ಒಂದೇ ಒಂದು ಲೋಟ ಬಿಸಿ ನೀರು ನಿಮ್ಮ ಜೀವನವನ್ನು ಬದಲಾಯಿಸಬಹುದು!

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರನ್ನು ಕುಡಿಯಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಬೆಳಗ್ಗಿನ ಸಮಯದಲ್ಲಿ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಹೊಟ್ಟೆ ಸಂಪೂರ್ಣವಾಗಿ ಶುದ್ಧವಾಗುತ್ತದೆ. ಹಾಗಿದ್ದರೂ ಕೂಡ ಬಹಳಷ್ಟು ಜನರು ಇದನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಮುಂಜಾನೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನೀವು ಕೂಡ ಈ ಅಭ್ಯಾಸ ರೂಢಿಸಿಕೊಂಡರೆ ದೇಹಕ್ಕೆ ಪ್ರಯೋಜನ ಸಿಗಬಹುದೇ ಎಂಬುದನ್ನು ತಿಳಿದುಕೊಳ್ಳಿ.

ಒಂದೇ ಒಂದು ಲೋಟ ಬಿಸಿ ನೀರು ನಿಮ್ಮ ಜೀವನವನ್ನು ಬದಲಾಯಿಸಬಹುದು!
ಸಾಂದರ್ಭಿಕ ಚಿತ್ರ
Image Credit source: Getty Images

Updated on: May 07, 2025 | 3:58 PM

ಬೆಳಿಗ್ಗೆ (Morning) ಎದ್ದ ತಕ್ಷಣ ಉಗುರು ಬೆಚ್ಚಗಿರುವ ನೀರು (warm water) ಕುಡಿಯುವ ಅಭ್ಯಾಸ ಒಳ್ಳೆಯದು. ಚಿಕ್ಕವರಿದ್ದಾಗಿಂದಲೂ ಇದನ್ನು ಪೋಷಕರು ಮತ್ತು ಆರೋಗ್ಯ ತಜ್ಞರು ಹೇಳಿಕೊಂಡು ಬರುತ್ತಿದ್ದಾರೆ. ಆದವರು ಇದನ್ನು ಪಾಲಿಸುತ್ತಿದ್ದು, ಆಗದವರು ಗಾಳಿಗೆ ತೂರಿ ಬಿಟ್ಟಿದ್ದಾರೆ. ಆದರೆ ಈ ರೀತಿ ಅಭ್ಯಾಸ ನಮ್ಮ ಆರೋಗ್ಯಕ್ಕೆ (Health) ಎಷ್ಟು ಒಳ್ಳೆಯದು ಎಂಬುದು ನಿಮಗೆ ತಿಳಿದಿದೆಯೇ? ಹೌದು. ನೀವು ಬೆಳಿಗ್ಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳನ್ನು ತರಬಹುದು. ಇದಲ್ಲದೆ, ಆಯುರ್ವೇದದಿಂದ (Ayurveda) ವಿಜ್ಞಾನದವರೆಗೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಪ್ರಯೋಜನಕಾರಿ ಎಂದು ಹೇಳಲಾಗಿದೆ. ಹಾಗಾದರೆ ಬೆಳಿಗ್ಗೆ ಎದ್ದ ಬಳಿಕ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹದ ಮೇಲೆ ಯಾವ ರೀತಿಯ ಪರಿಣಾಮಗಳು ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಮುಂಜಾನೆ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಸಿಗುವ ಪ್ರಯೋಜನಗಳು:

ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿರುತ್ತದೆ

ಬೆಳಿಗ್ಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಗ್ಯಾಸ್, ಅಜೀರ್ಣ, ಆಮ್ಲೀಯತೆ ಮುಂತಾದ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಹಾಯ ಮಾಡುವುದಲ್ಲದೆ ಮಲಬದ್ಧತೆಯನ್ನು ನಿವಾರಿಸಿ, ಹೊಟ್ಟೆ ಹಗುರವಾಗುವಂತೆ ಮಾಡುತ್ತದೆ. ಜೊತೆಗೆ ಕರುಳಿನ ಸ್ನಾಯುಗಳನ್ನು ಕೂಡ ಸಡಿಲಗೊಳಿಸುತ್ತದೆ.

ನಿರ್ವಿಷೀಕರಣಗೊಳಿಸುತ್ತದೆ

ಪ್ರತಿನಿತ್ಯ ಬೆಳಿಗ್ಗೆ ತಪ್ಪದೆಯೇ, ಉಗುರು ಬೆಚ್ಚಗಿನ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ದೇಹವನ್ನು ಪೂರ್ತಿಯಾಗಿ ನಿರ್ವಿಷೀಕರಣಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಈ ನೀರು ದೇಹದಿಂದ ವಿಷವನ್ನು ಹೊರಹಾಕುವುದರಿಂದ ದೇಹವು ಒಳಗಿನಿಂದ ಶುದ್ಧವಾಗುತ್ತದೆ ಮತ್ತು ಚರ್ಮ ಕಾಂತಿಯುತವಾಗುತ್ತದೆ. ಕೆಲವರು ಇದನ್ನು ನಿಂಬೆ ಮತ್ತು ಜೇನುತುಪ್ಪದೊಂದಿಗೆ ಕುಡಿಯುತ್ತಾರೆ. ಇದು ಕೂಡ ನಿರ್ವಿಷೀಕರಣದ ಪ್ರಕ್ರಿಯೆಗೆ ಮತ್ತಷ್ಟು ಸಹಾಯ ಮಾಡುತ್ತದೆ.

ಇದನ್ನೂ ಓದಿ
ಯಾವುದೇ ರೀತಿಯ ಕ್ಯಾನ್ಸರ್‌ ಬರಬಾರದು ಎಂದರೆ ಈ ಹಣ್ಣನ್ನು ತಿಂದು ನೋಡಿ
ಕಣ್ಣಿನಲ್ಲಿ ಕಾಣಿಸಿಕೊಳ್ಳುವ ನೋವಿಗೆ ಬಾಣಂತಿಯರ ಎದೆ ಹಾಲಿನಲ್ಲಿದೆ ಮದ್ದು
ಮಗುವಿಗೆ ಮೊಲೆ ಹಾಲು ನೀಡುವ ಮೊದಲು ಹೊರಗೆ ಸ್ಪಲ್ಪ ಚೆಲ್ಲಬೇಕು, ಯಾಕೆ ?
ಸಿಸೇರಿಯನ್‌, ನಾರ್ಮಲ್ ಡೆಲಿವರಿಯಾದ ಬಾಣಂತಿಯರಿಗೆ ಡಾ. ಶಿಲ್ಪಾ ಹೇಳೋದೇನು?

ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಬೆಳಗ್ಗೆ ನೀವು ಕುಡಿಯುವ ಉಗುರು ಬೆಚ್ಚಗಿನ ನೀರು ಈ ಪ್ರಕ್ರಿಯೆಗೆ ನಿಮಗೆ ಸಹಾಯ ಮಾಡುತ್ತದೆ. ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವುದರಿಂದ, ಕ್ಯಾಲೊರಿ ವೇಗವಾಗಿ ದಹಿಸಲ್ಪಡುತ್ತವೆ. ವೈದ್ಯರು ಹೇಳುವ ಪ್ರಕಾರ ಬೆಳಿಗ್ಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ದಿನಪೂರ್ತಿ ಶಕ್ತಿಯನ್ನು ನೀಡುತ್ತದೆ. ದೇಹವು ಸಕ್ರಿಯವಾಗಿರುತ್ತದೆ.

ಇದನ್ನೂ ಓದಿ: ಕಣ್ಣಿನ ಕುರು ಕಾಣಿಸಿಕೊಂಡರೆ ಬಾಣಂತಿಯರ ಎದೆ ಹಾಲು ಬಿಡಿ ಸಾಕು

ರಕ್ತ ಪರಿಚಲನೆ ಸುಧಾರಿಸುತ್ತದೆ

ಬೆಳಿಗ್ಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ರಕ್ತ ಪರಿಚಲನೆಯೂ ಸುಧಾರಿಸುತ್ತದೆ. ಜೊತೆಗೆ ಇದು ಹೃದಯದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಸ್ನಾಯುಗಳ ಮೇಲಿನ ಒತ್ತಡವನ್ನು ಕೂಡ ಕಡಿಮೆ ಮಾಡುತ್ತದೆ.

ಚರ್ಮದ ಕಾಂತಿ ಹೆಚ್ಚಾಗುತ್ತದೆ

ಬೆಳಿಗ್ಗೆ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ದೇಹದ ಒಳಭಾಗ ಸರಿಯಾಗಿ ಸ್ವಚ್ಛಗೊಂಡಾಗ ಅದರ ಪರಿಣಾಮ ಮುಖದ ಮೇಲೂ ಕಾಣುತ್ತದೆ. ಜೊತೆಗೆ ಉಗುರು ಬೆಚ್ಚಗಿನ ನೀರು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಮೊಡವೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡಿ ಚರ್ಮವನ್ನು ಕಾಂತಿಯುತವಾಗಿಸುತ್ತದೆ. ಚರ್ಮ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ, ಮುಂಜಾನೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಪ್ರಯೋಜನಕಾರಿಯಾಗಿದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ