AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Finger Nail: ನೀವು ಎಷ್ಟು ದಿನ ಬದುಕುತ್ತೀರಿ ಎಂಬುದನ್ನು ನಿಮ್ಮ ಉಗುರುಗಳು ಹೇಳುತ್ತವೆ! ಸಂಶೋಧನೆಯಿಂದ ಆಘಾತಕಾರಿ ಸಂಗತಿ ಬಹಿರಂಗ

ಉಗುರುಗಳ ಬೆಳವಣಿಗೆಯು ಜೀವಿತಾವಧಿಗೆ ಸಂಬಂಧಿಸಿದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ನಿಮ್ಮ ದೀರ್ಘಾಯುಷ್ಯದ ರಹಸ್ಯವು ನಿಮ್ಮ ಕೈಯಲ್ಲಿಯೇ ಇದೆ. ನಿಮ್ಮ ಉಗುರುಗಳು ನಿಮ್ಮ ವಯಸ್ಸು ಮತ್ತು ಆರೋಗ್ಯವನ್ನು ಹೇಳುತ್ತವೆ. ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಸಂಶೋಧಕರು. ನಡೆಸಿದ ಅಧ್ಯಯನದಲ್ಲಿ ಈ ಸತ್ಯ ಬಹಿರಂಗಗೊಂಡಿದೆ. ಹಾಗಾದರೆ ಇದರಿಂದ ಮನುಷ್ಯನ ಸಾವು ಹೇಗೆ ನಿರ್ಧಾರವಾಗುತ್ತೆ? ಯಾರು ಹೆಚ್ಚು ಕಾಲ ಬದುಕುತ್ತಾರೆ? ಯಾರು ಬೇಗನೆ ಸಾಯುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Finger Nail: ನೀವು ಎಷ್ಟು ದಿನ ಬದುಕುತ್ತೀರಿ ಎಂಬುದನ್ನು ನಿಮ್ಮ ಉಗುರುಗಳು ಹೇಳುತ್ತವೆ! ಸಂಶೋಧನೆಯಿಂದ ಆಘಾತಕಾರಿ ಸಂಗತಿ ಬಹಿರಂಗ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Mar 06, 2025 | 2:16 PM

Share

ಮರಣ ಯಾವಾಗ, ಹೇಗೆ ಸಂಭವಿಸುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ ಆದರೂ ಕೂಡ ನಾವು ಎಷ್ಟು ಕಾಲ ಬದುಕಬಹುದು ಎಂಬುದನ್ನು ತಿಳಿಯಲು ಪ್ರತಿಯೊಬ್ಬರೂ ಕುತೂಹಲ ಹೊಂದಿರುತ್ತಾರೆ. ಆದರೆ ನಾವು ಎಷ್ಟು ದಿನ ಬದುಕಬಹುದು ಎಂದು ಯಾರನ್ನಾದರೂ ಕೇಳಿದಾಗ, ನಮಗೆ ಸಿಗುವ ಉತ್ತರ, ಜೀವನ ಮತ್ತು ಸಾವು ಎರಡೂ ಆ ದೇವರ ಕೈಯಲ್ಲಿದೆ. ನಾವು ಅವನ ಇಚ್ಛೆಯಂತೆ ನಡೆಯುವುದು ಮಾತ್ರ ಎಂದು ತಿಳಿದವರು ಹೇಳುವುದನ್ನು ನೀವು ಹಲವು ಬಾರಿ ಕೇಳಿರಬಹುದು. ಆದರೆ ಜೀವನ ಮತ್ತು ಸಾವಿನ ನಡುವಿನ ಸಂಬಂಧ ನಿಮ್ಮ ಉಗುರುಗಳಲ್ಲಿ ಅಡಗಿದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ನಾವು ಎಷ್ಟು ಕಾಲ ಬದುಕಬಹುದು ಎಂಬುದನ್ನು ಕಂಡುಕೊಳ್ಳಬಹುದು. ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಸಂಶೋಧಕರಾದ ಡೇವಿಡ್ ಸಿಂಕ್ಲೇರ್ ಎನ್ನುವವರು ಈ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಉಗುರುಗಳ ಬೆಳವಣಿಗೆಯ ಆಧಾರದ ಮೇಲೆ, ಮನುಷ್ಯನ ಸಾವು ನಿರ್ಧಾರವಾಗುತ್ತೆ ಒಬ್ಬ ವ್ಯಕ್ತಿಯು ಯಾವಾಗ ಸಾಯುತ್ತಾನೆ ಮತ್ತು ಅವನ ಜೀವಿತಾವಧಿ ಎಷ್ಟು ಕಾಲ ಇರುತ್ತದೆ ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ಆದರೆ ಇದಕ್ಕೆ ಉತ್ತರವನ್ನು ಈಗ ಜೆನೆಟಿಕ್ಸ್ ತಜ್ಞ ಡಾ. ಡೇವಿಡ್ ಸಿಂಕ್ಲೇರ್ ಕಂಡುಹಿಡಿದಿದ್ದಾರೆ. ಹೌದು, ಒಂದು ಅಧ್ಯಯನದ ಪ್ರಕಾರ, ಉಗುರುಗಳ ಆರೋಗ್ಯ ಮತ್ತು ಅವುಗಳ ಬೆಳವಣಿಗೆಯು ವ್ಯಕ್ತಿಯ ಜೀವಿತಾವಧಿಯನ್ನು ನಿರ್ಧರಿಸುತ್ತದೆ ಮತ್ತು ಅವನು ಯಾವಾಗ ಸಾಯುತ್ತಾನೆ ಎಂದು ಹೇಳುತ್ತದೆ ಎಂದು ಅವರು ಕಂಡುಕೊಂಡಿದ್ದಾರೆ.

ಯಾರು ಹೆಚ್ಚು ಕಾಲ ಬದುಕುತ್ತಾರೆ?

ಡಾ. ಡೇವಿಡ್ ಸಿಂಕ್ಲೇರ್ ಅವರ ಪ್ರಕಾರ, ನಿಮ್ಮ ಉಗುರುಗಳ ಆರೋಗ್ಯವು ದೇಹದಲ್ಲಿ ಹೊಸ ಜೀವಕೋಶಗಳು ರೂಪುಗೊಳ್ಳುವ ವೇಗವನ್ನು ತೋರಿಸುತ್ತದೆ ಎಂದು ಹೇಳಿದ್ದು, ಅವರ ಸಂಶೋಧನೆಯ ಪ್ರಕಾರ, ನಿಮ್ಮ ಉಗುರುಗಳು ವೇಗವಾಗಿ ಬೆಳೆಯುತ್ತಿದ್ದರೆ, ವಯಸ್ಸು ನಿಧಾನವಾಗಿ ಬೆಳೆಯುತ್ತಿದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಅಂದರೆ ನೀವು ಹೆಚ್ಚು ಕಾಲ ಬದುಕುತ್ತಿರಿ. ಹಾಗಾಗಿ ನಿಮ್ಮ ಉಗುರುಗಳ ಬೆಳವಣಿಗೆಯನ್ನು ಸರಿಯಾಗಿ ಗಮನಿಸುವುದು ಬಹಳ ಮುಖ್ಯವಾಗಿದೆ. ಇದರಿಂದ ನೀವು ಹೆಚ್ಚು ಕಾಲ ಬದುಕುತ್ತೀರೋ ಇಲ್ಲವೋ ಎಂಬುದನ್ನು ನೀವೇ ತಿಳಿದುಕೊಳ್ಳಬಹುದು.

ಇದನ್ನೂ ಓದಿ
Image
ಈಜುಕೊಳದಲ್ಲಿ ಪಲ್ಟಿ ಹೊಡೆದ 84 ರ ಹರೆಯದ ಅಜ್ಜಿ
Image
ಕುದುರೆಗೆ ಬಲವಂತವಾಗಿ ಸಿಗರೇಟ್ ಸೇದಿಸಿದ ಯುವಕರು
Image
ಚರಂಡಿಯಲ್ಲಿ ಸಿಲುಕಿದ್ದ ಹಸುವನ್ನು ರಕ್ಷಿಸಿದ ಹೃದಯವಂತ
Image
ಲೈಫ್​​ನ್ನು ಬ್ಯಾಚುರಲ್ ಇದ್ದಾಗಲೇ ಎಂಜಾಯ್ ಮಾಡಿ ಎಂದ ಪೊಲೀಸ್

ಇದನ್ನೂ ಓದಿ: ಬೇಸಿಗೆಯಲ್ಲಿ ಈ ಆಹಾರಗಳನ್ನು ತಿನ್ನಲೇಬೇಕು! ಇವುಗಳನ್ನು ತಪ್ಪಿಸುವುದು ಒಳ್ಳೆಯದು

ಯಾರು ಬೇಗನೆ ಸಾಯುತ್ತಾರೆ?

ಡಾ. ಡೇವಿಡ್ ಸಿಂಕ್ಲೇರ್ ಅವರ ಪ್ರಕಾರ, ಉಗುರುಗಳು ನಿಧಾನವಾಗಿ ಬೆಳೆಯುವವರು ಬೇಗನೆ ಸಾಯುತ್ತಾರೆ. ಆ ವ್ಯಕ್ತಿಗಳ ವಯಸ್ಸು ತುಲನಾತ್ಮಕವಾಗಿ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. ಅಂದರೆ ಉಗುರುಗಳ ಬೆಳವಣಿಗೆಯು ವ್ಯಕ್ತಿಯು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಒಬ್ಬ ವ್ಯಕ್ತಿಯ ಉಗುರುಗಳನ್ನು ನೋಡುವ ಮೂಲಕ, ಅವನೊಳಗೆ ಬೆಳೆಯುತ್ತಿರುವ ರೋಗವನ್ನು ಸಹ ಕಂಡುಹಿಡಿಯಬಹುದು. ಹಾಗಾಗಿ ಅವುಗಳ ಬೆಳವಣಿಗೆ ವ್ಯಕ್ತಿಯ ಆಯಸ್ಸನ್ನು ಹೇಳುತ್ತದೆ ಎಂದು ಅವರು ಹೇಳಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ