ಬೇರ್ಪಡುವಿಕೆ ಭಾವನೆಯು ಮಾನಸಿಕ ಆರೋಗ್ಯ(Mental Health)ದ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲದು. ಪ್ರೀತಿ ಅಥವಾ ಸ್ನೇಹ ಯಾವುದೇ ಸಂಬಂಧದಿಂದ ಪ್ರತ್ಯೇಕಿಸಲ್ಪಟ್ಟವರು ಅಸ್ವಸ್ಥತೆ, ಆತಂಕ, ನೋವು, ಖಿನ್ನತೆಯನ್ನು ಎದುರಿಸುತ್ತಿರುತ್ತಾರೆ. ಇವುಗಳನ್ನು ಆರಂಭದಿಂದಲೇ ಹೋಗಲಾಡಿಸಿದರೆ ವ್ಯಕ್ತಿಯನ್ನು ಮೊದಲಿನಂತೆ ಮಾಡಬಹುದು ಒಂದೊಮ್ಮೆ ದೀರ್ಘಕಾಲದವರೆಗೆ ಖಿನ್ನತೆ ಮುಂದುವರೆದರೆ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು ಎಂದು ಹೇಳಲಾಗಿದೆ.
ಗಂಡು ಹೆಣ್ಣಿನ ನಡುವೆ ಪ್ರೀತಿಯೂ ಫಾಸ್ಟ್ ಆಗಿ ಶುರುವಾಗುತ್ತೆ, ಬ್ರೇಕ್ ಅಪ್ ಕೂಡ ಅಷ್ಟೇ ವೇಗವಾಗಿ ಆಗುತ್ತದೆ. ಮುರಿದು ಬಿದ್ದ ಯಾವುದೇ ಸಂಬಂಧಗಳಿಗೂ ತೀರಾ ಪ್ರಾಮುಖ್ಯತೆ ನೀಡುವುದಿಲ್ಲ ಈಗಿನ ಕಾಲದ ಜನತೆ. ಹಳೇ ಪ್ರೀತಿಯನ್ನು ನೆನೆಸಿಕೊಂಡು ಈ ಕ್ಷಣದ ಸುಖ ಹಾಳು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ, ಆದರೂ ಬೇರ್ಪಡುವಿಕೆ ಅಥವಾ ಪ್ರತ್ಯೇಕತೆ ಎಂಬುದು ಮಾನಸಿಕ ಆರೋಗ್ಯವನ್ನು ನಮಗೆ ಗೊತ್ತಿಲ್ಲದಂತೆಯೇ ಹಾಳು ಮಾಡಿಬಿಡುತ್ತದೆ.
ನಾವು ನಿತ್ಯ ಹತ್ತಾರು ಜನರನ್ನು ಭೇಟಿಯಾಗುತ್ತೇವೆ, ಮಾತನಾಡುತ್ತೇವೆ ಆದರೆ ಕೆಲವೇ ಕೆಲವು ಜನರೊಂದಿಗೆ ಮಾನಸಿಕವಾಗಿ ಕನೆಕ್ಟ್ ಆಗುತ್ತೇವೆ. ಅವರ ಭಾವನೆಗಳಿಗೂ ಸ್ಪಂದಿಸುತ್ತೇವೆ. ಒಂದೊಮ್ಮೆ ಯಾರದ್ದೋ ಪ್ರಭಾವಕ್ಕೆ ಒಳಗಾಗಲು ಆರಂಭಿಸಿದರೆ ಅನಗತ್ಯ ಹೇರಿಕೆಯಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಬಹುದು.
ಒಂದೊಮ್ಮೆ ನೀವು ಭಾವನಾತ್ಮಕವಾಗಿ ಬೇರೆಯವರೊಂದಿಗೆ ಬೆರೆಯದೇ ಇದ್ದರೂ ನಿಮ್ಮ ಹಾಗೂ ಅವರ ನಡುವೆ ಸಂಪರ್ಕ ಕಡಿತಗೊಂಡು ನಿರ್ಲಿಪ್ತ ಭಾವ ಉಂಟಾಗುತ್ತದೆ. ಕಷ್ಟದಲ್ಲಿರುವ ವ್ಯಕ್ತಿಯನ್ನು ನೋಡಿ ಮರುಗುವುದು ಸಾಮಾನ್ಯ, ಆದರೆ ಅವನು ನಿಮ್ಮ ಸಹಾಯಕ್ಕೆ ನಿಜವಾಗಿಯೂ ಯೋಗ್ಯನೇ? ಎಂದು ಆಲೋಚಿಸಿ ಸಹಾಯ ಮಾಡಿ.
ಇಲ್ಲವಾದರೆ ನೀವು ಅವನಿಗೆ ಸಹಾಯ ಮಾಡಬೇಡಿ ಅಥವಾ ನೀವು ಸಹಾಯ ಮಾಡಿದರೂ ನಿಮ್ಮ ಮನಸ್ಸಿನ ಪ್ರಕಾರ ಫಲಿತಾಂಶವನ್ನು ನಿರೀಕ್ಷಿಸಬೇಡಿ.
ಸಂಗಾತಿ ನೆನಪು ಕಾಡುವುದು
-ತನ್ನ ಸಂಗಾತಿಗೆ ಹೊಸ ಸಂಗಾತಿಯ ಸ್ನೇಹ ದೊರಕಿರುವ ಕುರಿತು ಚಿಂತೆ
-ತನ್ನ ಬಗೆಗಿನ ಕೀಳರಿಮೆ
-ಯೋಚಿಸಲು ಸಮಯಾವಕಾಶ
-ಹೊಸ ಸ್ನೇಹಕ್ಕೆ ಮನಸು ತೆರೆದುಕೊಳ್ಳದೇ ಇರುವುದು
-ಭೂತದಂತೆ ಕಾಡುವ ನೆನಪು- ಸಂಗಾತಿಯೊಂದಿಗೆ ಕಳೆದ ಮಧುರ ಕ್ಷಣಗಳು ಹಾಗೂ ಕಹಿ ಘಟನೆಗಳೆರಡನ್ನೂ ಪದೇ ಪದೇ ಮೆಲುಕು ಹಾಕುವುದು
– ಸಂಗಾತಿ ನೀಡಿದ ಉಡುಗೊರೆಗಳು
-ಹೊಸ ಸಂಗಾತಿಯೊಂದಿಗೆ ಬಾಂಧವ್ಯ ಉತ್ತಮವಾಗಿಲ್ಲದೇ ಇರುವುದು, ಹೊಸ ಪ್ರೇಮಿಯೊಂದಿಗೂ ಕಹಿ ಘಟನೆಗಳು ಪದೇ ಪದೇ ಮರುಕಳಿಸುತ್ತಿದ್ದರೆ, ಹಳೆಯ ಸಂಗಾತಿಯನ್ನು ಮೀರಿಸುವಂತಹಾ ಮಾನಸಿಕ ತೃಪ್ತಿ ಹೊಸ ಸಂಗಾತಿಯೊಡನೆ ಸಿಗದೇ ಹೋದಾಗ ಹಳೆಯ ಪ್ರೇಮಿಯ ನೆನಪು ಕಾಡುವುದು ಸಹಜ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ