AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೌಚಾಲಯಕ್ಕಿಂತ ಕೊಳಕಾದ 5 ಗೃಹೋಪಯೋಗಿ ವಸ್ತುಗಳು ಇವೆ ನೋಡಿ

ಮನೆಯಲ್ಲಿ ಅತ್ಯಂತ ಕೊಳಕುವುಳ್ಳ ಸ್ಥಳವೆಂದ ಕೂಡಲೇ ಮೊದಲು ನೆನಪಿಗೆ ಬರುವುದೇ ಈ ಶೌಚಾಲಯ. ಆದರೆ ನಾವು ದಿನನಿತ್ಯ ಉಪಯೋಗಿಸುವ ಈ ವಸ್ತುಗಳು ಕೂಡ ಅತ್ಯಂತ ಕೊಳಕು ವಸ್ತುಗಳ ಸಾಲಿಗೆ ಸೇರಿವೆಯಂತೆ. ಮೂಳೆ ಶಸ್ತ್ರಚಿಕಿತ್ಸಕ ಡಾ. ಮನನ್ ವೋರಾ ಅವರು ನಾವು ದಿನನಿತ್ಯ ಮುಟ್ಟುವ ಈ ವಸ್ತುಗಳು ಹೆಚ್ಚಿನ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತವೆ ಎಂದು ಹೇಳಿದ್ದಾರೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಶೌಚಾಲಯಕ್ಕಿಂತ ಕೊಳಕಾದ 5 ಗೃಹೋಪಯೋಗಿ ವಸ್ತುಗಳು ಇವೆ ನೋಡಿ
ಡಾ. ಮನನ್ ವೋರಾImage Credit source: Pinterest/ Instagram
ಸಾಯಿನಂದಾ
|

Updated on: Oct 10, 2025 | 5:28 PM

Share

ಸಾಮಾನ್ಯವಾಗಿ ಟಾಯ್ಲೆಟ್ ಹಾಗೂ ಬಾತ್‌ರೂಮ್‌ನ್ನು ಅತ್ಯಂತ ಕೊಳಕಿನ ಸ್ಥಳವೆಂದು ಕೊಳ್ಳುತ್ತೇವೆ. ಹೀಗಾಗಿ ವಾರಕ್ಕೊಮ್ಮೆಯಾದ್ರು ಶೌಚಾಲಯ ಹಾಗೂ ಸ್ನಾನಗೃಹದ ಸ್ವಚ್ಛತೆಗೆ ಹೆಚ್ಚಿನವರು ಗಮನ ಹರಿಸ್ತಾರೆ. ಆದರೆ ಹೆಚ್ಚಿನವರಿಗೆ ಈ ವಿಷ್ಯ ತಿಳಿದೇ ಇಲ್ಲ. ಶೌಚಾಲಯದ ಸೀಟಿಗಿಂತಲೂ ಕೊಳಕು ನಾವು ದಿನನಿತ್ಯ ಬಳಸುವ ಈ ಗೃಹಪಯೋಗಿ ವಸ್ತುಗಳಂತೆ (Household items). ಹೌದು, ಟಿವಿ ರಿಮೋಟ್‌ಗಳು, ಸ್ಮಾರ್ಟ್‌ಫೋನ್‌ಗಳು, ಕಟಿಂಗ್ ಬೋರ್ಡ್‌ಗಳು ಸೇರಿದಂತೆ ಈ ಐದು ವಸ್ತುಗಳು ತುಂಬಾನೇ ಕೊಳಕು. ಇದರಲ್ಲಿ ಹೆಚ್ಚಿನ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತವೆ ಎಂದು ಮೂಳೆ ಶಸ್ತ್ರಚಿಕಿತ್ಸಕ ಡಾ. ಮನನ್ ವೋರಾ (Orthopeadic Surgeon Dr. Manan Vora) ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ವಿವರಿಸಿದ್ದಾರೆ.

ಶೌಚಾಲಯಕ್ಕಿಂತ ಹೆಚ್ಚು ಕೊಳಕು ಈ ಗೃಹಪಯೋಗಿ ವಸ್ತುಗಳು

ಟಿವಿ ರಿಮೋಟ್ : ಟಿವಿ ರಿಮೋಟ್ ನಿಂದ ಕೊಳಕು ಇರುತ್ತದೆ. ಎಣ್ಣೆಯುಕ್ತ ಕೈಗಳಿಂದ ರಿಮೋಟ್ ಮುಟ್ಟುತ್ತೇವೆ, ಆದರೆ ನಾವು ಅದರ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ
Image
ಸ್ವಿಚ್‌ಬೋರ್ಡ್‌ ಸ್ವಚ್ಛಗೊಳಿಸುವ ಸಿಂಪಲ್‌ ಸಲಹೆಗಳು
Image
ಡೈಪರ್ ಬಳಸಿ ದದ್ದುಗಳು ಕಂಡುಬರುತ್ತಿದ್ದರೆ ಈ ಸಿಂಪಲ್ ಟ್ರಿಕ್ಸ್ ಪಾಲಿಸಿ
Image
ಬೆವರಿನ ವಾಸನೆ ಹೋಗಲಾಡಿಸಲು ಈ 20 ರೂಪಾಯಿ ವಸ್ತುವನ್ನು ಬಳಸಿ
Image
ಚಪಾತಿ ಹೆಚ್ಚು ಗಂಟೆಗಳ ಕಾಲ ಮೃದುವಾಗಿಡಲು ಈ ಸಿಂಪಲ್ ಟಿಪ್ಸ್ ಪಾಲಿಸಿ

ಕಟಿಂಗ್ ಬೋರ್ಡ್ : ತರಕಾರಿಗಳು, ಹಣ್ಣುಗಳು ಮತ್ತು ಇತರ ಆಹಾರಗಳನ್ನು ಕತ್ತರಿಸಲು ಬಳಸುವ ಈ ಕಟಿಂಗ್ ಬೋರ್ಡ್ ಕೊಳಕು ವಸ್ತುಗಳ ಸಾಲಿಗೆ ಸೇರಿವೆ. ಕತ್ತರಿಸಿದ ನಂತರದಲ್ಲಿ ಈ ಕಟಿಂಗ್ ಬೋರ್ಡ್ ಸಂಪೂರ್ಣವಾಗಿ ಒಣಗದಿದ್ದರೆ, ಅಥವಾ ಇದರಲ್ಲಿ ಆಹಾರ ತುಂಡುಗಳು ಉಳಿದು ಬ್ಯಾಕ್ಟಿರಿಯಾ ಬೆಳೆಯಲು ದಾರಿ ಮಾಡಿಕೊಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ವೀಡಿಯೋ ಇಲ್ಲಿದೆ ನೋಡಿ

ಫೋನ್ : ಡೈನಿಂಗ್ ಟೇಬಲ್ ನಿಂದ ಹಿಡಿದು ಶೌಚಾಲಯದವರೆಗೆ ಫೋನ್ ಗಳನ್ನು ಬಳಸುತ್ತೇವೆ. ಬಸ್‌ಗಳು, ಕ್ಯಾಬ್‌ಗಳು ಸೇರಿದಂತೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಫೋನ್ ಬಳಸುತ್ತೇವೆ. ಆದರೆ ಅದರ ಸ್ವಚ್ಛವಾಗಿಟ್ಟುಕೊಳ್ಳುವುದರ ಬಗ್ಗೆ ಗಮನ ಹರಿಸುವುದಿಲ್ಲ.

ದಿಂಬಿನ ಕವರ್ : ಲಾಲಾರಸ ಹಾಗೂ ಬೆವರು ಕೂಡ ದಿಂಬಿನ ಕವರ್ ಮೇಲೆ ಸಂಗ್ರಹವಾಗುತ್ತದೆ. ದಿಂಬಿನ ಹೊದಿಕೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ ಇದು ನಮ್ಮ ಆರೋಗ್ಯಕ್ಕೆ ಮಾರಕವಾಗುತ್ತದೆ ಎಂದು ಹೇಳಿದ್ದಾರೆ ವೈದ್ಯರು.

ಸ್ಪಂಜುಗಳು: ಅಡುಗೆಮನೆಯ ಸ್ಪಂಜುಗಳನ್ನು ಯಾರು ಕೂಡ ಸ್ವಚ್ಛಗೊಳಿಸುವುದಿಲ್ಲ. ಇದು ತೇವವಾಗಿ ಉಳಿಯುತ್ತದೆ, ಇದರಲ್ಲಿ ಉಳಿಯುವ ಆಹಾರದ ಕಣಗಳು ಬ್ಯಾಕ್ಟೀರಿಯಾಗಳು ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಈ ಕ್ಲೀನಿಂಗ್‌ ಸಲಹೆ ಅನುಸರಿಸಿದ್ರೆ ಸಾಕು ನಿಮ್ಮ ಮನೆಯ ಸ್ವಿಚ್‌ಬೋರ್ಡ್‌ ಪಳಪಳ ಹೊಳೆಯುತ್ತದೆ

ದಿನನಿತ್ಯ ಬಳಸುವ ಈ ವಸ್ತುಗಳ ಮೇಲಿನ ಸೂಕ್ಷ್ಮಜೀವಿಗಳನ್ನು ಕಡಿಮೆಗೊಳಿಸಲು ಇಲ್ಲಿದೆ ಸಲಹೆ

  • ವಾರಕ್ಕೊಮ್ಮೆಯಾದರೂ ಟಿವಿ ರಿಮೋಟ್‌ಗಳನ್ನು ಧೂಳುಗಳಿದ್ದಲ್ಲಿ ಒರೆಸುತ್ತಾ ಸ್ವಚ್ಛವಾಗಿಟ್ಟುಕೊಳ್ಳಿ. ಅನಾರೋಗ್ಯದ ಸಮಯದಲ್ಲಿ ಇದನ್ನು ಪ್ರತಿದಿನ ಸ್ವಚ್ಛಗೊಳಿಸಿ.
  • ಕಟಿಂಗ್ ಬೋರ್ಡ್‌ಗಳನ್ನು ಬಳಸಿದ ನಂತರ ಸ್ವಚ್ಛಗೊಳಿಸಿ, ನಿಯಮಿತವಾಗಿ ಸ್ಯಾನಿಟೈಸ್ ಮಾಡಿ.
  • ಸ್ಮಾರ್ಟ್‌ಫೋನ್‌ಗಳನ್ನು ಆಗಾಗ ಒರೆಸುತ್ತ ಇರಿ, ಸಾರ್ವಜನಿಕ ಸ್ಥಳಗಳಲ್ಲಿ ಆಗಾಗ್ಗೆ ಬಳಸುತ್ತಿದ್ದರೆ ಪ್ರತಿದಿನ ಒರೆಸಿ.
  • ವಾರಕ್ಕೊಮ್ಮೆ ದಿಂಬಿನ ಕವರ್‌ಗಳನ್ನು ತೊಳೆಯಿರಿ ಹಾಗೂ ದಿಂಬಿನ ಕವರ್ ಬದಲಾಯಿಸುತ್ತಾ ಇರಿ.
  • ಅಡುಗೆಮನೆಯ ಸ್ಪಂಜುಗಳನ್ನು ವಾರಕ್ಕೊಮ್ಮೆ ಬದಲಾಯಿಸಿ ಅಥವಾ ಸ್ವಚ್ಛಗೊಳಿಸಿ, ತೇವಾಂಶವು ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹೀಗಾಗಿ ಸ್ವಚ್ಛಗೊಳಿಸಿದ ನಂತರ ಈ ವಸ್ತುಗಳನ್ನು ಸಂಪೂರ್ಣವಾಗಿ ಒಣಗಿಸುವುದು ಉತ್ತಮ ಎನ್ನುತ್ತಾರೆ ವೈದ್ಯರು.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

`