ನೀವು ಸಿಹಿ ಅಂಶವನ್ನು ಹೆಚ್ಚಾಗಿ ಸೇವನೆ ಮಾಡುತ್ತಿದ್ದೀರಿ ಎಂಬುದಕ್ಕೆ ದೇಹದಲ್ಲಿ ಕಂಡುಬರುವ ಈ ಲಕ್ಷಣಗಳೇ ಸಾಕ್ಷಿ!

ದೇಹದಲ್ಲಿ ಹೆಚ್ಚಿನ ಸಕ್ಕರೆ ಮಟ್ಟದಿಂದ ಉಂಟಾಗುವ ಅಪಾಯಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ದೇಹದಲ್ಲಿನ ಹೆಚ್ಚುವರಿ ಸಕ್ಕರೆ ಅಥವಾ ಸಿಹಿ ಅಂಶ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಗ್ಲೂಕೋಸ್ ಸಂಗ್ರಹವಾದಾಗ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಹೆಚ್ಚಿನ ಸಕ್ಕರೆ ಬೊಜ್ಜು, ಮೂತ್ರಪಿಂಡದ ಸಮಸ್ಯೆಗಳು ಮತ್ತು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಇವೆಲ್ಲವೂ ಒಂದಕ್ಕೊಂದು ಕೊಂಡಿ ಇದ್ದಂತೆ ಹಾಗಾಗಿ, ನಾವು ಸೇವನೆ ಮಾಡುವ ಸಿಹಿ ಅಂಶದ ಮೇಲೆ ನಿಗಾ ವಹಿಸುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಈ ಬಗ್ಗೆ ಯಾವ ರೀತಿಯಲ್ಲಿ ಗಮನಹರಿಸಬೇಕು, ನಮ್ಮ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿರುವುದನ್ನು ಹೇಗೆ ತಿಳಿಯಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನೀವು ಸಿಹಿ ಅಂಶವನ್ನು ಹೆಚ್ಚಾಗಿ ಸೇವನೆ ಮಾಡುತ್ತಿದ್ದೀರಿ ಎಂಬುದಕ್ಕೆ ದೇಹದಲ್ಲಿ ಕಂಡುಬರುವ ಈ ಲಕ್ಷಣಗಳೇ ಸಾಕ್ಷಿ!
Signs Of Excessive Sugar Intake

Updated on: Oct 30, 2025 | 7:24 PM

ನಮ್ಮ ಆರೋಗ್ಯ (Health) ಚೆನ್ನಾಗಿರಬೇಕು ಎಂದರೆ ಮೊದಲು ಒಳ್ಳೆಯ ಆಹಾರಗಳ ಸೇವನೆ ಮಾಡಬೇಕು. ಅದರಲ್ಲಿಯೂ ಸಕ್ಕರೆ (Sugar) ಮತ್ತು ಉಪ್ಪಿನ ಸೇವನೆ ಮಿತದಲ್ಲಿರಬೇಕು. ಇಲ್ಲವಾದಲ್ಲಿ ನಾನಾ ರೀತಿಯ ಸಮಸ್ಯೆಗಳು, ಆಹ್ವಾನ ನೀಡದಿದ್ದರೂ ಬರುತ್ತದೆ. ಸಾಮಾನ್ಯವಾಗಿ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾದರೆ ಉಂಟಾಗುವ ಅಪಾಯಗಳ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ದೇಹದಲ್ಲಿನ ಹೆಚ್ಚುವರಿ ಸಕ್ಕರೆ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಗ್ಲೂಕೋಸ್ ಸಂಗ್ರಹವಾದಾಗ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಹೆಚ್ಚಿನ ಸಕ್ಕರೆ ಬೊಜ್ಜು, ಮೂತ್ರಪಿಂಡದ ಸಮಸ್ಯೆಗಳು ಮತ್ತು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಆದ್ದರಿಂದ, ನಾವು ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡುತ್ತೇವೆ ಎಂಬುದರ ಬಗ್ಗೆ ಹೆಚ್ಚಿನ ಗಮನ ನೀಡುವುದು ಬಹಳ ಮುಖ್ಯವಾಗುತ್ತದೆ. ಆದರೆ ಈ ಬಗ್ಗೆ ಯಾವ ರೀತಿ ಗಮನಹರಿಸಬೇಕು, ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿರುವುದನ್ನು ಹೇಗೆ ತಿಳಿಯಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದರೆ, ಅದು ಕೆಲವು ಲಕ್ಷಣಗಳ ಮೂಲಕ ಪ್ರಕಟವಾಗುತ್ತದೆ. ಇವುಗಳನ್ನು ಸರಿಯಾಗಿ ಗುರುತಿಸುವ ಮೂಲಕ, ನೀವು ಸಿಹಿ ಅಂಶವನ್ನು ಹೆಚ್ಚಾಗಿ ಸೇವನೆ ಮಾಡುತ್ತಿದ್ದೀರೋ, ಇಲ್ಲವೋ ಎಂಬುದನ್ನು ಕಂಡುಕೊಳ್ಳಬಹುದು. ಬಳಿಕ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ, ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಮತ್ತು ಮಧುಮೇಹ ಬರದಂತೆ ತಡೆಯಬಹುದು. ಹಾಗಾದರೆ ದೇಹದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಾದಾಗ ಕಾಣಿಸಿಕೊಳ್ಳುವ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ಹಸಿವು ಕಡಿಮೆಯಾಗುತ್ತದೆ

ಹೆಚ್ಚು ಸಕ್ಕರೆ ಸೇವಿಸುವುದರಿಂದ ದೇಹದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆ ಮತ್ತು ಮುಖದಲ್ಲಿ ಮೊಡವೆಗಳು ಮೂಡಬಹುದು. ಈ ರೀತಿ ಮೊಡವೆ ಅಥವಾ ಅತಿಸಾರ ಇದ್ದಕ್ಕಿದ್ದಂತೆ ಕಾಣಿಸಿಕೊಂಡರೆ, ಸಕ್ಕರೆ ಅಥವಾ ಸಿಹಿ ಅಂಶವಿರುವ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು. ಸಾಮಾನ್ಯವಾಗಿ ಸಿಹಿ ಅಂಶವಿರುವ ಆಹಾರವನ್ನು ಸೇವನೆ ಮಾಡುವುದರಿಂದ ಕ್ಯಾಲೊರಿಗಳು ಹೆಚ್ಚಾಗುತ್ತವೆ ಇದರಿಂದ ಹಸಿವು ಕಡಿಮೆಯಾಗುತ್ತದೆ. ನಿಮಗೂ ದಿನೇ ದಿನೇ ಹಸಿವು ಕಡಿಮೆಯಾಗುತ್ತಿದ್ದರೆ ಅಥವಾ ನಿಮಗೆ ಹೆಚ್ಚೆಚ್ಚು ಸಿಹಿತಿಂಡಿಗಳನ್ನು ಸೇವನೆ ಮಾಡುವ ಬಯಕೆಯಾಗುತ್ತಿದ್ದರೆ ಅಂತಹ ಅಂಶಗಳ ಬಗ್ಗೆ ಎಂದಿಗೂ ನಿರ್ಲಕ್ಷ್ಯ ವಹಿಸಬೇಡಿ. ಜೊತೆಗೆ ಸಕ್ಕರೆ ಅಧಿಕವಾಗಿರುವ ಆಹಾರವನ್ನು ಸೇವಿಸುವುದರಿಂದ ದೇಹದ ತೂಕ ಕೂಡ ಹೆಚ್ಚಾಗುತ್ತದೆ. ಹಾಗಾಗಿ ಯಾವುದೇ ರೀತಿಯ ಕಾರಣವಿಲ್ಲದೆ ತೂಕ ಹೆಚ್ಚಾಗುತ್ತಿದ್ದರೆ, ಸಕ್ಕರೆಯೇ ಅದಕ್ಕೆ ಕಾರಣವಾಗಿರುತ್ತದೆ.

ಇದನ್ನೂ ಓದಿ: ಪ್ಯಾಕೇಜ್ಡ್‌ ಮಾತ್ರವಲ್ಲ ಹೋಮ್‌ಮೇಡ್‌ ಬಿಸ್ಕೆಟ್‌ಗಳನ್ನೂ ಪ್ರತಿನಿತ್ಯ ತಿನ್ನೋದು ಒಳ್ಳೆಯದಲ್ಲ

ಮೆಗ್ನೀಸಿಯಮ್ ಮಟ್ಟವನ್ನು ಕಡಿಮೆ ಮಾಡುತ್ತದೆ

ಬಿಳಿ ಸಕ್ಕರೆ ಸೈಟೊಕಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಕಿರಿಕಿರಿ ಮತ್ತು ಆಯಾಸಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಅಂತಹ ಲಕ್ಷಣಗಳು ಕಾಣಿಸಿಕೊಂಡಾಗ, ನೀವು ಹೆಚ್ಚು ಸಿಹಿ ಅಂಶವನ್ನು ಸೇವನೆ ಮಾಡುತ್ತಿದ್ದೀರೋ, ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು. ಏಕೆಂದರೆ ಅತಿಯಾದ ಸಕ್ಕರೆ ಸೇವನೆಯು ದೇಹದಲ್ಲಿ ಮೆಗ್ನೀಸಿಯಮ್ ಮಟ್ಟವನ್ನು ಕಡಿಮೆ ಮಾಡುತ್ತದೆ. ನಿದ್ರೆಗೆ ಮೆಗ್ನೀಸಿಯಮ್ ಅವಶ್ಯಕವಾಗಿರುವುದರಿಂದ ಇದರ ಕೊರತೆ, ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆದ್ದರಿಂದ, ನಿದ್ರೆಯ ಚಕ್ರದಲ್ಲಿ ಬದಲಾವಣೆಗಳಿದ್ದರೆ, ನೀವು ಸಕ್ಕರೆಯನ್ನು ಹೆಚ್ಚು ಸೇವನೆ ಮಾಡುತ್ತಿದ್ದೀರಿ ಎಂದರ್ಥ.

ಸಿಹಿ ಅಂಶ ಸಂಪೂರ್ಣವಾಗಿ ತ್ಯಜಿಸಬೇಕೇ, ಬೇಡವೇ?

ಸಾಮಾನ್ಯವಾಗಿ ತೂಕ ಹೆಚ್ಚಾಗುತ್ತದೆ ಅಥವಾ ಮಧುಮೇಹದ ಭಯ ಸೇರಿದಂತೆ ವಿವಿಧ ಕಾರಣಗಳಿಂದ ಅನೇಕರು ಸಕ್ಕರೆ ಅಥವಾ ಸಿಹಿ ಅಂಶವಿರುವ ಆಹಾರಗಳ ಸೇವನೆಯನ್ನು ಸಂಪೂರ್ಣವಾಗಿ ತಪ್ಪಿಸುತ್ತಾರೆ. ಆದರೆ ನಿಮಗೆ ತಿಳಿದಿರಲಿ, ದೇಹಕ್ಕೆ ಸಿಹಿ ಅಂಶದ ಅಗತ್ಯವಿದೆ. ಆದ್ದರಿಂದ, ನೀವು ಹಣ್ಣು ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸಬೇಕು. ಅವು ದೇಹಕ್ಕೆ ನೈಸರ್ಗಿಕ ಸಕ್ಕರೆ ಅಂಶವನ್ನು ಒದಗಿಸುತ್ತವೆ ಮತ್ತು ಯಾವುದೇ ರೀತಿಯ ಹಾನಿಯನ್ನು ಕೂಡ ಉಂಟುಮಾಡುವುದಿಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ