AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಲ್ಲದ ಚಹಾ ಈ ರೀತಿ ಮಾಡಿದರೆ ಒಡೆದು ಹಾಳಾಗಲ್ಲ! ಶೀತ, ಕೆಮ್ಮಿನಿಂದಲೂ ತಕ್ಷಣ ಪರಿಹಾರ ಸಿಗುತ್ತೆ

ಬೆಲ್ಲದ ಚಹಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಪದೇ ಪದೇ ಕಾಡುವಂತಹ ಶೀತ, ಕೆಮ್ಮಿನಿಂದ ತಕ್ಷಣ ಪರಿಹಾರ ನೀಡುತ್ತದೆ. ಆದರೆ ಬೆಲ್ಲದ ಚಹಾ ಸಂಪೂರ್ಣವಾಗಿ ಸಿದ್ಧವಾಗುವ ಮೊದಲೇ ಒಡೆದು ಹಾಳಾಗುತ್ತದೆ ಎಂಬ ಭಯ ಹಲವರನ್ನು ಕಾಡುತ್ತದೆ. ಹಾಗಾಗಿ ಬೆಲ್ಲದ ಚಹಾ ತಯಾರಿಸಲು ಹಿಂದೆ ಮುಂದೆ ನೋಡುತ್ತಾರೆ. ಅಂತವರು ಈ ಸರಳ ವಿಧಾನವನ್ನು ಪ್ರಯತ್ನಿಸುವ ಮೂಲಕ ಬೆಲ್ಲದ ಚಹಾವನ್ನು ಯಾವುದೇ ರೀತಿಯ ತೊಂದರೆ ಇಲ್ಲದೆ ಮಾಡಬಹುದು. ಮಾತ್ರವಲ್ಲ ಶೀತ, ಕೆಮ್ಮಿನಿಂದಲೂ ತಕ್ಷಣ ಪರಿಹಾರ ಪಡೆಯಬಹುದು. ಹಾಗಾದರೆ ಬೆಲ್ಲದ ಚಹಾ ತಯಾರಿಸುವುದು ಹೇಗೆ? ಇದು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಿ.

ಬೆಲ್ಲದ ಚಹಾ ಈ ರೀತಿ ಮಾಡಿದರೆ ಒಡೆದು ಹಾಳಾಗಲ್ಲ! ಶೀತ, ಕೆಮ್ಮಿನಿಂದಲೂ ತಕ್ಷಣ ಪರಿಹಾರ ಸಿಗುತ್ತೆ
ಬೆಲ್ಲದ ಚಹಾ
ಪ್ರೀತಿ ಭಟ್​, ಗುಣವಂತೆ
|

Updated on: Oct 10, 2025 | 8:33 PM

Share

ಬದಲಾಗುತ್ತಿರುವ ಹವಾಮಾನ ಆರೋಗ್ಯವನ್ನು ಹಾಳು ಮಾಡುವುದು ಸಹಜ. ಆದರೆ ಈ ರೀತಿ ಆದಾಗ ಯಾವಾಗಲೂ ಮಾತ್ರೆ, ಮತ್ತಿತರ ಔಷಧಿಗಳ ಮೊರೆ ಹೋಗಲು ಸಾಧ್ಯವಿಲ್ಲ. ಏಕೆಂದರೆ ಅವೇ ದೇಹಕ್ಕೆ ಹಾನಿ ಮಾಡುತ್ತದೆ ಹಾಗಾಗಿ ಸಣ್ಣ ಪುಟ್ಟ ಜ್ವರ, ಶೀತ, ಕೆಮ್ಮಿನಿಂದ ಮುಕ್ತಿ ಪಡೆಯಲು ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಕೆ ಮಾಡಿಕೊಂಡು ಮದ್ದನ್ನು ಮಾಡಬಹುದು. ಈ ಋತುಮಾನದಲ್ಲಿ ಬಿಸಿ ಬಿಸಿಯಾಗಿರುವ ಆಹಾರ ಸೇವನೆ ಮಾಡಲು ಮನಸ್ಸಾಗುವುದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕೂಡ ಪ್ರತಿನಿತ್ಯ ಬೆಲ್ಲದ ಚಹಾ ಮಾಡಿ ಕುಡಿಯಬಹುದು. ಆರೋಗ್ಯ (Health) ತಜ್ಞರು ಕೂಡ ಇದನ್ನು ಕುಡಿಯಲು ಶಿಫಾರಸು ಮಾಡುತ್ತಾರೆ. ಆದರೆ ಬೆಲ್ಲದ ಚಹಾ ಸಂಪೂರ್ಣವಾಗಿ ಸಿದ್ಧವಾಗುವ ಮೊದಲೇ ಒಡೆದು ಹಾಳಾಗುತ್ತದೆ ಎಂಬ ಭಯ ಹಲವರನ್ನು ಕಾಡುತ್ತದೆ. ಹಾಗಾಗಿ ಬೆಲ್ಲದ ಚಹಾ (Jaggery Tea) ತಯಾರಿಸುವುದು ಕಷ್ಟವೆನಿಸುತ್ತದೆ ಅಂತವರು ಈ ಸರಳ ವಿಧಾನವನ್ನು ಪ್ರಯತ್ನಿಸುವ ಮೂಲಕ ಬೆಲ್ಲದ ಚಹಾವನ್ನು ಯಾವುದೇ ರೀತಿಯ ತೊಂದರೆ ಇಲ್ಲದೆ ಮಾಡಬಹುದು ಮಾತ್ರವಲ್ಲ ಶೀತ, ಕೆಮ್ಮಿನಿಂದಲೂ ತಕ್ಷಣ ಪರಿಹಾರ ಪಡೆಯಬಹುದು.

ಬೆಲ್ಲದ ಚಹಾ ತಯಾರಿಸಲು ಸುಲಭ ವಿಧಾನ:

ಪೌಷ್ಟಿಕಾಂಶ ಭರಿತವಾಗಿರುವ ಬೆಲ್ಲದ ಚಹಾ ತಯಾರಿಸಲು, ನಿಮಗೆ ಒಂದು ಕಪ್ ನೀರು, ಒಂದು ಕಪ್ ಹಾಲು, ಎರಡು ಟೀ ಚಮಚ ಚಹಾ ಪುಡಿ, ಒಂದು ಇಂಚಿನ ತುಂಡು ಶುಂಠಿ, ನಾಲ್ಕು ಟೀ ಚಮಚ ಬೆಲ್ಲ ಮತ್ತು ಎರಡು ಹಸಿ ಏಲಕ್ಕಿ ಬೇಕಾಗುತ್ತವೆ. ಮಾಡುವ ಮೊದಲು, ಒಂದು ಪಾತ್ರೆಗೆ ಹಾಲನ್ನು ಹಾಕಿ ಅದು ಬಿಸಿಯಾಗುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ನಂತರ, ಇನ್ನೊಂದು ಪಾತ್ರೆಯಲ್ಲಿ ಒಂದು ಕಪ್ ನೀರು ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಸಿ. ಶುಂಠಿ, ಹಸಿರು ಏಲಕ್ಕಿ ಮತ್ತು ಬೆಲ್ಲವನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಬೆಲ್ಲ ಕರಗುವ ವರೆಗೆ ಸರಿಯಾಗಿ ಕುದಿಸಿ ಬೆಲ್ಲ ಕರಗಿದ ನಂತರ, ಅದಕ್ಕೆ ಚಹಾ ಪುಡಿಯನ್ನು ಸೇರಿಸಬಹುದು. ಕಡಿಮೆ ಉರಿಯಲ್ಲಿ ಚಹಾವನ್ನು ಕುದಿಸಿಕೊಳ್ಳಿ. ಕೊನೆಯಲ್ಲಿ ಈ ಮಿಶ್ರಣಕ್ಕೆ ಕುದಿಸಿ ಪಕ್ಕಕ್ಕಿಟ್ಟ ಹಾಲನ್ನು ಸೇರಿಸಿ. ಈಗ ಚಹಾವನ್ನು ಮಧ್ಯಮ ಉರಿಯಲ್ಲಿ ಮತ್ತೊಮ್ಮೆ ಕುದಿಯುಲು ಬಿಡಿ ಬಳಿಕ ಗ್ಯಾಸ್ ಆಫ್ ಮಾಡಿ. ಈ ರೀತಿ ಮಾಡಿದರೆ ಬಿಸಿ ಬಿಸಿಯಾಗಿರುವ ಬೆಲ್ಲದ ಚಹಾ ಕುಡಿಯಲು ಸಿದ್ಧವಾಗುತ್ತದೆ.

ಇದನ್ನೂ ಓದಿ: ಹಾಲಿಗೆ ಈ ಒಂದು ಮಸಾಲೆ ಬೆರೆಸಿ ಕುಡಿದರೆ ಪುರುಷರಲ್ಲಿ ಫಲವತ್ತತೆ ಸಮಸ್ಯೆ ಮಾಯವಾಗುತ್ತೆ

ಬೆಲ್ಲದ ಚಹಾದ ಆರೋಗ್ಯ ಪ್ರಯೋಜನಗಳು:

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ವಾತಾವರಣ ತೀರಾ ಹದಗೆಟ್ಟಿದ್ದು ಹೆಚ್ಚಿನವರಲ್ಲಿ ಪದೇ ಪದೇ ಶೀತ, ಕೆಮ್ಮು ಮತ್ತು ಜ್ವರದಂತಹ ಸಮಸ್ಯೆಗಳು ಕಂಡುಬರುತ್ತಿದೆ. ಇವುಗಳಿಗೆ ಮಾತ್ರೆಗಳ ಮೊರೆ ಹೋಗುವ ಬದಲು ಈ ರೀತಿ ಬೆಲ್ಲದ ಚಹಾ ಕುಡಿದು ತಕ್ಷಣ ಪರಿಹಾರ ಕಂಡುಕೊಳ್ಳಬಹುದು. ಈ ಬೆಲ್ಲದ ಚಹಾ ಕೇವಲ ವೈರಲ್ ಜ್ವರ, ಕೆಮ್ಮಿಗೆ ಮಾತ್ರವಲ್ಲ ಕರುಳಿನ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಪದೇ ಪದೇ ಆಯಾಸ ಆಗುತ್ತಿದ್ದು ಶಕ್ತಿ ಇಲ್ಲದವರು ಜೊತೆಗೆ ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ರಕ್ತಹೀನತೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಬೆಲ್ಲದ ಚಹಾವನ್ನು ಸೇವನೆ ಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ