದ ಪಾಕಪದ್ಧತಿಯಾಗಿದೆ. ಇದರಲ್ಲಿ ಒಂದು ಭಯಾನಕ ಪದಾರ್ಥವೂ ಇದೆ. ಈ ಆಹಾರ ನಿಮ್ಮ ಲಿವರ್​ ಕ್ಯಾನ್ಸರ್​ಗೆ ಕಾರಣವಾಗಬಹುದು. ಈ ಆಹಾರವನ್ನು ಒಂದೇ ಒಂದು ಪೀಸ್ ತಿಂದರೂ ನಿಮಗೆ ಅಪಾಯ ತಪ್ಪಿದ್ದಲ್ಲ. ಅಷ್ಟಕ್ಕೂ ಯಾವುದು ಈ ಆಹಾರ? ಆಗ್ನೇಯ ಏಷ್ಯಾದ ರಾಷ್ಟ್ರವಾದ ಥೈಲ್ಯಾಂಡ್‌ನಲ್ಲಿ ಇಡೀ ಜಗತ್ತನ್ನು ಬೆಚ್ಚಿಬೀಳಿಸುವಂತೆ 20,000 ಜನರು ಥಾಯ್ ಆಹಾರವೊಂದನ್ನು ಸೇವಿಸಿ ಸಾವನ್ನಪ್ಪಿದ್ದಾರೆ. ಈ ತಿನಿಸಿನ ಹೆಸರು ಕೊಯಿ ಪ್ಲಾ.

ಕೊಯಿ ಪ್ಲಾ ವಿವಿಧ ಮಸಾಲೆಗಳು ಮತ್ತು ನಿಂಬೆ ರಸದೊಂದಿಗೆ ಮಸಾಲೆ ಹಾಕಿದ, ಕೊಚ್ಚಿದ ಹಸಿ ಮೀನುಗಳಿಂದ ಮಾಡಲಾಗುವ ಭಕ್ಷ್ಯವಾಗಿದೆ. ಈ ಖಾದ್ಯದ ಒಂದೇ ಒಂದು ಪೀಸ್ ತಿಂದರೂ ಲಿವರ್ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯಿದೆ. ಥೈಲ್ಯಾಂಡ್​ನ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ಮೀನುಗಳನ್ನು ಸೇವಿಸುತ್ತಾರೆ. ಅದೇರೀತಿ ಅಲ್ಲಿನ ಹಲವು ಕುಟುಂಬದವರು ನಿಯಮಿತವಾಗಿ ಕೋಯಿ ಪ್ಲಾವನ್ನು ತಿನ್ನುತ್ತಿದ್ದರು.

ಇದನ್ನೂ ಓದಿ: ಚೆನ್ನಾಗಿ ನಿದ್ರೆ ಮಾಡಲು ರಾತ್ರಿ 9 ಗಂಟೆಯ ನಂತರ ಈ 6 ಆಹಾರವನ್ನು ತಿನ್ನಬೇಡಿ

ಮಸಾಲೆಗಳು ಮತ್ತು ಸುಣ್ಣವನ್ನು ಕಚ್ಚಾ ಮೀನಿನ ಪೀಸುಗಳ ಮೇಲೆ ಹಾಕಿ, ಅದಕ್ಕೆ ನಿಂಬೆ ಹುಳಿ ಹಿಂಡಲಾಗುತ್ತದೆ. ಇದು ಇಲ್ಲಿನ ವಿಶೇಷ ಭಕ್ಷ್ಯವಾಗಿದೆ. ಈ ಫುಡ್ ಬಹಳ ಅಗ್ಗದ ಮತ್ತು ರುಚಿಕರವಾದುದಾಗಿದೆ. ಆದರೆ, ಈ ಕೋಯಿ ಪ್ಲಾ ತಿಂದ ಬಹುತೇಕರು ಅನಾರೋಗ್ಯಕ್ಕೆ ಒಳಗಾಗಿದ್ದರು. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದರು. ಆದರೆ, ಅದಕ್ಕೆ ತಾವು ತಿಂದ ಆಹಾರವೇ ಕಾರಣ ಎಂಬ ವಿಷಯ ಅವರಿಗೆ ಗೊತ್ತಿರಲಿಲ್ಲ.

ಸುಮಾರು 20,000 ಜನರು ತೀವ್ರ ಅನಾರೋಗ್ಯಕ್ಕೆ ಒಳಗಾಗಿ, ಕ್ಯಾನ್ಸರ್​ನಿಂದ ಸಾವನ್ನಪ್ಪಿದ ಬಳಿಕ ವೈದ್ಯರು ಅವರ ಆಹಾರದ ಹಿಸ್ಟರಿಯನ್ನು ತೆಗೆದು ನೋಡಿದಾಗ ಅವರೆಲ್ಲರೂ ಕೋಯಿ ಪ್ಲಾ ಸೇವಿಸಿರುವುದು ತಿಳಿದುಬಂದಿತು. ಈ ಬಗ್ಗೆ ವಿಜ್ಞಾನಿಗಳು ಅಧ್ಯಯನ ಮಾಡಿದ್ದು, ಈ ಅಪಾಯಕ್ಕೆ ಆ ಭಕ್ಷ್ಯಕ್ಕೆ ಬಳಸುವ ಮೀನುಗಳು ಕಾರಣವಲ್ಲ. ಆ ಮೀನುಗಳು ತಿನ್ನುವ ಫ್ಲೂಕ್ ಎಂಬ ಚಪ್ಪಟೆ ಹುಳುಗಳೇ ಇದಕ್ಕೆ ಕಾರಣ.

ಇದನ್ನೂ ಓದಿ: World Egg Day 2023: ಆರೋಗ್ಯ, ಸೌಂದರ್ಯಕ್ಕೆರಡೂ ಮೊಟ್ಟೆಯಿಂದ ಆಗುವ ಪ್ರಯೋಜನ ಒಂದೆರಡಲ್ಲ!

ಈ ಚಪ್ಪಟೆ ಹುಳುಗಳನ್ನು ಸಾಮಾನ್ಯವಾಗಿ ಫ್ಲೂಕ್ ಎಂದು ಕರೆಯಲಾಗುತ್ತದೆ. ಇದು ಮೆಕಾಂಗ್ ಪ್ರದೇಶದಲ್ಲಿ ಹೆಚ್ಚಾಗಿರುತ್ತದೆ. ಸಿಹಿ ನೀರಿನ ಮೀನುಗಳು ಈ ಹುಳಗಳನ್ನು ತಿನ್ನುತ್ತವೆ. ಈಶಾನ್ಯ ಥೈಲ್ಯಾಂಡ್‌ನ ಆರ್ಥಿಕವಾಗಿ ಹಿಂದುಳಿದ ಪ್ರದೇಶವಾದ ಇಸಾನ್​ನಲ್ಲಿ ಕೋಲಾಂಜಿಯೋಕಾರ್ಸಿನೋಮ (CCA) ಎಂಬ ಕ್ಯಾನ್ಸರ್ ಪತ್ತೆಯಾಗಿದೆ. ಇದು ಒಂದು ರೀತಿಯ ಪಿತ್ತರಸ ನಾಳದ ಕ್ಯಾನ್ಸರ್ ಆಗಿದೆ. ಹಸಿ ಮೀನಿನ ಅತಿಯಾದ ಸೇವನೆಯೇ ಇದಕ್ಕೆ ಕಾರಣವಾಗಿದೆ.

ಈ ಹುಳಗಳಿರುವ ಮೀನನ್ನು ಸೇವಿಸಿದರೆ ದೇಹದೊಳಗೆ ಸೇರಿಕೊಳ್ಳುವ ಈ ಹುಳುಗಳು ಪಿತ್ತರಸ ನಾಳಗಳಲ್ಲಿ ಕೆಲವು ವರ್ಷಗಳವರೆಗೆ ಜೀವಂತವಾಗಿರುತ್ತವೆ. ಇದು ನಿರಂತರವಾಗಿ ಉರಿಯೂತವನ್ನು ಉಂಟುಮಾಡುತ್ತದೆ. ಕೊನೆಗೆ ಇದು ಕ್ಯಾನ್ಸರ್ ಆಗಿ ಉಲ್ಬಣಗೊಳ್ಳುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢೀಕರಿಸಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ