ಚಪಾತಿ ಮಾಡಿ ಸ್ವಲ್ಪ ಹೊತ್ತಿಗೆ ಗಟ್ಟಿಯಾಗುತ್ತಾ? ಬೆಣ್ಣೆಯಂತೆ ಮೃದುವಾಗಲು ಈ ಟಿಪ್ಸ್ ಪಾಲಿಸಿ
ಚಪಾತಿ ಮಾಡಿಟ್ಟ ಕೆಲವೇ ನಿಮಿಷಗಳಲ್ಲಿ ಗಟ್ಟಿಯಾಗುವುದು ಸಾಮಾನ್ಯ. ಇದು ಹಲವರ ಸಮಸ್ಯೆ. ಮಾಡಿಟ್ಟ ಕೆಲವು ನಿಮಿಷ ಮಾತ್ರ ಅವು ಮೃದುವಾಗಿರುತ್ತವೆ. ಪಕ್ಕಕ್ಕೆ ಇಟ್ಟಾಗ ಗಟ್ಟಿಯಾಗಿ ಮುರಿದು ತಿನ್ನಲು ಕಷ್ಟವಾಗುತ್ತದೆ. ಈ ರೀತಿಯ ಈ ಸಮಸ್ಯೆಯನ್ನು ನಿವಾರಿಸಿ ಚಪಾತಿ 24 ಗಂಟೆಗಳ ಕಾಲ ಮೃದುವಾಗಿರಲು ಈ ಹೊಸ ಟ್ರಿಕ್ ಅನ್ನು ಪಾಲಿಸಬೇಕು. ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದ್ದು ನೀವು ಕೂಡ ಇದನ್ನು ಪಾಲಿಸುವ ಮೂಲಕ ದಿನ ಪೂರ್ತಿ ಮೃದುವಾಗಿರುವ ಚಪಾತಿಯನ್ನು ತಿನ್ನಬಹುದಾಗಿದೆ. ಹಾಗಾದರೆ ಯಾವ ರೀತಿ ಸಲಹೆಯನ್ನು ಪಾಲಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಮ್ಮ ಅನೇಕರ ಮನೆಗಳಲ್ಲಿ ಎದುರಿಸುವ ದೊಡ್ಡ ಸಮಸ್ಯೆಯೆಂದರೆ ಚಪಾತಿಗಳು ಬೇಗ ಗಟ್ಟಿಯಾಗುವುದು. ಪ್ರತಿನಿತ್ಯ ಚಪಾತಿ ತಿನ್ನುವವರ ಮನೆಗಳಲ್ಲಿಯೂ ಈ ರೀತಿಯ ಸಮಸ್ಯೆ ಇದ್ದೇ ಇರುತ್ತದೆ. ಚಪಾತಿ (Chapati) ಮಾಡಿಟ್ಟ ಕೆಲವು ನಿಮಿಷ ಮಾತ್ರ ಅವು ಮೃದುವಾಗಿರುತ್ತವೆ. ನಂತರ, ಅದನ್ನು ತಿನ್ನುವುದಕ್ಕೆ ಪಕ್ಕಕ್ಕೆ ಇಟ್ಟ ಸ್ವಲ್ಪ ಹೊತ್ತಿಗೆ ತಿನ್ನಲು ಕಷ್ಟವಾಗುತ್ತದೆ. ಆದರೆ ಈ ರೀತಿಯ ಸಮಸ್ಯೆಯನ್ನು ನಿವಾರಿಸಲು, ಜೊತೆಗೆ ಚಪಾತಿಯನ್ನು 24 ಗಂಟೆಗಳ ಕಾಲ ಮೃದುವಾಗಿಡಲು ಜನರು ಹೊಸ ಹೊಸ ಟ್ರಿಕ್ ಗಳನ್ನು ಪಾಲಿಸುತ್ತಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದ್ದು ನೀವು ಕೂಡ ಇದನ್ನು ಪಾಲಿಸುವ ಮೂಲಕ ದಿನ ಪೂರ್ತಿ ಮೃದುವಾಗಿರುವ ಚಪಾತಿಯನ್ನು ತಿನ್ನಬಹುದಾಗಿದೆ. ಹಾಗಾದರೆ ಯಾವ ರೀತಿ ಸಲಹೆಯನ್ನು ಪಾಲಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಚಪಾತಿ ಹಿಟ್ಟನ್ನು ಹೇಗೆ ತಯಾರಿಸಬೇಕು?
ಚಪಾತಿ ಮೃದುವಾಗಲು, ಮೊದಲು ಚಪಾತಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಸ್ವಲ್ಪವೇ ನೀರು, ಹಾಲು, ಒಂದು ಚಮಚ ಎಣ್ಣೆ ಅಥವಾ ತುಪ್ಪವನ್ನು ಸೇರಿಸಿ. ಇವುಗಳನ್ನು ಸೇರಿಸುವುದರಿಂದ ಹಿಟ್ಟು ಮೃದುವಾಗುತ್ತದೆ. ಜೊತೆಗೆ ಹಾಲಿನಲ್ಲಿರುವ ಪ್ರೋಟೀನ್‌ಗಳು ತೇವಾಂಶವನ್ನು ಉಳಿಸಿಕೊಡಿರುವುದರಿಂದ ಚಪಾತಿ ಬೇಗನೆ ಗಟ್ಟಿಯಾಗುವುದನ್ನು ತಡೆಯುತ್ತದೆ.
ಹಿಟ್ಟನ್ನು ಕಲಸಿ ತಕ್ಷಣ ಅದನ್ನು ಲಟ್ಟಿಸಬೇಡಿ. ಒಂದು ಒದ್ದೆ ಬಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ 20 ರಿಂದ 30 ನಿಮಿಷಗಳ ಕಾಲ ಆ ಹಿಟ್ಟಿನ ಉಂಡೆಯನ್ನು ಅದರ ಮೇಲಿಟ್ಟು ಮುಚ್ಚಳ ಮುಚ್ಚಿ ಬದಿಗಿಡಿ. ಈ ರೀತಿ ಮಾಡುವುದರಿಂದ ಅದರಲ್ಲಿರುವ ಗ್ಲುಟನ್ ಸಡಿಲಗೊಳ್ಳುತ್ತದೆ ಮತ್ತು ಅದು ನೀರನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ಇದು ಹಿಟ್ಟನ್ನು ಮೃದುವಾಗಿಸುತ್ತದೆ ಮತ್ತು ಅದು ಸುಲಭವಾಗಿ ಲಟ್ಟಿಸುವಂತಿರುತ್ತದೆ. ಮಾತ್ರವಲ್ಲ ಪ್ಯಾನ್ ಮೇಲೆ ಹಾಕಿದಾಗಲೂ ಕೂಡ ಅದು ಚೆನ್ನಾಗಿ ಬೇಯುತ್ತದೆ.
ರೊಟ್ಟಿ ಪ್ಯಾನ್ ಮೇಲೆ ಉಬ್ಬುವಾಗ ಅದರೊಳಗೆ ಹಬೆ ತುಂಬಿ ಪದರವಾಗುತ್ತದೆ. ಇದು ಚಪಾತಿ ಮೃದುವಾಗಲು ಸಹಾಯ ಮಾಡುತ್ತದೆ. ಆದರೆ ಚಪಾತಿಯನ್ನು ಪ್ಯಾನ್‌ನಿಂದ ಬೇಗನೆ ತೆಗೆಯಬಾರದು ಹಾಗಂತ ಹೆಚ್ಚು ಹೊತ್ತು ಇಡಬಾರದು. ಹಾಗೆ ಮಾಡಿದರೂ ಚಪಾತಿ ಗಟ್ಟಿಯಾಗುತ್ತದೆ. ಎರಡೂ ಬದಿ ಚಿನ್ನದ ಕಲೆ ಕಾಣಿಸಿಕೊಂಡು ಬಲೂನ್ ನಂತೆ ಚೆನ್ನಾಗಿ ಉಬ್ಬಿದಾಗ ಚಪಾತಿಯನ್ನು ಪ್ಯಾನ್‌ನಿಂದ ತೆಗೆಯಿರಿ.
ಇದನ್ನೂ ಓದಿ: ಈ ಧಾನ್ಯದಿಂದ ಮಾಡಿದ ಚಪಾತಿ ತಿಂದು ನೋಡಿ! ಆರೋಗ್ಯ ಸಮಸ್ಯೆಯೇ ಬರುವುದಿಲ್ಲ
ಚಪಾತಿ ಮೃದುವಾಗಿರಲು ಏನು ಮಾಡಬೇಕು?
ಆದರೆ ಅವುಗಳನ್ನು ಹೊರಗಿಡದೆ ಅವುಗಳನ್ನು ಸ್ವಚ್ಛವಾದ ಹತ್ತಿ ಬಟ್ಟೆಯಲ್ಲಿ ಇರಿಸಿ, ಅದು ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ಚಪಾತಿಗಳು ಬೇಗನೆ ಒಣಗುವುದನ್ನು ತಡೆಯುತ್ತದೆ. ಬಳಿಕ ಅವುಗಳನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಹೀಗೆ ಮಾಡುವುದರಿಂದ, ನಾವು ತಯಾರಿದ ಚಪಾತಿ ಗಂಟೆಗಟ್ಟಲೆ ಮೃದುವಾಗಿರುತ್ತವೆ. ನೀವು ಅವುಗಳನ್ನು ಊಟಕ್ಕೆ ಕೊಂಡೊಯ್ಯಬಹುದು ಅಥವಾ ದೀರ್ಘ ಪ್ರಯಾಣ ಮಾಡುವಾಗಲೂ ಕೂಡ ತೆಗೆದುಕೊಂಡು ಹೋಗಬಹುದು. ಮಾತ್ರವಲ್ಲ ಬೆಳಿಗ್ಗೆ ತಯಾರಿಸಿ ಮರುದಿನದ ವರೆಗೆ ತಿನ್ನಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








