Walking Benefits: ರಾತ್ರಿ ಊಟವಾದ ತಕ್ಷಣ ಮಲಗಬೇಡಿ, 10 ನಿಮಿಷಗಳ ಕಾಲ ವಾಕಿಂಗ್ ಮಾಡಿ

| Updated By: ನಯನಾ ರಾಜೀವ್

Updated on: Aug 25, 2022 | 8:30 AM

ಊಟವಾದ ತಕ್ಷಣವೇ ಮಲಗುವುದರ ಬದಲು ಸುಮಾರು 10 ನಿಮಿಷಗಳ ಕಾಲ ನಡೆಯುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ನೀವು ಪಡೆಯುತ್ತೀರಿ.

Walking Benefits: ರಾತ್ರಿ ಊಟವಾದ ತಕ್ಷಣ ಮಲಗಬೇಡಿ, 10 ನಿಮಿಷಗಳ ಕಾಲ ವಾಕಿಂಗ್ ಮಾಡಿ
Walking
Follow us on

ಊಟವಾದ ತಕ್ಷಣವೇ ಮಲಗುವುದರ ಬದಲು ಸುಮಾರು 10 ನಿಮಿಷಗಳ ಕಾಲ ನಡೆಯುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ನೀವು ಪಡೆಯುತ್ತೀರಿ. ರಾತ್ರಿ ಊಟವಾದ ಬಳಿಕ ಮೊಬೈಲ್ ಹಿಡಿದು ಒಂದೆಡೆ ಕೂರುವುದು ಅಥವಾ ಮಲಗಿಕೊಂಡು ಮೊಬೈಲ್ ನೋಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ದಿನವಿಡೀ ಸಮಯ ಇಲ್ಲದಿದ್ದರೂ ರಾತ್ರಿ ಊಟದ ನಂತರ ಕನಿಷ್ಠ 10 ನಿಮಿಷ ಮೀಸಲಿಡಬೇಕು. ಶಾರೀರಿಕವಾಗಿ ಚಟುವಟಿಕೆಯಿಂದ ಇರಬೇಕೆಂದರೆ ರಾತ್ರಿ ಊಟದ ನಂತರ ವಾಕಿಂಗ್ ಮಾಡಲು ಹೋದರೆ ಅನೇಕ ದೈಹಿಕ ಸಮಸ್ಯೆಗಳು ದೂರವಾಗುತ್ತವೆ.

ರಾತ್ರಿ ಊಟದ ನಂತರ ನಡೆಯುವುದರಿಂದ ದೇಹವು ಗ್ಯಾಸ್ಟ್ರಿಕ್ ಕಿಣ್ವಗಳನ್ನು ಉತ್ಪಾದಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೊಟ್ಟೆ ಉಬ್ಬುವುದು ಮತ್ತು ಮಲಬದ್ಧತೆ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ.

ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ​​ಪ್ರಕಾರ, ಊಟದ ನಂತರ 10 ನಿಮಿಷಗಳ ಕಾಲ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ವಾಸ್ತವವಾಗಿ, ಊಟ ಮಾಡಿದ ಬಳಿಕ 30 ನಿಮಿಷಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ.

ಆದರೆ ದೇಹವು ವಾಕಿಂಗ್ ಮೂಲಕ ಗ್ಲೂಕೋಸ್ ಅನ್ನು ಬಳಸುತ್ತದೆ. ಹೀಗೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಊಟದ ನಂತರ ನಡೆಯುವುದು ಚಯಾಪಚಯವನ್ನು ಸುಧಾರಿಸಲು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ. ದೇಹವು ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ನಿದ್ರೆ ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ರಾತ್ರಿ ಊಟದ ನಂತರ ನಡೆಯುವುದು ಅತ್ಯಗತ್ಯ.

ಮೇಯೊ ಕ್ಲಿನಿಕ್ ಅಧ್ಯಯನಗಳ ಪ್ರಕಾರ, ವಾಕಿಂಗ್ ಒತ್ತಡವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಎಂಡಾರ್ಫಿನ್ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಖಿನ್ನತೆಯನ್ನು ನಿವಾರಿಸುತ್ತದೆ ಮತ್ತು ನಿದ್ರಾಹೀನತೆಯನ್ನು ನಿವಾರಿಸುತ್ತದೆ. ಹೀಗೆ ಮಾಡುವುದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ