ಆರೋಗ್ಯಕ್ಕೆ ಒಳ್ಳೆಯದು ಎಂದು ಚಿಯಾ ಸೀಡ್ಸ್ ಅತಿಯಾಗಿ ಸೇವನೆ ಮಾಡಿದ್ರೆ ಈ ಸಮಸ್ಯೆಗಳು ಬರುವುದು ನಿಶ್ಚಿತ!

ಚಿಯಾ ಸೀಡ್ಸ್ ಈಗ ಸೂಪರ್‌ಫುಡ್ ಆಗಿ ಮಾರ್ಪಟ್ಟಿವೆ. ಇವು ಆರೋಗ್ಯಕ್ಕೆ ಒಳ್ಳೆಯದು ಎಂದು ಹೆಚ್ಚೆಚ್ಚು ಸೇವನೆ ಮಾಡುತ್ತಾರೆ. ಹಾಗಾಗಿ ಇವುಗಳನ್ನು ಚಿಯಾ ಪುಡಿಂಗ್, ಸ್ಮೂಥಿ, ಓಟ್ಸ್‌ನೊಂದಿಗೆ ತಿನ್ನುತ್ತಾರೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಇದರ ಮಿತ ಸೇವನೆ ದೇಹಕ್ಕೆ ಒಳ್ಳೆಯದು. ಆದರೆ ಪ್ರತಿದಿನ 40- 50 ಗ್ರಾಂ (3- 4 ಚಮಚ) ಕ್ಕಿಂತ ಹೆಚ್ಚು ಸೇವನೆ ಮಾಡಿದರೆ, ದೇಹವು ಅವುಗಳಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾದರೆ ಅಗತ್ಯಕ್ಕಿಂತ ಹೆಚ್ಚು ಚಿಯಾ ಬೀಜಗಳನ್ನು ಸೇವಿಸಿದರೆ ಏನಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆರೋಗ್ಯಕ್ಕೆ ಒಳ್ಳೆಯದು ಎಂದು ಚಿಯಾ ಸೀಡ್ಸ್ ಅತಿಯಾಗಿ ಸೇವನೆ ಮಾಡಿದ್ರೆ ಈ ಸಮಸ್ಯೆಗಳು ಬರುವುದು ನಿಶ್ಚಿತ!
ಚಿಯಾ ಸೀಡ್ಸ್ ಅಡ್ಡಪರಿಣಾಮ

Updated on: Dec 03, 2025 | 4:25 PM

ಚಿಯಾ ಬೀಜಗಳು (Chia Seed) ಈಗ ಸೂಪರ್‌ಫುಡ್ ಸ್ಟಾರ್ ಆಗಿ ಮಾರ್ಪಟ್ಟಿವೆ ಎಂದರೆ ತಪ್ಪಾಗಲಾರದು. ಎಲ್ಲರು ಇದನ್ನು ಹೆಚ್ಚು ಹೆಚ್ಚು ಬಳಕೆ ಮಾಡುತ್ತಿದ್ದು ಇದನ್ನು ನೋಡಿದವರು ಕೂಡ ಇದನ್ನು ಹೆಚ್ಚೆಚ್ಚು ಉಪಯೋಗಿಸುತ್ತಿದ್ದಾರೆ. ಹಾಗಾಗಿ ಸೀಡ್ಸ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ಇವು ಆರೋಗ್ಯಕ್ಕೆ ಒಳ್ಳೆಯದು ಎಂದು ಹೆಚ್ಚೆಚ್ಚು ಸೇವನೆ ಮಾಡುತ್ತಾರೆ. ಇವುಗಳನ್ನು ಚಿಯಾ ಪುಡಿಂಗ್, ಸ್ಮೂಥಿ, ಓಟ್ಸ್‌ನೊಂದಿಗೆ ತಿನ್ನುತ್ತಾರೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಇದರ ಮಿತ ಸೇವನೆ ದೇಹಕ್ಕೆ ಒಳ್ಳೆಯದು. ಇದರಿಂದ ಸಾಕಷ್ಟು ಪ್ರಯೋಜನಗಳು ಕೂಡ ಸಿಗುತ್ತದೆ. ಆದರೆ ಪ್ರತಿದಿನ 40- 50 ಗ್ರಾಂ (3- 4 ಚಮಚ) ಕ್ಕಿಂತ ಹೆಚ್ಚು ಸೇವನೆ ಮಾಡಿದರೆ, ದೇಹವು ಅವುಗಳಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾದರೆ ಅಗತ್ಯಕ್ಕಿಂತ ಹೆಚ್ಚು ಚಿಯಾ ಬೀಜಗಳನ್ನು ಸೇವಿಸಿದರೆ ಏನಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಿಯಾ ಸೀಡ್ಸ್ ಅಡ್ಡಪರಿಣಾಮಗಳು:

ಒಂದು ಚಮಚ (12 ಗ್ರಾಂ) ಚಿಯಾ ಬೀಜಗಳಲ್ಲಿ 5 ಗ್ರಾಂ ಫೈಬರ್ ಇರುತ್ತದೆ. ಒಮ್ಮೆಗೆ 50 ಗ್ರಾಂ ಸೇವನೆ ಮಾಡಿದರೆ, ದೇಹವು 20 ಗ್ರಾಂ ಫೈಬರ್ ಪಡೆಯುತ್ತದೆ. ಇದು ದೇಹದ ದೈನಂದಿನ ಅಗತ್ಯವನ್ನು (25–30 ಗ್ರಾಂ) ಮೀರುತ್ತದೆ. ಒಮ್ಮೆಗೆ ಹೆಚ್ಚು ಫೈಬರ್ ಸೇವಿಸುವುದರಿಂದ ಹೊಟ್ಟೆಯಲ್ಲಿ ಗ್ಯಾಸ್, ಉಬ್ಬುವುದು ಮತ್ತು ತೀವ್ರ ನೋವು ಉಂಟಾಗುತ್ತದೆ. ಅದರಲ್ಲಿಯೂ ನೀರನ್ನು ಕಡಿಮೆ ಪ್ರಮಾಣದಲ್ಲಿ ಕುಡಿದರೆ, ಚಿಯಾ ಬೀಜಗಳು ಹೊಟ್ಟೆಯಲ್ಲಿರುವ ನೀರನ್ನು ಹೀರಿಕೊಳ್ಳುತ್ತವೆ ಮತ್ತು ಮಲವನ್ನು ಗಟ್ಟಿಯಾಗಿಸುತ್ತವೆ, ಇದು ಮಲಬದ್ಧತೆಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹೆಚ್ಚು ನೀರು ಕುಡಿದರೆ, ಇದ್ದಕ್ಕಿದ್ದಂತೆ ಫೈಬರ್ ಹೆಚ್ಚಾಗುವುದರಿಂದ ಅತಿಸಾರ ಉಂಟಾಗುತ್ತದೆ. ಚಿಯಾ ಸೀಡ್ಸ್ ಗಳಲ್ಲಿ ಒಮೆಗಾ-3 ಮತ್ತು ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಹಾಗಾಗಿ ರಕ್ತದೊತ್ತಡಕ್ಕೆ ಸಂಬಂಧಿಸಿದ ಔಷಧಿಗಳ ಸೇವನೆ ಮಾಡುವವರು ಇದನ್ನು ಅತಿಯಾಗಿ ಸೇವನೆ ಮಾಡಿದರೆ ಪೊಟ್ಯಾಸಿಯಮ್ ಮಟ್ಟ ಹಠಾತ್ ಏರಿಕೆಯಾಗಬಹುದು, ಇದು ಹೈಪರ್‌ಕೆಲೆಮಿಯಾ ಅಪಾಯಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಮಲಗುವ ಮುನ್ನ ನೆನಸಿಟ್ಟ ಚಿಯಾ ಬೀಜಗಳ ನೀರು ಕುಡಿದರೆ ರಾತ್ರಿ ಹಸಿವಾಗುವುದಿಲ್ಲ

ಚಿಯಾ ಸೀಡ್ಸ್ ಗಳನ್ನು ಯಾವ ಪ್ರಮಾಣದಲ್ಲಿ ಸೇವನೆ ಮಾಡಬೇಕು?

ಸಾಮಾನ್ಯವಾಗಿ ಚಿಯಾ ಸೀಡ್ಸ್ ಗಳನ್ನು ನೀರಿಲ್ಲದೆ ಸೇವನೆ ಮಾಡಿದರೆ ಅವು 1:10 ಅನುಪಾತದಲ್ಲಿ ಹಿಗ್ಗುತ್ತವೆ, ಹಾಗಾಗಿ ಇದು ಗಂಟಲಿನಲ್ಲಿ ಸಿಲುಕಿಕೊಳ್ಳಬಹುದು ಮತ್ತು ಉಸಿರಾಟ ಸಂಬಂಧಿ ಸಮಸ್ಯೆಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ಚಿಯಾ ಸೀಡ್ಸ್ ಗಳಿಂದ ಅಲರ್ಜಿ ಇದ್ದಲ್ಲಿ ಬಾಯಿಯಲ್ಲಿ ಕೆಟ್ಟ ರುಚಿ, ದೇಹದ ಮೇಲೆ ದದ್ದುಗಳು ಉಂಟಾಗಬಹುದು. ವಯಸ್ಕರು ದಿನಕ್ಕೆ 1–2 ಚಮಚ (15–25 ಗ್ರಾಂ) ಮಾತ್ರ ಸೇವನೆ ಮಾಡುವುದು ಒಳ್ಳೆಯದು. ನೀವು ಇದಕ್ಕಿಂತ ಹೆಚ್ಚು ಸೇವನೆ ಮಾಡಲು ಬಯಸಿದಲ್ಲಿ ಕ್ರಮೇಣವಾಗಿ ಹೆಚ್ಚಿಸಿ. ದಿನಕ್ಕೆ 2 -3 ಲೀಟರ್ ನೀರು ಕುಡಿಯಲು ಮರೆಯದಿರಿ. ಚಿಯಾ ಬೀಜಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದು, ಆದರೆ ಅತಿಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ, ಅತಿಯಾದರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿರುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ