ಹಲ್ಲುಜ್ಜುವುದಕ್ಕಿಂತಲೂ ಮೊದಲು ಇದನ್ನ ಸೇವನೆ ಮಾಡಿದ್ರೆ ಕೊಲೆಸ್ಟ್ರಾಲ್ ಕಡಿಮೆ ಆಗುತ್ತೆ
ಬಾದಾಮಿ ಆರೋಗ್ಯಕ್ಕೆ ಒಳ್ಳೆಯದು. ಅದಕ್ಕಾಗಿಯೇ ಇದನ್ನು ಯಥೇಚ್ಛವಾಗಿ ಸೇವನೆ ಮಾಡಲಾಗುತ್ತದೆ. ಆದರೆ ಇದರ ಪೂರ್ತಿ ಪ್ರಯೋಜನಗಳನ್ನು ಪಡೆಯಲು ಅದನ್ನು ಸೇವನೆ ಮಾಡುವ ಸಮಯ ಕೂಡ ಬಹಳ ಮುಖ್ಯವಾಗುತ್ತದೆ. ನೀವು ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದಾದರೆ ಮೊದಲು ಅವುಗಳನ್ನು ನೆನೆಸಿಡಬೇಕಾಗುತ್ತದೆ. ಹಾಗಾದರೆ ರಾತ್ರಿ ನೆನಸಿಟ್ಟ ಬಾದಾಮಿಯನ್ನು ಬೆಳಿಗ್ಗೆ ಸೇವನೆ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತವೆ? ಇವು ನಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಿ.

ಬಾದಾಮಿ (Almonds) ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ತಿಳಿದ ವಿಚಾರ. ಆದರೆ ನಿಮಗೆ ಗೊತ್ತಾ? ಇವುಗಳ ಪೂರ್ತಿ ಪ್ರಯೋಜನ ಪಡೆಯಲು ಯಾವ ಸಮಯದಲ್ಲಿ ಸೇವನೆ ಮಾಡುತ್ತೀರಿ ಎಂಬುದು ಕೂಡ ಮುಖ್ಯವಾಗುತ್ತದೆ. ಪೌಷ್ಟಿಕ ತಜ್ಞರು ಕೂಡ ಬಾದಾಮಿ ಸೇವನೆ ಮಾಡುವುದಕ್ಕೆ ಸರಿಯಾದ ಸಮಯ ಮತ್ತು ವಿಧಾನವನ್ನು ತಿಳಿದುಕೊಳ್ಳುವುದು ಅತ್ಯಗತ್ಯ ಎಂದು ಹೇಳುತ್ತಾರೆ. ನೀವು ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದಾದರೆ ಮೊದಲು ಅವುಗಳನ್ನು ನೆನೆಸಿಡಬೇಕಾಗುತ್ತದೆ. ಏಕೆಂದರೆ ಈ ಸಮಯದಲ್ಲಿ, ನಿಮ್ಮ ಬಾಯಿಯಲ್ಲಿ ಅನೇಕ ಆರೋಗ್ಯಕರ ಬ್ಯಾಕ್ಟೀರಿಯಾಗಳಿರುತ್ತವೆ. ಇದು ಬಾದಾಮಿಯನ್ನು ಜೀರ್ಣಿಸಿಕೊಲ್ಲುವುದಕ್ಕೆ ಮತ್ತು ಅವುಗಳಿಂದ ಪೂರ್ಣ ಪ್ರಯೋಜನಗಳನ್ನು ಪಡೆದುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಒಂದು ದಿನದಲ್ಲಿ 20 ರಿಂದ 30 ಗ್ರಾಂ ಬಾದಾಮಿಯನ್ನು ತಿನ್ನಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ರಾತ್ರಿ ನೆನಸಿಟ್ಟ ಬಾದಾಮಿಯನ್ನು (Soaked Almonds) ಬೆಳಿಗ್ಗೆ ಸೇವನೆ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತವೆ? ಇವು ನಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಿ.
- ಬಾದಾಮಿ ಪೌಷ್ಟಿಕಾಂಶದ ಮೂಲವಾಗಿದೆ. ಅವುಗಳನ್ನು ತಿನ್ನುವುದರಿಂದ ಫೈಬರ್, ಪ್ರೋಟೀನ್, ವಿಟಮಿನ್ ಇ, ಆರೋಗ್ಯಕರ ಕೊಬ್ಬುಗಳು, ಮೆಗ್ನೀಸಿಯಮ್, ಮ್ಯಾಂಗನೀಸ್, ವಿಟಮಿನ್ ಬಿ 2, ರಂಜಕ ಮತ್ತು ಕಬ್ಬಿಣ ದೊರೆಯುತ್ತದೆ. ಇವು ಮೆದುಳು, ಸ್ನಾಯು, ಹೊಟ್ಟೆ ಮತ್ತು ಹೃದಯದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ.
- ಬಾದಾಮಿಯಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳಿವೆ. ಈ ಒತ್ತಡವು ಜೀವಕೋಶಗಳನ್ನು ಹಾನಿಗೊಳಿಸುತ್ತದೆ ಮತ್ತು ಬಹುತೇಕ ಎಲ್ಲಾ ದೀರ್ಘಕಾಲದ ಕಾಯಿಲೆಗಳ ಬೆಳವಣಿಗೆಗೆ ಕಾರಣವಾಗುತ್ತದೆ.
- ಬಾದಾಮಿಯಲ್ಲಿರುವ ಕೊಬ್ಬು ಕರಗುವ ವಿಟಮಿನ್ ಆಗಿದ್ದು, ಕೂದಲು, ಚರ್ಮ ಮತ್ತು ಸ್ನಾಯುಗಳಿಗೆ ಅವಶ್ಯಕವಾಗಿದೆ. ಇದು ಜೀವಕೋಶಗಳ ರಚನೆಗೆ ಬಹಳ ಮುಖ್ಯವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಮಾತ್ರವಲ್ಲ ಇದರಲ್ಲಿರುವ ಫೈಬರ್ ಅಂಶ ರಕ್ತದಲ್ಲಿನ ಸಕ್ಕರೆಯಲ್ಲಿ ಹಠಾತ್ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.
- ಅಧಿಕ ರಕ್ತದೊತ್ತಡ ಹೃದಯಕ್ಕೆ ಅಪಾಯಕಾರಿ. ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ಇದನ್ನು ನಿಯಂತ್ರಿಸಲು ಮೆಗ್ನೀಸಿಯಮ್ ಅಗತ್ಯವಿದೆ, ಇದು ಬಾದಾಮಿ ಬೀಜಗಳಲ್ಲಿ ಸುಲಭವಾಗಿ ಕಂಡುಬರುತ್ತದೆ.
- ಎಲ್‌ಡಿಎಲ್ ಕೊಲೆಸ್ಟ್ರಾಲ್ ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಬಾದಾಮಿ ಈ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ, ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ.
- ಬಾದಾಮಿ ಪದೇ ಪದೇ ಕಾಡುವಂತಹ ಹಸಿವು ಮತ್ತು ತೂಕವನ್ನು ಸಹ ನಿಯಂತ್ರಿಸುತ್ತದೆ. ಅವುಗಳಲ್ಲಿರುವ ಫೈಬರ್ ಮತ್ತು ಪ್ರೋಟೀನ್ ಹೊಟ್ಟೆಯನ್ನು ದೀರ್ಘಕಾಲದ ವರೆಗೆ ತುಂಬಿರುವಂತೆ ಮಾಡುತ್ತದೆ. ಅಂದರೆ ಅವು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ, ಅವು ಕಡುಬಯಕೆಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತವೆ. ಹೆಚ್ಚೆಚ್ಚು ತಿಂದು ತೂಕ ಹೆಚ್ಚಿಸಿಕೊಳ್ಳುವ ಭಯವನ್ನು ನಿವಾರಿಸುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




