Mental Health: ಪುರುಷರು ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಯಾರೊಂದಿಗೂ ಮಾತನಾಡುವುದಿಲ್ಲ ಏಕೆ?

ಪುರುಷರು ಎಲ್ಲರಿಗಿಂತ ಸ್ಟ್ರಾಂಗ್, ಯಾವ ವಿಷಯವನ್ನು ಕೂಡ ಹೆಣ್ಣುಮಕ್ಕಳಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ, ಹಾಗೆಯೇ ಯಾರೇ ಏನೇ ಮಾತನಾಡಿದರೂ ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ, ಅಷ್ಟು ಸೂಕ್ಷ್ಮ ಸ್ವಭಾವದವರೂ ಆಗಿರುವುದಿಲ್ಲ. ಆದರೆ ಅವರು ಕೂಡ ಮನುಷ್ಯರೇ ತಾನೆ.

Mental Health: ಪುರುಷರು ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಯಾರೊಂದಿಗೂ ಮಾತನಾಡುವುದಿಲ್ಲ ಏಕೆ?
Men's Mental Health
Follow us
TV9 Web
| Updated By: ನಯನಾ ರಾಜೀವ್

Updated on: Jun 19, 2022 | 1:00 PM

ಪುರುಷರು ಎಲ್ಲರಿಗಿಂತ ಸ್ಟ್ರಾಂಗ್, ಯಾವ ವಿಷಯವನ್ನು ಕೂಡ ಹೆಣ್ಣುಮಕ್ಕಳಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ, ಹಾಗೆಯೇ ಯಾರೇ ಏನೇ ಮಾತನಾಡಿದರೂ ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ, ಅಷ್ಟು ಸೂಕ್ಷ್ಮ ಸ್ವಭಾವದವರೂ ಆಗಿರುವುದಿಲ್ಲ. ಆದರೆ ಅವರು ಕೂಡ ಮನುಷ್ಯರೇ ತಾನೆ.

ಅವರನ್ನು ಕೂಡ ಕೆಲವು ಮಾನಸಿಕ ಸಮಸ್ಯೆಗಳು ಕಾಡುತ್ತವೆ, ಮಹಿಳೆಯರಾದರೆ ಅವರ ಸ್ನೇಹಿತರ ಬಳಿ ಅಥವಾ ಕುಟುಂಬಸ್ಥರ ಬಳಿ ಎಲ್ಲವನ್ನೂ ಹೇಳಿಕೊಳ್ಳುತ್ತಾಳೆ. ಆದರೆ ಪುರುಷರು ತಮ್ಮ ಸಮಸ್ಯೆಯನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಕೊರಗುತ್ತಾರೆ. ಹಾಗಾದರೆ ಪುರುಷರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂಜರಿಯುವುದು ಏಕೆ ಎಂಬುದರ ಕುರಿತು ಇಲ್ಲಿ ಕೆಲವು ಮಾಹಿತಿ ನೀಡಲಾಗಿದೆ.

ಮತ್ತಷ್ಟು ಓದಿ

ಸಮಸ್ಯೆ ಹೇಳಿಕೊಂಡರೆ ನನ್ನ ವೀಕ್​ನೆಸ್ ಅಂದುಕೊಂಡಾರು: ಒಂದೊಮ್ಮೆ ನನಗೆ ಆಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡರೆ ಇದು ನನ್ನ ವೀಕ್​ನೆಸ್ ಎಂದುಕೊಂಡರೆ ಎನ್ನುವ ಭಯದಿಂದ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಆಮೇಲೆ ಸ್ನೇಹಿತರು ಇದೇ ವಿಚಾರವಿಟ್ಟುಕೊಂಡು ನನ್ನನ್ನು ಹೋಯಾಳಿಸಿದರೆ ಎನ್ನುವ ಆಲೋಚನೆಯೂ ಅವರನ್ನು ಕಾಡುತ್ತದೆ.

ಪುರುಷರು ಮಹಿಳೆಯರಿಗಿಂತ ಭಿನ್ನವಾಗಿ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾರೆ: ಪುರುಷರು ಮಹಿಳೆಯರಿಗಿಂತ ಭಿನ್ನವಾದ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾರೆ, ಅದನ್ನು ಎಕ್ಸ್​ಪ್ರೆಸ್ ಮಾಡುವುದಿಲ್ಲ, ಮನಸ್ಸಿನಲ್ಲೇ ಇಟ್ಟುಕೊಂಡು ಬೇರೆಯವರ ಮೇಲೆ ಕೋಪ ತೋರಿಸುವುದು, ಫ್ರಸ್ಟ್ರೇಷನ್ ಸೇರಿದಂತೆ ಹಲವು ರೀತಿಯಲ್ಲಿ ತಮ್ಮ ಸಮಸ್ಯೆಯನ್ನು ಹೊರಹಾಕುತ್ತಾರೆ. ನಿತ್ಯ ವ್ಯಾಯಾಮ, ಧ್ಯಾನ ಮಾಡುವುದರಿಂದ ಒತ್ತಡದಿಂದ ಹೊರಬರಬಹುದು.

ಸಮಸ್ಯೆಗಳನ್ನು ಹೇಗೆ ಹೇಳಿಕೊಳ್ಳಬೇಕು ಎಂಬುದು ತಿಳಿದಿಲ್ಲ: ತನಗಾಗುತ್ತಿರುವ ಸಮಸ್ಯೆಗಳನ್ನು ಯಾರೊಂದಿಗೆ ಹೇಗೆ ಹೇಳಿಕೊಳ್ಳಬೇಕೆಂಬುದು ಪುರುಷರಿಗೆ ತಿಳಿದಿಲ್ಲ.

ಭಾವನೆಗಳನ್ನು ಹುದುಗಿಡುತ್ತಾರೆ: ಪುರುಷರು ಯಾವುದೇ ಭಾವನೆಯನ್ನು ಹಾಗೆಯೇ ಬಚ್ಚಿಟ್ಟುಕೊಳ್ಳುತ್ತಾರೆ. ಆದರೆ ಮಹಿಳೆಯರು ಎಂಥಾ ಸಮಸ್ಯೆಗಳಿರಲಿ, ಮಾನಸಿಕ ಸ್ಥಿತಿ ಇರಲಿ ಬೇರೆಯವರ ಬಳಿ ಬೇಗ ಹಂಚಿಕೊಳ್ಳುತ್ತಾರೆ. ಪುರುಷರು ತಮ್ಮ ಸಮಸ್ಯೆಗಳನ್ನು ಮುಚ್ಚಿಡುವುದರಿಂದ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ.

ಆರೋಗ್ಯ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ