ಈ ಸಮಸ್ಯೆ ಇದ್ದರೆ ಬಾದಾಮಿ ಸೇವನೆ ಮಾಡಬೇಡಿ
ನಾವು ನಮ್ಮ ಆಹಾರ ಪದ್ದತಿಯನ್ನು ಸರಿಮಾಡಿಕೊಳ್ಳಬೇಕಾಗಿದೆ. ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಒಳ್ಳೆಯ ಸಲಹೆಗಳನ್ನು ಪ್ರಯತ್ನಿಸುವುದು ಅನಿವಾರ್ಯವಾಗಿದೆ. ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಇದ್ದರೆ ನೀವು ಆಹಾರದಲ್ಲಿ ಕೆಲವು ಪಥ್ಯಗಳನ್ನು ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಬಾದಾಮಿ ಆರೋಗ್ಯಕ್ಕೆ ಬಹಳ ಒಳ್ಳೆಯದು ಆದರೆ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಇದನ್ನು ತಿನ್ನಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದಲ್ಲದೆ ಕೆಲವು ಆರೋಗ್ಯ ಸಮಸ್ಯೆಗೆ ಇದು ಒಳ್ಳೆಯದಲ್ಲ. ಹಾಗಾದರೆ ಇದನ್ನು ಯಾರು ಸೇವನೆ ಮಾಡಬಾರದು? ಇದರಿಂದ ಅಪಾಯವಿದೆಯೇ ತಿಳಿದುಕೊಳ್ಳಿ.

ನಮ್ಮ ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿದೆ. ಇದನ್ನು ಸರಿಯಾಗಿ ಎದುರಿಸುವುದಕ್ಕೂ ನಮ್ಮಿಂದ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ನಮ್ಮ ಜೀವನ ಹದಗೆಡುತ್ತಿದೆ. ಅದರಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚಾಗುತ್ತಿದ್ದು ಇದರಿಂದ ಹೃದಯಾಘಾತದಂತಹ ಮಾರಣಾಂತಿಕ ಕಾಯಿಲೆಗಳು ಅಧಿಕವಾಗಿದೆ. ಹಾಗಾಗಿ ಎಲ್ಲಕಿಂತ ಮೊದಲು ನಮ್ಮ ಆಹಾರ ಪದ್ದತಿಯನ್ನು ಸರಿಮಾಡಿಕೊಳ್ಳಬೇಕಾಗಿದೆ. ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಒಳ್ಳೆಯ ಸಲಹೆಗಳನ್ನು ಪ್ರಯತ್ನಿಸುವುದು ಅನಿವಾರ್ಯವಾಗಿದೆ. ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಇದ್ದರೆ ನೀವು ಆಹಾರದಲ್ಲಿ ಕೆಲವು ಪಥ್ಯಗಳನ್ನು ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಬಾದಾಮಿ ಆರೋಗ್ಯಕ್ಕೆ ಬಹಳ ಒಳ್ಳೆಯದು ಆದರೆ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಇದನ್ನು ತಿನ್ನಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದಲ್ಲದೆ ಕೆಲವು ಆರೋಗ್ಯ ಸಮಸ್ಯೆಗೆ ಇದು ಒಳ್ಳೆಯದಲ್ಲ. ಹಾಗಾದರೆ ಇದನ್ನು ಯಾರು ಸೇವನೆ ಮಾಡಬಾರದು? ಇದರಿಂದ ಅಪಾಯವಿದೆಯೇ ತಿಳಿದುಕೊಳ್ಳಿ.
- ಸಾಮಾನ್ಯವಾಗಿ ಮೈಗ್ರೇನ್ ನಿಂದ ಬಳಲುತ್ತಿರುವವರು ಬಾದಾಮಿ ಸೇವನೆ ಮಾಡಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಏಕೆಂದರೆ ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ನಿಮಗೆ ಮೈಗ್ರೇನ್ ಅಥವಾ ತಲೆನೋವು ಇದ್ದಾಗ ಬಾದಾಮಿ ತಿನ್ನುವುದು ಈ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ತಲೆತಿರುಗುವಿಕೆ, ವಾಕರಿಕೆ, ವಾಂತಿ ಮತ್ತು ಆಯಾಸದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ತಜ್ಞರು ಹೇಳುತ್ತಾರೆ.
- ಮೂತ್ರಪಿಂಡದಲ್ಲಿ ಕಲ್ಲುಗಳಿರುವವರು ಸಹ ಬಾದಾಮಿ ಸೇವನೆ ಮಾಡಬಾರದು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಅವುಗಳಲ್ಲಿ ಆಕ್ಸಲೇಟ್ ಸಂಯುಕ್ತವು ಅಧಿಕವಾಗಿರುತ್ತದೆ. ಇದು ಮೂತ್ರಪಿಂಡಗಳನ್ನು ತಲುಪಿದರೆ, ಮಾಲಿನ್ಯ ಸಂಗ್ರಹವಾಗಿ ಕಲ್ಲುಗಳನ್ನು ರೂಪಿಸುತ್ತದೆ. ಅಂತೆಯೇ, ಮೂತ್ರಪಿಂಡದ ಕಲ್ಲುಗಳು ಇದ್ದಾಗ, ಅವುಗಳನ್ನು ತಿಂದರೆ, ಕಲ್ಲುಗಳ ಗಾತ್ರ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
- ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಅಜೀರ್ಣ, ಹೊಟ್ಟೆ ನೋವು, ಉಬ್ಬರ, ಗ್ಯಾಸ್ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಂತಹ ಸಮಸ್ಯೆಗಳಿದ್ದಾಗ ಬಾದಾಮಿ ತಿನ್ನಬಾರದು. ಏಕೆಂದರೆ ಇದರಲ್ಲಿ ನಾರಿನಂಶ ಅಧಿಕವಾಗಿದ್ದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಇದು ಉಲ್ಬಣ ಗೊಳಿಸಬಹುದು ಅಲ್ಲದೆ ಹೊಟ್ಟೆ ನೋವು ಮತ್ತು ಗ್ಯಾಸ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
- ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಸಹ ಬಾದಾಮಿ ಸೇವನೆ ಮಾಡಬಾರದು. ಏಕೆಂದರೆ ಇದರಲ್ಲಿ ಹೆಚ್ಚಿನ ಕ್ಯಾಲೊರಿ ಮತ್ತು ಸ್ಯಾಚುರೇಟೆಡ್ ಕೊಬ್ಬುಗಳಿವೆ, ಅದು ಬೇಗನೆ ಕರಗುವುದಿಲ್ಲ, ಆದ್ದರಿಂದ ಅವುಗಳನ್ನು ಹೆಚ್ಚು ತಿನ್ನುವುದು ತೂಕ ಹೆಚ್ಚಾಗಲು ಕಾರಣವಾಗಬಹುದು, ಅದಕ್ಕಾಗಿಯೇ ತಜ್ಞರು ಅವುಗಳನ್ನು ಹೆಚ್ಚು ತಿನ್ನಬಾರದು ಎಂದು ಹೇಳುತ್ತಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ