Migraine: ಬೇಸಿಗೆಯಲ್ಲಿ ಮೈಗ್ರೇನ್ ವಿಪರೀತ ಹೆಚ್ಚಾಗಲು ಕಾರಣ ಇಲ್ಲಿದೆ

ಬೇಸಿಗೆಯಲ್ಲಿ ತಾಪಮಾನವು ಹೆಚ್ಚುತ್ತಲೇ ಇರುವುದರಿಂದ ಮೈಗ್ರೇನ್‌ನಿಂದ ಬಳಲುತ್ತಿರುವ ಜನರು ಜಾಗರೂಕರಾಗಿರಬೇಕು. ಬಿಸಿ ವಾತಾವರಣವು ನಿಮ್ಮ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು. ಇದರ ಪರಿಹಾರಕ್ಕಾಗಿ ನಿರ್ವಹಣಾ ತಂತ್ರಗಳನ್ನು ಪರಿಶೀಲಿಸುವುದು ಅತ್ಯಗತ್ಯ. ಏಕೆಂದರೆ, ಬೇಸಿಗೆಯಲ್ಲಿ ಮೈಗ್ರೇನ್ ಉಲ್ಬಣಗೊಳ್ಳುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

Migraine: ಬೇಸಿಗೆಯಲ್ಲಿ ಮೈಗ್ರೇನ್ ವಿಪರೀತ ಹೆಚ್ಚಾಗಲು ಕಾರಣ ಇಲ್ಲಿದೆ
ತಲೆನೋವು
Follow us
ಸುಷ್ಮಾ ಚಕ್ರೆ
|

Updated on: Mar 22, 2024 | 3:20 PM

ಬೇಸಿಗೆಯಲ್ಲಿ ಮೈಗ್ರೇನ್ (Migraine) ತಲೆನೋವಿಗೆ ಶಾಖ ಮತ್ತು ಆರ್ದ್ರತೆ ಸಾಮಾನ್ಯ ಪ್ರಚೋದಕಗಳಾಗುತ್ತದೆ. ಮೈಗ್ರೇನ್ ಒಂದು ರೀತಿಯ ತೀವ್ರವಾದ ತಲೆನೋವು (Headache) ಆಗಿದ್ದು ಅದು ಸಾಮಾನ್ಯವಾಗಿ ಒಂದು ಬದಿಯಲ್ಲಿ ಪ್ರಾರಂಭವಾಗುತ್ತದೆ. ಕೆಲವೊಮ್ಮೆ ತಲೆಯ ಹಿಂಭಾಗದಲ್ಲಿ ಹೆಚ್ಚು ನೋವನ್ನು ಉಂಟುಮಾಡುತ್ತದೆ. ತಲೆ ಸಿಡಿದೇ ಹೋಗುತ್ತದೆ ಎಂಬ ರೀತಿಯ ಭಾವನೆಯನ್ನು ಉಂಟುಮಾಡುತ್ತದೆ. ಇದು ವಾಕರಿಕೆ ಅಥವಾ ವಾಂತಿಯನ್ನು ಕೂಡ ಉಂಟುಮಾಡಬಹುದು. ಧ್ವನಿ ಮತ್ತು ಶಬ್ದಕ್ಕೆ ಕಿರಿಕಿರಿಯುಂಟುಮಾಡಬಹುದು. ಇದರಿಂದ ನಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಕಷ್ಟವಾಗುತ್ತದೆ. ಏರುತ್ತಿರುವ ತಾಪಮಾನದ ಸಮಯದಲ್ಲಿ ಮೈಗ್ರೇನ್ ದಿಢೀರ್ ಹೆಚ್ಚಳಕ್ಕೆ ಕಾರಣವೇನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಬೇಸಿಗೆಯ ಋತುವಿನಲ್ಲಿ ಮೈಗ್ರೇನ್ ದಿಢೀರ್ ಹೆಚ್ಚಳಕ್ಕೆ ಕಾರಣವೇನು?:

ನಿರ್ಜಲೀಕರಣ:

ಬೇಸಿಗೆಯಲ್ಲಿ ಮೈಗ್ರೇನ್‌ಗೆ ಪ್ರಾಥಮಿಕ ಪ್ರಚೋದಕಗಳಲ್ಲಿ ಒಂದು ನಿರ್ಜಲೀಕರಣವಾಗಿದೆ. ಬಿಸಿ ವಾತಾವರಣವು ಹೆಚ್ಚಿದ ಬೆವರುವಿಕೆಯನ್ನು ಉಂಟುಮಾಡುತ್ತದೆ. ಇದು ದೇಹದಿಂದ ದ್ರವದ ಅಂಶ ಕಡಿಮೆಯಾಗಲು ಕಾರಣವಾಗುತ್ತದೆ. ನಿರ್ಜಲೀಕರಣವು ರಕ್ತದ ಪರಿಮಾಣವನ್ನು ಕಡಿಮೆ ಮಾಡುತ್ತದೆ ಮತ್ತು m ಎಲೆಕ್ಟ್ರೋಲೈಟ್ ಮಟ್ಟಗಳ ಬದಲಾವಣೆಗಳಿಗೆ ಕಾರಣವಾಗುತ್ತದೆ. ಇವೆರಡೂ ಮೈಗ್ರೇನ್ ಅನ್ನು ಪ್ರಚೋದಿಸಬಹುದು ಅಥವಾ ಆ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಬಹುದು.

ಇದನ್ನೂ ಓದಿ:Women Health: ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ತಲೆನೋವು ಬರಲು ಕಾರಣವೇನು?

ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು:

ಕೆಲವು ಮೈಗ್ರೇನ್ ಪೀಡಿತರಿಗೆ ಪ್ರಕಾಶಮಾನವಾದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಮೈಗ್ರೇನ್ ಸಮಸ್ಯೆ ಹೆಚ್ಚಾಗುತ್ತದೆ. ಸೂರ್ಯನ ಬೆಳಕು ಸ್ಕ್ವಿಂಟಿಂಗ್ ಮತ್ತು ಕಣ್ಣಿನ ಆಯಾಸವನ್ನು ಉಂಟುಮಾಡುತ್ತದೆ. ಇದು ಒತ್ತಡದ ತಲೆನೋವಿಗೆ ಕಾರಣವಾಗುತ್ತದೆ ಅಥವಾ ಈಗಾಗಲೇ ಇರುವ ಮೈಗ್ರೇನ್‌ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ.

ಕಳಪೆ ಗಾಳಿಯ ಗುಣಮಟ್ಟ:

ಮಾಲಿನ್ಯ, ಪರಾಗ ಮತ್ತು ಅಲರ್ಜಿನ್‌ಗಳಂತಹ ಅಂಶಗಳಿಂದಾಗಿ ಬೇಸಿಗೆಯ ಗಾಳಿಯ ಗುಣಮಟ್ಟ ಹದಗೆಡಬಹುದು. ಕಳಪೆ ಗಾಳಿಯ ಗುಣಮಟ್ಟವು ಉಸಿರಾಟದ ವ್ಯವಸ್ಥೆಯನ್ನು ಕಿರಿಕಿರಿಗೊಳಿಸುತ್ತದೆ ಮತ್ತು ಉರಿಯೂತವನ್ನು ಪ್ರಚೋದಿಸುತ್ತದೆ. ಇದು ಮೈಗ್ರೇನ್ ಹೆಚ್ಚಾಗಲು ಕಾರಣವಾಗುತ್ತದೆ.

ದಿನಚರಿಯ ಸಮಸ್ಯೆ:

ರಜಾದಿನಗಳು, ಅನಿಯಮಿತ ನಿದ್ರೆಯ ಮಾದರಿಗಳು ಅಥವಾ ಬದಲಾದ ಆಹಾರ ಪದ್ಧತಿಗಳಂತಹ ದಿನಚರಿಗಳಿಗೆ ಬೇಸಿಗೆಯು ಆಗಾಗ ಬದಲಾವಣೆಗಳನ್ನು ತರುತ್ತದೆ. ಈ ಅಡಚಣೆಗಳು ಒತ್ತಡ, ಆಯಾಸ ಮತ್ತು ಹಾರ್ಮೋನ್ ಮಟ್ಟದಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು. ಇವೆಲ್ಲವೂ ಮೈಗ್ರೇನ್ ಪ್ರಚೋದಕಗಳಾಗಿವೆ.

ಆರ್ದ್ರತೆಯ ಮಟ್ಟಗಳು:

ಬೇಸಿಗೆಯಲ್ಲಿ ಪ್ರಚಲಿತದಲ್ಲಿರುವ ಹೆಚ್ಚಿನ ಆರ್ದ್ರತೆಯ ಮಟ್ಟಗಳು ಕೆಲವು ವ್ಯಕ್ತಿಗಳಿಗೆ ಮೈಗ್ರೇನ್ ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು. ಆರ್ದ್ರ ಗಾಳಿಯಿಂದ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಹೆಚ್ಚು ಕಷ್ಟಕರವಾಗುತ್ತದೆ. ಇದು ಹೆಚ್ಚಿನ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: Headache: ತಲೆನೋವು ಕಡಿಮೆ ಮಾಡುವ 8 ಸೂಪರ್‌ಫುಡ್‌ಗಳಿವು

ಮುನ್ನಚ್ಚರಿಕಾ ಕ್ರಮಗಳೇನು?:

  • ಮೈಗ್ರೇನ್ ಹೊಂದಿರುವ ವ್ಯಕ್ತಿಗಳು ಸಾಕಷ್ಟು ದ್ರವ ಸೇವನೆಗೆ ಆದ್ಯತೆ ನೀಡಬೇಕು.
  • ತೀವ್ರವಾದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಟೋಪಿಗಳು ಮತ್ತು ಛತ್ರಿಗಳ ಬಳಕೆಯನ್ನು ರೂಢಿಸಿಕೊಳ್ಳುವುದು ಉತ್ತಮ.
  • ಒತ್ತಡವು ತಲೆನೋವು ಮೈಗ್ರೇನ್‌ಗಳಿಗೆ ಪ್ರಚೋದಕ ಎಂದು ಗುರುತಿಸಲ್ಪಟ್ಟಿದೆ. ಆಳವಾದ ಉಸಿರಾಟ ಮತ್ತು ಧ್ಯಾನದಂತಹ ತಂತ್ರಗಳು ಒತ್ತಡ-ಪ್ರೇರಿತ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
  • ನಿದ್ರೆಯ ಗುಣಮಟ್ಟಕ್ಕೆ ಆದ್ಯತೆ ನೀಡುವುದು ಮೈಗ್ರೇನ್ ತಡೆಗಟ್ಟುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ