Beauty Tips: ಮುಖ ಕಾಂತಿ ಕಳೆದುಕೊಳ್ಳುತ್ತಿದೆಯೇ? ಚರ್ಮದ ಹೊಳಪು ಹೆಚ್ಚಿಸಲು ಇಲ್ಲಿದೆ ಸಿಂಪಲ್ ಟಿಪ್ಸ್​

| Updated By: Skanda

Updated on: May 22, 2021 | 7:11 AM

ಮುಖದ ತುಂಬ ಮೊಡವೆಗಳ ರಾಶಿ. ದಿನಕಳೆದಂತೆ ಮೊಡವೆಗಳು ಮಾಸಿ ಕಪ್ಪು ಚುಕ್ಕಿ ಕಾಣಿಸುತ್ತಿದೆ. ಇದರಿಂದಾಗಿ ಮುಖದ ಸುಂದರತೆ ಹಾಳಾಗುತ್ತಿದೆ. ಹೀಗಿರುವಾಗ ಮುಖದ ಕಾಂತಿ ಹೆಚ್ಚಿಸಿಕೊಳ್ಳು ಏನು ಮಾಡಬೇಕು ಎಂಬುದನ್ನು ನೋಡೋಣ.

Beauty Tips: ಮುಖ ಕಾಂತಿ ಕಳೆದುಕೊಳ್ಳುತ್ತಿದೆಯೇ? ಚರ್ಮದ ಹೊಳಪು ಹೆಚ್ಚಿಸಲು ಇಲ್ಲಿದೆ ಸಿಂಪಲ್ ಟಿಪ್ಸ್​
ಸಂಗ್ರಹ ಚಿತ್ರ
Follow us on

ಸುಂದರವಾಗಿ ಕಾಣಬೇಕು ಎಂಬುದು ಎಲ್ಲರ ಆಸೆ. ಹದಿಹರೆಯದ ಹುಡುಗ/ಹುಡಿಗುಯರಂತೂ ಮುಖ ಸುಂದರವಾಗಿ ಕಾಣಬೇಕೆಂದು ಅದೆಷ್ಟೋ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಗಳನ್ನು ಬಳಸುತ್ತಾರೆ. ಆದರೂ ಮುಖದ ಕಾಂತಿ ಹೆಚ್ಚುತ್ತಿಲ್ಲ. ಮುಖದ ತುಂಬ ಮೊಡವೆಗಳ ರಾಶಿ. ದಿನಕಳೆದಂತೆ ಮೊಡವೆಗಳು ಮಾಸಿ ಕಪ್ಪು ಚುಕ್ಕಿ ಕಾಣಿಸುತ್ತಿದೆ. ಇದರಿಂದಾಗಿ ಮುಖದ ಸುಂದರತೆ ಹಾಳಾಗುತ್ತಿದೆ. ಹೀಗಿರುವಾಗ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ಎಂಬುದನ್ನು ನೋಡೋಣ.

ಸುಡು ಬಿಸಿಲಿಗೆ ಬಿದ್ದಾಗ ಮಖದ ಕಾಂತಿ ಕಳೆದುಕೊಳ್ಳುವುದು ಸಹಜ. ಮುಖ ಜಡ್ಡಾದಂತೆ ಅನಿಸುತ್ತದೆ. ಕೆನ್ನೆ ಮುಟ್ಟಿದರೆ ಎಣ್ಣೆಯ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಇವೆಲ್ಲವೂ ಮುಖದ ಕಾಂತಿಯನ್ನು ಕಿತ್ತುಕೊಳ್ಳುತ್ತಿದೆ. ಹೀಗಿರುವಾಗ ಚರ್ಮದ ಆರೈಕೆ ಮುಖ್ಯ. ಆರೋಗ್ಯಕರ ದಿನಚರಿಯ ಮೂಲಕ ಬೇಸಿಗೆಯಲ್ಲೂ ಚರ್ಮದ ಆರೈಕೆ ಮಾಡಿಕೊಳ್ಳಿ. ವಿಧಾನ ಹೇಗೆ ಎಂಬುದನ್ನು ತಿಳಿಯೋಣ.

ಪ್ರತಿನಿತ್ಯ ಸ್ವಚ್ಛವಾಗಿ ಮುಖವನ್ನು ಶುದ್ಧೀಕರಿಸುವುದು
ಹವಾಮಾನವನ್ನು ಏರುಪೇರಾಗುತ್ತಿರುವ ಈ ಸಂದರ್ಭದಲ್ಲಿ ದಿನಕ್ಕೊಮ್ಮೆ ಮುಖವನ್ನು ಶುದ್ಧೀಕರಿಸುವುದು ಸಾಲುವುದಿಲ್ಲ. ದಿನಕ್ಕೆ ಎರಡು ಬಾರಿಯಾದರೂ ನಿಮ್ಮ ಮುಖವನ್ನು ಸ್ವಚ್ಛವಾಗಿ ತೊಳೆಯಿರಿ. ಹಾಗೆಯೇ ಹೊರಗಡೆ ಸುತ್ತಾಡಿ ಬಂದಿದ್ದರೆ ತಕ್ಕಣವೇ ನಿಮ್ಮ ಮುಖವನ್ನು ಶುದ್ಧೀಕರಿಸಿಕೊಳ್ಳಿ.

ಎಕ್ಸ್​ಫೋಲಿಯೇಟರ್​
ಔಷಧಿಗೆ ಹೆಚ್ಚಾಗಿ ಬಳಸುವ ಕಾಲೋಂಜಿ ಬೀಜದ ಪೇಸ್ಟ್​ ಜತೆಗೆ ಚೂರು ಹಾಲು ಸೇರಿಸಿ ಬಳಸಿ ಮುಖಕ್ಕೆ ಎಕ್ಸ್​ಫೋಲಿಯೇಟರ್ ಮಾಡಿ. ಇದು ಮುಖದ ರಂಧ್ರಗಳ ಆಳಕ್ಕೆ ಇಳಿದು, ಧೂಳಿನ ಕಣಗಳನ್ನು ಕಿತ್ತು ಹಾಕುತ್ತದೆ. ಇದರಿಂದ ಮುಖದಲ್ಲಿನ ರಂಧ್ರಗಳನ್ನು ವಾಸಿ ಮಾಡಲು ಸಾಧ್ಯ. ಹಾಗೂ ಮುಖದಲ್ಲಿ ಕಂಡುಬರುವ ಎಣ್ಣೆಯುಕ್ತ ಚರ್ಮದ ನಿವಾರಣೆಗಾಗಿ ನಿಂಬೆ ರಸವನ್ನು ಸೇರಿಸಬಹುದು. ಹಾಗೂ ಕಣ್ಣಿನ ತಂಪಿಗೆ ಕತ್ತರಿಸದ ಸೌತೆಕಾಯಿ ಭಾಗವನ್ನು ಮುಚ್ಚಿದ ಕಣ್ಣುಗಳ ಮೇಲಿರಿಸಿಕೊಳ್ಳಿ. ಹಾಗೆಯೇ ಇನ್ನೊಂದು ಚೂರನ್ನು ಮುಖಕ್ಕೆ ನಯವಾಗಿ ಸವರಿಕೊಳ್ಳಿ.

ಸನ್​ ಪ್ರೊಟೆಕ್ಷನ್​ ಕ್ರೀಮ್​
ಬೇಸಿಗೆಯಲ್ಲಿ ಚರ್ಮದ ರಕ್ಷಣೆಗೆ ಮುಖ್ಯವಾಗಿ ಸನ್​ಸ್ಕ್ರೀನ್​ ಅಳವಡಿಕೆಯನ್ನು ರೂಢಿಯಲ್ಲಿಟ್ಟುಕೊಳ್ಳುವುದು ಉತ್ತಮ. ನೀವು ಬಳಸುವ ಕ್ರೀಮ್​ ಸೂರ್ಯನ ಕಿರಣಗಳಿಂದ ರಕ್ಷಿಸಬೇಕು ಜತೆಗೆ ನಿಮ್ಮ ಮುಖಕ್ಕೆ ಒಗ್ಗುವಂತಿರಬೇಕು. ನಿಮ್ಮ ಚರ್ಮಕ್ಕೆ ಅನುಗುಣವಾಗಿ ಒಗ್ಗುವ ಸನ್​ಸ್ಕ್ರೀನ್​ ಬಳಕೆ ಮಾಡಿಕೊಳ್ಳಿ.

ಚರ್ಮದ ಆರೈಕೆ
ನೈಸರ್ಗಿಕವಾಗಿ ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಬಳಸುವ ಮೂಲಕ ಚರ್ಮದ ರಕ್ಷಣೆ ಮಾಡಿಕೊಳ್ಳಿ. ಹೆಚ್ಚು ತಾಜಾ ಹಣ್ಣುಗಳನ್ನೇ ಸೇವಿಸಿ. ಪುದೀನಾ ಎಲೆಯ ರಸವನ್ನು ಮುಖಕ್ಕೆ ಹಚ್ಚಿಕೊಳ್ಳುವುದರ ಮೂಲಕವಾಗಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಜತೆಗೆ ಪ್ರೊಟೀನ್​ಯುಕ್ತ ಆಹಾರವನ್ನು ಹೆಚ್ಚು ಸೇವಿಸುವುದು ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Beauty Tips: ಬಿಸಿಲ ಬೇಗೆಯಿಂದ ತಣಿಯಲು ಬಳಸಿ ಮನೆಮದ್ದು; ಮುಖದ ಕಾಂತಿ ಹೆಚ್ಚಿಸಲು ಇಲ್ಲಿದೆ ಸಲಹೆ