
ಹಾಗಲಕಾಯಿ (Bitter Melon) ಕಹಿಯಾದರೂ ಕೂಡ ಅನೇಕ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ (Cholesterol) ಮಟ್ಟವನ್ನು ನಿಯಂತ್ರಿಸಬಹುದು. ಅದಕ್ಕಾಗಿಯೇ ಇದನ್ನು ಆಗಾಗ ಸೇವನೆ ಮಾಡಲಾಗುತ್ತದೆ. ಇದು ಅನೇಕ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಸಾಕಷ್ಟು ಕ್ಯಾಲೋರಿ, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ಫೈಬರ್, ಜೊತೆಗೆ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಹೆಚ್ಚುವರಿಯಾಗಿ, ಹಾಗಲಕಾಯಿ ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ. ಒಂದು ಕಪ್‌ನಲ್ಲಿ ಈ ವಿಟಮಿನ್ ಸುಮಾರು 41.5 ಗ್ರಾಂ ಇರುತ್ತದೆ. ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಫೋಲೇಟ್ ಇರುತ್ತದೆ. ಇದು ವಿಟಮಿನ್ ಬಿ9 ನ ನೈಸರ್ಗಿಕ ರೂಪವಾಗಿದೆ. ಜೀವಕೋಶಗಳು ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು ಇದು ಅವಶ್ಯಕ. ಇದಲ್ಲದೆ, ಹಾಗಲಕಾಯಿಯಲ್ಲಿ ಸೋಡಿಯಂ ಅಂಶ ಹೆಚ್ಚಾಗಿರುತ್ತದೆ. ಪಾಲಕ್ ಸೊಪ್ಪಿಗಿಂತ ಎರಡು ಪಟ್ಟು ಹೆಚ್ಚು ಕ್ಯಾಲ್ಸಿಯಂ ಮತ್ತು ಬಾಳೆಹಣ್ಣಿಗಿಂತ ಎರಡು ಪಟ್ಟು ಹೆಚ್ಚು ಪೊಟ್ಯಾಸಿಯಮ್ ಇದರಲ್ಲಿದೆ. ಹಾಗಲಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಅವು ಜೀವಕೋಶಗಳನ್ನು ಉರಿಯೂತ ಮತ್ತು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತವೆ. ಆದರೆ ಇಷ್ಟೊಂದು ಪೋಷಕಾಂಶಗಳನ್ನು ಹೊಂದಿರುವ ಹಾಗಲಕಾಯಿಯನ್ನು ಕೆಲವರು ಅಪ್ಪಿತಪ್ಪಿಯೂ ತಿನ್ನಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಯಾರಿಗೆ ಇದು ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Mon, 7 July 25