Health Tips: ದೇಹದಲ್ಲಿ ಚಯಾಪಚಯ ಕ್ರಿಯೆ ಹೆಚ್ಚಿಸುವ ಸುಲಭ ಮಾರ್ಗಗಳು
ಚಯಾಪಚಯ ಕ್ರಿಯೆ ದೇಹದ ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಕೊಬ್ಬನ್ನು ಕರಗಿಸಿ ನಿಮ್ಮ ದೇಹಕ್ಕೆ ಶಕ್ತಿ ಒದಗಿಸುತ್ತದೆ.
ಇತ್ತಿಚಿನ ದಿನಗಳಲ್ಲಿ ಆರೋಗ್ಯದ ಕುರಿತಾಗಿ ಎಷ್ಟು ಕಾಳಜಿ ವಹಿಸಿದರೂ ಸಾಲದು. ನಮ್ಮ ಆಹಾರ ವ್ಯವಸ್ಥೆಯಿಂದ ಕೆಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಾಗಿರುವಾಗ ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಸುಧಾರಿಸಿಕೊಳ್ಳುವುದು ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದು. ಚಯಾಪಚಯ ಕ್ರಿಯೆ ದೇಹದ ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಕೊಬ್ಬನ್ನು ಕರಗಿಸಿ ನಿಮ್ಮ ದೇಹಕ್ಕೆ ಶಕ್ತಿ ಒದಗಿಸುತ್ತದೆ. ಚಯಾಪಚಯ ಕ್ರಿಯೆಯು ಉತ್ತಮವಾದಷ್ಟು ನೀವು ಹೆಚ್ಚು ಶಕ್ತಿಯುವಾಗುತ್ತೀರಿ.
ಬೆಳಗಿನ ಜಾವ ಉಪವಾಸ ಬೇಡ ಅತಿಯಾದ ಹಸಿವಿನಿಂತ ಇರುವುದಕ್ಕಿಂತ ಬೆಳಿಗ್ಗೆ ಬೇಗ ಎದ್ದು ಒಂದು ತಾಸಿನ ಒಳಗೆ ಆಹಾರ ಸೇವಿಸುವುದು ಉತ್ತಮ. ಹೊಟ್ಟೆ ತುಂಬಿದಾಕ್ಷಣ ನಿಮ್ಮ ಮನಸ್ಸು ಮತ್ತು ಏಕಾಗ್ರತೆ ಚೆನ್ನಾಗಿರುತ್ತದೆ. ಜತೆಗೆ ನೀವು ಹೆಚ್ಚು ಆರೋಗ್ಯವಾಗಿರಲು ಒಳ್ಳೆಯ ನಿದ್ರೆ ಉತ್ತಮ. ಉತ್ತಮ ಗುಣಮಟ್ಟದ ನಿದ್ರೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ನಿಮಗೆ ಹೆಚ್ಚು ಶಕ್ತಿಯನ್ನು ನೀಡುತ್ತದೆ.
ನಿಮ್ಮ ಆಹಾರದಲ್ಲಿ ಸತುವಿನ ಅಂಶ ಅಧಿಕವಾಗಿರಲಿ ಗೋಧಿ, ಗೋಡಂಬಿ, ಮೀನು, ಮಶ್ರೂಮ್, ಪಾಲಾಕ್ಗ, ದಾಳಿಂಬೆಯಂತಹ ಸತುವಿನ ಆಹಾರವನ್ನು ಹೆಚ್ಚು ಸೆವಿಸಿ. ಕ್ಯಾಪ್ಸಿಕಂನಲ್ಲಿ ಅಧಿಕ ಕೊಬ್ಬನ್ನು ತೆಗೆದುಹಾಕುವ ಗುಣಗಳಿರುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಕ್ಯಾಪ್ಸಿಕಂ ಸೇರಿರಲಿ.
ಪ್ರೋಟೀನ್ ಅಧಿಕವಿರುವ ಆಹಾರ ಹೆಚ್ಚಿನ ಪ್ರೋಟೀನ್ ಇರುವ ಆಹಾರದಲ್ಲಿ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಗಟ್ಟಿಯಾದ ಪದಾರ್ಥಗಳು ಜೀರ್ಣವಾಗಲು ಸಮಯಬೇಕು. ಹಾಗಾಗಿಯೇ ಹೆಚ್ಚು ಅಗಿದು ಊಟ ಮಾಡಬೇಕೆಂದು ತಜ್ಞರು ಸಲಹೆ ನೀಡುತ್ತಾರೆ. ಚಯಾಪಚಯವನ್ನು ನಿರ್ವಹಿಸಲು ನೀವು ಧಾನ್ಯಗಳು, ಮೊಟ್ಟೆ, ಬೀನ್ಸ್, ಕರಿಮೆಣಸು, ಆವಕಾಡೊ, ಕಾಫಿ, ಶುಂಠಿಯನ್ನು ಸೇವಿಸಿ.
ವ್ಯಾಯಾಮ ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ವ್ಯಾಯಾಮವು ಅತ್ಯಂತ ಪರಿಣಾಮಕಾರಿ ಮಾರ್ಗ. ವ್ಯಾಯಾಮವು ನಿಮ್ಮ ಚಯಾಪಚಯವನ್ನು ಗಂಟೆಗಳವರೆಗೆ ಸಕ್ರಿಯಗೊಳಿಸುತ್ತದೆ. ವ್ಯಾಯಾಮ ಮಾಡುವುದರಿಂದ ಹೆಚ್ಚಿನ ಕ್ಯಾಲೊರಿ ಅಥವಾ ಬೊಜ್ಜು ಕರಗುತ್ತದೆ. ಇದರಿಂದ ಆರೋಗ್ಯ ಸುಧಾರಿಸುತ್ತದೆ.
ಇದನ್ನೂ ಓದಿ:
Health Tips: ಉತ್ತಮ ಆರೋಗ್ಯಕ್ಕಾಗಿ ಈ ಸಲಹೆಗಳು; ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸುಲಭ ಮಾರ್ಗಗಳು
Health Tips: ಮನೆಯ ಹಿತ್ತಲಲ್ಲಿ ಬೆಳೆಯುವ ಈ ಸಸ್ಯಗಳಲ್ಲಿ ಅಡಗಿದೆ ಅನೇಕ ಆರೋಗ್ಯಕರ ಗುಣ
(simple ways to boost metabolism check in kannada)
Published On - 8:54 am, Fri, 3 September 21