Summer Season Tips: ಬೇಸಿಗೆಯಲ್ಲಿ ಈ ಆಹಾರಗಳನ್ನು ತಿನ್ನಲೇಬೇಕು! ಇವುಗಳನ್ನು ತಪ್ಪಿಸುವುದು ಒಳ್ಳೆಯದು

ಈ ಸಮಯದಲ್ಲಿ ನಾವು ಕೆಲವು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸಾಮಾನ್ಯವಾಗಿ ಜೀರ್ಣಕ್ರಿಯೆ ಸಮಸ್ಯೆಗಳಿಗೆ ಕಾರಣವಾಗುವ ಆಹಾರ ಮತ್ತು ಪಾನೀಯಗಳಿಗೆ ವಿಶೇಷ ಗಮನ ನೀಡಬೇಕು. ಇಲ್ಲವಾದಲ್ಲಿ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಕಂಡು ಬರುತ್ತದೆ. ಹೀಗಾಗಿ ಆರೋಗ್ಯಕರ ಆಹಾರ ಸೇವನೆ ಮಾಡುವುದು ಅನಿವಾರ್ಯ. ಇದು ಸವಾಲಿನಂತೆ ಕಂಡರೂ ಕೂಡ ಆರೋಗ್ಯ ಕಾಪಾಡಿಕೊಳ್ಳಲು ಇದು ಅವಶ್ಯವಾಗಿದೆ. ಹಾಗಾದರೆ ಬೇಸಿಗೆ ಕಾಲದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ಯಾವ ಪದಾರ್ಥಗಳ ಸೇವನೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

Summer Season Tips: ಬೇಸಿಗೆಯಲ್ಲಿ ಈ ಆಹಾರಗಳನ್ನು ತಿನ್ನಲೇಬೇಕು! ಇವುಗಳನ್ನು ತಪ್ಪಿಸುವುದು ಒಳ್ಳೆಯದು
ಸಾಂದರ್ಭಿಕ ಚಿತ್ರ
Edited By:

Updated on: Mar 06, 2025 | 11:14 AM

ಬೇಸಿಗೆ (Summer) ಕಾಲ ಆರಂಭವಾಗಿದೆ. ಅದೇ ರೀತಿ ಶಾಖದ ತೀವ್ರತೆಯೂ ಹೆಚ್ಚಾಗಿಯೇ ಇದೆ. ಈ ಸಮಯದಲ್ಲಿ ಆದಷ್ಟು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ನಮ್ಮ ಆಹಾರದ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಏಕೆಂದರೆ ಬೇಸಿಗೆ ಕಾಲ ಆರಂಭ ಆಗುವಾಗ ಪ್ರಕೃತಿಯಲ್ಲಿ ಅನೇಕ ರೀತಿಯ ಬದಲಾವಣೆಗಳು ಆಗುತ್ತದೆ. ಹಾಗಾಗಿ ಅವುಗಳಿಗೆ ನಾವು ಒಗ್ಗಿಕೊಳ್ಳಲು ಕೆಲವು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸಾಮಾನ್ಯವಾಗಿ ಜೀರ್ಣಕ್ರಿಯೆ ಸಮಸ್ಯೆಗಳಿಗೆ ಕಾರಣವಾಗುವ ಆಹಾರ ಮತ್ತು ಪಾನೀಯಗಳಿಗೆ ವಿಶೇಷ ಗಮನ ನೀಡಬೇಕು. ಇಲ್ಲವಾದಲ್ಲಿ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಕಂಡು ಬರುತ್ತದೆ. ಹೀಗಾಗಿ ಆರೋಗ್ಯಕರ ಆಹಾರ ಸೇವನೆ ಮಾಡುವುದು ಅನಿವಾರ್ಯ. ಇದು ಸವಾಲಿನಂತೆ ಕಂಡರೂ ಕೂಡ ಆರೋಗ್ಯ ಕಾಪಾಡಿಕೊಳ್ಳಲು ಇದು ಅವಶ್ಯವಾಗಿದೆ. ಹಾಗಾದರೆ ಬೇಸಿಗೆ ಕಾಲದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ಯಾವ ಪದಾರ್ಥಗಳ ಸೇವನೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

ಟೊಮೇಟೊ

ಈ ತರಕಾರಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದು ಇದರಲ್ಲಿ ವಿಟಮಿನ್ ಸಿ ಮತ್ತು ಹೆಚ್ಚಿನ ನೀರಿನ ಅಂಶವಿರುತ್ತದೆ. ಇದಲ್ಲದೆ, ಟೊಮೇಟೊಗಳು ಲೈಕೋಪೀನ್ ನಂತಹ ಪ್ರಯೋಜನಕಾರಿ ಫೈಟೊಕೆಮಿಕಲ್ ಗಳನ್ನು ಹೊಂದಿರುತ್ತವೆ, ಇದು ದೀರ್ಘಕಾಲದ ಕಾಯಿಲೆಗಳ ವಿರುದ್ಧ, ವಿಶೇಷವಾಗಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

ನಿಂಬೆ ರಸ

ಬೇಸಿಗೆಯಲ್ಲಿ ತಾಜಾ ತಾಜವಾಗಿ ಸಿಗುವ ತಣ್ಣನೆಯ ನಿಂಬೆ ರಸಕ್ಕಿಂತ ಹೆಚ್ಚು ಹಿತಕರವಾದುದು ಯಾವುದೂ ಇಲ್ಲ. ಇದು ಆರೋಗ್ಯ ಹೆಚ್ಚಿಸುವುದು ಮಾತ್ರವಲ್ಲ ನಮ್ಮನ್ನು ಹೈಡ್ರೇಟ್ ಆಗಿಡಲು ಉಪಯುಕ್ತವಾಗಿದೆ. ಇದನ್ನು ಜ್ಯೂಸ್ ರೂಪದಲ್ಲಿ ಸೇವನೆ ಮಾಡುವುದು ಬಹಳ ಒಳ್ಳೆಯದು.

ಇದನ್ನೂ ಓದಿ
ಮಾತ್ರೆಗಳಿಲ್ಲದೆ ತಲೆನೋವನ್ನು ಕಡಿಮೆ ಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್
ಕೀಲು ನೋವಿಗೆ ವೀಳ್ಯದೆಲೆ ನೀರಿನಲ್ಲಿದೆ ಪರಿಹಾರ
ವೈದ್ಯರು ನಿಯಮಿತವಾಗಿ ಆವಕಾಡೊ ಸೇವನೆ ಮಾಡಿ ಎನ್ನಲು ಕಾರಣವೇನು?
ಟ್ಯಾಟೂ ಹಾಕಿಸುವ ಮೊದಲು ಈ ಅಂಶ ನೆನಪಿನಲ್ಲಿರಲಿ

ಸೋರೆಕಾಯಿ

ಈ ತರಕಾರಿಯೂ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಇದರಲ್ಲಿ ಹೆಚ್ಚಿನ ನೀರಿನ ಅಂಶವಿದೆ. ಬೇಸಿಗೆಯಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಇರಲು ಈ ತರಕಾರಿ ಸಹಾಯ ಮಾಡುತ್ತದೆ.

ಬೇಸಿಗೆಯಲ್ಲಿ ಸೇವನೆ ಮಾಡಬಾರದ ಆಹಾರಗಳು:

ಸಾಮಾನ್ಯವಾಗಿ ಈ ಬೇಸಿಗೆಯಲ್ಲಿ ಆರೋಗ್ಯವಾಗಿರಲು ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ. ಕಾಲೋಚಿತ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿ ಮತ್ತು ಪೌಷ್ಟಿಕ ಆಹಾರ ತಿನ್ನುವುದನ್ನು ಮರೆಯಬೇಡಿ. ಆದರೆ ಇಲ್ಲಿ ಕೆಳಗೆ ನೀಡಿರುವ ಆಹಾರಗಳ ಸೇವನೆ ಮಾಡುವುದನ್ನು ಆದಷ್ಟು ತಪ್ಪಿಸಿ.

ಚಹಾ ಮತ್ತು ಕಾಫಿ

ಬೇಸಿಗೆಯಲ್ಲಿಯೂ ಅನೇಕರು ನಿರಂತರವಾಗಿ ನಾಲ್ಕರಿಂದ ಐದು ಕಪ್ ಚಹಾ ಅಥವಾ ಕಾಫಿ ಕುಡಿಯುತ್ತಾರೆ. ಅವುಗಳಲ್ಲಿರುವ ಕೆಫೀನ್ ಮತ್ತು ಸಕ್ಕರೆ ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಆರೋಗ್ಯವಾಗಿರಲು ಅವುಗಳಿಂದ ದೂರವಿರಿ. ಆಗದಿದ್ದಲ್ಲಿ ಮಿತಿಯಲ್ಲಿ ಸೇವನೆ ಮಾಡಿ. ಮಿತಿಮೀರಿದ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.

ಒಣ ಹಣ್ಣುಗಳು

ಡ್ರೈ ಫ್ರೂಟ್ಸ್ ಆರೋಗ್ಯಕರ ಮತ್ತು ಪೌಷ್ಟಿಕಾಂಶ ಸಮೃದ್ಧ ಆಹಾರವಾಗಿದೆ. ಆದರೆ ಬೇಸಿಗೆಯಲ್ಲಿ ಇವುಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು. ಏಕೆಂದರೆ ಇವು ದೇಹವನ್ನು ಬಿಸಿ ಮಾಡುವ ಆಹಾರವಾಗಿದ್ದು, ದೇಹದಲ್ಲಿ ಶಾಖವನ್ನು ಉತ್ಪಾದಿಸುತ್ತದೆ. ಪರಿಣಾಮವಾಗಿ, ಅವುಗಳನ್ನು ಸೇವನೆ ಮಾಡುವುದರಿಂದ ಅನೇಕ ರೀತಿಯ ಸಮಸ್ಯೆಗಳು ಉಂಟಾಗಬಹುದು.

ಇದನ್ನೂ ಓದಿ: ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟುಬಿಡಿ

ಮಾಂಸಾಹಾರಿ ಆಹಾರಗಳು

ಈ ಋತುವಿನಲ್ಲಿ ಅಂದರೆ ಬೇಸಿಗೆಯಲ್ಲಿ ಅತಿಯಾದ ಮಾಂಸ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಮೀನು, ಕೆಂಪು ಮಾಂಸ, ತಂದೂರಿ ಚಿಕನ್ ಅಥವಾ ಸಮುದ್ರಾಹಾರವನ್ನು ತಿನ್ನಲು ಬಯಸಿದಲ್ಲಿ, ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ತಿನ್ನುವುದು ಉತ್ತಮ.

ಜಂಕ್ ಫುಡ್

ಕೊಬ್ಬು, ಹೆಚ್ಚಿನ ಕ್ಯಾಲೊರಿ ಆಹಾರಗಳು ನಿಮ್ಮ ದೇಹ ಮತ್ತು ಜೀರ್ಣಕ್ರಿಯೆಗೆ ಹಾನಿ ಮಾಡಬಹುದು. ಚುರುಕಾದ ಆಯ್ಕೆಗಳು ಮಾತ್ರ ಬೇಸಿಗೆಯಲ್ಲಿ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಲು ನೆರವಾಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ