ಪ್ರಕೃತಿಯಲ್ಲಿ ನಡೆಯುವ ಕೆಲವು ಘಟನೆಗಳನ್ನು ನಂಬುವುದಕ್ಕೂ ಸಾಧ್ಯವಾಗುವುದಿಲ್ಲ. ಜಗತ್ತಿನಲ್ಲಿ ಚಿತ್ರ ವಿಚಿತ್ರ ಎನಿಸುವಂತಹ ಘಟನೆಗಳು ನಡೆದು ಅಚ್ಚರಿ ಮೂಡಿಸುತ್ತದೆ. ಕೆಲ ಘಟನೆಗಳು ನಡೆದಾಗ ನಂಬಬೇಕೋ ಬೇಡವೋ ಗೊಂದಲದ ನಡುವೆ ಸತ್ಯವನ್ನು ಒಪ್ಪಿಕೊಂಡು ಸಹಜತೆ ಮರಳಬೇಕಾಗುತ್ತದೆ. ವೈದ್ಯಕೀಯ ಇತಿಹಾಸದಲ್ಲಿ ಮಗು ಕ್ಯಾಲ್ಸಿಫೈಡ್ ಆಗಿ ಕಲ್ಲಾಗಿ ಲಿಥೋಪೆಡಿಯನ್ ಸಮಸ್ಯೆಯು ವಿಶ್ವಾದ್ಯಂತ 300 ಘಟನೆಗಳು ಮಾತ್ರವೇ ಬೆಳಕಿಗೆ ಬಂದಿವೆ. ಇದೀಗ ಬ್ರೆಜಿಲ್ ನ 81 ವರ್ಷದ ವೃದ್ಧೆಯ ಹೊಟ್ಟೆಯಲ್ಲಿ ಕಲ್ಲಿನ ಮಗುವೊಂದು ಪತ್ತೆಯಾಗಿವೆ.
ಮೂತ್ರನಾಳದ ಸೋಂಕಿನ ಚಿಕಿತ್ಸೆಗಾಗಿ ಡೇನಿಯಲಾ ತನ್ನ ಮನೆಯ ಸಮೀಪವಿರುವ ಸಣ್ಣ ಆಸ್ಪತ್ರೆಯಲ್ಲಿ ಮೊದಲು ಪರೀಕ್ಷೆಗೆ ಒಳಗಾಗಿದ್ದಾಳೆ. ನಂತರದಲ್ಲಿ ವೈದ್ಯರು ವೃದ್ಧೆಯನ್ನು ಬೇರೆ ಬೇರೆ ಪರೀಕ್ಷೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಕಲ್ಲಿನಂತಿರುವ ಮಗುವಿರುವುದು ವೈದ್ಯರ ಗಮನಕ್ಕೆ ಬಂದಿದೆ. ಏಳು ಮಕ್ಕಳ ತಾಯಿ 1968 ರಲ್ಲಿ ಕೊನೆಯ ಬಾರಿಗೆ ಗರ್ಭಿಣಿಯಾಗಿದ್ದರು. ಕಳೆದ 56 ವರ್ಷಗಳಿಂದ ಆಕೆಯ ದೇಹದಲ್ಲಿತ್ತು ಎಂದು ತಿಳಿದು ಬಂದಿದೆ. ಆ ಬಳಿಕ ವೃದ್ಧೆಯ ಹೊಟ್ಟೆಯಲ್ಲಿ ಕಲ್ಲಿನ ಮಗುವನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ಶಸ್ತ್ರಚಿಕಿತ್ಸೆಯ ಮರುದಿನ ವೃದ್ಧೆಯು ಐಸಿಯುನಲ್ಲಿ ಕೊನೆಯುಸಿರೆಳೆದಿದ್ದಾಳೆ. ವೃದ್ಧೆಯ ಗರ್ಭದಲ್ಲಿ ಹೊರ ತೆಗೆದ ಈ ಅಪರೂಪದ ‘ಕಲ್ಲಿನ ಶಿಶು’ವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ; ಲೈಂಗಿಕ ಕ್ರಿಯೆಯಿಂದ ಕ್ಯಾನ್ಸರ್ ಬರಬಹುದು; ಈ ಬಗ್ಗೆ ಇರಲಿ ಎಚ್ಚರ!
ಶರೀರಕ್ಕೆ ದೊಡ್ಡ ಗಾತ್ರದ ಮೃತ ಭ್ರೂಣವನ್ನು ಹೊರಹಾಕಲು ಸಾಧ್ಯವಾಗದೇ ಇದ್ದಾಗ ಸ್ವಾಭಾವಿಕವಾಗಿ ಅದರ ಮೃತ ಕೋಶಗಳ ಸುತ್ತ ಕ್ಯಾಲ್ಸಿಯಮ್ ಲೇಪನ ಸೃಷ್ಟಿಯಾಗಲು ಪ್ರಾರಂಭಿಸುತ್ತದೆ. ಕ್ರಮೇಣ ಆ ಮಗು ಕ್ಯಾಲ್ಸಿಫೈಡ್ ಆಗಿ ಕಲ್ಲಾಗಿ ಮಾರ್ಪಡಾಗುತ್ತದೆ. ಈ ವೈದ್ಯಕೀಯ ಸ್ಥಿತಿಯನ್ನು ಲಿಥೊಪೆಡಿಯನ್ ಅಥವಾ ಸ್ಟೋನ್ ಬೇಬಿ ಎಂದು ಕರೆಯಲಾಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:06 pm, Fri, 22 March 24