Air Pollution: ಮನೆಯ ಒಳಗೆ ಗಾಳಿಯ ಗುಣಮಟ್ಟ ಸುಧಾರಿಸುವುದು ಹೇಗೆ?
ಮನೆಯ ಒಳಗಿನ ವಾಯು ಮಾಲಿನ್ಯವು ಹೊರಾಂಗಣಕ್ಕಿಂತ ತೀವ್ರವಾಗಿರುತ್ತದೆ. ನಾವು ನಮ್ಮ ಮನೆಯೇ ಸುರಕ್ಷಿತ ಎಂದುಕೊಳ್ಳುತ್ತೇವೆ ಆದರೆ ಅದು ತಪ್ಪು, ನಾವು ಗಾಳಿಯ ಗುಣಮಟ್ಟದ ಕಾಳಜಿ ವಹಿಸುವುದನ್ನು ನಿರ್ಲಕ್ಷಿಸುತ್ತೇವೆ, ಆದ್ದರಿಂದ ನಾವು ರೋಗಗಳಿಗೆ ಹೆಚ್ಚು ಒಳಗಾಗುತ್ತೇವೆ.
ಮನೆಯ ಒಳಗಿನ ವಾಯು ಮಾಲಿನ್ಯವು ಹೊರಾಂಗಣಕ್ಕಿಂತ ತೀವ್ರವಾಗಿರುತ್ತದೆ. ನಾವು ನಮ್ಮ ಮನೆಯೇ ಸುರಕ್ಷಿತ ಎಂದುಕೊಳ್ಳುತ್ತೇವೆ ಆದರೆ ಅದು ತಪ್ಪು, ನಾವು ಗಾಳಿಯ ಗುಣಮಟ್ಟದ ಕಾಳಜಿ ವಹಿಸುವುದನ್ನು ನಿರ್ಲಕ್ಷಿಸುತ್ತೇವೆ, ಆದ್ದರಿಂದ ನಾವು ರೋಗಗಳಿಗೆ ಹೆಚ್ಚು ಒಳಗಾಗುತ್ತೇವೆ.
ವಾಯುಮಾಲಿನ್ಯದಿಂದ ಪ್ರತಿ ವರ್ಷವೂ 4.5 ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ. ಏರ್ ಕ್ವಾಲಿಟಿ ಆಫ್ ಇಂಡೆಕ್ಸ್ ಪ್ರಕಾರ ವಾಯು ಮಾಲಿನ್ಯವು ಮನುಷ್ಯನ ಜೀವಿತಾವಧಿಯನ್ನು ಐದು ವರ್ಷ ಕಡಿಮೆ ಮಾಡಿದೆ. ಇದೀಗ ಕೊರೊನಾದಿಂದಾಗಿ ಸಾಕಷ್ಟು ಮಂದಿ ವರ್ಕ್ ಫ್ರ ಹೋಂನಲ್ಲಿದ್ದಾರೆ, ಹಾಗಾದರೆ ಮನೆಯಲ್ಲಿ ಒಳ್ಳೆಯ ವಾತಾವರಣವುದೆಯೇ?, ಮನೆಯಲ್ಲಿರುವ ಗಾಳಿ ಶುದ್ಧವಿದೆಯೇ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಖಂಡಿತವಾಗಿಯೂ ನೀವು ಮನೆಯೊಳಗೆ ಸೇವಿಸುವ ಗಾಳಿ ಶುದ್ಧವಿಲ್ಲ.
ಉಸಿರಾಟದ ವ್ಯವಸ್ಥೆಯು ನಾವು ಉಸಿರಾಡುವ ಎಲ್ಲಾ ಹಾನಿಕಾರಕ ಕಣಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ, ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸುತ್ತಮುತ್ತಲಿನ ವಾತಾವರಣವನ್ನು ಸುಧಾರಿಸುವುದು ನಮ್ಮ ಉದ್ದೇಶವಾಗಿರಬೇಕು.
ಕ್ಲೀನ್ ಕಾರ್ಪೆಟ್ಗಳು ಮನೆಯನ್ನು ಸದಾ ಶುಚಿಯಾಗಿಟ್ಟುಕೊಳ್ಳಿ, ಕ್ಲೀನ್ ಕಾರ್ಪೆಟ್ಗಳನ್ನು ಹಾಸಿ. ವಾರಕ್ಕೊಮ್ಮೆಯಾದರೂ ಮನೆಯ ಮ್ಯಾಟ್ಗಳನ್ನು ಬದಲಾಯಿರಿ ಹಾಗೂ ಕರ್ಟನ್ಗಳನ್ನು ಶುಚಿಗೊಳಿಸಿ.
ಗಾಳಿಯನ್ನು ಶುದ್ಧೀಕರಿಸಿ ಒಳಗೆ ಬರುವ ಗಾಳಿಯನ್ನು ನೀವು ನಿಯಂತ್ರಿಸಿದರೆ ಎಷ್ಟು ಚೆನ್ನಾಗಿರುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ತಾಜಾ ಗಾಳಿಯಲ್ಲಿ ಉಸಿರಾಡಲು ನೀವು ಕಿಟಕಿಗಳನ್ನು ತೆರೆಯಲು ಬಯಸಿದರೆ, ನೀವು ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಕಣಗಳನ್ನು ಶುದ್ಧೀಕರಿಸಬಹುದು.
ಗಿಡಗಳು ಹಸಿರು ಗಿಡಗಳನ್ನು ಹೆಚ್ಚಾಗಿ ಬೆಳೆಸಿ, ಮನೆಯ ಸುತ್ತಮುತ್ತ ಜಾಗವಿದ್ದರೆ ಬಾಳೆಗಿಡದಂತಹ ಸಸ್ಯಗಳನ್ನು ನೆಡಿ. ಇವು ನಿಮಗೆ ಶುದ್ಧಗಾಳಿಯನ್ನು ನೀಡಲು ಸಹಕರಿಸಬಲ್ಲದು. ಗಿಡಗಳು ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಕೊಂಡು ನಮಗೆ ಆಮ್ಲಜನಕವನ್ನು ನೀಡುತ್ತವೆ. ಬಾಳೆಗಿಡ, ಮಾವಿನ ಮರ, ತುಳಸಿ, ಕಹಿಬೇವು, ತೆಂಗಿನ ಮರ, ಮಲ್ಲಿಗೆ ಗಿಡ, ಅಶೋಕಾ ಗಿಡ, ಪಾರಿಜಾತ ಗಿಡಗಳನ್ನು ಮನೆಯ ಸುತ್ತಲೂ ನೆಡಬೇಕು.
ಜೀವನಶೈಲಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ