ವೈನ್ (Wine)ಸೇರಿದಂತೆ ಎಲ್ಲಾ ರೀತಿಯ ಆಲ್ಕೋಹಾಲ್ ಯುಕ್ತ ಪಾನೀಯಗಳಿಂದ ಕ್ಯಾನ್ಸರ್( Cancer) ಅಪಾಯವಿದೆ ಎಂದು ಸಂಶೋಧನೆಯೊಂದು ಹೇಳಿದೆ. ಆದರೆ ಈ ಕುರಿತು ಜನರಿಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ, ಎಥೆನಾಲ್, ಬಿಯರ್, ಲಿಕ್ಕರ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಸ್ತನ ಕ್ಯಾನ್ಸರ್, ಬಾಯಿ ಮತ್ತು ಕರುಳಿನ ಕ್ಯಾನ್ಸರ್ ಸೇರಿದಂತೆ ಒಟ್ಟು 7 ಕ್ಯಾನ್ಸರ್ಗಳಿಗೆ ಆಲ್ಕೋಹಾಲ್ ಸೇವನೆಯೇ ಕಾರಣ ಎಂದು ಹೇಳಲಾಗಿದೆ.
ಯುಎಸ್‌ನಲ್ಲಿ ನಡೆದ ಸಂಶೋಧನೆಯಲ್ಲಿ ಕ್ಯಾನ್ಸರ್‌ಗೆ ಆಲ್ಕೋಹಾಲ್ ಒಂದು ಅಪಾಯಕಾರಿ ಅಂಶವಾಗಿದೆ ಎಂದು ತಿಳಿಸಿತ್ತು ಆದರೆ ಅಲ್ಲಿನ ಜನತೆಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲ. ಲಿಕ್ಕರ್ನಿಂದ ಕ್ಯಾನ್ಸರ್ ಅಪಾಯವಿದೆ ಎಂದು ಶೇ. 31.2 ರಷ್ಟು ವಯಸ್ಕರು ಅಪಾಯದ ಬಗ್ಗೆ ತಿಳಿದಿದ್ದಾರೆ, ನಂತರ ಬಿಯರ್ (ಶೇ. 24.9) ಮತ್ತು ವೈನ್ (ಶೇ. 20.3) ರಷ್ಟು ಮಂದಿ ತಿಳಿದಿದ್ದಾರೆ.
ಮತ್ತಷ್ಟು ಓದಿ:Breast Cancer: ಸ್ತನ ಕ್ಯಾನ್ಸರ್ ಚಿಕಿತ್ಸೆ ನಂತರದ ಆರೋಗ್ಯಕರ ಜೀವನಕ್ಕೆ ಇಲ್ಲಿದೆ ಸಲಹೆಗಳು
ಶೇ. 10 ರಷ್ಟು ವಯಸ್ಕರು ವೈನ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ನಂಬಿದ್ದಾರೆ, ಆದರೆ ಶೇ. 2.2 ರಷ್ಟು ಬಿಯರ್ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು 1.7 ಮದ್ಯವು ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.
ಅಮೆರಿಕನ್ ಅಸೋಸಿಯೇಷನ್ ಫಾರ್ ಕ್ಯಾನ್ಸರ್ ರಿಸರ್ಚ್‌ನ ಜರ್ನಲ್‌ನ ಕ್ಯಾನ್ಸರ್ ಸಾಂಕ್ರಾಮಿಕಶಾಸ್ತ್ರ, ಬಯೋಮಾರ್ಕರ್ಸ್ ಮತ್ತು ಪ್ರಿವೆನ್ಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 50 ಪ್ರತಿಶತಕ್ಕೂ ಹೆಚ್ಚು ವಯಸ್ಕರು ಈ ಆಲ್ಕೋಹಾಲ್ ಮಿಶ್ರಿತ ಪಾನೀಯಗಳಿಂದ ಕ್ಯಾನ್ಸರ್ ಅಪಾಯವಿದೆ ಎಂಬುದನ್ನು ಅರಿತಿಲ್ಲ.
ವೈನ್ ಸೇರಿದಂತೆ ಎಲ್ಲಾ ರೀತಿಯ ಆಲ್ಕೋಹಾಲ್ಯುಕ್ತ ಪಾನೀಯಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. ಆಲ್ಕೋಹಾಲ್ ಸೇವನೆಯ ಕ್ಯಾನ್ಸರ್ ಅಪಾಯಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಸಂಶೋಧನೆ ಒತ್ತಿ ಹೇಳಿದೆ.
ಆಲ್ಕೋಹಾಲ್ ಕ್ಯಾನ್ಸರ್ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದರ ಕುರಿತು ಸಾರ್ವಜನಿಕರಿಗೆ ಶಿಕ್ಷಣ ನೀಡುವುದು, ಅತಿಯಾದ ಮದ್ಯದ ಬಳಕೆ ತಡೆಗಟ್ಟುವುದು ಜತೆಗೆ ಕ್ಯಾನ್ಸರ್‌ಗೆ ಸಂಬಂಧಿತ ಮರಣವನ್ನು ಕಡಿಮೆ ಮಾಡಬೇಕು ಎಂದು ಸಂಶೋಧಕ ಕ್ಲೈನ್ ಹೇಳಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ