Teeth Whitening: ಬಾಯಿಯ ದುರ್ವಾಸನೆ ಮತ್ತು ಹಳದಿ ಹಲ್ಲುಗಳಿಗೆ ಇಲ್ಲಿವೆ ನೈಸರ್ಗಿಕವಾಗಿ ಮನೆಮದ್ದುಗಳು!

| Updated By: ಗಂಗಾಧರ​ ಬ. ಸಾಬೋಜಿ

Updated on: Oct 06, 2022 | 8:00 AM

ಕೆಲವರು ದಿನನಿತ್ಯ ಹಲ್ಲುಜ್ಜಿದರೂ ಹಲ್ಲು ಹೊಳೆಯುತ್ತಿಲ್ಲ, ಬಾಯಿ ದುರ್ವಾಸನೆ ಬರುತ್ತಿದೆ ಎಂದು ದೂರುತ್ತಾರೆ. ನೀವೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಕೆಲವು ಮನೆಮದ್ದುಗಳು ಇಲ್ಲಿವೆ ನೋಡಿ.

Teeth Whitening: ಬಾಯಿಯ ದುರ್ವಾಸನೆ ಮತ್ತು ಹಳದಿ ಹಲ್ಲುಗಳಿಗೆ ಇಲ್ಲಿವೆ ನೈಸರ್ಗಿಕವಾಗಿ ಮನೆಮದ್ದುಗಳು!
ಪ್ರಾತಿನಿಧಿಕ ಚಿತ್ರ
Follow us on

ಸುಂದರವಾಗಿ ಕಾಣಲು ಮುಖದ ಜೊತೆಗೆ ಹಲ್ಲುಗಳು (Teeth Whitening) ಕೂಡ ಬಹಳ ಮುಖ್ಯ. ಅನೇಕ ಜನರು ಸಾಮಾನ್ಯವಾಗಿ ಹಳದಿ ಹಲ್ಲುಗಳು ಮತ್ತು ಕೆಟ್ಟ ಬಾಯಿ (mouth) ವಾಸನೆಗೊಳಗಾಗುತ್ತಾರೆ. ಈ ಸಮಸ್ಯೆಯಿಂದಾಗಿ ಅಂತಹ ಜನರು ಇತರರ ಮುಂದೆ ಮಾತನಾಡಲು ಮತ್ತು ನಗಲು ಹಿಂಜರಿಯುತ್ತಾರೆ. ಕೆಲವರು ದಿನನಿತ್ಯ ಹಲ್ಲುಜ್ಜಿದರೂ ಹಲ್ಲು ಹೊಳೆಯುತ್ತಿಲ್ಲ, ಬಾಯಿ ದುರ್ವಾಸನೆ (bad breath) ಬರುತ್ತಿದೆ ಎಂದು ದೂರುತ್ತಾರೆ. ನೀವೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಕೆಲವು ಮನೆಮದ್ದುಗಳ ಮೂಲಕ ನಿಮ್ಮ ಹಲ್ಲುಗಳನ್ನು ಹೊಳೆಯುವಂತೆ ಮಾಡಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ. ಈ ಸಲಹೆಗಳನ್ನು ಅನುಸರಿಸಿದರೆ ನಿಮ್ಮ ಹಲ್ಲುಗಳು ಮುತ್ತಿನಂತೆ ಹೊಳೆಯುತ್ತವೆ.

ಹಲ್ಲುಗಳು ಹೊಳೆಯಲು ಮನೆಮದ್ದು:

ಅಡಿಗೆ ಸೋಡಾ: ಹಲ್ಲುಗಳು ಮುತ್ತುಗಳಂತೆ ಹೊಳೆಯುವಂತೆ ಮಾಡಲು ನೀವು ಅಡಿಗೆ ಸೋಡಾವನ್ನು ಬಳಸಬಹುದು. ಇದಕ್ಕೆ ಉಪ್ಪು ಮತ್ತು ಅರ್ಧ ಟೀ ಚಮಚ ಅಡಿಗೆ ಸೋಡಾದ ಮಿಶ್ರಣವನ್ನು ಮಾಡಿ. ಈ ಮಿಶ್ರಣವನ್ನು ಬ್ರಷ್‌ನಿಂದ ಅನ್ವಯಿಸಿ ಮತ್ತು ಹಲ್ಲುಗಳನ್ನು ಲಘುವಾಗಿ ಬ್ರಷ್ ಮಾಡಿ. ಇದರಿಂದ ಹಲ್ಲುಗಳು ಗಟ್ಟಿಯಾಗುವುದರೊಂದಿಗೆ ಬೆಳ್ಳಗಾಗುತ್ತವೆ.

ವಿನೆಗರ್: ಹಲ್ಲುಗಳನ್ನು ಹೊಳೆಯಲು ಮತ್ತು ಬಾಯಿಯ ಕೆಟ್ಟ ವಾಸನೆ ತೆಗೆದುಹಾಕಲು ಬಿಳಿ ವಿನೆಗರ್ ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ, ಬೆಳಿಗ್ಗೆ ಹಲ್ಲುಜ್ಜಿದ ನಂತರ ನಿಮ್ಮ ಬಾಯಿಯನ್ನು ನೀರಿನಲ್ಲಿ ವಿನೆಗರ್ ಬಳಸಿ ತೊಳೆಯಿರಿ. ಹೀಗೆ ಮಾಡುವುದರಿಂದ ಹಲ್ಲುಗಳು ಹೊಳೆಯುವುದಲ್ಲದೆ ಬಾಯಿಯ ದುರ್ವಾಸನೆ ದೂರವಾಗುತ್ತದೆ.

ಸ್ಟ್ರಾಬೆರಿ – ಉಪ್ಪು ಪೇಸ್ಟ್: ಉಪ್ಪು ಮತ್ತು ಸ್ಟ್ರಾಬೆರಿಗಳು ಹಲ್ಲುಗಳನ್ನು ಸ್ವಚ್ಛಗೊಳಿಸಲು ಸಹ ಕೆಲಸ ಮಾಡುತ್ತವೆ. ಇದಕ್ಕಾಗಿ, ಸ್ಟ್ರಾಬೆರಿಗಳನ್ನು ಮ್ಯಾಶ್ ಮಾಡಿ ಮತ್ತು ಚಿಟಿಕೆ ಉಪ್ಪು ಸೇರಿಸಿ ಮತ್ತು ಹಲ್ಲುಗಳನ್ನು ಸ್ವಚ್ಛಗೊಳಿಸಿ. ಇದರಿಂದ ಹಲ್ಲುಗಳು ಮುತ್ತಿನಂತೆ ಹೊಳೆಯುತ್ತವೆ.

ಶುಂಠಿ ಮತ್ತು ಉಪ್ಪು: ಶುಂಠಿ ಮತ್ತು ಉಪ್ಪನ್ನು ಬಳಸಿ ಬಾಯಿಯ ದುರ್ವಾಸನೆ ಹೋಗಲಾಡಿಸಬಹುದು. ಇದಕ್ಕಾಗಿ ನೀರಿಗೆ ಶುಂಠಿ ಮತ್ತು ಉಪ್ಪನ್ನು ಸೇರಿಸಿ ಬಿಸಿ ಮಾಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ ಮತ್ತು ಹಲ್ಲು ಹಳದಿಯಾಗುವುದು ಕೂಡ ಕಡಿಮೆಯಾಗುತ್ತದೆ.

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.