AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆಗೆ ಯಾವ ಎಣ್ಣೆ ಬಳಕೆ ಮಾಡಬೇಕು ಎನ್ನುವ ಗೊಂದಲಕ್ಕೆ ಡಾ. ಜಯೇಶ್ ಶರ್ಮಾ ನೀಡಿರುವ ಸಲಹೆ ಇಲ್ಲಿದೆ

ಅಡುಗೆಗೆ ಬಳಕೆ ಮಾಡುವ ಎಣ್ಣೆ ನಮ್ಮ ಇಷ್ಟದ ಆಯ್ಕೆ ಆಗುವ ಮೊದಲು ಆರೋಗ್ಯಕ್ಕೆ ಒಳ್ಳೆಯದಾಗಿರಬೇಕು. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಬೊಜ್ಜು(Obesity) ಹೆಚ್ಚುತ್ತಿರುವುದೇ ನಾವು ಬಳಸುವ ಅಡುಗೆ ಎಣ್ಣೆಗಳಿಂದಾಗಿದೆ. ಹಾಗಾಗಿ ನಮ್ಮ ಆರೋಗ್ಯ ಚೆನ್ನಾಗಿರಬೇಕು ಎಂದರೆ ನಾವು ಬಳಕೆ ಮಾಡುವ ಎಣ್ಣೆಯೂ ಆರೋಗ್ಯಕರವಾಗಿರಬೇಕು. ಹಾಗಾದರೆ ಯಾವ ಎಣ್ಣೆ ಅಡುಗೆಗೆ ಉತ್ತಮ? ದಿನನಿತ್ಯ ಯಾವ ರೀತಿಯ ಅಡುಗೆ ಎಣ್ಣೆ ಬಳಕೆ ಮಾಡಿದರೆ ಆರೋಗ್ಯ ಚೆನಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ತಜ್ಞರು ನೀಡಿದ ಮಾಹಿತಿ ಇಲ್ಲಿದೆ.

ಅಡುಗೆಗೆ ಯಾವ ಎಣ್ಣೆ ಬಳಕೆ ಮಾಡಬೇಕು ಎನ್ನುವ ಗೊಂದಲಕ್ಕೆ ಡಾ. ಜಯೇಶ್ ಶರ್ಮಾ ನೀಡಿರುವ ಸಲಹೆ ಇಲ್ಲಿದೆ
ಡಾ. ಜಯೇಶ್ ಶರ್ಮಾ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Mar 06, 2025 | 3:17 PM

Share

ದಿನನಿತ್ಯ ನಾವು ಅಡುಗೆಗೆ ಎಣ್ಣೆಯನ್ನು ಬಳಕೆ ಮಾಡುತ್ತೇವೆ. ಇದು ಎಲ್ಲರ ಮನೆಯಲ್ಲಿಯೂ ಸರ್ವೇ ಸಾಮಾನ್ಯ. ಆದರೆ ಎಲ್ಲರೂ ಒಂದೇ ರೀತಿಯ ಎಣ್ಣೆಯನ್ನು ಅಡುಗೆಗೆ ಬಳಸುವುದಿಲ್ಲ. ಕೆಲವರಿಗೆ ಎಲ್ಲಾ ಖಾದ್ಯಗಳಿಗೂ ತೆಂಗಿನಎಣ್ಣೆ(coconut oil) ಬಳಕೆ ಮಾಡುವುದು ಇಷ್ಟವಾಗುವುದಿಲ್ಲ. ಇನ್ನು ಕೆಲವರು ತಾಳೆ ಎಣ್ಣೆ ಅಥವಾ ಪಾಮ್‌ ಆಯಿಲ್‌(Palm oil) ಬಳಕೆ ಮಾಡಲು ಇಷ್ಟ ಪಡುತ್ತಾರೆ. ಹೀಗೆ ಆಯ್ಕೆಗಳು ಭಿನ್ನವಾಗಿರುತ್ತದೆ. ಹಾಗಾಗಿಯೇ ಮಾರುಕಟ್ಟೆಗಳಲ್ಲಿ ವಿವಿಧ ಬಗೆಯ ಎಣ್ಣೆಗಳನ್ನು ನಾವು ನೋಡಬಹುದು. ಆದರೆ ನಿಮಗೆ ತಿಳಿದಿರಲಿ, ಅಡುಗೆಗೆ ಬಳಕೆ ಮಾಡುವ ಎಣ್ಣೆ(cooking oil) ನಮ್ಮ ಇಷ್ಟದ ಆಯ್ಕೆ ಆಗುವ ಮೊದಲು ಆರೋಗ್ಯಕ್ಕೆ ಒಳ್ಳೆಯದಾಗಿರಬೇಕು. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಬೊಜ್ಜು(Obesity) ಹೆಚ್ಚುತ್ತಿರುವುದೇ ನಾವು ಬಳಸುವ ಅಡುಗೆ ಎಣ್ಣೆಗಳಿಂದಾಗಿದೆ. ಹಾಗಾಗಿ ನಮ್ಮ ಆರೋಗ್ಯ ಚೆನ್ನಾಗಿರಬೇಕು ಎಂದರೆ ನಾವು ಬಳಕೆ ಮಾಡುವ ಎಣ್ಣೆಯೂ ಆರೋಗ್ಯಕರವಾಗಿರಬೇಕು. ಹಾಗಾದರೆ ಯಾವ ಎಣ್ಣೆ ಅಡುಗೆಗೆ ಉತ್ತಮ? ದಿನನಿತ್ಯ ಯಾವ ರೀತಿಯ ಅಡುಗೆ ಎಣ್ಣೆ ಬಳಕೆ ಮಾಡಿದರೆ ಆರೋಗ್ಯ ಚೆನಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ತಜ್ಞರು ನೀಡಿದ ಮಾಹಿತಿ ಇಲ್ಲಿದೆ.

ಡಾ. ಜಯೇಶ್ ಶರ್ಮಾ ಎಂಬುವವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ವಿಚಾರವಾಗಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಆಹಾರ ಮತ್ತು ಪೌಷ್ಠಿಕಾಂಶಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ವಿವರವಾಗಿ ತಿಳಿಸಿದ್ದಾರೆ. ಅವರು ಹೇಳಿರುವ ಪ್ರಕಾರ, “ಜನರು ಆರೋಗ್ಯಕರ ಜೀವನ ನಡೆಸಲು ಮೊದಲು ತಮ್ಮ ಆಹಾರ ಮತ್ತು ಜೀವನ ಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಅದಲ್ಲದೆ ಆಹಾರದಲ್ಲಿ ಎಣ್ಣೆ ಮತ್ತು ತುಪ್ಪದ ಬಳಕೆಗೆ ಸಂಬಂಧಿಸಿ ಹಲವು ರೀತಿಯಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಅಡುಗೆಗೆ ಯಾವ ಎಣ್ಣೆಯನ್ನು ಬಳಸಬೇಕು ಮತ್ತು ಯಾವ ಎಣ್ಣೆಯನ್ನು ಬಳಸಬಾರದು ಎಂದು ತಿಳಿಯದೆಯೇ ಅಡುಗೆಯ ರುಚಿ ಹೆಚ್ಚಿಸಲು ಹೆಣಗಾಡುತ್ತಿದ್ದಾರೆ. ಆದರೆ ಇದು ತಪ್ಪು. ಸಾಮಾನ್ಯವಾಗಿ ಯಾವುದೇ ಎಣ್ಣೆಯಾಗಲಿ, ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದರೆ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದರೂ, ಇರುವುದರಲ್ಲಿ ಯಾವುದು ಒಳ್ಳೆಯದು? ಮಿತ ಸೇವನೆಗೆ ಯಾವುದು ಒಳ್ಳೆಯದು ಎಂಬುದರ ಬಗ್ಗೆ ನಾವು ತಿಳಿದುಕೊಳ್ಳಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
ಹೊಟ್ಟೆ ಎಷ್ಟೇ ದಪ್ಪವಿದ್ದರೂ ಕರಗಿಸಲು ಇಲ್ಲಿದೆ ಸರಳ ಉಪಾಯ
Image
ಈ ಒಣಹಣ್ಣನ್ನು ನೆನೆಸಿಟ್ಟು ತಿಂದರೆ ತೂಕ ಇಳಿಯೋದು ಗ್ಯಾರಂಟಿ
Image
ನೀರು ಕುಡಿದರೆ ತೂಕ ಕಡಿಮೆ ಆಗುತ್ತಾ? ತಜ್ಞರು ಹೇಳುವುದೇನು?
Image
ಮಕ್ಕಳಲ್ಲಿ ‘ಬೊಜ್ಜು’ ಬರುಲು ಪೋಷಕರೇ ಕಾರಣ, ಅದು ಹೇಗೆ?

ಡಾ. ಜಯೇಶ್ ಶರ್ಮಾ ಅವರು ಸಾಸಿವೆ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದು ಏಕೆ? ಇದನ್ನು ಬಳಸುವುದರಿಂದ ಸಿಗುವ ಪ್ರಯೋಜನಗಳೇನು? ಜೊತೆಗೆ ತಾಳೆ ಎಣ್ಣೆಯಿಂದ ಏಕೆ ದೂರವಿರಬೇಕು ಎಂಬುದಕ್ಕೆ ಕಾರಣಗಳನ್ನು ನೀಡಿದ್ದಾರೆ. ಅದಲ್ಲದೆ ದಿನನಿತ್ಯ ಅಡುಗೆಗೆ ಯಾವ ಎಣ್ಣೆ ಬಳಕೆ ಮಾಡುವುದು ಸೂಕ್ತ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ತುಪ್ಪ:

ಡಾ. ಜಯೇಶ್ ಶರ್ಮಾ ಅವರು ಹೇಳಿರುವ ಪ್ರಕಾರ, “90 ರ ದಶಕದಲ್ಲಿ, ತುಪ್ಪದಲ್ಲಿ ಡಾಲ್ಡಾ ಬಳಕೆಯಿಂದಾಗಿ ಇದಕ್ಕೆ ಕೆಟ್ಟ ಹೆಸರು ಬಂದಿತ್ತು. ಡಾಲ್ಡಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಈಗ ಶುದ್ಧ ತುಪ್ಪ ನಿಮಗೆ ಲಭ್ಯವಿದೆ. ಇದನ್ನು ಹೆಚ್ಚು ಅಲ್ಲ, ಕಡಿಮೆಯೂ ಅಲ್ಲ. ಮಧ್ಯಮ ಪ್ರಮಾಣದಲ್ಲಿ ಸೇವಿಸುವುದು ಬಹಳ ಒಳ್ಳೆಯದು. ಅಲ್ಲದೆ ಇದನ್ನು ಪರಿಮಳಕ್ಕಾಗಿ ಮತ್ತು ಸಿಹಿ ತಿಂಡಿಗಳನ್ನು ತಯಾರಿಸಲು ಬಳಸಬಹುದು” ಎಂದು ಅವರು ಹೇಳಿದ್ದಾರೆ.

ಸಾಸಿವೆ ಎಣ್ಣೆ:

ಈ ಎಣ್ಣೆಯಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಡಾ. ಜಯೇಶ್ ಶರ್ಮಾ ಹೇಳಿದ್ದಾರೆ. ಅಲ್ಲದೆ ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಉರಿಯೂತದ ಏಜೆಂಟ್ಗಳನ್ನು ಸಹ ಒಳಗೊಂಡಿದೆ. ಆಗಾಗ ಬಿಸಿ ಮಾಡಿದ ಸಾಸಿವೆ ಎಣ್ಣೆಯಿಂದ ಬರುವ ಹೊಗೆ ಒಳ್ಳೆಯದಲ್ಲ ಎಂಬ ಕಲ್ಪನೆಯಿದೆ. ಆದರೆ ಇದರಿಂದ ಯಾವುದೇ ಅಪಾಯವಿಲ್ಲ” ಎಂದು ವೈದ್ಯರು ತಿಳಿಸಿದ್ದಾರೆ.

ಕಡಲೆಕಾಯಿ ಎಣ್ಣೆ:

“ಭಾರತದ ಪಶ್ಚಿಮ ಭಾಗದಲ್ಲಿ ಸಾಮಾನ್ಯವಾಗಿ ಕಡಲೆಕಾಯಿ ಎಣ್ಣೆಯನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದು ಕೂಡ ಆರೋಗ್ಯಕರ ಆಯ್ಕೆಯಾಗಿದೆ. ಹೆಚ್ಚಿನ ತಾಪಮಾನವನ್ನು ನಿಭಾಯಿಸುವ ಶಕ್ತಿ ಈ ಎಣ್ಣೆಗಿದೆ. ಜೊತೆಗೆ ಇದು ಹೃದಯಕ್ಕೆ ಒಳ್ಳೆಯದು ಅಲ್ಲದೆ ಕ್ಯಾನ್ಸರ್ ತಡೆಗಟ್ಟಲು ಸಹ ಸಹಾಯ ಮಾಡುತ್ತದೆ ಎಂದು ಡಾ. ಜಯೇಶ್ ಶರ್ಮಾ ಹೇಳಿದ್ದಾರೆ.

ಡಾಲ್ಡಾ:

ಅಡುಗೆಗೆ ನಿಯಮಿತವಾಗಿ ಡಾಲ್ಡಾ ಬಳಕೆ ಮಾಡಬಾರದು. ಇದು ಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುತ್ತದೆ, ಮತ್ತು ಬಿಸಿ ಮಾಡಿದಾಗ ಟ್ರಾನ್ಸ್ ಕೊಬ್ಬಿನ ರಚನೆಗೆ ಕಾರಣವಾಗುತ್ತದೆ. ಅಲ್ಲದೆ, ಡಾಲ್ಡಾದಲ್ಲಿನ ಉರಿಯೂತದ ಏಜೆಂಟ್ಗಳು ದೇಹಕ್ಕೆ ಹಾನಿ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ನೀವು ಎಷ್ಟು ದಿನ ಬದುಕುತ್ತೀರಿ ಎಂಬುದನ್ನು ನಿಮ್ಮ ಉಗುರುಗಳು ಹೇಳುತ್ತವೆ! ಸಂಶೋಧನೆಯಿಂದ ಆಘಾತಕಾರಿ ಸಂಗತಿ ಬಹಿರಂಗ

ತಾಳೆ ಎಣ್ಣೆ:

ಈ ಎಣ್ಣೆಯು ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಉರಿಯೂತದ ಏಜೆಂಟ್ಗಳ ಹೆಚ್ಚಿನ ಮೂಲವಾಗಿದೆ, ಇದು ದೈನಂದಿನ ಬಳಕೆಗೆ ಒಳ್ಳೆಯದಲ್ಲ . ನಮ್ಮ ಮನೆಯಲ್ಲಿ ಆಹಾರಗಳನ್ನು ತಯಾರಿಸಲು ನಾವು ಆರೋಗ್ಯಕರ ಪರ್ಯಾಯಗಳನ್ನು ಆಯ್ಕೆ ಮಾಡಬಹುದಾದರೂ, ಹೊರಗಿನ ಹೆಚ್ಚಿನ ಆಹಾರ ಮತ್ತು ತಿಂಡಿಗಳನ್ನು ಡಾಲ್ಡಾ ಮತ್ತು ತಾಳೆ ಎಣ್ಣೆಯಲ್ಲಿ ತಯಾರಿಸಲಾಗುತ್ತದೆ. ಹಾಗಾಗಿ ಹೊರಗಡೆ ಆಹಾರ ಸೇವನೆ ಮಾಡುವುದನ್ನು ತಪ್ಪಿಸುವುದು ಉತ್ತಮ ಎಂದು ವೈದ್ಯರು ಹೇಳಿದ್ದಾರೆ.

ನಮಗೆ ಆರೋಗ್ಯಕರ ಅಡುಗೆ ಎಣ್ಣೆಗಳ ಆಯ್ಕೆಗಳಿದ್ದರೂ ಕೂಡ ಆದಷ್ಟು ಕಡಿಮೆ ಪ್ರಮಾಣದಲ್ಲಿ ಅಡುಗೆ ಎಣ್ಣೆ ಸೇವನೆ ಮಾಡುವುದು ಯಾವಾಗಲೂ ಉತ್ತಮ, ಏಕೆಂದರೆ ಎಷ್ಟು ಕಡಿಮೆ ಎಣ್ಣೆ ಉಪಯೋಗಿಸುತ್ತಿರೋ ಅಷ್ಟು ನಿಮ್ಮ ಹೃದಯಕ್ಕೆ ಒಳ್ಳೆಯದು ಅದಲ್ಲದೆ ಇದು ನಿಮ್ಮ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ದೇಹವು ದೀರ್ಘಕಾಲದ ಕಾಯಿಲೆಗಳಿಂದ ದೂರವಿರುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ