Kitchen Hacks: ಚಪಾತಿಯು ಮೃದುವಾಗಿ ಪೂರಿಯಂತೆ ಉಬ್ಬಿ ಬರ್ಬೇಕಾ? ಇಲ್ಲಿದೆ ಸಿಂಪಲ್ ಟಿಪ್ಸ್

ಕೆಲವರಿಗೆ ಚಪಾತಿಯೆಂದರೆ ತುಂಬಾನೇ ಫೇವರಿಟ್. ಆದರೆ ಈ ಚಪಾತಿ ಮಾಡುವುದೆಂದರೆ ಹೆಚ್ಚಿನ ಮಹಿಳೆಯರಿಗೆ ಕಿರಿಕಿರಿಯ ಕೆಲಸ. ಹೆಚ್ಚು ಸಮಯ ತೆಗೆದುಕೊಳ್ಳುವ ಕಾರಣ ಚಪಾತಿ ಮಾಡಲು ಹೋಗುವುದೇ ಕಡಿಮೆ ಹೆಚ್ಚಿನ ಮಹಿಳೆಯರು ಈ ಚಪಾತಿಯು ಮೃದುವಾಗಿ ಹಾಗೂ ಉಬ್ಬಿ ಬರಲ್ಲ ಎಂದು ಹೇಳುವುದನ್ನು ಕೇಳಿರಬಹುದು. ಹಿಟ್ಟಿ ಕಲಿಸಿ ಲಟ್ಟಿಸಿ ಬೇಯಿಸಿದ ಕೂಡಲೇ ಅದು ಚಪಾತಿಯು ಮೃದುವಾಗಲ್ಲ . ಈ ಕೆಲವು ಸಿಂಪಲ್ ಟ್ರಿಕ್ಸ್ ಬಳಸಿದ್ರೆ ಮಾತ್ರ ಚಪಾತಿಯು ಮೃದುವಾಗಿರಲು ಸಾಧ್ಯ, ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Kitchen Hacks: ಚಪಾತಿಯು ಮೃದುವಾಗಿ ಪೂರಿಯಂತೆ ಉಬ್ಬಿ ಬರ್ಬೇಕಾ? ಇಲ್ಲಿದೆ ಸಿಂಪಲ್ ಟಿಪ್ಸ್
ಚಪಾತಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 18, 2024 | 4:53 PM

ಚಪಾತಿಯು ಡಯಟ್ ಆಹಾರಗಳಲ್ಲಿ ಒಂದು. ಉತ್ತರ ಭಾರತದ ಜನರ ಆಹಾರ ಕ್ರಮದಲ್ಲಿ ಚಪಾತಿ ಇರಲೇಬೇಕು. ಇನ್ನೂ, ಫಿಟ್ ನೆಸ್ ಗೆ ಹೆಚ್ಚು ಗಮನ ಕೊಡುವವರು ತಪ್ಪದೇ ಚಪಾತಿ ಸೇವನೆ ಮಾಡುತ್ತಾರೆ. ಆದರೆ ಕೆಲವು ಮಹಿಳೆಯರಿಗೆ ಎಷ್ಟೇ ಟ್ರೈ ಮಾಡಿದ್ರು ದುಂಡನೇಯ ಮೃದುವಾದ ಚಪಾತಿ ಮಾಡಲು ಆಗುವುದೇ ಇಲ್ಲ. ಆದರೆ ನೀವು ಚಪಾತಿ ಹಿಟ್ಟನ್ನು ಹೇಗೆ ನಾದಿಕೊಳ್ಳುತ್ತೀರಿ ಎನ್ನುವುದರ ಮೇಲೆ ಚಪಾತಿ ಮೃದುತ್ವವು ಅಡಗಿರುತ್ತದೆ. ಹೀಗಾಗಿ ಚಪಾತಿ ಮಾಡುವಾಗ ಈ ಕೆಲವು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಂಡು ಈ ಸಿಂಪಲ್ ಟ್ರಿಕ್ಸ್ ಪಾಲಿಸುವುದು ಮುಖ್ಯ.

  • ಹಿಟ್ಟು ನಾದಲು ಸರಿಯಾದ ಪಾತ್ರೆ ಆರಿಸಿಕೊಳ್ಳಿ : ನೀವು ಹಿಟ್ಟನ್ನು ಚೆನ್ನಾಗಿ ನಾದಲು ಬಯಸಿದರೆ ಆಯ್ಕೆ ಮಾಡುವ ಪಾತ್ರೆಯು ಕೂಡ ಅಷ್ಟೇ ಮುಖ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಹಿಟ್ಟನ್ನು ನಾದಲು ಚಿಕ್ಕ ಪಾತ್ರೆಯನ್ನು ಬಳಸಬೇಡಿ. ಸ್ವಲ್ಪ ಅಗಲವಾದ, ನಾದಲು ಸುಲಭವಾಗುವ ಪಾತ್ರೆಯ ಆಯ್ಕೆಯಿರಲಿ. ಸಣ್ಣ ಪಾತ್ರೆಯಲ್ಲಿ ಹಿಟ್ಟು ನಾದಲು ಕಷ್ಟವಾಗುವುದಲ್ಲದೆ, ಹಿಟ್ಟಿನ ಪ್ರಮಾಣವು ಹೆಚ್ಚಿದರೆ ಕೆಳಗೆ ಬೀಳುತ್ತದೆ. ಹೀಗಾಗಿ ದೊಡ್ಡ ಹಾಗೂ ಅಗಲವಾದ ಪಾತ್ರೆಯಲ್ಲಿಯೆ ಹಿಟ್ಟನ್ನು ನಾದಿಕೊಳ್ಳಿ.
  • ಉಗುರು ಬೆಚ್ಚಗಿನ ನೀರನ್ನು ಬಳಸಿ : ಹೆಚ್ಚಿನವರು ಚಪಾತಿ ಹಿಟ್ಟು ಕಲಸುವಾಗ ತಣ್ಣನೆಯ ನೀರನ್ನು ಬಳಸುತ್ತಾರೆ. ಕೆಲವೊಮ್ಮೆ ನೀರಿನ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾದ್ರು ಚಪಾತಿ ಗಟ್ಟಿಯಾಗುವ ಸಾಧ್ಯತೆ ಇರುತ್ತದೆ. ನೀರು ಕಡಿಮೆಯಾದಲ್ಲಿ ಹಿಟ್ಟು ಗಟ್ಟಿಯಾಗಿ ಚಪಾತಿ ಮೃದುವಾಗಿ ಬರುವುದಿಲ್ಲ. ಹೀಗಾಗಿ ಹಿಟ್ಟು ನಾದಲು ಉಗುರು ಬೆಚ್ಚಗಿನ ನೀರನ್ನು ಬಳಸಿ. ಇದರಿಂದ ಹಿಟ್ಟು ಕಲಸಿದ್ರೆ ಚಪಾತಿಯು ಮೃದುವಾಗಿ ಉಬ್ಬಿ ಬರುತ್ತದೆ.
  • ಹಿಟ್ಟು ಮೆದುವಾದ್ರೆ ಒಣಹಿಟ್ಟಿನ ಬದಲು ಇದನ್ನು ಬೆರೆಸಿ : ನೀರಿನ ಅಳತೆಯಲ್ಲಿ ವ್ಯತ್ಯಾಸವಾಗಿ ಚಪಾತಿ ಹಿಟ್ಟು ಮೆದುವಾಗುತ್ತದೆ. ಹೀಗಾದಾಗ ಮತ್ತೆ ಗೋಧಿ ಹಿಟ್ಟನ್ನು ಹಾಕಿ ಚೆನ್ನಾಗಿ ನಾದಿಕೊಳ್ಳುತ್ತಾರೆ. ಹೀಗೆ ಮಾಡಿದ್ರೆ ಚಪಾತಿಯು ಮೆದುವಾಗಿ ಬರುವುದಿಲ್ಲ. ಹಿಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರೆ, ತಕ್ಷಣವೇ ಎಣ್ಣೆ ಹಾಕಿ ಪುನಃ ನಾದಿಕೊಳ್ಳಿ. ಇದರಿಂದ ಚಪಾತಿಯು ಮೆದುವಾಗಿ ಉಬ್ಬಿ ಬರಲು ಸಾಧ್ಯ.
  • ಆತುರವಾಗಿ ಚಪಾತಿ ಹಿಟ್ಟು ನಾದಿಕೊಳ್ಳಬೇಡಿ : ಬೆಳಗ್ಗೆ ತಿಂಡಿಗೆ ಚಪಾತಿ ಆಗಬೇಕೆಂದು ಆತುರದಿಂದ ಹಿಟ್ಟು ನಾದಿಕೊಳ್ಳುತ್ತಾರೆ. ಇದರಿಂದ ಚಪಾತಿಯು ಗಟ್ಟಿಯಾಗುತ್ತದೆ. ಹಿಟ್ಟನ್ನು ಕನಿಷ್ಠ 10 ನಿಮಿಷಗಳ ಕಾಲ ಚೆನ್ನಾಗಿ ನಾದಿಕೊಳ್ಳಬೇಕು. ಚೆನ್ನಾಗಿ ನಾದಿದ್ರೆ ಮಾತ್ರ ಚಪಾತಿಯು ದುಂಡಗಿನ ಆಕಾರದಲ್ಲಿ ಮೃದುವಾಗಿ ಬರಲು ಸಾಧ್ಯ. ಕಲಸಿದ ಕೂಡಲೇ ಚಪಾತಿ ಮಾಡಬೇಡಿ. ಅರ್ಧಗಂಟೆಯಾದ್ರು ಹಿಟ್ಟನ್ನು ಹಾಗೆಯೆ ಬಿಡುವುದು ಒಳ್ಳೆಯದು. ಇಲ್ಲದಿದ್ದರೆ ರಾತ್ರಿಯ ವೇಳೆ ಚಪಾತಿ ಹಿಟ್ಟನ್ನು ನಾದಿಟ್ಟುಕೊಳ್ಳಿ. ಬೆಳಗ್ಗೆ ಸುಲಭವಾಗಿ ಚಪಾತಿ ಮಾಡಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅಲ್ಲ: ಲಕ್ಷ್ಮಣ ಸವದಿ
ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅಲ್ಲ: ಲಕ್ಷ್ಮಣ ಸವದಿ
ಮತ್ತೇ ಮುನ್ನೆಲೆಗೆ ಬಂದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಣಿಗಳ ಜಗಳ
ಮತ್ತೇ ಮುನ್ನೆಲೆಗೆ ಬಂದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಣಿಗಳ ಜಗಳ
ಯತ್ನಾಳ್ ಆರೋಪಗಳಿಗೆ ಕೌಂಟರ್ ನೀಡಿದ ಖರ್ಗೆ ಮತ್ತು ಎಂಬಿ ಪಾಟೀಲ್
ಯತ್ನಾಳ್ ಆರೋಪಗಳಿಗೆ ಕೌಂಟರ್ ನೀಡಿದ ಖರ್ಗೆ ಮತ್ತು ಎಂಬಿ ಪಾಟೀಲ್
ಉತ್ತರ ಕರ್ನಾಟಕದ ಭವ್ಯ ಪರಂಪರೆಯನ್ನು ಸದನದಲ್ಲಿ ವಿವರಿಸಿದ ಯತ್ನಾಳ್
ಉತ್ತರ ಕರ್ನಾಟಕದ ಭವ್ಯ ಪರಂಪರೆಯನ್ನು ಸದನದಲ್ಲಿ ವಿವರಿಸಿದ ಯತ್ನಾಳ್
ಬಿಳಿಗಿರಿರಂಗನಬೆಟ್ಟ ಮುಖ್ಯರಸ್ತೆಯಲ್ಲಿ ಕಾಡಾನೆಗಳ ಹಿಂಡು, ಹುಲಿ ಪ್ರತ್ಯಕ್ಷ
ಬಿಳಿಗಿರಿರಂಗನಬೆಟ್ಟ ಮುಖ್ಯರಸ್ತೆಯಲ್ಲಿ ಕಾಡಾನೆಗಳ ಹಿಂಡು, ಹುಲಿ ಪ್ರತ್ಯಕ್ಷ
ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್
ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್
ಸರ್ಕಾರೀ ಆಸ್ಪತ್ರೆಗಳ ವಿಷಯದಲ್ಲಿ ನೆಗೆಟಿವ್ ಮಾತು ಸರಿಯಲ್ಲ: ಕೋನರೆಡ್ಡಿ
ಸರ್ಕಾರೀ ಆಸ್ಪತ್ರೆಗಳ ವಿಷಯದಲ್ಲಿ ನೆಗೆಟಿವ್ ಮಾತು ಸರಿಯಲ್ಲ: ಕೋನರೆಡ್ಡಿ
ಕಣ್ಣೀರು ಅದುಮಿಟ್ಟು ನಿವೃತ್ತಿ ಘೋಷಿಸಿದ ಅಶ್ವಿನ್
ಕಣ್ಣೀರು ಅದುಮಿಟ್ಟು ನಿವೃತ್ತಿ ಘೋಷಿಸಿದ ಅಶ್ವಿನ್
ದರ್ಶನ್​ಗೆ ನಡೆದಾಡಲು ಮಗನ ಆಸರೆ; ಕುಂಟುತ್ತಲೇ ಕಾರು ಏರಿದ ನಟ
ದರ್ಶನ್​ಗೆ ನಡೆದಾಡಲು ಮಗನ ಆಸರೆ; ಕುಂಟುತ್ತಲೇ ಕಾರು ಏರಿದ ನಟ
ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್​; ಶಸ್ತ್ರಚಿಕಿತ್ಸೆ ಇಲ್ಲದೆ ಹೊರ ಬಂದ ನಟ
ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್​; ಶಸ್ತ್ರಚಿಕಿತ್ಸೆ ಇಲ್ಲದೆ ಹೊರ ಬಂದ ನಟ