
ಹಿಂದಿನಿಂದ ನಡೆದುಕೊಂಡು ಬಂದಂತಹ ಕೆಲವು ಆಚರಣೆಗಳಿಗೆ ಅದರದ್ದೇ ಆದಂತಹ ಮಹತ್ವವಿದೆ. ಪ್ರತಿಯೊಂದು ವಿಷಯಕ್ಕೂ ಕೆಲವು ವೈಜ್ಞಾನಿಕ ಕಾರಣಗಳಿವೆ. ಆದರೆ ನಾವು ಅದನ್ನು ಸರಿಯಾಗಿ ಅರ್ಥೈಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಅಂತಹ ಒಂದು ಆಚರಣೆಗಳಲ್ಲಿ ಉಡಿದಾರ (Waist Thread) ಅಥವಾ ನಡುಕಟ್ಟು ಕಟ್ಟುವುದು ಕೂಡ ಒಂದು. ಶಿಶು ಜನನವಾದ ನಂತರ ಕೆಲವು ದಿನಗಳ ಬಳಿಕ ಅಥವಾ ನಾಮಕರಣ ಮಾಡುವ ಸಮಯದಲ್ಲಿ ಮಕ್ಕಳ ಸೊಂಟಕ್ಕೆ ಉಡಿದಾರವನ್ನು ಕಟ್ಟುವಂತಹ ಪದ್ಧತಿ ಇನ್ನೂ ಇದೆ. ಮನೆಯಲ್ಲಿರುವ ಹಿರಿಯರು ಇದನ್ನು ಒತ್ತಾಯ ಪೂರ್ವಕವಾಗಿಯಾದರೂ ಮಾಡಿಸುತ್ತಿದ್ದರು. ಕೆಲವರು ಈ ರೀತಿಯ ಆಚರಣೆಗಳನ್ನು ನಂಬುವುದಿಲ್ಲ. ಆದರೆ ನಿಮಗೆ ತಿಳಿದಿರಲಿ ಈ ಒಂದು ಉಡಿದಾರ ನೀವು ಊಹಿಸಲು ಸಾಧ್ಯವಾಗದಷ್ಟು ಆರೋಗ್ಯ (Health) ಪ್ರಯೋಜನಗಳನ್ನು ನೀಡುತ್ತದೆ. ನಿಮಗೂ ಈ ಬಗ್ಗೆ ತಿಳಿದಿದ್ದರೆ ನೀವು ಕೂಡ ಉಡಿದಾರ ಕಟ್ಟುವುದನ್ನು ನಿರ್ಲಕ್ಷಿಸುವುದಿಲ್ಲ. ಹಾಗಾದರೆ ಇದರಿಂದ ನಮ್ಮ ಆರೋಗ್ಯಕ್ಕೆ ಯಾವ ರೀತಿಯ ಪ್ರಯೋಜನಗಳಿವೆ, ಯಾಕೆ ಕಟ್ಟಿಕೊಳ್ಳಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ತಿಳಿಯದೆ ಅನುಸರಿಸುವಂತಹ ಕೆಲವು ಆಚರಣೆಗಳು ನಮಗೆ ಒಳ್ಳೆಯದನ್ನು ಮಾಡುತ್ತವೆ. ಅಂತಹ ಒಂದು ಆಚರಣೆಗಳಲ್ಲಿ ಉಡಿದಾರ ಹಾಕಿಕೊಳ್ಳುವುದು ಕೂಡ ಒಂದು. ಕೆಲವರು ಇದನ್ನು ಹಗುರವಾಗಿ ಪರಿಗಣಿಸುತ್ತಾರೆ. ಆದರೆ ಈ ಅಭ್ಯಾಸದ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಆರೋಗ್ಯ ದೃಷ್ಟಿಕೋನದಿಂದ, ಹಲವು ಪ್ರಯೋಜನಗಳಿವೆ. ಈ ಉಡಿದಾರ ಕಟ್ಟುವುದರಿಂದ ಹೊಟ್ಟೆಯ ಸುತ್ತ ಕೊಬ್ಬು ಸಂಗ್ರಹವಾಗುವುದು ಕಡಿಮೆಯಾಗುತ್ತದೆ ಅಷ್ಟೇ ಅಲ್ಲ, ಇದು ತೂಕ ನಿರ್ವಹಣೆಯಲ್ಲಿಯೂ ಸಹ ಬಹಳ ಸಹಾಯ ಮಾಡುತ್ತದೆ.
ಉಡಿದಾರ ಒಂದು ರೀತಿಯ ಸೊಂಟಕ್ಕೆ ಕಟ್ಟುವ ಪಟ್ಟಿಯಂತೆ ಕೆಲಸ ಮಾಡುತ್ತದೆ. ನಿಮ್ಮ ತೂಕ ಹೆಚ್ಚಾಗುತ್ತಿದೆಯೇ ಅಥವಾ ಕಡಿಮೆಯಾಗುತ್ತಿದೆಯೇ ಎಂದು ಕಂಡುಹಿಡಿಯಲು ಇದು ಸಹಕಾರಿಯಾಗುತ್ತದೆ. ಅದು ಬಿಗಿಯಾಗಿದ್ದರೆ, ನಿಮ್ಮ ತೂಕ ಹೆಚ್ಚಾಗುತ್ತಿದೆ ಎಂದರ್ಥ. ಅದು ಸ್ವಲ್ಪ ಸಡಿಲವಾಗಿದ್ದರೆ, ನೀವು ಒಂದೇ ರೀತಿಯ ತೂಕವನ್ನು ಕಾಯ್ದುಕೊಂಡು ಬಂದಿದ್ದೀರಿ ಎಂದು ತಿಳಿಯಬಹುದು. ಅಂದರೆ ಇದು ನಿಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಯನ್ನು ನಿಮ್ಮ ಮುಂದಿಡುತ್ತದೆ. ಮಾತ್ರವಲ್ಲ ಇದು ಸೊಂಟದ ಮೇಲೆ ಒತ್ತಡ ಉಂಟುಮಾಡುತ್ತದೆ ಇದರಿಂದ ಹೊಟ್ಟೆಯ ಸುತ್ತಲೂ ಕೊಬ್ಬು ಸಂಗ್ರಹವಾಗುವುದನ್ನು ತಡೆಯಲು ಸ್ವಲ್ಪ ಮಟ್ಟಿಗೆ ಸಹಾಯ ಮಾಡುತ್ತದೆ. ಹೊಟ್ಟೆಯ ಸುತ್ತ ಇರುವ ಕೊಬ್ಬನ್ನು ಕಡಿಮೆ ಮಾಡಲು ಕೂಡ ಉಡಿದಾರ ಕಟ್ಟಬಹುದು. ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸಿ ವಾತ, ಪಿತ್ತ ಮತ್ತು ಕಫದ ದೋಷಗಳನ್ನು ಸಮತೋಲನಗೊಳಿಸುತ್ತದೆ.
ಉತ್ತಮ ಜೀರ್ಣಾಂಗ ವ್ಯವಸ್ಥೆಯು ಸೇವನೆ ಮಾಡಿದಂತಹ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಉಡಿದಾರ ಕಟ್ಟುವುದರಿಂದ ದೊಡ್ಡ ಕರುಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಮಾತ್ರವಲ್ಲ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯಲ್ಲಿರುವ ತ್ಯಾಜ್ಯವನ್ನು ಸರಿಯಾಗಿ ಹೊರಹಾಕಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ಪಿತ್ತಕೋಶ ಮತ್ತು ಮೂತ್ರಪಿಂಡಗಳ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತದೆ. ಇನ್ನೊಂದು ಪ್ರಮುಖ ವಿಷಯವೆಂದರೆ ಇದು ಹರ್ನಿಯಾಗಳಂತಹ ಸಮಸ್ಯೆಗಳನ್ನು ತಡೆಯುತ್ತದೆ.
ಉಡಿದಾರ ಧರಿಸುವುದು ಬೆನ್ನುಮೂಳೆಯ ಆರೋಗ್ಯಕ್ಕೆ ಒಳ್ಳೆಯದು. ನಿರ್ದಿಷ್ಟವಾಗಿ ಹೇಳುವುದಾದರೆ, ಇದು ಬೆನ್ನುಮೂಳೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೆನ್ನು ನೋವು, ಬೆನ್ನುಮೂಳೆಯ ಸಮಸ್ಯೆಗಳು ಮತ್ತು ಡಿಸ್ಕ್ ಹರ್ನಿಯೇಷನ್‌ನಂತಹ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಅನೇಕರು ಈ ರೀತಿಯ ಸಮಸ್ಯೆಗಳನ್ನು ತಡೆಯಲು ಬೆಲ್ಟ್‌ಗಳನ್ನು ಧರಿಸುತ್ತಾರೆ. ಆದರೆ ಅವುಗಳಿಗಿಂತ ಉಡಿದಾರ ಒಳ್ಳೆಯದು.
ಇದನ್ನೂ ಓದಿ: ಎಡ ಅಥವಾ ಬಲ… ಯಾವ ಕಡೆ ಮಲಗುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿಯಿರಿ
ಸೊಂಟಕ್ಕೆ ಸಾಮಾನ್ಯವಾಗಿ ಕಪ್ಪು ದಾರವನ್ನು ಕಟ್ಟಲಾಗುತ್ತದೆ. ಇದನ್ನು ಸೊಂಟದ ಸುತ್ತಲೂ ಕಟ್ಟಿದಾಗ ಸುತ್ತಮುತ್ತಲಿನ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುವುದಕ್ಕೆ ಸಹಕಾರಿಯಾಗುತ್ತದೆ. ಜೊತೆಗೆ ಫಲವತ್ತತೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡುತ್ತದೆ. ಕೆಲವೊಮ್ಮೆ ಹೆಚ್ಚಿದ ಶಾಖದಿಂದಾಗಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವ ಅಪಾಯವಿರುತ್ತದೆ ಅದಕ್ಕಾಗಿಯೇ ಕಪ್ಪು ದಾರವನ್ನು ಕಟ್ಟಲು ಸೂಚಿಸಲಾಗುತ್ತದೆ. ಕೆಲವರು ಕೆಂಪು ದಾರವನ್ನು ಕೂಡ ಕಟ್ಟಿಕೊಳ್ಳುತ್ತಾರೆ. ಆದರೆ ಕಪ್ಪು ದಾರದಲ್ಲಿ ಹೆಚ್ಚಿನ ಪ್ರಯೋಜನಗಳಿವೆ ಎನ್ನಲಾಗುತ್ತದೆ. ವಾಸ್ತವದಲ್ಲಿ, ಹೊಟ್ಟೆಯ ಪ್ರದೇಶದಲ್ಲಿ ತಾಪಮಾನ ಹೆಚ್ಚಿರಬಾರದು. ಇದು ದೇಹದ ಉಷ್ಣಾಂಶದಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ. ಇದು ಅಜೀರ್ಣ ಮತ್ತು ಅನಿಲದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ ಕಪ್ಪು ದಾರವು ಈ ಎಲ್ಲಾ ಸಮಸ್ಯೆಗಳನ್ನು ತಡೆಯುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ