AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sleeping On Ground: ನೆಲದ ಮೇಲೆ ಮಲಗುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ! ಇಲ್ಲಿದೆ ಮಾಹಿತಿ

ಹಾಸಿಗೆಗಿಂತ ನೆಲದ ಮೇಲೆ ಮಲಗುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಅವರಿಗೆ ಗೊತ್ತು. ನೆಲದ ಮೇಲೆ ಮಲಗುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಆ ಪ್ರಯೋಜನಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

Sleeping On Ground: ನೆಲದ ಮೇಲೆ ಮಲಗುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ! ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Sep 18, 2022 | 5:28 PM

Share

ಹಿಂದಿನ ಕಾಲದಲ್ಲಿ ಜನರು ನೆಲದ (Ground) ಮೇಲೆ ಮಲಗುತ್ತಿದ್ದರು. ಇಂದಿನ ತರಹ ಮೃದು ಹಾಸಿಗೆಗಳು ಇರಲಿಲ್ಲ. ನೆಲದ ಮೇಲೆ ಮಲಗಿದರು (Sleeping) ಅವರ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಕಾಣಿಸಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಜನರು ಮೃದು ಹಾಸಿಗೆಗಳನ್ನು ಬಳಸುತ್ತಾರೆ. ಮೃದುವಾದ ಹಾಸಿಗೆಗಳ ಮೇಲೆ ಆರಾಮವಾಗಿ ಮಲಗಲು ಇಷ್ಟ ಪಡುತ್ತಾರೆ. ಹಾಸಿಗೆ ಇಲ್ಲದಿದ್ದರೆ ನಿದ್ದೆಯೇ ಬಾರದ ಸ್ಥಿತಿಗೆ ತಲುಪಿದ್ದಾರೆ. ವಾಸ್ತವವಾಗಿ, ಹಾಸಿಗೆ ಇಲ್ಲದ ಮನೆ ಇಲ್ಲ ಎಂದು ಹೇಳೆದರೆ ಅತಿಶಯೋಕ್ತಿಯಲ್ಲ. ಆದರೆ, ಇಂದಿಗೂ ನೆಲದ ಮೇಲೆ ಚಾಪೆ ಹಾಸಿ ಮಲಗುವವರಿದ್ದಾರೆ. ಏಕೆಂದರೆ ಹಾಸಿಗೆಗಿಂತ ನೆಲದ ಮೇಲೆ ಮಲಗುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಅವರಿಗೆ ಗೊತ್ತು. ನೆಲದ ಮೇಲೆ ಮಲಗುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಆ ಪ್ರಯೋಜನಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಉತ್ತಮ ನಿದ್ದೆ:

ಕೆಲವೊಮ್ಮೆ ಮೃದುವಾದ ಹಾಸಿಗೆಯ ಮೇಲೆ ಮಲಗಿದರು ಸಹ ಚೆನ್ನಾಗಿ ನಿದ್ರೆ ಬರಲ್ಲ. ಆಗಾಗ ಎಚ್ಚರವಾಗಬಹುದು. ಅಂತಹ ಸಮಯದಲ್ಲಿ ನೆಲದ ಮೇಲೆ ಅಥವಾ ಚಾಪೆಯ ಮೇಲೆ ಮಲಗುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ನೆಲದ ಮೇಲೆ ಮಲಗುವುದು ಮೊದಮೊದಲು ಸ್ವಲ್ಪ ಕಷ್ಟವಾದರೂ ಅಭ್ಯಾಸವಾದ ನಂತರ ಸುಖ ನಿದ್ರೆ ನಿಮ್ಮದಾಗುತ್ತದೆ. ಜೊತೆಗೆ ನೀವು ಆರೋಗ್ಯವಾಗಿ ಕೂಡ ಇರುತ್ತೀರಾ.

ಒತ್ತಡ ಮತ್ತು ಬೆನ್ನು ನೋವಿನಿಂದ ಪರಿಹಾರ:

ನೆಲದ ಮೇಲೆ ಮಲಗುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಮಾನಸಿಕ ಆರೋಗ್ಯ ಸ್ಥಿತಿಯೂ ಉತ್ತಮವಾಗುತ್ತದೆ. ನೆಲದ ಮೇಲೆ ಮಲಗುವುದರಿಂದ ಮನುಷ್ಯನ ಮೈಕಟ್ಟು ಕೂಡ ಸುಧಾರಿಸುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂರೋಲಾಜಿಕಲ್ ಡಿಸಾರ್ಡರ್ಸ್ ಅಂಡ್ ಸ್ಟ್ರೋಕ್ ಪ್ರಕಾರ, ಬೆನ್ನುನೋವಿನಿಂದ ಬಳಲುತ್ತಿರುವ ಜನರು ಬಿರುಸಾದ ಹಾಸಿಗೆಗಳ ಮೇಲೆ ಮಲಗಬೇಕು. ನೀವು ಬೆನ್ನು ನೋವಿನಿಂದ ಬಳಲುತ್ತಿದ್ದರೆ, ನೆಲದ ಮೇಲೆ ಮಲಗುವುದು ಉತ್ತಮ.

ಯಾರು ನೆಲದ ಮೇಲೆ ಮಲಗಬಾರದು:

ವಯಸ್ಸಾದವರು ನೆಲದ ಮೇಲೆ ಮಲಗಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಅಲ್ಲದೆ ನಡೆಯಲು ತೊಂದರೆ, ಮೂಳೆಗಳಲ್ಲಿ ನೋವು, ತೀವ್ರ ಬೆನ್ನು ನೋವು, ಅಲರ್ಜಿಯಂತಹ ಯಾವುದೇ ವೈದ್ಯಕೀಯ ಸ್ಥಿತಿ ಇರುವವರು ನೆಲದ ಮೇಲೆ ಮಲಗಬಾರದು. ಗರ್ಭಾವಸ್ಥೆಯಲ್ಲಿ ನೆಲದ ಮೇಲೆ ಮಲಗಬಾರದು. ಗರ್ಭಾವಸ್ಥೆಯು ಮಹಿಳೆಯರಲ್ಲಿ ಬೆನ್ನುಮೂಳೆಯು ಸ್ವಲ್ಪಮಟ್ಟಿಗೆ ಬಾಗುತ್ತದೆ. ಇದರಿಂದಾಗಿ ನೆಲದ ಮೇಲೆ ಮಲಗುವುದರಿಂದ ಬೆನ್ನು ನೋವು ಉಂಟಾಗುತ್ತದೆ.

Published On - 5:28 pm, Sun, 18 September 22

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ